ಅಡಿಕೆ ಧಾರಣೆ ಕಳೆದ ಎರಡು ತಿಂಗಳಿಂದ ನಿಂತ ನೀರಿನ ತರಹ ಮುಂದುವರಿದಿದೆ. ಯಾವ ಏರಿಕೆಯೂ ಇಲ್ಲ. ಇಳಿಕೆಯೂ ಇಲ್ಲ. ಕರಾವಳಿಯ ಅಡಿಕೆ ಬೆಳೆಗಾರರು ಅಡಿಕೆ ಕೊಡುವುದನ್ನು ಕಡಿಮೆಮಾಡಿದ್ದಾರೆ. ಕೆಂಪಡಿಕೆ ಮಾಡುವ ಕಡೆಯೂ ಜನ ದರ ಏರಿಕೆಗೆ ಕಾಯುತ್ತಿದ್ದಾರೆ. ಮಾರುಕಟ್ಟೆಗೆ ಬರುವ ಅಡಿಕೆ ಪೂರ್ತಿ ಚೇಣಿ ಮಾಡಿದವರ ಕಮಿಟ್ಮೆಂಟ್ ಹಾಗೂ ಮುಂದಿನ ಚೇಣಿ ವಹಿಸಿಕೊಳ್ಳುವುದಕ್ಕೇ ಬೇಕಾದ ಫಂಡ್ ಕ್ರೋಡೀಕರಣಕ್ಕೆ ಎಂಬ ಸುದ್ದಿಗಳಿವೆ. ಇಷ್ಟಕ್ಕೂ ಮುಂದೆ ಅಡಿಕೆ ಧಾರಣೆ ಏನಾಗಬಹುದು, ಏನಾದರೂ ಸಂಚಲನ ಉಂಟಾಗಬಹುದೇ ಎಂಬ ಕುತೂಹಲ ಎಲ್ಲರದ್ದೂ.
ಅಡಿಕೆ ಮಾರುಕಟ್ಟೆ ಎಂಬುದು ಉತ್ಪಾದನೆ ಮತ್ತು ಬಳಕೆ ಮೇಲೆ ನಿಂತಿರುವಂತದ್ದು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲದ್ದು. ಯಾವಾಗ ಏರುತ್ತದೆ ಯಾವಾಗ ಇಳಿಕೆಯಾಗುತ್ತದೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇರಲಾರದು. ಹಣ ಇದ್ದವರು ದಾಸ್ತಾನು ಮಾಡುತ್ತಾ ಕೊರತೆ ಸೃಷ್ಟಿಸಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವಂತೆ ಮಾಡುತ್ತಾರೆ. ಜನ ಬೆಲೆ ಏರಲಾರಂಭಿಸಿದರೆ ಮಾರುಕಟ್ಟೆಗೆ ಅಡಿಕೆ ಬಿಡುವುದನ್ನು ತಡ ಮಾಡುತ್ತಾರೆ. ಬೆಲೆ ಇಳಿಕೆ ಪ್ರಾರಂಭವಾದ ತಕ್ಷಣ ಒಮ್ಮೆಲೆ ಮಾಲನ್ನು ಮಾರುಕಟ್ಟೆಗೆ ಒಯ್ಯುತ್ತಾರೆ. ಒಮ್ಮೆ ಬೆಲೆ ಇಳಿಕೆ, ಮತ್ತೊಮ್ಮೆ ಏರಿಕೆ ಇವೆಲ್ಲಾ ವರ್ತಕರು ಅವರಿಗೆ ಬರುವ ಬೇಡಿಕೆಯ ಮೇಲೆ ನಿರ್ಧರಿಸುತ್ತಾರೆ. ಕೆಲವೊಮ್ಮೆ ಉತ್ತರ ಭಾರತದಿಂದ ಅಡಿಕೆಗೆ ಬೇಡಿಕೆ ಹೆಚ್ಚಳವಾಗುತ್ತದೆ. ಕೆಲವೊಮ್ಮೆ ಮಾಮೂಲು ಬೇಡಿಕೆ ಮಾತ್ರ. ಕೆಲವೊಮ್ಮೆ ಬೇಡಿಕೆಯೇ ಇರುವುದಿಲ್ಲ. ಈ ಸಮಯದಲ್ಲಿ ಏರಿಕೆ, ಸ್ಥಿರತೆ, ಮತ್ತು ಇಳಿಕೆ ಉಂಟಾಗುತ್ತದೆ. ಈಗ ಬಾರೀ ಬೇಡಿಕೆಯೂ ಇಲ್ಲ. ಬೇಡ ಎಂಬುದೂ ಇಲ್ಲ. ಮಾಮೂಲು ಖರೀದಿದಾರರು ಮಾತ್ರ ರಂಗದಲ್ಲಿ ಇರುವ ಕಾರಣ ಯಾವ ಸಂಚಲನವೂ ಇಲ್ಲದೆ ದರ ಯಥಾಸ್ಥಿತಿಯಲ್ಲಿ ಮುನ್ನಡೆಯುತ್ತಿದೆ. ಕೆಲವು ಮೂಲಗಳ ಪ್ರಕಾರ ಎಪ್ರೀಲ್ ನಂತರ ಸ್ವಲ್ಪ ಏರಿಕೆ ಆಗಬಹುದು ಎಂಬ ಅಭಿಪ್ರಾಯ ಇದೆ. ಈ ತನಕ ಪಂಚ ರಾಜ್ಯ ಚುನಾವಣೆ ಆಯಿತು. ಆ ತಕ್ಷಣ ಮಾರ್ಚ್ ವರ್ಷಾಂತ್ಯ ಎಂಬ ಕಾರಣ ಆಯಿತು. ಹೊಸ ಆರ್ಥಿಕ ವರ್ಷದಲ್ಲಿ ಹೊಸ ಹೊಸ ಖರೀದಿದಾರರು ಪ್ರವೇಶವಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಉಂಟಾಗಲಿದೆ, ಬೆಲೆ ಸ್ವಲ್ಪ ಏರಿಕೆ ಆಗಲಿದೆ ಎಂಬ ಸುದ್ದಿಗಳಿವೆ. ಈಗಿನ ಬೇಡಿಕೆಯಲ್ಲಿ ದರ ಇಳಿಕೆ ಅಗದಿರುವುದು, ಮುಂದೆ ದರ ಏರಿಕೆಯ ಸಾಧ್ಯತೆ ಬಗ್ಗೆ ವರ್ತಕರಿಗೆ ವಿಶ್ವಾಸ ಇರುವುದೇ ಆಗಿದೆ.
- ಕಳೆದ ವಾರದಿಂದ ಚಾಲಿ ಮಾರುಕಟ್ಟೆಯಲ್ಲಿ ಖಾಸಗಿಯವರು ಸಹಕಾರಿಗಳ ಹತ್ತಿರ ಹತ್ತಿರ ಬಂದಿದ್ದಾರೆ.
- ಅದಕ್ಕೂ ಹಿಂದೆ ಎರಡು ಮೂರು ವಾರಗಳಲ್ಲಿ ಸಹಕಾರಿಗಳು ಮುಂದೆಯೂ ಖಾಸಗಿಯವರು ಹಿಂದೆಯೂ ಇದ್ದರು.
- ಆ ಸಮಯದಲ್ಲಿ ಖಾಸಗಿಯವರು ತಾವು ಖರೀದಿಸಿದ ಅಡಿಕೆಯನ್ನು ಸಹಕಾರಿಗಳಿಗೆ ಮಾರಾಟ ಮಾಡಿ, ನಗದೀಕರಣ ಮಾಡಿಕೊಂಡಿದ್ದಾರೆ.
- ಸಹಕಾರಿ ಮಾರುಕಟ್ಟೆಗೆ ರೈತರ ಅಡಿಕೆ ಬರುವಿಕೆ ತುಂಬಾ ಕಡಿಮೆ ಇದ್ದ ಕಾರಣ ನಿರ್ವಾಹ ಇಲ್ಲದೆ ಖಾಸಗಿ ವರ್ತಕರ ಅಡಿಕೆ ಖರೀದಿ ನಡೆದಿದೆ.
- ಕಳೆದ ಜನವರಿಯಿಂದ ಮಾರ್ಚ್ ಮೊಲದ ವಾರದ ತನಕ ಸಿಪ್ಪೆಗೋಟು ಬೆಲೆ 16000-18000 ತನಕ ಇದ್ದುವು ಮಾರ್ಚ್ ಎರಡನೇ ವಾರ ಮತ್ತೆ ಏರಿಕೆಗೆ ಪ್ರಾರಂಭವಾಗಿದ್ದು, ನಿನ್ನೆ ಸಾಗರದಲ್ಲಿ 21,000 ಕ್ಕೆ ತಲುಪಿದೆ.
- ಶಿರಸಿ, ಸಾಗರ, ಯಲ್ಲಾಪುರಗಳಲ್ಲಿ ಚಾಲಿಗೆ ಬೇಡಿಕೆ ಬಂದರೆ ಕೆಲವೇ ದಿನಗಳಲ್ಲಿ ಕರಾವಳಿಯಲ್ಲೂ ಏರಿಕೆ ಆಗುತ್ತದೆ.
- ಈಗ ಅಲ್ಲಿ ಸ್ವಲ್ಪ ಏರಿಕೆ ಪ್ರಾರಂಭವಾಗಿದೆ. ಸುಮಾರು ಎಪ್ರೀಲ್ ತಿಂಗಳ ತರುವಾಯ ಚಾಲಿ ಅಡಿಕೆ ಮಾರುಕಟ್ಟೆ ಚೇತರಿಕೆ ಆಗಬಹುದು ಎನ್ನುತ್ತಾರೆ.

ಕೆಂಪಡಿಕೆ ಸಹ ಮಾರುಕಟ್ಟೆಗೆ ಬರುವ ಪ್ರಮಾಣ ಕಡಿಮೆಯಾಗಿದೆ. ಕಾರಣ ಬಹುತೇಕ ಬಯಲು ಸೀಮೆಯ ಬೆಳೆಗಾರರು 45,000-46,000 ಬೆಲೆಗೆ ಮಾರಾಟ ಮಾಡಿದ್ದಾರೆ. ಜನವರಿ ಫೆಬ್ರವರಿಯಲ್ಲಿ ಚೆನ್ನಗಿರಿ, ಚಿತ್ರದುರ್ಗ, ದಾವಣಗೆರೆ , ಹೊನ್ನಾಳಿ ಮುಂತಾದ ಕಡೆ ಗರಿಷ್ಟ ಪ್ರಮಾಣದಲ್ಲಿ (ದಿನಕ್ಕೆ 2000-3000 ಕ್ಕೂ ಮಿಕ್ಕಿ ಚೀಲಗಳು) ಮಾರುಕಟ್ಟೆಗೆ ಅಡಿಕೆ ಬರುತ್ತಿತ್ತು. ಈಗ ಅದರ ಫೋರ್ಸ್ ಕಡಿಮೆಯಾಗಿದ್ದು, ದಿನಕ್ಕೆ 500-600-700 ಚೀಲಗಳಷ್ಟು ಮಾತ್ರ ಅಡಿಕೆ ಬರುತ್ತಿದೆ. ಶಿರಸಿ, ಸಿದ್ದಾಪುರ, ಸಾಗರ, ಹಾಗೂ ಶಿವಮೊಗ್ಗದಲ್ಲೂ ಕೆಂಪಡಿಕೆ ಹಿಂದಿಗಿಂತ ಕಡಿಮೆ ಇದೆಯಂತೆ. ಹಾಗಾಗಿ ಮುಂದೆ ಒಂದು ಸಂಚಲನ ಇದ್ದೇ ಇದೆ ಎಂಬುದಾಗಿ ಊಹಿಸಬಹುದು.
ಇಂದು ಅಡಿಕೆ ಧಾರಣೆ:
ಕರಾವಳಿಯ ಚಾಲಿ ಅಡಿಕೆ ಮಾರುಕಟ್ಟೆ:

- ಮಂಗಳೂರು: ಹೊಸ ಚಾಲಿ: (ಕನಿಶ್ಟ) 27500,(ಗರಿಷ್ಟ) 44000, (ಸರಾಸರಿ) 42050
- ಹಳೆ ಚಾಲಿ: 46000, 53000, 50000
- ಪುತ್ತೂರು ಹೊಸ ಚಾಲಿ: 27500, 45000, 41500
- ಹಳೆ ಚಾಲಿ: 46000, 53000, 50000
- ಸುಳ್ಯ ಹೊಸ ಚಾಲಿ: 27500, 44000, 41000
- ಹಳೆ ಚಾಲಿ: 46000, 53500, 50000
- ಬಂಟ್ವಾಳ ಹೊಸ ಚಾಲಿ: 27500, 45000, 42000
- ಹಳೆ ಚಾಲಿ: 46000, 53000, 50000
- ಬೆಳ್ತಂಗಡಿ:ಹೊಸ ಚಾಲಿ: 29300, 43000, 42000
- ಹಳೆ ಚಾಲಿ: 41300, 52500, 45000
- ಕಾರ್ಕಳ: ಹೊಸ ಚಾಲಿ: 40000, 45000, 43000
- ಹಳೆ ಚಾಲಿ: 46000, 53000, 50000
- ಕುಂದಾಪುರ ಹೊಸ ಚಾಲಿ: 43500, 44500, 44000
- ಹಳೆ ಚಾಲಿ: 51500, 52500, 52000
- ಪಟೋರಾ: ಹಳೆಯದು:35000-44000
- ಹೊಸತು:32000-34000
- ಉಳ್ಳಿ: ಹಳೆಯದು:21000-25000
- ಹೊಸತು:20000-22000
- ಕರಿಗೋಟು: ಹಳೆಯದು:20000-24500
- ಹೊಸತು:20000-23000
ಕೆಂಪಡಿಕೆ ಧಾರಣೆ:
ಚೆನ್ನಗಿರಿಯಲ್ಲಿ ಇಂದು ರಾಶಿ ದರ ಸ್ವಲ್ಪ ಏರಿಕೆಯಾಗಿದ್ದು, ಸುಮಾರು 570 ರಷ್ಟು ಚೀಲ ಅಡಿಕೆ ವ್ಯಾಪಾರವಾಗಿದೆ. ಮೊನ್ನೆ ಶುಕ್ರವಾರ ಹೊಸನಗರದಲ್ಲಿ ಸುಮಾರು 1500 ಚೀಲ ರೂ.47000 ಗರಿಷ್ಟ ಬೆಲೆಗೆ ಮಾರಾಟವಾಗಿದೆ. ತೀರ್ಥಹಳ್ಳಿಯಲ್ಲಿ ಭಾನುವಾರ ಸುಮಾರು 1700 ಚೀಲ ರಾಶಿ ಅಡಿಕೆ ಸರಾಸರಿ 47,000 ತನಕ ಬೆಲೆಯಲ್ಲಿ ಮಾರಾಟವಾಗಿದೆ. ಶಿರಸಿ,ಕುಮಟಾ ಸಾಗರದಲ್ಲಿ ಚಾಲಿಗೆ ಬೇಡಿಕೆ ಪ್ರಾರಂಭವಾಗಿದೆ.
- ಚೆನ್ನಗಿರಿ: ರಾಶಿ:45599, 48008, 46866
- ಭದ್ರಾವತಿ: ರಾಶಿ: 45200, 46609, 45898
- ಹೊನ್ನಾಳಿ ರಾಶಿ: 46039, 46039, 46039
- ಇಡಿ: 46300, 46300, 46300
- ಹೊಳಲ್ಕೆರೆ:ರಾಶಿ: 44129, 45709, 45310
- ಚಿತ್ರದುರ್ಗ ರಾಶಿ: 45539, 45969, 45779
- ಅಪಿ: 46000, 46400, 46200
- ಬೆಟ್ಟೆ: 36629, 37089, 36859
- ಶಿವಮೊಗ್ಗ ರಾಶಿ: 43169, 46991, 46400
- ಸರಕು: 50069, 74296, 67900
- ಬೆಟ್ಟೆ: 46699, 50000, 48300
- ಗೊರಬಲು: 16210, 34310, 33300
- ಶಿರಸಿ ರಾಶಿ: 25699, 47899, 46160
- ಚಾಲಿ: 35099, 40591, 39316
- ಬೆಟ್ಟೆ: 34619, 43999, 40108
- ಯಲ್ಲಾಪುರ ರಾಶಿ: 46699, 52999, 49819
- ಚಾಲಿ: 35969, 40599, 39520
- ತಟ್ಟೆ ಬೆಟ್ಟೆ: 37499, 46499, 41899
- ಸಿದ್ದಾಪುರ ರಾಶಿ: 44099, 47199, 46499
- ಚಾಲಿ ಹಳೆಯದು: 43344, 44099, 44099
- ಹೊಸ ಚಾಲಿ: 36529, 40209, 39699
- ತಟ್ಟೆ ಬೆಟ್ಟೆ: 33609, 45589, 39699
- ಸಾಗರ ರಾಶಿ: 44099, 46099, 45809
- ಸಿಪ್ಪಗೋಟು: 16899, 21399, 20899
- ಕೆಂಪು ಗೋಟು: 34199, 37299, 36919
- ಚಾಲಿ: 36599, 37869, 36599
- ಹೊಸನಗರ ರಾಶಿ: 44129, 47239, 46869
- ಚಾಲಿ: 32699, 36739, 35609
- ಕೆಂಪುಗೋಟು: 28469, 33899, 32989
- ತೀರ್ಥಹಳ್ಳಿ ರಾಶಿ: 33169, 47249, 46969
- ದಾವಣಗೆರೆ ರಾಶಿ: 46083, 46189, 46126
- ಗುಬ್ಬಿ ರಾಶಿ: 44500, 45000, 45000
- ಕುಮಟಾ: ಹೊಸ ಚಾಲಿ: 36900, 40000, 39859
- ಹಳೆ ಚಾಲಿ: 47472, 47472, 47472
ಅಡಿಕೆ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಆಮದು ಆಗಿದೆ ಎಂಬುಗಾಗಿ ಶಿರಸಿಯ ಓರ್ವ ವರ್ತಕರು ಸುದ್ದಿ ಕೊಡುತ್ತಾರೆ. ಆದರೆ ಗುಣಮಟ್ಟ ಎಂದಿನಷ್ಟು ಉತ್ತಮವಾಗಿಲ್ಲ ಎನ್ನುತ್ತಾರೆ.
ಕರಿಮೆಣಸು ಧಾರಣೆ:
ಕರಾವಳಿಯ ಎಲ್ಲಾ ಕಡೆ ಮೆಣಸು ಕೊಯಿಲು ಮುಗಿದಿದೆ. ಸಣ್ಣ ಬೆಳೆಗಾರರು ಮಾರಾಟ ಮಾಡಿದ್ದಾರೆ. ಮಲೆನಾಡಿನಲ್ಲಿ ಅರ್ಧದಷ್ಟು ಕೊಯಿಲು ಮುಗಿದಿದೆ. ಸ್ವಲ್ಪ ಬಾಕಿ ಇದೆ. ಇಲ್ಲಿ ಸಹ ಸಣ್ಣ ಬೆಳೆಗಾರರು ಮಾರಾಟ ಮಾಡುತ್ತಿದ್ದಾರೆ. ಗುತ್ತಿಗೆ ವಹಿಸಿಕೊಂಡವರೂ ಸಹ ಮಾರಾಟ ಮಾಡಿದ್ದಾರೆ. ದರ ಸ್ವಲ್ಪ ಇಳಿಕೆಯಾಗಿದೆ. ಕೊಯಿಲಿನ ಸೀಸನ್ ಹಾಗೂ ಕೊಚ್ಚಿ ಮಾರುಕಟ್ಟೆಯಲ್ಲಿ ಸ್ವಲ್ಪ ಹಿಂಜರಿಕೆ ಕಾರಣ ಎನ್ನುತ್ತಾರೆ. ಬೇಡಿಕೆ ಇದೆ. ಜೂನ್ ತರುವಾಯ ದರ ಏರಿಕೆಯಾಗಬಹುದು.
ಇಂದು ಬೇರೆ ಬೇರೆ ಕಡೆ ಮೆಣಸು ಧಾರಣೆ:

- ಸಕಲೇಶಪುರ: Royal Traders, ಅಯದ್ದು 490.00
- ಸಕಲೇಶಪುರ :Gain Coffee ಅಯದ್ದು , 490.00
- ಸಕಲೇಶಪುರ :Sathya Murthy, ಅಯ್ದದ್ದು, 515.00
- ಸಕಲೇಶಪುರ :S.K Traders, ಆಯದ್ದು, 495.00
- ಸಕಲೇಶಪುರ :H.K.G & Bros-ಆಯದ್ದು, 500.00
- ಸಕಲೇಶಪುರ :Nasir Traders ಆಯದ್ದು, 500.00
- ಸಕಲೇಶಪುರ -Sainath Cardamom, ಹೊಸತು. 500.00
- ಬಾಳುಪೇಟೆ :Geetha Coffee Trading, ಆಯದ್ದು 495.00
- ಬಾಳುಪೇಟೆ:Coffee Age-ಆಯದ್ದು, 500.00
- ಮೂಡಿಗೆರೆ :Sha.M.Khimraj, ಆಯದ್ದು, 490.00
- ಮೂಡಿಗೆರೆ :Bhavarlal Jain, ಆಯದ್ದು, 490.00
- ಮೂಡಿಗೆರೆ :A1 Traders, ಆಯದ್ದು 490.00
- ಮೂಡಿಗೆರೆ :Harshika Traders-ಆಯದ್ದು, 500.00
- ಮೂಡಿಗೆರೆ :A.M Traders-ಆಯದ್ದು, 490.00
- ಮೂಡಿಗೆರೆ :Hadhi Coffee, ಆಯದ್ದು, 495.00
- ಚಿಕ್ಕಮಗಳೂರು:Arihant Coffee, ಆಯದ್ದು, 500.00
- ಚಿಕ್ಕಮಗಳೂರು:Nirmal Commodities, ಆಯದ್ದು, 490.00
- ಚಿಕ್ಕಮಗಳೂರು:M.R Stancy G.C, ಆಯದ್ದು, 510.00
- ಚಿಕ್ಕಮಗಳೂರು:Kiran, ಆಯದ್ದು, 495.00
- ಮಡಿಕೇರಿ:Kiran Commodities, ಆಯದ್ದು, 490.00
- ಕೊಡಗು ಸಿದ್ದಾಪುರ:Trust Spices ಆಯದ್ದು, 495.00
- ಗೋಣಿಕೊಪ್ಪ:Sri Maruthi, ಆಯದ್ದು, 490.00
- ಕಳಸ :PIB Traders, ಆಯದ್ದು 510.00
- ಕಾರ್ಕಳ:Kamadhenu, 9845256188, 510.00
- ಪುತ್ತೂರು :ಕ್ಯಾಂಪ್ಕೋ, ಆಯದ್ದು, 500.00
- ಮಂಗಳೂರು:PB Abdul-7204032229, ಆಯದ್ದು, 500.00
- ಮಂಗಳೂರು; ಕ್ಯಾಂಪ್ಕೋ, ಆಯದ್ದು, 500.00
- ಶಿರ್ಸಿ :Kadamba Marketing, ಆಯದ್ದು, 490.00
- ಬೋಳು ಕಾಳು:710.00-740.00
ಶುಂಠಿ ಧಾರಣೆ:
ಅಂತೂ ಕೊನೆಗೆ ಶುಂಠಿ ದರ ಸ್ವಲ್ಪ ಮೇಲೆ ಬಂತು. ಆದರೆ ಪ್ರಯೋಜನ ಆದದ್ದು ಬಹಳ ಕಡಿಮೆ ಜನಕ್ಕೆ. ಹೆಚ್ಚಿನವರು ಕಾದು ಕಾದು ಮಾರಾಟ ಮಾಡಿದ್ದಾಗಿದೆ. ಹಸಿ ಶುಂಠಿ ಕ್ವಿಂಟಾಲಿಗೆ 1700 ದಿಂದ 1900 ತನಕ ಇದೆ.

ಕೊಬ್ಬರಿ ಧಾರಣೆ:
- ಕೊಬ್ಬರಿ ದರ ಸ್ಥಿರವಾಗಿದ್ದು, 16,000 ದಿಂದ ಕೆಳಕ್ಕೆ ಇಳಿಯದೆ, 16500 ರಿಂದ ಮೇಲಕ್ಕೇರದೆ ಮುಂದುವರಿಯುತ್ತಿದೆ.
- ಅರಸೀಕೆರೆ: (ಬಾಲ್) 16000-17165
- ತುಮಕೂರು: 16400-17100
- ಚನ್ನರಾಯಪಟ್ನ: (ಎಣ್ಣೆ) 9000-11000
- ತಿಪಟೂರು:(ಬಾಲ್) 16500-17050
- ಮಂಗಳೂರು: ಎಣ್ಣೆ: 10000-12000
- ಪುತ್ತೂರು: ಎಣ್ಣೆ: 9000-10550
ಕಾಫೀ ಧಾರಣೆ:
ಕರ್ನಾಟಕದ ಕಾಫಿ ಸ್ವಲ್ಪ ಪ್ರಮಾಣದಲ್ಲಿ ರಪ್ತು ಆಗುತ್ತಿತ್ತು. ಈ ವರ್ಷ ಭಾರತದ ಕಾಫೀಯಲ್ಲಿ ಕೀಟನಾಶಕಗಳ ಉಳಿಕೆ ಅಂಶ ಇದೆ ಎಂಬ ಕಾರಣಕ್ಕೆ ರಪ್ತು ಆಗುವುದಕ್ಕೆ ಅಡ್ಡಿಯಾಗಿದೆ. ಒಂದು ವೇಳೆ ಹಿಂದಿನಂತೆ ರಪ್ತು ಆಗುತ್ತಿದ್ದರೆ ಈ ವರ್ಷ ಬೆಳೆ ಕಡಿಮೆಯಾಗಿ ಬೆಲೆ 17,000 ಮೀರುತ್ತಿತ್ತು.
- ಅರೇಬಿಕಾ ಪಾರ್ಚ್ ಮೆಂಟ್:15500-15600
- ಅರೇಬಿಕಾ ಚೆರಿ:7500-8000
- ರೋಬಸ್ಟಾ ಪಾರ್ಚ್ ಮೆಂಟ್:8400-8600
- ರೋಬಸ್ಟಾ ಚೆರಿ:3800-3900

ರಬ್ಬರ್ ಧಾರಣೆ:
ರಬ್ಬರ್ ದರ ಸ್ವಲ್ಪ ಏರಿಕೆಯಾಗಿದೆ. ಸ್ವಲ್ಪ ಸಮಯ ಹೀಗೆ ಮುಂದುವರಿಯಬಹುದು ಎನ್ನಲಾಗುತ್ತದೆ. ಅಂತರ ರಾಷ್ಟ್ರೀಯ ಬೇಡಿಕೆ ಸ್ವಲ್ಪ ಮಟ್ಟಿಗೆ ಇದ್ದು, ತಿಂಗಳಾಂತ್ಯಕ್ಕೆ ಇನ್ನೂ 1-2 ರೂ ಏರಿಕೆ ಆಗಬಹುದು ಎನ್ನಲಾಗುತ್ತಿದೆ.
- GREDE 1X:182.00
- RSS 3:169.50
- RSS 4:169.00
- RSS 5:163.00
- LOT :159.50
- SCRAP: 111.00-119.00
ಏಲಕ್ಕಿ ಧಾರಣೆ:
- ಕೂಳೆ, 430-450.00
- ನಡುಗೊಲು, 500-550.00
- ರಾಶಿ, 600-650.00
- ರಾಶಿ ಉತ್ತಮ, 650-700.00
- ಜರಡಿ, 750-800.00
- ಹೇರಕ್ಕಿದ್ದು, 1100-1150.00
- ಹಸಿರು ಸಾದಾರಣ, 600-700.00
- ಹಸಿರು ಉತ್ತಮ, 900-950.00
- ಹಸಿರು ಅತೀ ಉತ್ತಮ, 1200-1250.00
ಹಳೆ ಅಡಿಕೆ ಮಾರಾಟ ಮಾಡಿ. ಹೊಸತು ಕೊಯಿಲಿನ ಅಡಿಕೆ ಇರಲಿ. ಮೆಣಸು ಜೂನ್ ತನಕ ಕಾದು ಮಾರಾಟ ಮಾಡಿ. ರಬ್ಬರ್ ದಾಸ್ತಾನು ಇಡಬೇಡಿ. ಸರಾಸರಿ ಬೆಲೆ ಸಿಗುವಂತೆ ಮಾರಾಟ ಮಾಡಿ.