ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ದಿನಾಂಕ 11-08-2023ರ ಶುಕ್ರವಾರ ಒಟ್ಟು ಸುಮಾರು 425 ಟನ್ ಅಡಿಕೆ ವ್ಯವಹಾರ ನಡೆದಿದೆ. ಕಳೆದ ವಾರ ಯಾವುದೋ ಸುದ್ದಿಯ ಕಾರಣಕ್ಕೆ ಕೆಂಪಡಿಕೆ ಧಾರಣೆಯಲ್ಲಿ ಇಳಿಕೆ ಕಂಡು ಬಂತು. ಚಾಲಿ ಅಡಿಕೆಯ ಧಾರಣೆಯಲ್ಲಿ ಏರಿಕೆ ಆಗುತ್ತಾ ಇದೆ. ಆಗಸ್ಟ್ ತಿಂಗಳು ಸಪ್ಟೆಂಬರ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬ ಆಶಾಭಾವನೆ ಮಾರಾಟಗಾರರ ಮಾಹಿತಿಯಿಂದ ಕೇಳಿ ಬರುತ್ತಿದೆ. ಕೆಂಪಡಿಕೆ ಧಾರಣೆ ಇಳಿಕೆ ತಾತ್ಕಾಲಿಕವಾಗಿದ್ದು, ತಿಂಗಳಾಂತ್ಯಕ್ಕೆ ಇದೆ. ಕ್ವಿಂಟಾಲಿಗೆ ರೂ.1000 ದಷ್ಟಾದರೂ ಏರಬಹುದು ಎನ್ನುತ್ತಾರೆ.
ಕಳೆದ ವರ್ಷ ಸಪ್ಟೆಂಬರ್ ತಿಂಗಳಲ್ಲಿ ಭೂತಾನ್ ದೇಶದಿಂದ 17000 ಟನ್ ಹಸಿ ಅಡಿಕೆ ಆಮದಿಗೆ Directarate general of foreign trade ಇವರಿಂದ ಆನುಮತಿ ಸಿಕ್ಕಿತ್ತು. ಈ ವರ್ಷ ಜುಲೈ 3 ನೇ ತಾರೀಕಿಗೆ ಮತ್ತೆ ಅಷ್ಟೇ ಪ್ರಮಾಣದ ಹಸಿ ಅಡಿಕೆ ಆಮದಿಗೆ ಅನುಮತಿ ನೀಡಲಾಗಿದೆ. ಈ ಸುದ್ದಿಯ ಪರಿಣಾಮದಿಂದಲೋ ಅಥವಾ ಬೇರೆ ಕಾರಣಕ್ಕೋ ದರ ಸ್ವಲ್ಪ ಇಳಿಕೆಯಾಗಿದೆ. ಭೂತಾನ್ ದೇಶದಿಂದ ಆಮದು ಅಗುವ ಅಡಿಕೆಗೆ ಕಿಲೋಗ್ರಾಂ ಗೆ 51 ರೂ. ದರ ವಿಧಿಸಲಾಗಿದ್ದು, ಈ ದರಕ್ಕೆ ಖರೀದಿ ಮಾಡಿದ ಅಡಿಕೆಗೂ ಸ್ಥಳೀಯ ಅಡಿಕೆ ದರಕ್ಕೂ ದರ ವ್ಯತ್ಯಾಸ ಹೆಚ್ಚು ಬರುವುದಿಲ್ಲ. 1ಕಿಲೋ ಅಡಿಕೆ ಸುಲಿದು ಬೇಯಿಸಿದಾಗ 160 gram ಅಡಿಕೆ ಸಿಗುತ್ತದೆ. ಅಂದರೆ 1 ಕಿಲೋ ಅಡಿಕೆ ಅಗಬೇಕಾದರೆ ಸುಮಾರು 6.25 ಕಿಲೋ ಹಸಿ ಅಡಿಕೆ ಬೇಕು. ಅಂದರೆ 318 ರೂ. ಆಯಿತು. ಅದರಲ್ಲಿ ಸಾಗಾಣಿಕೆ ವೆಚ್ಚ, ಸುಲಿದ ಮಜೂರಿ, ಒಣಗಿಸಿದ ಮಜೂರಿ, ಎಲ್ಲಾ ಸೇರಿದಾಗ ಅದು 400 ರೂ. ತನಕ ಆಗುತ್ತದೆ. ಅದರಲ್ಲಿ ಎಲ್ಲವೂ ಮಿಶ್ರ ಇರುವ ಕಾರಣ ಬೆಲೆ ಸ್ಥಳೀಯ ಮಾರುಕಟ್ಟೆಯಲಿದ್ದಷ್ಟೇ ಆಗುತ್ತದೆ. ಭೂತಾನ್ ಅಡಿಕೆ ಆಮದು ಎಂಬ ಸುದ್ದಿಯ ಸೆಂಟಿಮೆಂಟ್ ಹಿಡಿದುಕೊಂಡು ದರ ಇಳಿಕೆ ಮಾಡಲಾಗಿದೆ ಎಂದಷ್ಟೇ ಹೇಳಬಹುದು. ಇಷ್ಟಷ್ಟೂ 17000 ಹಸಿ ಅಡಿಕೆ ಎಂದರೆ ನಮ್ಮ ಉತ್ಪಾದನೆಗೆ ಅದು ಲೆಕ್ಕವೇ ಇಲ್ಲ. ವ್ಯಾಪಾರಿಗಳು ಕೆಲವು ಸುದ್ದಿಗಳನ್ನು ಆಧರಿಸಿ ಬೆಲೆ ಕಡಿಮೆ ಮಾಡುತ್ತಾರೆ. ರೈತರು ಅದರ ಬಲಿಪಶುಗಳಾಗುತ್ತಾರೆ.
ಚಾಲಿ ಅಡಿಕೆಗೆ ಉತ್ತರ ಭಾರತದ ಬೇಡಿಕೆ ಪ್ರಾರಂಭವಾಗಿದೆ. ಖರೀದಿದಾರರ ಗೋಡೌನ್ ಗಳು ಖಾಲಿಯಾಗುತ್ತಿವೆ.ಹಳೆ ಅಡಿಕೆಗೆ ಮಾತ್ರ ಬೇಡಿಕೆ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಆದಾಗ್ಯೂ ಈ ವಾರದಿಂದ ಸ್ವಲ್ಪ ದರ ಎರಿಕೆ ಆಗಲಾರಂಭಿಸಿದೆ. ಇದು ಬೆಳೆಗಾರರಲ್ಲಿ ಹೊಸ ನಿರೀಕ್ಷೆಯನ್ನು ಉಂಟು ಮಾಡಿದೆ. ಬೆಳೆಗಾರರಲ್ಲಿ 25% ದಷ್ಟು ಹಳೆ ಅಡಿಕೆ ದಸ್ತಾನು ಇದೆ ಎಂಬ ಸುದ್ದಿ ಇದೆ. ಹೊಸ ಅಡಿಕೆ ಮಾರುಕಟ್ಟೆಗೆ ಬರುವುದೂ ತುಂಬಾ ಕಡಿಮೆ ಇದೆ. ಹಾಗಾಗಿ ಬೆಲೆ ಏರಿಕೆ ಮುಂದಿನ ತಿಂಗಳ ತನಕವೂ ಮುಂದುವರಿಯಬಹುದು. ಕಳೆದ ಎರಡು ವಾರದಿಂದ ಉತ್ತರ ಭಾರತಕ್ಕೆ ಗರಿಷ್ಟ ಪ್ರಮಾಣದಲ್ಲಿ ಅಡಿಕೆ ಸಾಗಾಟವಾದ ಸುದ್ದಿ ಇದೆ. ಹಾಗಾಗಿ ಅಲ್ಲಿಂದ ಹಣ ತಕ್ಷಣ ಬಾರದಿದ್ದರೆ ಕೆಲವು ದಿನಗಳ ಮಟ್ಟಿಗೆ ಸ್ವಲ್ಪ ಹಣಕಾಸಿನ ಟೈಟ್ ಆಗಿ ಬೆಲೆ 5-10 ಇಳಿಕೆಯಾಗುವ ಸಾಧ್ಯತೆಯೂ ಇದೆ. ಸಪ್ಟೆಂಬರ್ ಕೊನೇ ವಾರಕ್ಕೆ ಹೊಸ ಅಡಿಕೆ (2023ರ) ಮಾರುಕಟ್ಟೆಗೆ ಬರುವ ಸಾಧ್ಯತೆ ಇದ್ದು , ಸಹಜವಾಗಿ ಅಕ್ಟೋಬರ್ ತಿಂಗಳಿಗೆ ಮತ್ತೆ ಸ್ವಲ್ಪ ಇಳಿಕೆ ಆಗುವ ಸಂಭವ ಇದೆ.
ಚಾಲಿ ಅಡಿಕೆ ದಾರಣೆ:
- ಪುತ್ತೂರು: ಹೊಸ ಅಡಿಕೆ:45000, 38000
- ಹಳೆ ಅಡಿಕೆ: 47500, 45000
- ವಿಟ್ಲ: ಹೊಸ ಅಡಿಕೆ:45000, 38000
- ಹಳೆ ಅಡಿಕೆ: 48000, 45000
- ಬಂಟ್ವಾಳ ಪಟೋರಾ: 32000, 38000
- ಕರಿಗೋಟು: 27000-28,000
- ಉಳ್ಳಿಗಡ್ಡೆ:26000-27000
- ಹೊಸ ಅಡಿಕೆ: 45000, 42500
- ಹಳೆ ಅಡಿಕೆ: 47000, 47000
- ಬೆಳ್ತಂಗಡಿ ಹೊಸ ಅಡಿಕೆ: 45000, 37000
- ಹಳೆ ಅಡಿಕೆ: 47500, 47000
- ಪಟೋರಾ: 32000, 37500
- ಕರಿಗೋಟು: 27000-28,000
- ಉಳ್ಳಿಗಡ್ಡೆ:26000-27000
- ಕಾರ್ಕಳ ಹೊಸ ಅಡಿಕೆ:45000, 35000
- ಹಳೆ ಅಡಿಕೆ: 48000, 45000
- ಸುಳ್ಯ: ಹೊಸ ಅಡಿಕೆ:44500, 37000
- ಹಳೆ ಅಡಿಕೆ: 48000, 45000
- ಕುಂದಾಪುರ, ಹಳೆ ಚಾಲಿ: 47000, 45000
- ಹೊಸ ಚಾಲಿ: 44500, 39000
- ಸಾಗರ: ಹೊಸ ಚಾಲಿ 40099, 39809
- ಕುಮಟಾ ಹಳೆಚಾಲಿ: 43529, 41600
- ಹೊಸ ಚಾಲಿ: 42099, 41349
- ಸಿದ್ದಾಪುರ: ಹೊಸ ಚಾಲಿ: 41459, 40399
- ಸಿರ್ಸಿ ಹೊಸ ಚಾಲಿ: 43200, 40719
- ಕೋಕಾ:35000-30100
- ಲಿಂಡಿ:40700-36400
- ಯಲ್ಲಾಪುರ ಚಾಲಿ: 42700, 42040
- ಸಿಪ್ಪೆ ಗೋಟು: 22930, 21699 (ಸಾಗರ)
- ಸಿಪ್ಪೆ ಗೋಟು ಸಿರ್ಸಿ:29310-23850
ಕೆಂಪಡಿಕೆ ಧಾರಣೆ:
- ಶಿವಮೊಗ್ಗ: ರಾಶಿ: Rasi 52199, 50019
- ಸರಕು: Saraku 81009, 69200
- ಬೆಟ್ಟೆ: Bette 53899, 52200
- ಗೊರಬಲು Gorabalu: 41699, 38679
- ಶಿಕಾರಿಪುರ: ರಾಶಿ Rasi: 53092, 52780
- ಶಿರಸಿ sirsi ರಾಶಿ Rasi: 51099, 49450
- ಕೆಂಪುಗೋಟು.Kempugotu: 37899, 32939
- ಬೆಟ್ಟೆ Bette: 47810, 43550
- ತೀರ್ಥಹಳ್ಳಿ Thirthahalli ರಾಶಿ Rasi: 52199, 48299
- ಸರಕು Saraku:81000
- ಬೆಟ್ಟೆ 53,000-50,000
- ಹೊಸನಗರ Hosanagara ರಾಶಿ: 51400, 50515
- ಕೆಂಪುಗೋಟು: 39611, 38711
- ಯಲ್ಲಾಪುರ Yallapura:ರಾಶಿ: 53900, 52290
- ತಟ್ಟೆ ಬೆಟ್ಟೆ Tatte bette: 48019, 44519
- ಆಪಿ Api: 66269, 59599
- ಬಿಳೇಗೋಟುBilegotu: 37499, 35099
- ಚೆನ್ನಗಿರಿ Chennagiri ರಾಶಿ Rasi: 54500, 52156
- ಭಿಮಸಮುದ್ರ Chitradurga ರಾಶಿ: 50569, 50379
- ಬೆಟ್ಟೆ: 40599, 40389
- ಅಪಿ: 51029, 50859
- ಸಿದ್ದಾಪುರ Siddapura ರಾಶಿ: 50009, 49599
- ಭದ್ರಾವತಿ Bhadravati: 51099, 45782
- ಗುಬ್ಬಿ ರಾಶಿ: 53500, 53500
- ಸಾಗರ Sagara ರಾಶಿ Rasi: 51509, 50099
- ಕೆಂಪು ಗೋಟು kempugotu: 40009, 39309
- ತುಮಕೂರು ರಾಶಿ: 52900, 52350
ಕರಿಮೆಣಸು ಧಾರಣೆ:
ಕರಿಮೆಣಸು ಧಾರಣೆ ಒಮ್ಮೆ ಹಿಂದೆ ಬಂತಾದರೂ ಮತ್ತೆ ಚೇತರಿಕೆಯಾಗಿ 60000-62000 ರಲ್ಲಿ ಸ್ಥಿರಗೊಂಡಿದೆ. ಬೇಡಿಕೆ ಇದೆ. ಆದರೆ ಕೊಚ್ಚಿ ಮಾರುಕಟ್ಟೆಯಲ್ಲಿ ದರ ಅಸ್ಥಿರವಾಗಿದೆ. ಹಾಗಾಗಿ ದರ ಒಂದು ವಾರದಿಂದ ಹಾಗೆಯೇ ಇದೆ. ಕೆಲವು ವ್ಯಾಪಾರಿಗಳು ಬೇಡಿಕೆ ಕಡಿಮೆ ಇದೆ ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಇನ್ನೂ ಸ್ವಲ್ಪ ಎರಿಕೆ ಸಾಧ್ಯತೆ ಕಾಣಿಸುತ್ತಿದೆ. ಅಕ್ಟೋಬರ್ ತನಕವೂ ದರ ಏರಿಕೆ ಆಗುವ ಸಾಧ್ಯತೆ ಇದೆ. ಭಾರೀ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಹೆಚ್ಚೆಂದರೆ 65000 ತನಕ ದರ ಏರಬಹುದು ಎನ್ನುತ್ತಾರೆ.
- ಮಂಗಳೂರು: 59,000-60000
- ಚಿಕ್ಕಮಗಳೂರು:60,000-61000-62000
- ಮೂಡಿಗೆರೆ:59000-60500-61000
- ಸಕಲೇಶಪುರ:59500-60000-61500
- ಶಿರಸಿ: 58200-61100
- ಸಾಗರ: 59000-60000
ಕೊಬ್ಬರಿ ಧಾರಣೆ:
ಕೊಬ್ಬರಿ ಧಾರಣೆ ಈಗ ಏರಿಕೆಯಾಗಬೇಕಿತ್ತು. ಆದರೆ ಹಾಗೆಯೇ ಇದೆ. 7500-8000 ದಲ್ಲಿ ಇದ್ದ ಧಾರಣೆ 9500 ತನಕ ಏರಿ ಹಾಗೆಯೇ ನಿಂತಿದೆ. ಮುಂದೆ ಹಬ್ಬದ ದಿನಗಳು ಬರುವ ಕಾರಣ 10,000 ದಾಟಬಹುದು ಎಂಬ ನಿರೀಕ್ಷೆ ಇದೆ.
ಏಲಕ್ಕಿ ಧಾರಣೆ:
ಏಲಕ್ಕಿ ಉತ್ಪಾದನೆ ತುಂಬಾ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಬೇಕಾದಷ್ಟು ಲಭ್ಯವಿರದ ಕಾರಣ ಸ್ವಲ್ಪ ದರ ಏರಿಕೆ ಆಗಿದೆ. ಇನ್ನೂ ಸ್ವಲ್ಪ ಏರಿಕೆ ಆಗಬಹುದು. ಕೇರಳ, ತಮಿಳುನಾಡಿನಲ್ಲಿ ಉತ್ಪಾದನೆ ಕಡಿಮೆಯಾಗಿದೆ.
ಅಡಿಕೆ ಬೆಳೆಗಾರರು ಅಗತ್ಯಕ್ಕೆ ತಕ್ಕಂತೆ ಸ್ವಲ್ಪ ಸ್ವಲ್ಪ ಮಾರಾಟ ಮಾಡಿ. ಕರಿಮೆಣಸನ್ನೂ ಪೂರ್ತಿ ದಾಸ್ತಾನು ಇಡಬೇಡಿ. ದರ ಏರಿಕೆಯಾದದ್ದು ಇಳಿಕೆ ಆಗದೆ ಇರಲಾರದು. ಕರಿಮೆಣಸಿನ ವ್ಯವಹಾರ ಒಂದು ವೇಳೆ ಸಟ್ಟಾ ವ್ಯಾಪಾರವೇ ಆಗಿದ್ದಲ್ಲಿ ಮತ್ತೆ ದರ ಇಳಿಕೆ ಆಗಬಹುದು. ಚಾಲಿ ಅಡಿಕೆ ಮಾರುಕಟ್ಟೆಯಲ್ಲೂ ಸ್ವಲ್ಪ ಅಸ್ಥಿರತೆ ಇದೆ. ಕೆಂಪಡಿಕೆ ಇನ್ನು ಭಾರೀ ದರ ಎರಿಕೆ ಆಗುವುದು ಕಷ್ಟ ಸಾಧ್ಯ.