ಅಡಿಕೆ ಮಾರುಕಟ್ಟೆ ಡಲ್ ಯಾಕೆ?. ದಿನಾಂಕ:09-02-2022 ರಂದು ರಾಜ್ಯದಲ್ಲಿ ಎಲ್ಲೆಲ್ಲಿ ಏನು ದರ.

ಆಡಿಕೆ

ಅಡಿಕೆ ದರ ಎರಿಕೆಯಾಗುವ ಸೂಚನೆ ಇಲ್ಲ. ಪುಣ್ಯಕ್ಕೆ ಇಳಿಕೆಯೂ ಇಲ್ಲವಲ್ಲ. ಅದಕ್ಕೆ ಸಂತೋಷ ಪಡಬೇಕು. ಚಾಲಿ ಅಡಿಕೆ ಮಾರುಕಟ್ಟೆ ಮೇಲ್ನೋಟಕ್ಕೆ ಸ್ಥಿರವಾಗಿದೆ ಎಂದು ಕಂಡುಬಂದರೂ ದರ ಇಳಿಕೆಯಾಗಿದೆ. ಸೂಚಿಸಿದ ದರಕ್ಕೆ ಖರೀದಿ ಮಾಡುವವರು ಇಲ್ಲ.  ಹಾಗಾಗಿ ಅಡಿಕೆ ಮಾರುಕಟ್ಟೆ ಡಲ್. ಬಹುಷಃ ಇದು ಇನ್ನೂ 2-3 ತಿಂಗಳು ಹೀಗೇ ಮುಂದುವರಿಯುವ ಸಾಧ್ಯತೆ.ದಿನಾಂಕ 09-02-2022  ಬುಧವಾರ ರಾಜ್ಯದಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ.

ಚಾಲಿ ಅಡಿಕೆ ಹಾಗೂ ಕೆಂಪಡಿಕೆಯ ಆಮದು ಸಾಧ್ಯತೆ ಇದೆ ಎಂಬ ಸುದ್ದಿ ಇದೆ. ಈಗಾಗಲೇ  ಮಿಜೋರಾಂ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಕಳ್ಳ ಮಾರ್ಗದ ಮೂಲಕ ಅಡಿಕೆ ಒಳನುಸುಳುತ್ತಿದ್ದುದನ್ನು ಶಿಸ್ತಿನಲ್ಲಿ ಮುಟ್ಟುಗೋಲು ಹಾಕುತ್ತಿದ್ದ ದಕ್ಷ ಅಧಿಕಾರಿಗಳನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿದೆಯಂತೆ. ಇದರಿಂದ ಇನ್ನು ಮುಂದೆ ಅಡಿಕೆ ಆಮದು ಮಾಡಲು  ದಾರಿ ಸುಗಮ ಎಂಬ ವರದಿಗಳು ಬಂದ ನಂತರ ಸ್ವಲ್ಪ ಅಡಿಕೆ ಮಾರುಕಟ್ಟೆ ಡಲ್ ಹೊಡೆಯುತ್ತಿವೆ. ಖಾಸಗಿಯವರ ಸ್ಪರ್ಧೆ  ಖರೀದಿ ಉತ್ಸಾಹ ಕಡಿಮೆಯಾದರೆ ಏನೋ ಇದೆ ಎಂದರ್ಥ. ಸಾಗರ, ಶಿರಸಿ, ಯಲ್ಲಾಪುರಗಳಲ್ಲಿ ಚಾಲಿ ಮಾರುಕಟ್ಟೆ ಹಿಂದೆ ಬರುತ್ತಿದೆ. ಕೆಂಪು ಸಹ ಇಳಿಕೆಯೂ ಆಗದೆ ಏರಿಕೆಯೂ ಆಗದೆ  ಮುಂದುವರಿಯುತ್ತಿದೆ. ಹಳೆ ಚಾಲಿ ಮುಗಿದಂತೆ ಕಾಣಿಸುತ್ತದೆ. ಎಲ್ಲಾ ಕಡೆಯ ಮಾರುಕಟ್ಟೆಗೂ ಅತೀ ಕಡಿಮೆ ಪ್ರಮಾಣದಲ್ಲಿ ಹಳೆ ಚಾಲಿ ಬರುತ್ತಿದೆ. ಕೊಯಿಲಿನ ಹೊಸ ಚಾಲಿ ಮಾರುಕಟ್ಟೆಗೆ  ಬರುವುದು ತುಉಂಬಾ ಕಡಿಮೆ. ಬಿದ್ದ ಅಡಿಕೆ, ಮಳೆಗೆ ನೆನೆದ ಅಡಿಕೆಯನ್ನು ಮಾರಾಟ ಮಾಡುವುದೇ ಹೆಚ್ಚು. ಇನ್ನು ಹೊಸತು ಕೊಯಿಲಿನ ಅಡಿಕೆ ಮಾರಾಟಕ್ಕೆ ಬಂದ ನಂತರ ದರ ಏರಿಕೆ ಆಗಲಾರಂಭಿಸುತ್ತದೆ. ಈ ವರ್ಷವೂ ಹೊಸ ಚಾಲಿಗೆ ಜೂನ್ – ಜುಲೈ ಸುಮಾರಿಗೆ ರೂ. 50,000 ಆಗಬಹುದು. ಯಾಕೆಂದರೆ ಈಗಾಗಲೇ ಈ ಬೆಲೆ ಇದೆ ಎಂಬುದು ಸಾಬೀತಾಗಿದೆ.

ಕೆಂಪಡಿಕೆಗೆ ಈ ವರ್ಷ ಖಂಡಿತವಾಗಿಯೂ ಬೆಲೆ ಬರುವ ಸಾಧ್ಯತೆ ಇದೆ ಎಂಬುದಾಗಿ ಹೇಳುತ್ತಾರೆ. ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ. ಏನಿದ್ದರೂ ಕೊಯಿಲು ಸಂಪೂರ್ಣ ಮುಗಿದು ತರಾತುರಿಯವರು ಮಾರಾಟ ಮಾಡಿದ ಮೇಲೆ ದರ ಏರಲಾರಂಭಿಸುತ್ತದೆ. ಬಹುಷಃ ಎಪ್ರೀಲ್ ಕಳೆದ ಮೇಲೆ ರಾಶಿಗೆ ದರ ಏರಿಕೆ ಆಗಬಹುದು.  ಶಿವಮೊಗ್ಗದಲ್ಲಿ ಇಂದು ಒಟ್ಟು 2475 ಚೀಲ ರಾಶಿ ಅಡಿಕೆ 45600 ದಿಂದ 45800 ವರೆಗಿನ ದರದಲ್ಲಿ ಮಾರಾಟವಾಗಿದೆ. ಇಷ್ಟೇ ಅಡಿಕೆ ಖಾಸಗಿಯವರಲ್ಲಿ ಖರೀದಿಯಾಗಿರಬಹುದು. ಸಣ್ಣ ಮಾರುಕಟ್ಟೆಯಾದರೂ ಸಹ ತೀರ್ಥಹಳ್ಳಿಯಲ್ಲಿ ಭಾನುವಾರ 2547 ಚೀಲ ರೂ. 45400-46400 ದರದಲ್ಲಿ ವ್ಯಾಪಾರವಾಗಿದೆ. ಚೆನ್ನಗಿರಿ ರಾಜ್ಯದ ಅತೀ ದೊಡ್ದ ಮಾರುಕಟ್ಟೆಯಲ್ಲಿ 1132 ರೂ. 45629 ರಿಂದ 46159 ತನಕ ಖರೀದಿಯಾಗಿದೆ.  ದೊಡ್ದ  ದೂಡ್ದ ಬೆಳೆಗಾರರು ಚೇಣಿ ಮಾಡಿದವರು ದಾಸ್ತಾನು ಇಟ್ಟಿದ್ದಾರೆ. ಹಾಗಾಗಿ ದರ ಏರಿಕೆ ಆಗುವ ಸೂಚನೆ ಇದೆ.

ಹಸಿ ಚಾಲಿ ಅಡಿಕೆ

ಚಾಲಿ ಅಡಿಕೆ ಮಾರುಕಟ್ಟೆ:

  • ಬಂಟ್ವಾಳ ; ಹೊಸ ಚಾಲಿ, 49, 27500, 45000, 42000
  • ಬಂಟ್ವಾಳ: ಹಳೆ ಚಾಲಿ, 46000, 53000, 50000
  • ಬೆಳ್ತಂಗಡಿ; ಹೊಸ ಚಾಲಿ: 28000, 42000, 39500
  • ಬೆಳ್ತಂಗಡಿ: ಹಳೆಚಾಲಿ, 42150, 52000, 48000
  • ಬೆಳ್ತಂಗಡಿ: ಪಟೋರಾ’,29000, 35000, 33000
  • ಬೆಳ್ತಂಗಡಿ: ಖೊಕಾ, 25000, 26000, 25500
  • ಕಾರ್ಕಳ: ಹಳೆ ಚಾಲಿ, 40000, 45000, 43000
  • ಕಾರ್ಕಳ: ಹಳೆ ಚಾಲಿ, 46000, 53500, 50000
  • ಕುಂದಾಪುರ: ಹಳೆ ಚಾಲಿ, 51500, 52500, 52000
  • ಕುಂದಾಪುರ: ಹೊಸ ಚಾಲಿ: 43500, 44500, 44000
  • ಮಂಗಳೂರು: ಕೋಕಾ, 30200, 35000, 31638
  • ಪುತ್ತೂರು: ಹೊಸತು, 27500, 45000, 36250
  • ಸುಳ್ಯ: ಹೊಸತು: 27500, 45000, 35000
  • ಪಟೋರಾ: ಕ್ಯಾಂಪ್ಕೋ ದರ ಹೊಸತು 30000-35000 ತನಕ.
  • ಪಟೋರಾ: ಹಳತು 40000 -44000-45000 (ಖಾಸಗಿ) ತನಕ.
  • ಉಳ್ಳಿ ಗಡ್ಡೆ: ಹೊಸತು 20000-21000-23000 ವರೆಗೆ.
  • ಉಳ್ಳಿಗಡ್ಡೆ: ಹಳತು 24000-27500 ವರೆಗೆ.
  • ಕರಿಗೋಟು: ಹೊಸತು 25,000-26000 ವರೆಗೆ.
  • ಕರಿಗೋಟು: ಹಳತು  25,000-27,000 ವರೆಗೆ.

ಕೆಂಪಡಿಕೆ ಮಾರುಕಟ್ಟೆ;

ಕೆಂಪು ಸುಪಾರಿ
  • ಭದ್ರಾವತಿ: ರಾಶಿ, 44619, 46019, 45179
  • ಚೆನ್ನಗಿರಿ: ರಾಶಿ, 1132, 44029, 46159, 45629
  • ಚಿತ್ರದುರ್ಗ: ಆಪಿ, 45619, 46029, 45849
  • ಚಿತ್ರದುರ್ಗ: ಬೆಟ್ಟೆ, 36210, 36669, 36489
  • ಚಿತ್ರದುರ್ಗ; ಕೆಂಪುಗೋಟು, 31600, 32000, 31800
  • ಚಿತ್ರದುರ್ಗ: ರಾಶಿ, 45139, 45559, 45379
  • ದಾವಣಗೆರೆ :ರಾಶಿ, 27899, 45783, 41930
  • ಹೊನ್ನಾಳಿ: ರಾಶಿ 45900, 45900, 45900
  • ಹುಲಿಯಾರು: ಇತರ 40570, 40570, 40570
  • ಕುಮ್ಟಾ: ಚಿಪ್ಪು, 24019, 28019, 27679
  • ಕುಮ್ಟಾ: ಕೋಕಾ, 20169, 27019, 26719
  • ಕುಮ್ಟಾ: ಫ್ಯಾಕ್ಟರಿ 13019, 19729, 19469
  • ಕುಮಟಾ: ಹಳೆ ಚಾಲಿ, 47099, 48599, 48169
  • ಕುಮಟಾ ಹೊಸ್ಸ ಚಾಲಿ, 36019, 40599, 39899
  • ಸಾಗರ: ಬಿಳೇ ಗೋಟು 19799, 22699, 21899
  • ಸಾಗರ: ಚಾಲಿ , 29099, 36289, 35399
  • ಸಾಗರ: ಕೋಕಾ, 27899, 27899, 27899
  • ಸಾಗರ: ಕೆಂಪು ಗೋಟು, 30899, 36299, 33899
  • ಸಾಗರ: ರಾಸಿ, 44009, 45809, 44849
  • ಸಾಗರ: ಸಿಪ್ಪೆಗೋಟು, 16009, 17609, 16009
  • ಶಿವಮೊಗ್ಗ :ಬೆಟ್ಟೆ , 46509, 52000, 50500
  • ಶಿವಮೊಗ್ಗ :ಗೊರಬಲು, 17080, 34899, 33700
  • ಶಿವಮೊಗ್ಗ :ರಾಶಿ, 43419, 45899, 45600
  • ಶಿವಮೊಗ್ಗ: ಸರಕು, 52359, 77006, 70500
  • ಸಿದ್ದಾಪುರ: ಬಿಳೇ ಗೋಟು, 21689, 35099, 26599
  • ಸಿದ್ದಾಪುರ: ಹಳೇ ಚಾಲಿ, 40311, 46699, 46599
  • ಸಿದ್ದಾಪುರ: ಕೋಕಾ, 20389, 32012, 24699
  • ಸಿದ್ದಾಪುರ: ಹೊಸ ಚಾಲಿ, 33699, 37899, 36409
  • ಸಿದ್ದಾಪುರ: ಕೆಂಪು ಗೋಟು, 26699, 32089, 30289
  • ಸಿದ್ದಾಪುರ: ರಾಸಿ 42599, 46699, 45989
  • ಸಿದ್ದಾಪುರ: ತಟ್ಟೆ ಬೆಟ್ಟೆ, 34699, 46199, 43109
  • ಸಿರಾ: ಮಿಕ್ಸ್,  9000, 46000, 27433
  • ಸಿರ್ಸಿ: ಬೆಟ್ಟೆ, 34123, 44999, 40612
  • ಸಿರ್ಸಿ: ಬಿಳೇ ಗೋಟು, 20219, 34393, 26745
  • ಸಿರ್ಸಿ: ಚಾಲಿ, 30299, 39439, 36602
  • ಸಿರ್ಸಿ: ರಾಶಿ, 41769, 47699, 46113
  • ತೀರ್ಥಹಳ್ಳಿ: ಬೆಟ್ಟೆ, 44810, 53899, 50172
  • ತೀರ್ಥ ಹಳ್ಳಿ :ಇಡಿ, 43210, 46221, 45699
  • ತೀರ್ಥಹಳ್ಳಿ :ಗೊರಬಲು, 25009, 35099, 34419
  • ತೀರ್ಥಹಳ್ಳಿ:  ರಾಸಿ, 40212, 46421, 45899
  • ತೀರ್ಥಹಳ್ಳಿ :ಸರಕು, 50099, 75600, 70099
  • ತುಮಕೂರು: ರಾಶಿ, 45200, 46100, 45400
  • ಯಲ್ಲಾಪುರ: ಆಪಿ: 51930, 55469, 55469
  • ಯಲ್ಲಾಪುರ: ಬಿಳೇ ಗೋಟು, 24721, 31530, 27499
  • ಯಲ್ಲಾಪುರ: ಕೋಕಾ, 22899, 30399, 28499
  • ಯಲ್ಲಾಪುರ: ಹಳೇ ಚಾಲಿ, 47890, 47890, 47890
  • ಯಲ್ಲಾಪುರ: ಹೊಸ ಚಾಲಿ, 32499, 39441, 35289
  • ಯಲ್ಲಾಪುರ: ಕೆಂಪು ಗೋಟು, 28969, 32799, 29042
  • ಯಲ್ಲಾಪುರ: ರಾಶಿ, 45869, 50790, 48992

ಸರಾಸರಿ ದರಕ್ಕೂ ಗರಿಷ್ಟ ದರಕ್ಕೂ ವ್ಯತ್ಯಾಸ ಕಡಿಮೆಯಾಗಿದೆ. ಇದು ಬೇಡಿಕೆಯನ್ನು ಸೂಚಿಸುತ್ತದೆ. ಹಳೆ ಚಾಲಿ ಕಡಿಮೆ ಬರುತ್ತಿದೆ.

ಕರಿಮೆಣಸು ಮಾರುಕಟ್ಟೆ:

ಈ ವರ್ಷ ಕೆಲವು ಕಡೆ ಫಸಲು ಕಡಿಮೆ. ಹಾಗೆಂದು ಬಾರೀ ವ್ಯತ್ಯಾಸ ಇಲ್ಲ. ಕರಾವಳಿಯಲ್ಲಿ ಶೇ.10-15 ಕಡಿಮೆ ಇರಬಹುದು. ತೀರ್ಥಹಳ್ಳಿ, ಶಿವಮೊಗ್ಗ, ಸಾಗರ, ಶಿರಸಿ, ಸಿದ್ದಾಪುರ, ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರು, ಮಡಿಕೇರಿ, ಕಳಸ ಇಲ್ಲೆಲ್ಲಾ ಶೇ.25-30 ಮಾತ್ರ ಕಠಾವು ಆಗಿದ್ದು, ಫಸಲು ಸುಮಾರಾಗಿ ಹಿಂದಿನ ವರ್ಷದಂತೆ ಇದೆ ಎನ್ನುತ್ತಾರೆ. ಈ ವರ್ಷದ ಮೆಣಸು ಡಿಸೆಂಬರ್ ತನಕ ಮಳೆ ಬಂದ ಕಾರಣ ಚೆನ್ನಾಗಿ ತಿರುಳು ಕೂಡಿ ತೂಕ ಇದೆ. ಹಾಗಾಗಿ ಕರಾವಳಿ ಹೊರತಾಗಿ ಉಳಿದೆಡೆ 10-15% ಮಾತ್ರ ಬೆಳೆ ಕಡಿಮೆ ಆದರೂ ಆಗಬಹುದು. ಉತ್ತಮ ಲೀಟರ್ ತೂಕ ಇರುವ ಮೆಣಸಿಗೆ ಅಂತರರಾಷ್ಟ್ರೀಯ ಬೇಡಿಕೆ ಇದೆ. ಹಾಗಾಗಿ ಈ ವರ್ಷ ಮೆಣಸಿಗೆ ಈಗ ಸ್ವಲ್ಪ ದರ ಇಳಿಕೆ ಆದರೂ  ಮುಂದೆ ಮಳೆಗಾಲದಲ್ಲಿ ಮತ್ತೆ ಚೇತರಿಕೆ ಆಗಬಹುದು. ಇಂಟರ್ ನ್ಯಾಶನಲ್ ಪೆಪ್ಪರ್ ಕಮ್ಯೂನಿಟಿ ಪ್ರಕಾರ ಭಾರತದ ಮೆಣಸು ಜಗತ್ತಿನಲ್ಲೇ ಸರ್ವ ಶ್ರೇಷ್ಟ ಎನ್ನುತ್ತಾರೆ.

ಕರಿ ಮೆಣಸು

ಎಲ್ಲಿ ಯಾವ ದರ ಇತ್ತು?

ಮೂಡಿಗೆರೆಯಲ್ಲಿ, ಸಕಲೇಶಪುರದಲ್ಲಿ ಹಳೆಯ ಮೆಣಸಿಗೆ 500 ರೂಗಳಿಗೆ ದರದಲ್ಲಿ ಖರೀದಿಸುತ್ತಿದ್ದಾರೆ. ನಿಶ್ಚಿತ ಬೇಡಿಕೆ ಇರುವ ಕಾರಣ ಖರೀದಿಗೆ ಹಿಂಜರಿಯುವುದಿಲ್ಲ.

  • ಮಂಗಳೂರು:470.00-490.00
  • ಕಾರ್ಕಳ: 470.00-490.00
  • ಕುಂದಾಪುರ:460.00-470.00
  • ಪುತ್ತೂರು:465.00-470.00
  • ಸುಳ್ಯ:460.00-475.00
  •  ಮಡಿಕೇರಿ:465.00-480.00
  • ಮುಡಿಗೆರೆ:480.00-500.00
  • ಸಕಲೇಶಪುರ: 470.00-485.00-490.00
  • ಶಿವಮೊಗ್ಗ:460.00-475.00
  • ತೀರ್ಥಹಳ್ಳಿ 460.00-480.00
  • ಸಾಗರ:450.00-480.00
  • ಶಿರಸಿ:458.00-492.00
  • ಸಿದ್ದಾಪುರ:450.00-475.00
  • ಕಳಸ: 470.00-490.00
  • ಯಲ್ಲಾಪುರ:400.00-470.00
  • ಚಿಕ್ಕಮಗಳೂರು:480.00-490.00

ಕೊಯಿಲಿನ ಸಮಯ ಹಾಗೂ ಕೊಚ್ಚಿ ಮಾರುಕಟ್ಟೆಯಲ್ಲಿ ಸ್ವಲ್ಪ ದರ ಇಳಿಕೆ ಆದ ಕಾರಣ ದರ ಸ್ವಲ್ಪ ಕುಸಿದಿದೆ. ಕರಿ ಮೆಣಸು ಸಂಸ್ಕರಣೆಗೆ ಕ್ಯಾಂಪ್ಕೋ ಮುಂದಾಗಿರುವ ಕಾರಣ ಬೇಡಿಕೆ ಉತ್ತಮವಾಗಿ ಇರುತ್ತದೆ. ಇಷ್ಟಕ್ಕೂ ಎಲ್ಲಾ ನಮೂನೆಯ ವೈರಸ್ ಶೀತ, ಕೆಮ್ಮು ಗಳಿಗೆ ಕರಿಮೆಣಸು  ನಿರೋಧಕ ಶಕ್ತಿ ಕೊಡುತ್ತದೆ. ಹಾಗಾಗಿ ಆಮದು ಆದರೂ ಬೆಲೆ ಭಾರಿ ಕುಸಿಯದು.

ಕೊಬ್ಬರಿ ದರ:

ಕೊಬ್ಬರಿ ಬೆಲೆ ಏರಲು ಪ್ರಾರಂಭವಾಗಿದೆ. ಕೊರೋನಾ ಮುಂತಾದ ಸಾಂಕ್ರಾಮಿಕ ರೋಗಗಳ ಆರ್ಭಟ ಕಡಿಮೆಯಾಗಿದೆ. ಎಲ್ಲಾ ಸಭೆ ಸಮಾರಂಭಗಳು ಎಂದಿನಂತೆ ನಡೆಯಲಾರಂಭಿಸಿದೆ. ಹಾಗಾಗಿ ಬೆಲೆ ಸ್ಥಿರವಾಗಿ ಮುಂದುವರಿಯಲಿದೆ. ಇಷ್ಟಕ್ಕೂ ತೆಂಗಿನ ಉತ್ಪಾದನೆ ಕಡಿಮೆಯಾಗುತ್ತಿದೆ.  ನುಶಿ ರೋಗ, ಬಿಳಿ ಹಾತೆ ಹಾಗೆಯೇ ಕೆಲವು ಶಿಲೀಂದ್ರ ರೋಗಗಳಿಂದ ತೆಂಗಿನ ಬೆಳೆ ಬಾರೀ ಕಡಿಮೆಯಾಗುವ ಸಾದ್ಯತೆ ಇದ್ದು, ಬೆಲೆ ಬರಲಿದೆ.

ಕೊಬ್ಬರಿ

ಎಲ್ಲಿ ಎಷ್ಟು ದರ:

  • ಅರಸೀಕೆರೆ:ಬಾಲ್,16000, 18006, 17507 (ಕ್ವಿಂಟಾಲು)
  • ಚೆನ್ನರಾಯ ಪಟ್ಣ: ಹಾಳು ಕೊಬ್ಬರಿ, 5000, 5000, 5000
  • ಚೆನ್ನರಾಯಪಟ್ನ:ಬಾಲ್  17400, 17400, 17400
  • ಗುಬ್ಬಿ :ಸಣ್ಣ ಕೊಬ್ಬರಿ, 12500, 12500, 12500
  • ಹುಲಿಯಾರು: ಬಾಲ್, 17500, 17550, 17500
  • ಮಂಗಳೂರು:ಎಣ್ಣೆ, 7500, 13620, 8500
  • ತುಮಕೂರು: ಎಣ್ಣೆ, 11200, 12400, 11500
  • ತುರುವೇಕೆರೆ: ಬಾಲ್, 18000, 18000, 18000
  • ಪುತ್ತೂರು: ಎಣ್ಣೆ, 79000-12,400
  • ಹಸಿ ಕಾಯಿ ಒಣಗಿದ್ದು:30-34 ರೂ ಕಿಲೋ.

ಹಸಿ ಶುಂಠಿ ದರ:

ಹಸಿ ಶುಂಠಿ ಒಕ್ಕಣೆ ಬಹರದಿಂದ ಸಾಗುತ್ತಿದೆ. ಬೇಡಿಕೆ ಕಡಿಮೆಯಾಗಿದೆ.ಬಿತ್ತನೆಗೂ ಬೇಡಿಕೆ ಕಡಿಮೆಯಾಗಿದೆ ಹಾಗಾಗಿ ದರ ಏರಿಕೆಯೇ ಆಗುತ್ತಿಲ್ಲ ಕೀಳಿಸಿದ ಮಜೂರಿಯೂ ಹುಟ್ಟದ ಶಿ ಉಂಟಾಗಿದೆ. ಅನಿವಾರ್ಯವಾಗಿ ಕೀಳಲೇ ಬೇಕು. ಸಿಕ್ಕಿದ ದರಕ್ಕೆ ಮಾರಾಟ ಮಾಡಬೇಕು ಎಂಬ ಸ್ಥಿತಿ ಉಂಟಾಗಿದೆ.

  • ಬೇಲೂರು;ಹಸಿ 1000, 1000, 1000 (ಕ್ವಿಂಟಾಲು)
  • ಸಾಗರ: ಹಸಿ 900-1000
  • ಆನಂದಪುರ: ಹಸಿ, 900-1050
  • ಶಿರಸಿ: ಹಸಿ:900-1000
  • ಶಿವಮೊಗ್ಗ ಹಸಿ, 1400, 1600, 1500
  • ಚನ್ನರಾಯಪಟ್ನ: 800-950
  • ಎನ್ ಆರ್ ಪುರ:950-1025

ಕಾಫೀ ದಾರಣೆ:

ಕಾಫಿ ಬೆಳೆಗೆ ಕಳೆದ 20-25 ವರ್ಷಗಳಿಂದ ಏರದ ಬೆಲೆ ಈ ವರ್ಷ ಏರಿದೆ. ಆದರೆ ಉತ್ಪಾದನೆ ಕಡಿಮೆ.  ಲಾಭವೂ ಇಲ್ಲ. ನಷ್ಟವೂ ಇಲ್ಲ. ಮಾಮೂಲಿನಂತೆ ಎಲ್ಲ. ಅದರೆ ಕಾಫಿಗೆ ಬೆಲೆ ಇದೆ ಇದು ಆಡಿಕೊಳ್ಳುವ ಮಾತು ಎನ್ನುತ್ತಾರೆ ಎಲ್ಲರೂ.

ಪಾರ್ಚ್ ಮೆಂಟ್ ಕಾಫಿ
  • ಅರೇಬಿಕಾ ಪಾಚ್ ಮೆಂಟ್:16,000 (50Kg)
  • ಅರೇಬಿಕಾ ಚೆರಿ: 7400(50Kg)
  • ರೋಬಸ್ಟಾ ಪಾರ್ಚ್ ಮೆಂಟ್: 7300(50Kg)
  • ರೋಬಸ್ಟಾ ಚೆರಿ:4075(50Kg)

ರಬ್ಬರ್ ಧಾರಣೆ:

ರಬ್ಬರ್ ದಿನಕ್ಕೊಂದು ದರ ಎಂಬ ಸ್ಥಿತಿ ಉಂಟಾಗಿದೆ. ಒಮ್ಮೆ ಏರಿಕೆಯಾಗಿವುದು ಹಾಗೆಯೇ ಕೆಳಕ್ಕೆ ಬರುವುದು ಆಗುತ್ತಿದೆ. ರಬ್ಬರ್ ಇನ್ನೂ ಒಂದು – ಎರಡು  ವರ್ಷ ಕಳೆದ ತರುವಾಯ  ಬೆಲೆ ಬರಬಹುದೇನೋ. ಈಗಿನ ದರದಲ್ಲಿ ರಬ್ಬರ್ ಕೃಷಿ ಏನೇನೂ ಲಾಭದಾಯಕವಲ್ಲ ಎಂದಾಗಿದೆ.

  • Grade 1X- 177-00 (kg)
  • RSS 3-163.50
  • RSS 4 -163.00
  • RSS 5 -156.00
  • Lot : 153.00
  • Scrap:105.00-113.00

ರಬ್ಬರ್ ದಾಸ್ತಾನು ಇಟ್ಟುಕೊಳ್ಳಬೇಡಿ. ಮೆಣಸು ದಾಸ್ತಾನು ಇಡಿ. ಕಾಫೀ ಸಹ ಈ ವರ್ಷ ನಿಧಾನವಾಗಿ 17,000  ದಾಟಬಹುದು ಎಂಬ ವದಂತಿ ಇದೆ. ಹಾಗಾಗಿ ಗಾಳಿಯಾಡದಂತೆ ದಾಸ್ತಾನು ಇಡಿ. ಅಡಿಕೆ ತುರ್ತು ಅಗತ್ಯಕ್ಕೆ ಮಾತ್ರ  ಮಾರಾಟ ಮಾಡಿ. ಸುಲಿದ ಅಡಿಕೆಯನ್ನು ಒಂದು ದಿನ ಬಿಸಿಲಿಗೆ ಹಾಕಿ ಇಟ್ಟರೆ ಹಾಳಾಗದು. ಅಡಿಕೆ ದಾಸ್ತಾನು ಇಡುವಲ್ಲಿ ಡೆಂಕಿ ಇಲ್ಲದಂತೆ ನೋಡಿಕೊಳ್ಳಿ.

Leave a Reply

Your email address will not be published. Required fields are marked *

error: Content is protected !!