ಕೆಂಪಡಿಕೆ ಮಾಡುವ ಎಲ್ಲಾ ಕಡೆ ರಾಶಿ ದರ ಕೇವಲ 15 ದಿನಗಳ ಕಾಲಾವಧಿಯಲ್ಲೇ ಕ್ವಿಂಟಾಲಿಗೆ 8000 ಇಳಿಕೆಯಾಗಿದೆ. ಚಾಲಿ ಯಾವುದೋ ಕಾರಣಕ್ಕೆ ಕ್ಯಾಂಪ್ಕೋ ಸಂಸ್ಥೆ ದರ ಇಳಿಸದೆ ಅಲ್ಲಿಂದಲ್ಲಿಗೆ ನಿಲ್ಲಿಸಿದೆ. ನಮೂದಿಸಿದ ದರಕ್ಕೂ ಕೊಳ್ಳುವ ದರಕ್ಕೂ ಗುಣಮಟ್ಟದ ಹೆಳೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಲಾರಂಭಿಸಿದೆ. ಸ್ವಲ್ಪ ಅಸ್ಥಿರತೆ ಸೂಚನೆ ಕಂಡು ಬರಲಾರಂಭಿಸಿದೆ.
ಸಧ್ಯವೇ ಅಡಿಕೆ ವ್ಯವಹಾರ ನಡೆಸುವ ದೈತ್ಯ ಸಹಕಾರಿ ಸಂಸ್ಥೆ ತನ್ನ ವಾರ್ಷಿಕ ಮಹಾಸಭೆ ನಡೆಯಲಿದೆ. ಆ ತನಕ ದರ ಸ್ಥಿರತೆ ಇರಬಹುದು ಎಂಬುದಾಗಿ ಆಡಿಕೊಳ್ಳುತ್ತಿದ್ದಾರೆ. ಆದರೂ ದರ ಬೀಳುವ ಮುನ್ಸೂಚನೆ ಖಾಸಗಿ ವರ್ತಕರ ಖರೀದಿಯ ಭರದಲ್ಲಿ ತಿಳಿಯಲಾರಂಭಿಸಿದೆ. ಸಪ್ಟೆಂಬರ್ ಕೊನೆಯ ವಾರದಲ್ಲೇ ಇದರ ವಾಸನೆ ಹೊಡೆಯಲಾರಂಭಿಸಿತ್ತು. ಇಂದು ಖಾಸಗಿಯವರ ದರ ಸಹಕಾರಿಗಳ ದರಕ್ಕಿಂತ ಕಡಿಮೆ ಇತ್ತು. ಖಾಸಗಿಯವರು ತಾವು ಖರೀದಿಸಿದನ್ನು ಸಹಕಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಹೊಚ್ಚ ಹೊಸ ಅಡಿಕೆ ಚಿಲ್ಲರೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲು ಪ್ರಾರಂಭವಾಗಿದ್ದು, ಅದಕ್ಕೂ ದರ ನಿರ್ಧರಣೆ ಆಗಿದೆ. ನಾಳೆ ಸಹಕಾರಿ ಮಾರುಕಟ್ಟೆಗೆ ರಜೆ ಇದ್ದು, ಸೋಮವಾರ ಚಾಲಿ ದರ ಸ್ವಲ್ಪ ಇಳಿಕೆ ಆದರೂ ಅಚ್ಚರಿ ಇಲ್ಲ.
- ಈ ವರ್ಷ ಫಸಲು ಚೆನ್ನಾಗಿದೆ. ದೊಡ್ಡ ಬೆಳೆಗಾರರಲ್ಲಿ ಅಡಿಕೆ ದಾಸ್ತಾನು ಇದೆ ಎಂಬ ಅನುಮಾನವೂ ಇದೆ.
- ದರ ಏರಿಕೆಯ ಒಂದು ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಸ್ಟಾಕು ಕ್ಲೀಯರೆನ್ಸ್ ಆಗಿದೆ.
- ಹಾಗಾಗಿ ಇನ್ನು ದರ ಸ್ವಲ್ಪ ಇಳಿಸುವುದು ಬೆಳೆಗಾರರಿಂದ ಅಡಿಕೆ ಬರುವಂತೆ ಮಾಡುವುದು ಮತ್ತೆ ಏರಿಸುವುದು ಮಾಡುತ್ತಾ ವ್ಯವಹಾರ ನಡೆಯಲಿದೆ ಎಂಬ ಅನುಮಾನ ಇದೆ.
- ಕೆಂಪಡಿಕೆ ಮಾರುಕಟ್ಟೆಯಲ್ಲೂ ಮುಂದಿನ ಜನವರಿ ತನಕವೂ 1000-2000 ರೂ ಏರಿಕೆ ,ಇಳಿಕೆ ಮಾಡುತ್ತಾ ಬೆಳೆಗಾರರ ಅಡಿಕೆ ತಮ್ಮ ಕಡೆಗೆ ಬರುವಂತೆ ಮಾಡಿ ಮತ್ತೆ ದರ ಏರಿಸುವ ಸಾಧ್ಯತೆ ಇದೆ.
ಅಕ್ಟೋಬರ್ ತಿಂಗಳ ಮೊದಲ ದಿನ ದಿನಾಂಕ 01-10-2021 ರ ಶುಕ್ರವಾರ ಕೆಂಪಡಿಕೆ ಮತ್ತು ಚಾಲಿಯ ದರ ಹೀಗಿದೆ. ನಾಡಿದ್ದು ತೀರ್ಥಹಳ್ಳಿ, ಶ್ರಿಂಗೇರಿ ಮಾರುಕಟ್ಟೆಯ ದರದ ಮೇಲೆ ಮುಂದೆ ದರ ಹೇಗೆ ನಿಲ್ಲಬಹುದು ಎಂಬ ಪೂರ್ಣ ಚಿತ್ರಣ ಸಿಗಲಿದೆ.
ಊರು ದಿನಾಂಕ ವಿಧ ಒಟ್ಟು ಅವಕ ಕನಿಷ್ಟ ದರ ಗರಿಷ್ಟ ದರ ಸರಾಸರಿ ದರ
- ಬಂಟ್ವಾಳ , 01/10/2021, Coca, 7, 10000, 25000, 22500
BANTWALA, 01/10/2021, New Variety, 74, 25000, 50000, 46000
BANTWALA, 01/10/2021, Old Variety, 6, 46000, 51500, 49000
- ಬೆಳ್ತಂಗಡಿ: 30/09/2021, New Variety, 34, 24900, 50000, 39000
BELTHANGADI, 30/09/2021, Old Variety, 161, 48910, 51500, 49000
BELTHANGADI, 28/09/2021, Other, 30, 19000, 39500, 27500
- ಭದ್ರಾವತಿ: 10/2021, Rashi, 243, 43599, 48099, 44919
- ಚೆನ್ನಗಿರಿ: 30/09/2021, Rashi, 1898, 45129, 51499, 47713
ಚಿತ್ರದುರ್ಗ: 28/09/2021, Api, 2, 50619, 51029, 50849
CHITRADURGA, 28/09/2021, Bette, 40, 39659, 40099, 39879
CHITRADURGA, 28/09/2021, Kempugotu, 70, 32600, 33000, 32800
CHITRADURGA, 28/09/2021, Rashi, 15, 50139, 50569, 50389
- ದಾವಣಗೆರೆ: 01/10/2021, Rashi, 286, 42122, 46409, 45700
HOLALKERE, 30/09/2021, Rashi, 103, 49301, 51801, 50630
- ಹೊನ್ನಾಳಿ: 01/10/2021, Rashi, 13, 49101, 49101, 49101
KARKALA, 30/09/2021, New Variety, 65, 46000, 50000, 48000
- ಕಾರ್ಕಳ: 01/10/2021, Old Variety, 25, 46000, 51500, 48000
KOPPA, 28/09/2021, Bette, 18, 40108, 40108, 40108
KOPPA, 28/09/2021, Gorabalu, 21, 33198, 33698, 33448
KOPPA, 28/09/2021, Rashi, 202, 51399, 52599, 52349
KOPPA, 28/09/2021, Saraku, 10, 46108, 50059, 48083
ಕುಮ್ಟಾ: 30/09/2021, Hale Chali, 7, 46449, 47369, 47049
KUMTA, 01/10/2021, Hosa Chali, 300, 45019, 47409, 46520
KUMTA, 01/10/2021, Chippu, 50, 36599, 42089, 37125
KUMTA, 01/10/2021, Coca, 30, 23019, 37189, 28550
KUMTA, 01/10/2021, Factory, 175, 15019, 22519, 20469
- ಕುಂದಾಪುರ: 01/10/2021, Hosa Chali, 40, 36000, 46000, 42500
MADIKERI, 29/09/2021, Raw, 56, 45195, 45195, 45195
MALUR, 30/09/2021, Red, 130, 9500, 12000, 10000
- ಮಂಗಳೂರು: 01/10/2021, Coca, 42, 26000, 30800, 30000
PUTTUR, 30/09/2021, Coca, 965, 10500, 26000, 18250
- ಪುತ್ತೂರು: 01/10/2021, New Variety, 9, 35500, 50000, 42750
SAGAR, 30/09/2021, Bilegotu, 45, 29099, 37789, 35001
SAGAR, 30/09/2021, Chali, 173, 44059, 45499, 44699
SAGAR, 30/09/2021, Coca, 40, 39499, 40569, 39499
SAGAR, 30/09/2021, Kempugotu, 72, 30169, 37899, 32692
SAGAR, 30/09/2021, Rashi, 54, 42269, 50209, 49699
SAGAR, 30/09/2021, Sippegotu, 135, 9499, 26169, 25769
SHIKARIPUR, 30/09/2021, Red, 249, 49000, 51900, 50000
ಶಿವಮೊಗ್ಗ: 01/10/2021, Bette, 114, 46019, 52899, 51399
SHIVAMOGGA, 01/10/2021, Gorabalu, 634, 17286, 39049, 37609
SHIVAMOGGA, 01/10/2021, New Variety, 6, 45039, 47039, 46170
- SHIVAMOGGA, 01/10/2021, Rashi, 456, 43609, 49989, 46700
SHIVAMOGGA, 01/10/2021, Saraku, 183, 48669, 74199, 64200
ಸಿದ್ದಾಪುರ: 01/10/2021, Bilegotu, 34, 35108, 43399, 41799
SIDDAPURA, 01/10/2021, Chali, 200, 46099, 48299, 47899
SIDDAPURA, 01/10/2021, Coca, 9, 23399, 39399, 34809
SIDDAPURA, 01/10/2021, Kempugotu, 2, 20099, 35399, 34599
- SIDDAPURA, 01/10/2021, Rashi, 84, 45099, 47899, 46899
SIDDAPURA, 01/10/2021, Tattibettee, 5, 36899, 45099, 42099
SIRA, 27/09/2021, Other, 412, 9000, 51000, 49271
ಸಿರಸಿ: 01/10/2021, Bette, 19, 31099, 47999, 43643
SIRSI, 01/10/2021, Bilegotu, 38, 25219, 42811, 39525
SIRSI, 01/10/2021, Chali, 428, 44311, 48518, 47422
- SIRSI, 01/10/2021, Rashi, 122, 42810, 50099, 48134
TIRTHAHALLI, 26/09/2021, Bette, 74, 42166, 53599, 52099
TIRTHAHALLI, 26/09/2021, EDI, 44, 45099, 52699, 52369
TIRTHAHALLI, 26/09/2021, Gorabalu, 59, 16009, 40099, 39899
TIRTHAHALLI, 26/09/2021, Rashi, 245, 41119, 52599, 52369
TIRTHAHALLI, 26/09/2021, Saraku, 114, 40166, 78100, 68889
ತುಮಕೂರು: 01/10/2021, Rashi, 24, 48100, 50300, 49300
ಯಲ್ಲಾಪುರ: 28/09/2021, Api, 1, 57399, 58699, 57399
YELLAPURA, 01/10/2021, Bilegotu, 28, 34899, 41519, 39679
YELLAPURA, 01/10/2021, Chali, 274, 42199, 48271, 46820
YELLAPURA, 01/10/2021, Coca, 50, 22899, 34899, 31611
YELLAPURA, 01/10/2021, Kempugotu, 2, 30619, 36899, 33537
YELLAPURA, 01/10/2021, Rashi, 191, 47879, 51501, 49765
ಬೆಳೆಗಾರರು ಏನು ಮಾಡಬೇಕು:
- ಅಡಿಕೆಯ ದರ ಇಳಿಕೆ ಆಗುತ್ತಿದೆ ಎಂದು ಯಾವ ಬೆಳೆಗಾರರೂ ನಿರಾಸೆಯಲ್ಲಿ ಮಾರಾಟ ಮಾಡಬೇಡಿ.
- ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ. ಸ್ವಲ್ಪ ಏರಿದಾಗ ಸ್ವಲ್ಪ ಹೆಚ್ಚು, ತಮ್ಮ ಸಮಾಧಾನದ ಬೆಲೆ ಬಂದಾಗ ಮತ್ತೂ ಹೆಚ್ಚು ಪ್ರಮಾಣದಲ್ಲಿಯೂ ಮಾರಾಟ ಮಾಡುತ್ತಾ ಇರಬೇಕು.
- ಸರಾಸರಿ ದರದಲ್ಲಿ ಉತ್ತಮ ದರ ಸಿಕ್ಕಿದಂತಾಗುತ್ತದೆ.
- ಮಾರುಕಟ್ಟೆಯ ಸ್ಥಿತಿಗತಿಯನ್ನು ನಿತ್ಯ ಗಮನಿಸುತ್ತಿದ್ದು, ತಮ್ಮ ಉತ್ಪನ್ನವನ್ನು ಬಿಡಬೇಕು. ಚಾಲಿ ಬೆಳೆಗಾರರು ಹೆಚ್ಚು ಸಮಯದ ತನಕ ಕಾಯುವ ಸ್ಥಿತಿಯಲ್ಲಿದ್ದರೆ ಮಾತ್ರ ದಾಸ್ತಾನು ಇಡಿ.
- ಇಲ್ಲವಾದರೆ ಸ್ವಲ್ಪ ಪ್ರಮಾಣ ಮಾರಾಟ ಮಾಡುವುದು ಸೂಕ್ತ.
- ಮುಂದಿನ ವಾರದಿಂದ ಸ್ವಲ್ಪ ಸ್ವಲ್ಪ ಇಳಿಕೆ ಸಾಧ್ಯತೆ ಇದೆ.
- ಹಸಿ ಅಡಿಕೆ ದರ ಕುಸಿದಿದೆ. ಸಿಪ್ಪೆ ಗೋಟು ಸಹ ಕುಸಿದಿದೆ. ಪುತ್ತೂರು ಮಂಗಳೂರಿನಲ್ಲಿ ಚಾಲಿ ಅಡಿಕೆ ಬಹುಷಃ ಕೋಕಾ ಹೆಸರಿನಲ್ಲಿ ವ್ಯವಹಾರ ಆಗಿರಬೇಕು ಎಂದು ಕಾಣಿಸುತ್ತಿದೆ.
ಮೂಲ: ಕೃಷಿ ಮಾರಾಟ ವಾಹಿನಿ, ಕರ್ನಾಟಕ ಸರಕಾರ.