ಕೆಂಪಡಿಕೆ ಇಳಿಕೆ- ಚಾಲಿ ಅಸ್ಥಿರ-ಇಂದಿನ ಧಾರಣೆ-01-10-2021

ಕೆಂಪಡಿಕೆ ಮತ್ತು ಚಾಲಿ ಹಾರಾಜು

ಕೆಂಪಡಿಕೆ ಮಾಡುವ ಎಲ್ಲಾ ಕಡೆ ರಾಶಿ ದರ ಕೇವಲ 15 ದಿನಗಳ ಕಾಲಾವಧಿಯಲ್ಲೇ  ಕ್ವಿಂಟಾಲಿಗೆ 8000 ಇಳಿಕೆಯಾಗಿದೆ. ಚಾಲಿ ಯಾವುದೋ ಕಾರಣಕ್ಕೆ ಕ್ಯಾಂಪ್ಕೋ ಸಂಸ್ಥೆ ದರ ಇಳಿಸದೆ ಅಲ್ಲಿಂದಲ್ಲಿಗೆ ನಿಲ್ಲಿಸಿದೆ. ನಮೂದಿಸಿದ ದರಕ್ಕೂ ಕೊಳ್ಳುವ  ದರಕ್ಕೂ ಗುಣಮಟ್ಟದ ಹೆಳೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಲಾರಂಭಿಸಿದೆ. ಸ್ವಲ್ಪ ಅಸ್ಥಿರತೆ ಸೂಚನೆ ಕಂಡು ಬರಲಾರಂಭಿಸಿದೆ.

ಸಧ್ಯವೇ ಅಡಿಕೆ ವ್ಯವಹಾರ ನಡೆಸುವ ದೈತ್ಯ ಸಹಕಾರಿ ಸಂಸ್ಥೆ ತನ್ನ ವಾರ್ಷಿಕ ಮಹಾಸಭೆ ನಡೆಯಲಿದೆ. ಆ ತನಕ ದರ ಸ್ಥಿರತೆ ಇರಬಹುದು ಎಂಬುದಾಗಿ ಆಡಿಕೊಳ್ಳುತ್ತಿದ್ದಾರೆ. ಆದರೂ ದರ ಬೀಳುವ ಮುನ್ಸೂಚನೆ ಖಾಸಗಿ ವರ್ತಕರ ಖರೀದಿಯ ಭರದಲ್ಲಿ ತಿಳಿಯಲಾರಂಭಿಸಿದೆ. ಸಪ್ಟೆಂಬರ್ ಕೊನೆಯ ವಾರದಲ್ಲೇ ಇದರ ವಾಸನೆ ಹೊಡೆಯಲಾರಂಭಿಸಿತ್ತು. ಇಂದು ಖಾಸಗಿಯವರ ದರ ಸಹಕಾರಿಗಳ ದರಕ್ಕಿಂತ ಕಡಿಮೆ ಇತ್ತು. ಖಾಸಗಿಯವರು  ತಾವು ಖರೀದಿಸಿದನ್ನು ಸಹಕಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಜೊತೆಗೆ ಹೊಚ್ಚ ಹೊಸ ಅಡಿಕೆ ಚಿಲ್ಲರೆ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲು ಪ್ರಾರಂಭವಾಗಿದ್ದು, ಅದಕ್ಕೂ ದರ ನಿರ್ಧರಣೆ ಆಗಿದೆ. ನಾಳೆ ಸಹಕಾರಿ ಮಾರುಕಟ್ಟೆಗೆ ರಜೆ ಇದ್ದು, ಸೋಮವಾರ ಚಾಲಿ ದರ ಸ್ವಲ್ಪ ಇಳಿಕೆ ಆದರೂ ಅಚ್ಚರಿ ಇಲ್ಲ.

  • ಈ ವರ್ಷ ಫಸಲು ಚೆನ್ನಾಗಿದೆ. ದೊಡ್ಡ ಬೆಳೆಗಾರರಲ್ಲಿ ಅಡಿಕೆ ದಾಸ್ತಾನು ಇದೆ ಎಂಬ ಅನುಮಾನವೂ ಇದೆ.
  • ದರ ಏರಿಕೆಯ ಒಂದು ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಸ್ಟಾಕು ಕ್ಲೀಯರೆನ್ಸ್ ಆಗಿದೆ.
  • ಹಾಗಾಗಿ ಇನ್ನು ದರ ಸ್ವಲ್ಪ ಇಳಿಸುವುದು ಬೆಳೆಗಾರರಿಂದ ಅಡಿಕೆ ಬರುವಂತೆ ಮಾಡುವುದು ಮತ್ತೆ ಏರಿಸುವುದು ಮಾಡುತ್ತಾ ವ್ಯವಹಾರ ನಡೆಯಲಿದೆ ಎಂಬ ಅನುಮಾನ ಇದೆ.
  • ಕೆಂಪಡಿಕೆ ಮಾರುಕಟ್ಟೆಯಲ್ಲೂ ಮುಂದಿನ ಜನವರಿ ತನಕವೂ 1000-2000 ರೂ ಏರಿಕೆ ,ಇಳಿಕೆ ಮಾಡುತ್ತಾ ಬೆಳೆಗಾರರ ಅಡಿಕೆ ತಮ್ಮ ಕಡೆಗೆ ಬರುವಂತೆ ಮಾಡಿ ಮತ್ತೆ ದರ ಏರಿಸುವ ಸಾಧ್ಯತೆ ಇದೆ.

ಅಕ್ಟೋಬರ್ ತಿಂಗಳ ಮೊದಲ ದಿನ ದಿನಾಂಕ 01-10-2021 ರ ಶುಕ್ರವಾರ ಕೆಂಪಡಿಕೆ ಮತ್ತು ಚಾಲಿಯ ದರ ಹೀಗಿದೆ. ನಾಡಿದ್ದು ತೀರ್ಥಹಳ್ಳಿ, ಶ್ರಿಂಗೇರಿ ಮಾರುಕಟ್ಟೆಯ ದರದ ಮೇಲೆ ಮುಂದೆ ದರ ಹೇಗೆ ನಿಲ್ಲಬಹುದು ಎಂಬ ಪೂರ್ಣ ಚಿತ್ರಣ ಸಿಗಲಿದೆ.

ಹರಾಜಿಗೆ ಇಟ್ಟ ಕೆಂಪಡಿಕೆ

ಊರು  ದಿನಾಂಕ ವಿಧ ಒಟ್ಟು ಅವಕ ಕನಿಷ್ಟ ದರ ಗರಿಷ್ಟ ದರ ಸರಾಸರಿ ದರ

  • ಬಂಟ್ವಾಳ , 01/10/2021, Coca, 7, 10000, 25000, 22500

BANTWALA, 01/10/2021, New Variety, 74, 25000, 50000, 46000

BANTWALA, 01/10/2021, Old Variety, 6, 46000, 51500, 49000

  • ಬೆಳ್ತಂಗಡಿ:      30/09/2021, New Variety, 34, 24900, 50000, 39000

BELTHANGADI, 30/09/2021, Old Variety, 161, 48910, 51500, 49000

BELTHANGADI, 28/09/2021, Other, 30, 19000, 39500, 27500

  • ಭದ್ರಾವತಿ: 10/2021, Rashi, 243, 43599, 48099, 44919
  • ಚೆನ್ನಗಿರಿ: 30/09/2021, Rashi, 1898, 45129, 51499, 47713

ಚಿತ್ರದುರ್ಗ: 28/09/2021, Api, 2, 50619, 51029, 50849

CHITRADURGA, 28/09/2021, Bette, 40, 39659, 40099, 39879

CHITRADURGA, 28/09/2021, Kempugotu, 70, 32600, 33000, 32800

CHITRADURGA, 28/09/2021, Rashi, 15, 50139, 50569, 50389

  • ದಾವಣಗೆರೆ: 01/10/2021, Rashi, 286, 42122, 46409, 45700

HOLALKERE, 30/09/2021, Rashi, 103, 49301, 51801, 50630

  • ಹೊನ್ನಾಳಿ: 01/10/2021, Rashi, 13, 49101, 49101, 49101

KARKALA, 30/09/2021, New Variety, 65, 46000, 50000, 48000

  • ಕಾರ್ಕಳ: 01/10/2021, Old Variety, 25, 46000, 51500, 48000

KOPPA, 28/09/2021, Bette, 18, 40108, 40108, 40108

KOPPA, 28/09/2021, Gorabalu, 21, 33198, 33698, 33448

KOPPA, 28/09/2021, Rashi, 202, 51399, 52599, 52349

KOPPA, 28/09/2021, Saraku, 10, 46108, 50059, 48083

ಕುಮ್ಟಾ: 30/09/2021, Hale Chali, 7, 46449, 47369, 47049

KUMTA, 01/10/2021, Hosa Chali, 300, 45019, 47409, 46520

KUMTA, 01/10/2021, Chippu, 50, 36599, 42089, 37125

KUMTA, 01/10/2021, Coca, 30, 23019, 37189, 28550

KUMTA, 01/10/2021, Factory, 175, 15019, 22519, 20469

  • ಕುಂದಾಪುರ: 01/10/2021, Hosa Chali, 40, 36000, 46000, 42500

MADIKERI, 29/09/2021, Raw, 56, 45195, 45195, 45195

MALUR, 30/09/2021, Red, 130, 9500, 12000, 10000

  • ಮಂಗಳೂರು:  01/10/2021, Coca, 42, 26000, 30800, 30000

PUTTUR, 30/09/2021, Coca, 965, 10500, 26000, 18250

  • ಪುತ್ತೂರು: 01/10/2021, New Variety, 9, 35500, 50000, 42750

SAGAR, 30/09/2021, Bilegotu, 45, 29099, 37789, 35001

SAGAR, 30/09/2021, Chali, 173, 44059, 45499, 44699

SAGAR, 30/09/2021, Coca, 40, 39499, 40569, 39499

SAGAR, 30/09/2021, Kempugotu, 72, 30169, 37899, 32692

SAGAR, 30/09/2021, Rashi, 54, 42269, 50209, 49699

SAGAR, 30/09/2021, Sippegotu, 135, 9499, 26169, 25769

SHIKARIPUR, 30/09/2021, Red, 249, 49000, 51900, 50000

ಶಿವಮೊಗ್ಗ:  01/10/2021, Bette, 114, 46019, 52899, 51399

SHIVAMOGGA, 01/10/2021, Gorabalu, 634, 17286, 39049, 37609

SHIVAMOGGA, 01/10/2021, New Variety, 6, 45039, 47039, 46170

  • SHIVAMOGGA, 01/10/2021, Rashi, 456, 43609, 49989, 46700

SHIVAMOGGA, 01/10/2021, Saraku, 183, 48669, 74199, 64200

ಸಿದ್ದಾಪುರ: 01/10/2021, Bilegotu, 34, 35108, 43399, 41799

SIDDAPURA, 01/10/2021, Chali, 200, 46099, 48299, 47899

SIDDAPURA, 01/10/2021, Coca, 9, 23399, 39399, 34809

SIDDAPURA, 01/10/2021, Kempugotu, 2, 20099, 35399, 34599

  • SIDDAPURA, 01/10/2021, Rashi, 84, 45099, 47899, 46899

SIDDAPURA, 01/10/2021, Tattibettee, 5, 36899, 45099, 42099

SIRA, 27/09/2021, Other, 412, 9000, 51000, 49271

ಸಿರಸಿ: 01/10/2021, Bette, 19, 31099, 47999, 43643

SIRSI, 01/10/2021, Bilegotu, 38, 25219, 42811, 39525

SIRSI, 01/10/2021, Chali, 428, 44311, 48518, 47422

  • SIRSI, 01/10/2021, Rashi, 122, 42810, 50099, 48134

TIRTHAHALLI, 26/09/2021, Bette, 74, 42166, 53599, 52099

TIRTHAHALLI, 26/09/2021, EDI, 44, 45099, 52699, 52369

TIRTHAHALLI, 26/09/2021, Gorabalu, 59, 16009, 40099, 39899

TIRTHAHALLI, 26/09/2021, Rashi, 245, 41119, 52599, 52369

TIRTHAHALLI, 26/09/2021, Saraku, 114, 40166, 78100, 68889

ತುಮಕೂರು:  01/10/2021, Rashi, 24, 48100, 50300, 49300

ಯಲ್ಲಾಪುರ: 28/09/2021, Api, 1, 57399, 58699, 57399

YELLAPURA, 01/10/2021, Bilegotu, 28, 34899, 41519, 39679

YELLAPURA, 01/10/2021, Chali, 274, 42199, 48271, 46820

YELLAPURA, 01/10/2021, Coca, 50, 22899, 34899, 31611

YELLAPURA, 01/10/2021, Kempugotu, 2, 30619, 36899, 33537

YELLAPURA, 01/10/2021, Rashi, 191, 47879, 51501, 49765

ತಮ್ಮ ಅಡಿಕೆಗೆ ಯಾವ ಬೆಲೆ ಎಂದು ವೀಕ್ಷಿಸುತ್ತಿರುವ ಬೆಳೆಗಾರರು
ತಮ್ಮ ಅಡಿಕೆಗೆ ಯಾವ ಬೆಲೆ ಎಂದು ವೀಕ್ಷಿಸುತ್ತಿರುವ ಬೆಳೆಗಾರರು

ಬೆಳೆಗಾರರು ಏನು ಮಾಡಬೇಕು:

  • ಅಡಿಕೆಯ ದರ ಇಳಿಕೆ ಆಗುತ್ತಿದೆ ಎಂದು ಯಾವ ಬೆಳೆಗಾರರೂ ನಿರಾಸೆಯಲ್ಲಿ ಮಾರಾಟ ಮಾಡಬೇಡಿ.
  • ಸ್ವಲ್ಪ ಸ್ವಲ್ಪವೇ ಮಾರಾಟ ಮಾಡಿ. ಸ್ವಲ್ಪ ಏರಿದಾಗ ಸ್ವಲ್ಪ ಹೆಚ್ಚು, ತಮ್ಮ ಸಮಾಧಾನದ ಬೆಲೆ ಬಂದಾಗ ಮತ್ತೂ ಹೆಚ್ಚು ಪ್ರಮಾಣದಲ್ಲಿಯೂ ಮಾರಾಟ ಮಾಡುತ್ತಾ ಇರಬೇಕು.
  • ಸರಾಸರಿ ದರದಲ್ಲಿ ಉತ್ತಮ ದರ ಸಿಕ್ಕಿದಂತಾಗುತ್ತದೆ.
  • ಮಾರುಕಟ್ಟೆಯ ಸ್ಥಿತಿಗತಿಯನ್ನು ನಿತ್ಯ ಗಮನಿಸುತ್ತಿದ್ದು,  ತಮ್ಮ ಉತ್ಪನ್ನವನ್ನು ಬಿಡಬೇಕು. ಚಾಲಿ ಬೆಳೆಗಾರರು ಹೆಚ್ಚು ಸಮಯದ ತನಕ ಕಾಯುವ ಸ್ಥಿತಿಯಲ್ಲಿದ್ದರೆ ಮಾತ್ರ ದಾಸ್ತಾನು ಇಡಿ.
  • ಇಲ್ಲವಾದರೆ ಸ್ವಲ್ಪ ಪ್ರಮಾಣ ಮಾರಾಟ ಮಾಡುವುದು ಸೂಕ್ತ.
  • ಮುಂದಿನ ವಾರದಿಂದ ಸ್ವಲ್ಪ ಸ್ವಲ್ಪ ಇಳಿಕೆ ಸಾಧ್ಯತೆ ಇದೆ.
  • ಹಸಿ ಅಡಿಕೆ ದರ ಕುಸಿದಿದೆ. ಸಿಪ್ಪೆ ಗೋಟು ಸಹ ಕುಸಿದಿದೆ.  ಪುತ್ತೂರು ಮಂಗಳೂರಿನಲ್ಲಿ ಚಾಲಿ ಅಡಿಕೆ ಬಹುಷಃ ಕೋಕಾ ಹೆಸರಿನಲ್ಲಿ ವ್ಯವಹಾರ ಆಗಿರಬೇಕು ಎಂದು ಕಾಣಿಸುತ್ತಿದೆ.

ಮೂಲ: ಕೃಷಿ ಮಾರಾಟ ವಾಹಿನಿ, ಕರ್ನಾಟಕ ಸರಕಾರ.

Leave a Reply

Your email address will not be published. Required fields are marked *

error: Content is protected !!