krushiabhivruddi

ಹತ್ತಾರು ಲಕ್ಷ ಬೆಲೆಬಾಳುವ ಸಾಗುವಾನಿ ಮರ.

ಸಾಗುವಾನಿಯೂ ಶ್ರೀಗಂಧಕ್ಕೆ ಸಮನಾದ ಮರ.

ಶ್ರೀಗಂಧ ಚಿನ್ನ ಚಿನ್ನವೇ. ಆದರೆ ನಮಗೆ ಅದನ್ನು ಉಳಿಸಿ ಅನುಭವಿಸುವ ಭಾಗ್ಯ ಬೇಕು! ಶ್ರೀಗಂಧ ಬೆಳೆಸಿ ಕೋಟಿ ನಿರೀಕ್ಷೆಯಲ್ಲಿ ನಿರಂತರ ಜೇಬಿನಲ್ಲಿ ಕೆಂಡ ಇಟ್ಟುಕೊಂಡು ಜೀವನ ಕಳೆಯುವ  ಬದಲು ಇದ್ಯಾವುದರ ಭಯವೂ ಇಲ್ಲದೆ ಸಾಗುವಾನಿ ಬೆಳೆಸಿ ಬದುಕಬಹುದು. ಕೋಟಿಯಲ್ಲದಿದ್ದರೂ ಲಕ್ಷಾಂತರ ಆದಾಯ ಕೊಡಬಲ್ಲ ಬೆಳೆ ಸಾಗುವಾನಿ ಮರ. ಇದು ರೈತರೆಲ್ಲರ ಗಮನದಲ್ಲಿ ಇರಬೇಕು. ಸಾಗುವಾನಿ ಅರವನ್ನು ಯಾರೂ ಕದ್ದುಕೊಂಡು ಹೋದಾರು ಎಂಬ ಭಯ ಇಲ್ಲ. ನೀವು ಇಚ್ಚಿಸಿದವರಿಗೆ ಮಾರಬಹುದು. ಎಷ್ಟು ಬೆಳೆಯಿತೋ ಅಷ್ಟು ಮೌಲ್ಯ ಹೆಚ್ಚಾಗುತ್ತದೆ. ಅಸಾಮಾನ್ಯ…

Read more
ಇಂತಹ ಬೆಳೆ ಬೆಳೆಯುವಾಗ ರಾಸಾಯನಿಕ ಪೊಷಕಗಳು ಬೇಕಾಗುತ್ತದೆ.

ಸಾವಯವ ಬಾಳೆ ಬೇಸಾಯ ಅಸಾಧ್ಯವಲ್ಲ.

ಸಾವಯವ ವಿಧಾನದಲ್ಲಿ ಬಾಳೆ ಬೆಳೆಸುವುದಾದರೆ ಆಗಾಗ ಪೋಷಕಗಳನ್ನು ಕೊಡುತ್ತಾ ತೀವ್ರ ನಿಗಾದಲ್ಲಿ ಬೆಳೆ ಬೆಳೆಸಬೇಕಾಗಿಲ್ಲ. ಬಾಳೆಗೆ ಎಷ್ಟು ಪೋಷಕಾಂಶಗಳು ಬೇಕಾಗುತ್ತದೆಯೋ ಅಷ್ಟನ್ನು ಒಂದು ಇಲ್ಲವೇ ಎರಡು ಕಂತುಗಳಲ್ಲಿ ಕೊಟ್ಟರೆ ಸಾಕು. ಭಾರೀ ಗೊನೆ ಬಾರದಿದ್ದರೂ ಸರಾಸರಿ 25  ಕಿಲೋ ತೂಕದ ಗೊನೆ ಪಡೆಯಬಹುದು. ತಿನ್ನುವ ಹಣ್ಣು ಆದ ಕಾರಣ ಸಾಧ್ಯವಾದಷ್ಟು  ರಾಸಾಯನಿಕ ಬಳಕೆ ಕಡಿಮೆ ಮಾಡಿ  ಬೆಳೆ ಬೆಳೆದರೆ ಆರೋಗ್ಯಕ್ಕೂ ಉತ್ತಮ. ಈ ನಿಟ್ಟಿನಲ್ಲಿ ಯಾವ ಯಾವ ಸಾವಯವ ಪೋಷಕಗಳನ್ನು ಬಳಸಿ ಉತ್ತಮ ಬಾಳೆ  ಗೊನೆ ಪಡೆಯಬಹುದು…

Read more

ಕೊಳೆ ರೋಗ ಬಾರದಿರುವಂತೆ ಮುನ್ನೆಚ್ಚರಿಕೆ.

ಕೊಳೆ ರೋಗಕ್ಕೆ ಕಾರಣವಾದ ಶಿಲೀಂದ್ರ ನಮ್ಮ ವಾತಾವರಣದಲ್ಲಿ ಎಲ್ಲಾ  ಕಡೆ ಬೀಜಾಣು ರೂಪದಲ್ಲಿ ಇರುತ್ತದೆ, ಇದು ಅನುಕೂಲ ಪರಿಸ್ಥಿತಿ  ಕೂಡಿ ಬಂದಾಗ ಬೀಜಾಂಕುರವಾಗುತ್ತದೆ. ಸಂತಾನಾಭಿವೃದ್ದಿ ಹೊಂದಿ ಅಡಿಕೆಯ ಎಳೆ ಕಾಯಿಗಳಿಗೆ ಹಾನಿ ಮಾಡಿ ಬೆಳೆ ನಷ್ಟಕ್ಕೆ  ಕಾರಣವಾಗುತ್ತದೆ. ಪ್ರಾರಂಭದಲ್ಲೇ ಬೀಜಾಂಕುರವನ್ನು ತಡೆದರೆ  ಪರಿಣಾಮ ಹೆಚ್ಚು. ತಜ್ಞರು ಕೊಳೆ ಔಷಧಿಯನ್ನು ಮುಂಗಾರು ಮಳೆ ಪ್ರಾರಂಭವಾಗುವ ಮುಂಚೆಯೇ ಅಡಿಕೆ ಗೊನೆಗಳಿಗೆ ಸಿಂಪರಣೆ ಮಾಡಬೇಕು ಎನ್ನುತ್ತಾರೆ. ನಾವು ಇನ್ನೂ ಅಡಿಕೆ  ಮಿಡಿಗಳು ಸಣ್ಣದಿವೆ. ಅದಕ್ಕೆ ಹೇಗಪ್ಪಾ ಔಷಧಿ ತಗಲುವುದು ಎಂದು ಸಾಧ್ಯವಾದಷ್ಟು…

Read more
ಮಾವಿನ ಹಣ್ಣು

ರಾಸಾಯನಿಕ ಬಳಸದೆ ಹಣ್ಣು ಮಾಡುವ ಸರಳ ವಿಧಾನ

ಹೆಚ್ಚಾಗಿ ಮಾವಿನ ಕಾಯಿ ಹಣ್ಣು ಮಾಡಲು ಹಿಂದಿನಿಂದಲೂ ಕ್ಯಾಲ್ಸಿಯಂ ಕಾರ್ಬೇಟ್ ಎಂಬ ಅಪಾಯಕಾರೀ ವಸ್ತುವನ್ನು ಬಳಸಲಾಗುತ್ತಿತ್ತು. ಈಗ ಹಾಗಿಲ್ಲ. ಅದರ ಬದಲಿಗೆ  ಅರೋಗ್ಯಕ್ಕೆ ಹಾನಿ ಇಲ್ಲದ ಹಣ್ಣು ಮಾಡುವ ವಿಧಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರು ಬೆಳೆಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ಬಹಳಷ್ಟು ಬೆಳೆಗಾರರು ಅಳವಡಿಸಿಕೊಂಡಿದ್ದಾರೆ. ನಮ್ಮ ರಾಜ್ಯದ ಮಾವಿನ ರಾಜದಾನಿ ಎಂದೇ  ಖ್ಯಾತವಾದ ಶ್ರೀನಿವಾಸಪುರದಿಂದ ಸಂಜೆ ಹೊತ್ತು ಲಾರಿಗೆ ಲೊಡ್ ಆದ ಮಾವು ಮರುದಿನ ತಲುಪಬೇಕಾದಲ್ಲಿಗೆ ತಲುಪುವಾಗ ಮೆತ್ತಗಾಗುತ್ತದೆ.  ಅದನ್ನು ಖರೀದಿಸಿವರು ಮರುದಿನ ಮಾರಾಟ ಮಾಡುವಾಗ ಬಣ್ಣ…

Read more
Mulching to whole ground

ಅಡಿಕೆ – ಕಬ್ಬು ಬೆಳೆಯ ಬೇರು ದುಂಬಿ ನಿಯಂತ್ರಣ.

ಅಡಿಕೆಗೆ ಮಾತ್ರ ಬೇರು ಹುಳದ ಕಾಟ ಅಲ್ಲ. ಕಬ್ಬು, ಹಿಪ್ಪು ನೇರಳೆ ಹೀಗೆ ಬಹಳಷ್ಟು ಬೆಳೆಗಳಿಗೆ ಈ ಹುಳದ ಕಾಟ ಇದೆ. ಇದರ ದುಂಬಿಗಳು ಈಗ ಹೊರಗೆ ಹಾರಾಡುವ ಸಮಯ. ಈಗ ಅದನ್ನು ನಿಯಂತ್ರಿಸುವ ಉಪಾಯ ಇದು.ಮರದ ಆರೋಗ್ಯಕ್ಕೆ  ಮತ್ತು ಬೆಳೆವಣಿಗೆಗೆ  ಆಧಾರವೇ ಅದರ ಬೇರು. ಆ ಬೇರನ್ನು ತಿನ್ನುವ ಒಂದು ಹುಳ ಅದನ್ನು ಏಳಿಗೆಯಾಗಲು ಬಿಡುವುದಿಲ್ಲ. ಕೆಲವು ಮಣ್ಣಿನಲ್ಲಿ ಈ ಬೇರು ಹುಳದ ಸ್ತೊಂದರೆ ಹೆಚ್ಚು. ಮತ್ತೆ ಕೆಲವು ಕಡೆ ಕಡಿಮೆ. ಬೇರು ಹುಳಗಳನ್ನು  ಒಡಿಸದಿದ್ದರೆ…

Read more

ಕಿಸಾನ್ ಕ್ರೆಡಿಟ್ ಕಾರ್ಡ್ ಸರಕಾರದ ಕೊಡುಗೆಯೇ ?

ಕೇಂದ್ರ ಸರಕಾರ  ಮೇ. 14-2020 , ರಂದು ವಿಶೇಷ ಪ್ಯಾಕೇಜ್  ಅಡಿಯಲ್ಲಿ 2.5 ಕೋಟಿ ಹೊಸ ಕೃಷಿಕರಿಗೆ  ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸುವ ಯೋಜನೆ ಹಾಕಿಕೊಂಡಿದೆ. ಬಹಳಷ್ಟು ಜನ ಈ ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಸರಕಾರ  ಸರಕಾರ  ಕೊಡುವ ಸವಲತ್ತು ಎಂದು ಭಾವಿಸಿದೆ. ಇದು ಹಾಗಲ್ಲ. ರೈತರು ಬ್ಯಾಂಕ್ ವ್ಯವಹಾರ ಮಾಡುವಾಗ ಹಣ  ತೆಗೆಯಲು ಆನುಕೂಲವಾಗುವಂತೆ ಕೊಡುವ ಕ್ರೆಡಿಟ್  ಕಾರ್ಡ್ ಇದು. ಇದರಲ್ಲಿ ನಿಮ್ಮ ಖಾತೆಯಲ್ಲಿ ಜಮಾ ಇದ್ದರೆ ಅದು ಮುಗಿಯುವ  ತನಕ  ಹಣ ತೆಗೆಯಬಹುದು….

Read more
ಗುಲಗುಂಜಿ ಹುಳ ಕೀಟ ಭಕ್ಷಕ

ಈ ಕೀಟಗಳಿದ್ದರೆ ಕೀಟನಾಶಕ ಬೇಕಾಗಿಲ್ಲ.

ನಮಗೆಲ್ಲಾ ಗೊತ್ತಿರುವಂತೆ ಗುಡ್ದಕೆ ಗುಡ್ಡ ಅಡ್ದ ಇದ್ದೇ ಇದೆ. ಪ್ರತೀಯೊಂದು ಜೀವಿಗೂ ಮತ್ತೊಂದು ವೈರಿ ಜೀವಿ ಇರುತ್ತದೆ. ಇದನ್ನು ಪ್ರಕೃತಿ ಸೃಷ್ಟಿ ಮಾಡಿರುತ್ತದೆ. ಯಾವುದು ಪ್ರಭಲವಾಗುತ್ತದೆಯೋ ಆಗ  ಅದರ ವೈರಿ ಜೀವಿ ಕಾಣಿಸಿಕೊಳ್ಳುತ್ತದೆ. ಇದನ್ನು ನಮ್ಮ ಹಿರಿಯರು ತನ್ನಷ್ಟಕೇ ಕಡಿಮೆಯಾಗುವ  ವಿಧಾನ ಎಂದಿರುವುದು. ನಿಜವಾಗಿ ಇದು ಮಿತಿ ಮೀರುವುದನ್ನು ಪ್ರಕೃತಿ ಹದ್ದುಬಸ್ತಿನಲ್ಲಿಡುವ ವ್ಯವಸ್ಥೆ. ನಮ್ಮಲ್ಲಿ ಹಲವು ಕೀಟಗಳು ಕಣ್ಮರೆಯಾಗಿ ಈಗ ಕೀಟನಾಶಕ ಅನಿವಾರ್ಯವಾಗಿದೆ. ಇಂದಿನ ನಮ್ಮ ಬೇಸಾಯ ಪದ್ದತಿ ಮತ್ತು ವಾತಾವರಣದ ಸ್ಥಿತಿಗತಿಯ ಏರು ಪೇರಿನಿಂದ ಇದೆಲ್ಲವೂ…

Read more

ಕೋಲ್ಜೇನು- ಜೇನು ತೆಗೆಯುವುದು ಸುಲಭ.

ಸಾಕುವ ಜೇನು ಎಂದರೆ ಅದು ತೊಡುವೆ ಅಥವಾ ಎಪಿಸ್ ಇಂಡಿಕಾ ಜೇನು ನೊಣ ಮಾತ್ರ. ಎಪಿಸ್ ಮೆಲ್ಲಿಫೆರಾ  ನಮ್ಮ ದೇಶದ ಮೂಲದ್ದಲ್ಲ. ಉಳಿದೆಲ್ಲಾ ಜೇನು ಪ್ರವರ್ಗಗಳನ್ನು ಪೆಟ್ಟಿಗೆಯಲ್ಲಿ ಹಾಕಿ ಸಾಕಬಹುದು. ಆದರೆ ಕೋಲ್ಜೇನನ್ನು ಅಹಿಂಸಾತ್ಮಕವಾಗಿ ಹೆಚ್ಚು ಸಲ ಜೇನು ತೆಗೆಯಲು ಸಾಧ್ಯ. ಅದಕ್ಕೆ  ಅನುಭವಿಯೇ ಆಗಬೇಕೆಂದೇನೂ  ಇಲ್ಲ. ಎಪಿಸ್ ಇಂಡಿಕಾ ಮತ್ತು ಎಪಿಸ್ ಮೆಲ್ಲಿಫೆರಾ ಎರಡು ವಿಧದ ಜೇನುನೊಣಗಳು  ಬಹು ಸಂಖ್ಯೆಯ  ಎರಿಗಳನ್ನು  ತಯಾರಿಸುವವು.   ಉಳಿದೆಲ್ಲಾ ಜೇನುನೊಣಗಳು ಅಂದರೆ  ಕೋಲು ಜೇನು, ಹೆಜ್ಜೇನು ಇವು ಒಂದೇ…

Read more
ಸುಳಿ ಕೊಳೆಗೆ ತುತ್ತಾದ ಅಡಿಕೆ ಸಸಿ

ಅಡಿಕೆ – ಸುಳಿ ಕೊಳೆಯುವುದಕ್ಕೆ ಕಾರಣ ಮತ್ತು ಪರಿಹಾರ.

ಕಳೆದ ಕೆಲವು ವರ್ಷಗಳಿಂದ ಅಡಿಕೆ ಬೆಳೆಗಾರರು ಸಸಿ/ ಮರದ  ಸುಳಿ ಕೊಳೆಯುವ/ ಬುಡ ಕೊಳೆಯುವ ತೊಂದರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿದ್ದಾರೆ. ಹವಾಮಾನ ವೆತ್ಯಾಸ ಮತ್ತು ಇನ್ನಿತರ ಕಾರಣಗಳಿಂದ ಇದು ಆಗುತ್ತದೆ. ಸಂಜೆ  ಮಳೆ ಬರುತ್ತದೆ, ಹಗಲು ಭಾರೀ ಪ್ರಖರವಾದ ಬಿಸಿಲು. ಈ ಸನ್ನಿವೇಶದಲ್ಲಿ  ಅಡಿಕೆ, ತೆಂಗು ಮುಂತಾದ ಸಸಿ/ ಮರದ ಎಳೆಯ ಸುಳಿ ಭಾಗದಲ್ಲಿ ಒಂದು ಶಿಲೀಂದ್ರ ಬೆಳೆದು ಅದು ಆ ಭಾಗವನ್ನು ಕೊಳೆಯುವಂತೆ  ಮಾಡಿ ಮರದ ಮೊಳೆಕೆ ತನಕ ವ್ಯಾಪಿಸಿ ಗಿಡವನ್ನು  ಸಾಯುವಂತೆ  ಮಾಡುತ್ತದೆ. ಇದು ಈಗ ಎಲ್ಲಾ…

Read more
ಬೇಗ ಇಳುವರಿ ಕೊಡಬಲ್ಲ ತೆಂಗಿನ ಸಸಿ ಲಕ್ಷಣ - Early yielding nature of plant

ಉತ್ತಮ ಇಳುವರಿ ನೀಡಬಲ್ಲ ತೆಂಗಿನ ಸಸಿಯ ಲಕ್ಷಣಗಳು ಹೇಗೆ ಇರಬೇಕು?

 ಧೀರ್ಘಾವಧಿ ಬೆಳೆಗಳಲ್ಲಿ ಸಸ್ಯ ಮೂಲವನ್ನು ಆರಿಸುವಾಗ ನಮಗೆ ಸ್ವಲ್ಪ ಮಟ್ಟಿಗೆ ಸಸಿ ಹೀಗೆ ಇದ್ದರೆ ಉತ್ತಮ ಎಂಬ ಮಾನದಂಡಗಳನ್ನು ತಿಳಿದಿದ್ದರೆ ಒಳ್ಳೆಯದು.  ಕಾರಣ ಈ ಗಿಡ ನೆಟ್ಟು ಪ್ರತಿಫಲ ತೋರಿಸಲು 5-6 ವರ್ಷ ಬೇಕು. ಆಗ ನಮ್ಮ ಆಯ್ಕೆ ಸ್ವಲ್ಪ ತಪ್ಪಿದ್ದರೆ ಅಷ್ಟೂ ವರ್ಷ ನಷ್ಟ. ಇದಕ್ಕಾಗಿ ಪ್ರತೀಯೊಬ್ಬ ತೆಂಗು ಬೆಳೆಯುವವನೂ ತೆಂಗಿನ ಉತ್ತಮ ಗಿಡದ ಲಕ್ಷಣಗ ಗಳು ಹೀಗೆ ಇರಬೇಕು ಎಂಬುದನ್ನು ತಿಳಿದಿದ್ದರೆ ಒಳ್ಳೆಯದು. ತೆಂಗು ಮಿಶ್ರ ಪರಾಗಸ್ಪರ್ಷದ ಮೂಲಕ ಕಾಯಿ ಕಚ್ಚುವ ಸಸ್ಯವಾಗಿದು, ಯಾವ ಮರದ ಕಾಯಿಯನ್ನು…

Read more
error: Content is protected !!