krushiabhivruddi

ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ

ಅಡಿಕೆ ಮರದ ಸುಳಿ ಬಂದ್ ರೋಗ ನಿವಾರಣೆ ಹೇಗೆ ?

ಅಡಿಕೆ ಸಸ್ಯದ ಸುಳಿಯ ಭಾಗದ ಎಲೆಗಳು ಮುರುಟಿ, ತುದಿ ಗಂಟು ಕಟ್ಟಿದಂತೆ ಅಗುವುದಕ್ಕೆ “ಬಂದ್ ರೋಗ” ಎನ್ನುತ್ತಾರೆ. ಇದು ರೋಗವಲ್ಲ ಬೇರು ಜಂತು ಹುಳ ಮುಖ್ಯ ಕಾರಣ. ಇದು ಬೇರನ್ನು ಬೆಳೆಯಲು ಬಿಡದೆ ಸಸ್ಯಕ್ಕೆ ಆಹಾರ ಸರಬರಾಜು ಕಡಿಮೆಯಾಗಿ ಅದರ ಬೆಳೆವಣಿಗೆಯನ್ನು ಹತ್ತಿಕ್ಕುತ್ತದೆ. ಇದನ್ನು ರಾಸಾಯನಿಕವಾಗಿಯೂ, ಜೈವಿಕವಾಗಿಯೂ ಹತೋಟಿ ಮಾಡಬಹುದು. ವರ್ಷದಿಂದ ವರ್ಷಕ್ಕೆ ಅಡಿಕೆ ಬೆಳೆಗಾರರ ತೋಟದಲ್ಲಿ ಮರಗಳ ಸುಳಿ ಭಾಗ ಕುಬ್ಜವಾಗುವುದು ಹೆಚ್ಚಾಗುತ್ತಿದೆ. ಮಲೆನಾಡಿನ ಶಿವಮೊಗ್ಗ ಭಾಗದಲ್ಲಿ  ಇದು ಸುಮಾರು 30-40  ವರ್ಷದ ಹಿಂದೆಯೇ ಇತ್ತು….

Read more

ಬಾಳೆಯ ಕಾಂಡದ ಈ ರೋಗಕ್ಕೆ ಪರಿಹಾರ ಇದು.

ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ  ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ. ಇದು ಒಂದು ನಂಜಾಣು ರೋಗದ ಲಕ್ಷಣ.  ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ.   ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ. ಇಂತಹ ಬಾಳೆ ಕೆಲವೊಮ್ಮೆ…

Read more
rain water

ಈ ವರ್ಷದ ಮಳೆ ಭವಿಷ್ಯ

ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ. ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು, ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ. ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ…

Read more
rose apple red

ತಿನ್ನಲು ಸಿಗದ ಈ ಹಣ್ಣುಗಳು- ಏನು ಪರಿಹಾರ?

ಒಂದು ವರ್ಷ  ಈ ಹಣ್ಣುಗಳು ತಿನ್ನಲು ಸಿಕ್ಕರೆ ಮತ್ತೆ ಇಲ್ಲವೇ ಇಲ್ಲ. ರಾಶಿ ರಾಶಿ ಹಣ್ಣುಗಳಾಗುತ್ತವೆ. ಆದರೆ ಎಲ್ಲವೂ ಬುಡದಲ್ಲಿ ಬಿದ್ದು, ಹಾಳೇ ಆಗುವುದು. ಇದು ನಮ್ಮ ಬಹುತೇಕ ರೈತರಲ್ಲಿ ಇರುವ ರೋಸ್ ಆಪಲ್ ಹಾಗೂ ವುಡ್ ಆಪಲ್ ಎಂಬ ಬಹು ಬಗೆಯ ಬೇಸಿಗೆ ಹಣ್ಣುಹಂಪಲುಗಳ  ಗತಿ. ಇದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವಿಧಾನ ಇಲ್ಲಿದೆ. ಇದು ಹಣ್ಣು ನೊಣದಿಂದ ಆಗುವ ತೊಂದರೆ , ಇದನ್ನು ಪ್ರಾರಂಭಿಕ ಹಂತದಲ್ಲಿ ಬಾರದಂತೆ ಮಾಡಿದರೆ ಸ್ವಲ್ಪ ಮಟ್ಟಿಗೆಯಾದರೂ ಉತ್ತಮ ಹಣ್ಣನ್ನು ಉಳಿಸಬಹುದು….

Read more

ರಜೆಯ ಈ ದಿನಗಳಲ್ಲಿ ಕಲಿಯಿರಿ – ಸರಳ ಕಸಿ ವಿಧಾನ.

ಈಗ   ಕಲಿಯಲು ಬೇಕಾದಷ್ಟು  ಬಿಡುವು ಇದೆ. ಇದು ಮಾಡಿ ಕಲಿಯುವ ಸಮಯ. ಯಾರೋ ಕಸಿ ಮಾಡಿದ ಗಿಡವನ್ನು ತಂದು ನೆಡುವ ಬದಲಿಗೆ ನಿಮ್ಮಲ್ಲೇ ಇರುವ ಅನುತ್ಪಾದಕ ಮರಕ್ಕೆ ಕಸಿ ಮಾಡಿ ಅದರಲ್ಲೇ ಫಲ ಪಡೆಯಬಹುದು. ಬಹಳ ಜನ  ನಮ್ಮ ಮನೆಯಲ್ಲಿ ಒಂದು ಮಾವಿನ ಮರ ಇದೆ. ಮಾವೇ ಆಗುತ್ತಿಲ್ಲ ಎನ್ನುತ್ತಾರೆ. ಹಾಗೆಯೇ ಲಿಂಬೆ, ಮೂಸಂಬಿ, ನೇರಳೆ, ಗೇರು ಯಾವುದೇ ಅನುತ್ಪಾದಕ  ಮರಗಳಿರುವುದೂ  ಇದೆ. ಇಲ್ಲಿ ನಾವು ಒಂದು ಮರದಲ್ಲಿ ಹಲವು ಬಗೆಯ ಮಾವು ಪಡೆಯುವ ವಿಧಾನವನ್ನು ತಿಳಿಸುತ್ತಿದ್ದೇವೆ….

Read more
ಕಬ್ಬು ಬೆಳೆ

ಕಬ್ಬು ಬೆಳೆಗೆ ರಂಜಕ ಗೊಬ್ಬರ ಮತ್ತು ಇಳುವರಿ.

ಕಬ್ಬಿನ ಬೇಸಾಯದಲ್ಲಿ ಇಳುವರಿ ಹೆಚ್ಚಬೇಕಾದರೆ ಬೇರುಗಳು ಅಧಿಕ ಪ್ರಮಾಣದಲ್ಲಿ ಇರಬೇಕು. ಸಸ್ಯಗಳಿಗೆ ಬೇರೇ ಆಧಾರ.  ಹೆಚ್ಚು ಹೆಚ್ಚು ಬೇರುಗಳಿದ್ದರೆ ಆಹಾರ ಸಂಗ್ರಹಣೆ ಹೆಚ್ಚಿ ಬೆಳೆ ಆರೋಗ್ಯವಾಗಿರುತ್ತದೆ.  ಬೇರಿನ ಬೆಳೆವಣಿಗೆ ಮತ್ತು ಕಾಂಡದ ಬೆಳೆವಣಿಗೆಗೆ ರಂಜಕ ಗೊಬ್ಬರ ಅವಶ್ಯಕ. ಕಬ್ಬು ಸಸ್ಯದ ಬೇರು ಸಮರ್ಪಕವಾಗಿ ಬೆಳೆಯದಿದ್ದರೆ ಇಳುವರಿ ಗಣನೀಯವಾಗಿ ಕಡಿಮೆಯಾಗುತ್ತದೆ. ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕಾಂಶ ಇಲ್ಲದಿದ್ದರೆ , ದ್ಯುತಿ ಸಂಶ್ಲೇಷಣ ಕ್ರಿಯೆ ಸರಿಯಾಗಿ ನಡೆಯದು. ಬೇರಿನ ಭಾಗದಲ್ಲಿ ಉಷ್ಣತಾಮಾನವು 16- 22 ಡಿಗ್ರಿ ತನಕ ಇದ್ದಾಗ ಬೇರುಗಳು…

Read more
ಸಮರ್ಪಕ ಪೋಶಕಾಂಶ ದೊರೆತ ಕಬ್ಬು ಬೆಳೆ

ಕಬ್ಬು ಬೆಳೆಗೆ ಪೊಟ್ಯಾಶ್ ಗೊಬ್ಬರದ ಮಹತ್ವ

ಕಬ್ಬಿನ ಬೆಳೆಗೆ ಪೊಟ್ಯಾಶಿಯಂನ ಅವಶ್ಯಕತೆ ಹೆಚ್ಚು.  ಪೊಟ್ಯಾಶಿಯಂ ಸತ್ವ ಕೊರತೆಯಾದ ಕಬ್ಬಿನ ಬೆಳೆಗೆ ಬೆಲೆ ಇಲ್ಲ.ಅದು ಕಬ್ಬು ಎನ್ನಿಸಿಕೊಳ್ಳಲಾರದು.ಸಾರಜನಕ ಕೊಡಿ. ರಂಜಕ ಕೊಡಿ ಆದರೆ ಪೊಟ್ಯಾಶಿಯಂ ಕೊಟ್ಟಾಗ  ಮಾತ್ರ ಅದರ ಪ್ರತಿಫಲ ಲಭ್ಯ. ಇದು ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುವ ಪೊಷಕಾಂಶ. ಹಿಂದೆ ನಮ್ಮಲ್ಲಿ ಸಕ್ಕರೆ ತಯಾರಿಕೆ ಇರಲಿಲ್ಲ. ಬೆಲ್ಲವೇ ಹೆಚ್ಚು. ಉತ್ತಮ ಬೆಲ್ಲ ದೊರೆಯಬೇಕಾದರೆ  ಮಣ್ಣಿಗೆ ಬೂದಿ ಅಂಶ ಯಥೇಚ್ಚವಾಗಿ ಬೇಕು ಎಂದು ಹೊಲಕ್ಕೆ ರವದಿ ಮತ್ತು ಇನ್ನಿತರ ತ್ಯಾಜ್ಯಗಳನ್ನು ಹಾಕಿ ಅದನ್ನು ಸುಟ್ಟು ಪೊಟ್ಯಾಶಿಯಂ ಸತ್ವವನ್ನು…

Read more

ತೆಂಗಿನ ಮರಕ್ಕೆ ಗೊಬ್ಬರವೇ ಬೇಕಾಗಿಲ್ಲ.

ಪ್ರಕೃತಿಯ ವೈಚಿತ್ರ್ಯ ನೋಡಿ. ಕಾಡಿನಲ್ಲಿರುವ ಒಂದು ಸಸಿ ಬೆಳೆಯಬೇಕಾದರೆ ಮತ್ತೊಂದು ದೊಡ್ದ ಮರದ ಆಸರೆ ಬೇಕು. ನಿರ್ದಿಷ್ಟ ಹಂತಕ್ಕೆ  ಬೆಳೆದ ಮೇಲೆ ಅದಕ್ಕೆ  ಯಾವ ಆಸರೆಯೂ ಬೇಡ. ಅದೇ ತನ್ನನ್ನು ದಷ್ಟ ಪುಷ್ಟವಾಗಿಸುತ್ತಾ ಬೆಳೆಸುತ್ತದೆ. ಅದೇ ತತ್ವ ನಾವು ಬೆಳೆಸುವ ಬೆಳೆಗಳಿಗೆ ಯಾಕೆ ಅನ್ವಯವಾಗಲಾರದು? ಆಗಿಯೇ ಆಗುತ್ತದೆ. ಕೃಷಿಯಲ್ಲಿ ನಮ್ಮ ಬೇಡಿಕೆಗಳು ದೊಡ್ದದು.  ಸಸ್ಯದ ಅವಶ್ಯಕತೆಗೆ ಬೇಕಾದುದನ್ನು ನಾವು  ಕಬಳಿಸುತ್ತೇವೆ.   ಉರುವಲಿಗೆ ಮತ್ತು ಇನ್ನಿತರ ಬಳಕೆಗೆ ನಾವು ತೆಂಗಿನ ಸರ್ವಾಂಗವನ್ನೂ  ಉಪಯೋಗಿಸುತ್ತೇವೆ. ಅದಕ್ಕೆ  ಮಾತ್ರ ಉಪವಾಸ….

Read more
ಕಬ್ಬು ಬೆಳೆಗೆ ಸಾರಜನಕ ಪೋಷಕದ ಫಲ

ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶದ ಮಹತ್ವ.

 ಕಬ್ಬು ಬೆಳೆಗೆ ಸಾರಜನಕ ಪೋಷಕಾಂಶ  ಅತ್ಯಂತ ಮಹತ್ವದ ಗೊಬ್ಬರವಾಗಿದ್ದು, ರೈತರು ಸಮಯಾಧಾರಿತವಾಗಿ ಇದನ್ನು ಕೊಡುವುದರಿಂದ  ಉತ್ತಮ ಇಳುವರಿ ಪಡೆಯಬಹುದು. ಕಬ್ಬಿನ ಬೆಳೆ ಬೆಳೆಯುವಾಗ ಅದರಿಂದ ನಾವು ಮರಳಿ ಪಡೆಯುವುದು ಬರೇ 12 %  ಸಕ್ಕರೆ ಮಾತ್ರ . ಉಳಿದ ರವದಿ, ಮಡ್ಡಿ, ಕಾಕಂಬಿ, ಮುಂತಾದವುಗಳನ್ನು ಮಣ್ಣಿಗೆ ಸೇರಿಸಿದರೆ ಕಬ್ಬಿಗೆ ಬೇರೆ ಪೋಷಕಾಂಶವನ್ನು ಕಡಿಮೆ ಕೊಟ್ಟೂ  ಬೆಳೆ ಬೆಳೆಸಬಹುದು. ಇವೆಲ್ಲಾ ಬರೇ  ಹೇಳಲಿಕ್ಕಷ್ಟೇ ಚಂದ . ಪ್ರಾಯೋಗಿಕವಾಗಿ  ಇದನ್ನು ಮಾಡಲಿಕ್ಕಾಗುವುದಿಲ್ಲ. ಕಬ್ಬಿನ ಹೊಲ ಒಂದು ಕಡೆ, ಸಕ್ಕರೆ ಕಾರ್ಖಾನೆ …

Read more

ಸರಕಾರ ಗುಟ್ಕಾ ನಿಷೇಧ ಮಾಡಲು ಸಾಧ್ಯವೇ ?

ದೇಶದ ಅರ್ಥ ವ್ಯವಸ್ಥೆಗೆ ತಂಬಾಕು, ಮತ್ತು ಅದರ ಉತ್ಪನ್ನಗಳ ಮೂಲಕ ವಾರ್ಷಿಕ 43,000 ಕೋಟಿ ಆದಾಯ ಸಂಗ್ರಹ ಇದೆ. ಸುಮಾರು 4.6 ಕೋಟಿ ಜನ ಈ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಿದೆ. ಈ ಆದಾಯವನ್ನು ಕಳೆದು ಕೊಳ್ಳಲು ಮತ್ತು ಇಷ್ಟು ಕೆಲಸಗಾರರಿಗೆ ಬೇರೆ ಕೆಲಸ ಕೊಡಲು ನಮ್ಮ ಸರಕಾರಕ್ಕೆ  ಸಾಧ್ಯವಿದ್ದರೆ ಮಾತ್ರ ಗುಟ್ಖಾ  ಪಾನ್ ಮಸಾಲ ನಿಷೇಧ ಸಾಧ್ಯ. ಅದೂ ಈಗಿನ ಆರ್ಥ ವ್ಯವಸ್ಥೆಗೆ ಬಿದ್ದ ಹೊಡೆತವನ್ನು ತಡೆಯುವ ಶಕ್ತಿ ಯಾವ ಸರಕಾರಕ್ಕೂ ಇರಲಿಕ್ಕಿಲ್ಲ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು…

Read more
error: Content is protected !!