krushiabhivruddi

ಮಹಾಳಿ ರೋಗಕ್ಕೆ ಮೊಳೆ ಮದ್ದು!

ಒಬ್ಬ ಮಿತ್ರರು ಸಲಹೆ ಕೇಳುತ್ತಾರೆ. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಮರದ ಬುಡಕ್ಕೆ ತುಕ್ಕು ಹಿಡಿದ ಮೊಳೆ ಹೊಡೆದರೆ ಆಗುತ್ತದಂತೆ. ಕೇರಳದಲ್ಲಿ ಇದು ಯಶಸ್ವಿಯಾಗಿದೆಯಂತೆ. ಈ ಬಗ್ಗೆ ನಮ್ಮ ಅಭಿಪ್ರಾಯ ಕೇಳುತ್ತಾರೆ. ಮನುಷ್ಯ ತನ್ನೆಲ್ಲಾ ಸಿಟ್ಟನ್ನು ಕೊನೆಗೆ ತೀರಿಸಿಕೊಳ್ಳುವುದು ತನ್ನ ಹೆಂಡತಿಯ ಮೇಲೆ ಎನ್ನುತ್ತಾರೆ ಹಿಂದಿನವರು. ಉಳಿದವರು ಅದಕ್ಕೆ  ಪ್ರತಿಕ್ರಿಯಿಸುತ್ತಾರೆ. ಆದರೆ ಹೆಂಡತಿಗೆ ಗಂಡನೇ ದೊಡ್ದದು. ಅದಕ್ಕೆ ಏನು ಮಾಡಿದರೂ ಮಾತಾಡುವುದಿಲ್ಲ. ಆ ಅವಕಾಶವನ್ನು  ಗಂಡಸು ಬಳಸಿಕೊಳ್ಳುತ್ತಾನೆ. ಇದರ ಉಲ್ಲೇಖ  ಇಲ್ಲಿ ಯಾಕೆಂದರೆ ಯಾವುದಕ್ಕೂ ಪ್ರತಿರೋಧ ಒಡ್ಡದೇ…

Read more

ಮೇವು ಸಮಸ್ಯೆಯೇ – ಅಜೋಲಾ ಬೆಳೆಸಿ -ಬಳಸಿ.

ಪಶುಪಾಲನೆ ಮಾಡುವವರಿಗೆ ದೊಡ್ದ ಸಮಸ್ಯೆ ಎಂದರೆ ಹಸುರು ಮೇವಿನ ಉತ್ಪಾದನೆ. ಎಷ್ಟು ಹಸುರು ಮೇವಿದ್ದರೂ ಸಾಕಾಗದು. ಅದಕ್ಕಾಗಿ ಕೆಲವರು ಎಕ್ರೆಗಟ್ಟಲೆ ಜಾಗವನ್ನು ಮೇವು ಉತ್ಪಾದನೆಗಾಗಿ ಮೀಸಲಿಡುತ್ತಾರೆ.  ಅದರೊಂದಿಗೆ ಸ್ವಲ್ಪ ಅಜೋಲಾವನ್ನು ಮನೆಯ ಸಮೀಪ ಬೆಳೆಸಿದರೆ ಪೌಷ್ಟಿಕ ಮೇವು ಲಭ್ಯವಾಗುತ್ತದೆ.  ಮೇವನ್ನು ಅದಕ್ಕಾಗಿಯೇ ಹೊಲ ಮೀಸಲಿಟ್ಟು ಬೆಳೆಸಿದಾಗ  ಆ ಹೊಲದ  ಉತ್ಪಾದಕತೆಯನ್ನುಲೆಕ್ಕಾಚಾರ ಹಾಕಿದರೆ  ಅದು ನಷ್ಟ. ಇದರ ಬದಲಿಗೆ ಪೌಷ್ಟಿಕ ಮೇವನ್ನು ಕಡಿಮೆ ಸ್ಥಳದಲ್ಲಿ ಬೇರೆ ಕಡೆಯಲ್ಲಿ ಉತ್ಪಾದಿಸುವುದು ಲಾಭದಾಯಕ. ಪಶುಗಳಿಗೆ ಸತ್ವ ಇಲ್ಲದ 50 ಕಿಲೋ ಮೇವು ಕೊಡುವ ಬದಲಿಗೆ…

Read more

ಇವರಿಗೆ ಉತ್ತರಿಸುವಷ್ಟಾದರೂ ಕೃಷಿಕ ಬುದ್ದಿವಂತನಾಗಬೇಕು.

ನೀವು ಒಂದು ವಾಟ್ಸ್ ಆಪ್ ಗ್ರೂಪ್ ನೋಡಿ. ಫೇಸ್ ಬುಕ್  ಖಾತೆ ತೆರೆಯಿರಿ. ಅಲ್ಲಿಗೆ ಪ್ರಾರಂಭ. ಬೆಳೆ ಬೆಳೆಸುವಾಗ ಯಾವುದಾದರೂ ಒಂದು ಸಂದೇಹವನ್ನು ನಿಮ್ಮ ಮಿತ್ರರುಗಳಲ್ಲಿ  ಹಂಚಿಕೊಂಡರೆ ಸಾಕು ತಕ್ಷಣ ನಿಮ್ಮ ಕಮೆಂಟ್ ಬಾಕ್ಸ್ ಗೆ  call me xxxxxx8x90 ಹೀಗೆ ನೂರಾರು ನಂಬ್ರಗಳ ಜನ ಸಂದೇಶ ಕಳುಹಿಸುತ್ತಾರೆ. ಸಂಪರ್ಕಿಸಿದರೆ ನಿಮ್ಮನ್ನು ಕುಳಿತುಕೊಳ್ಳಲು ಬಿಡದೆ ಸಂಪರ್ಕ ಸಾಧಿಸುತ್ತಾರೆ.     ಇಷ್ಟಲ್ಲದೆ ಕೆಲವರು ನೇರವಾಗಿ ತಮ್ಮ ಉತ್ಪನ್ನಗಳ ಬಣ್ಣ ಬಣ್ಣದ ಬ್ರೋಶರ್ ಗಳನ್ನು ಅಟಾಚ್ ಮಾಡುತ್ತಾರೆ. ಕೆಲವರು…

Read more
ಸಾವಯವ ವಿಧಾನದ ಕಳೆ ನಿಯಂತ್ರಣ

ಸಾವಯವ ಕಳೆ ನಿಯಂತ್ರಣ ವಿಧಾನ.

ರಾಸಾಯನಿಕ ವಿಧಾನದ ಕಳೆ ನಿಯಂತ್ರಣದ ಬದಲಿಗೆ ಸಾವಯವ ವಿಧಾನದಲ್ಲಿ ಕಳೆ ನಿಯಂತ್ರಿಸಲು ಸಾಧ್ಯವಿದೆ.  ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕೆಲಸ ಸ್ವಲ್ಪ ದುಬಾರಿಯಾದರೂ ಈ ವಿಧಾನದ ಕಳೆ ನಿಯಂತ್ರಣ ಎಲ್ಲಾ ದೃಷ್ಟಿಯಿಂದಲೂ ಉತ್ತಮ. ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಧಾನದ ಕಳೆ ನಿಯಂತ್ರಣ ನಮ್ಮ ಆದ್ಯತೆಯಾದರೆ ಒಳ್ಳೆಯದು. ಕಳೆ ನಿಯಂತ್ರಣ ಕೃಷಿಕರಿಗೆ  ಒಂದು ದೊಡ್ದ  ಸವಾಲು. ಕಳೆಗಳು ಹೊಲ ನಿರ್ವಹಣೆಗೆ  ತುಂಬಾ ಅನನುಕೂಲ ಪರಿಸ್ಥಿತಿಯನ್ನು  ಉಂಟು ಮಾಡುತ್ತವೆ. ನಾವು ಬಳಕೆ ಮಾಡುವ ಬಹುತೇಕ …

Read more
ಅಡಿಕೆ ತೋಟದಲ್ಲಿ ಬಸಿಗಾಲುವೆ ಈ ರೀತಿ ಇರಬೇಕು

ಅಡಿಕೆ ಮರಗಳು ಆರೋಗ್ಯವಾಗಿರಬೇಕಾದರೆ ಬಸಿಗಾಲುವೆ ಅಗತ್ಯ.

ಬಸಿಗಾಲುವೆ  ಇಲ್ಲದ ತೋಟದಲ್ಲಿ ಯಾವಾಗಲೂ ಒಂದಿಲ್ಲೊಂದು ಸಮಸ್ಯೆ ಇದ್ದೇ ಇರುತ್ತದೆ. ಮಣ್ಣಿನಲ್ಲಿ ನೀರು ಇರಲಿ. ಆದರೆ ಆದು ಗಿಡಗಳ ನಿಂತು ಹಳಸಲು ಆಗಬಾರದು. ಅದನ್ನು ತಡೆಯಲು ಬಸಿಗಾಲುವೆಯೇ ಪರಿಹಾರ. ಬಸಿಗಾಲುವೆ ಮಾಡದ ತೋಟ ಅದು ತೋಟವೇ ಅಲ್ಲ. ನೀರು ಬಸಿಯುವುದಕ್ಕೆ ಮಾತ್ರವಲ್ಲದೆ ಬೇರುಗಳ ಶ್ವಾಸೋಚ್ವಾಸಕ್ಕೂ ಬಸಿ ಗಾಲುವೆ ಬೇಕು. ನಿಮ್ಮ ತೋಟದಲ್ಲಿ ಅಡಿಕೆ ಮರಗಳು ಎಷ್ಟು ಪೋಷಕಾಂಶ ಕೊಟ್ಟರೂ ಸ್ಪಂದಿಸದೇ ವರ್ಷದಿಂದ ವರ್ಷ ಇಳುವರಿ ಕಡಿಮೆಯಾಗುವುದು ಉಂಟೇ? ಸಸಿ/ ಮರಗಳ ಶಿರ ಭಾಗ ಸಪುರವಾಗುತ್ತಾ ಬರುತ್ತದೆಯೇ? ಗಿಡ…

Read more

ತರಕಾರಿಗಳಲ್ಲಿ ವಿಷ ಹೆಚ್ಚಾಗುತ್ತಿದೆ- ಎಚ್ಚರ!

ಗ್ರಾಹಕರ ಓಲೈಕೆಗೆ ಸರಿಯಾಗಿ ನೋಟ ಚೆನ್ನಾಗಿರಲು ಮಾಡುವ ಉಪಚಾರ ನಮ್ಮನ್ನು ಕೊಲ್ಲುತ್ತದೆ. 2050 ರ ಸುಮಾರಿಗೆ ತರಕಾರಿ ತಿನ್ನುವವರೂ  ಅಧಿಕ ಪ್ರಮಾಣದಲ್ಲಿ ರೋಗಗಳಿಗೆ ತುತ್ತಾಗಿ ಬೇಗ ಸಾಯಬಹುದು, ಅಥವಾ ಅಸ್ವಾಸ್ತ್ಯಕ್ಕೊಳಗಾಗಬಹುದು ಎಂಬ ವರದಿ ಇದೆ.   ಕೃಷಿ ಉಳಿಸುವ ಭರದಲ್ಲಿ ರೈತರು ಬೇರೆ ಪರ್ಯಾಯ ವ್ಯವಸ್ಥೆಗಳಿಲ್ಲದೆ, ಅಪಾಯಕಾರಿಯೋ, ಅಲ್ಲವೋ ಎಂಬುದನ್ನೂ ಅರಿಯದೆ ಬೇರೆ ಬೇರೆ ಕೃಷಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಕೊಯಿಲಿನ ಸಮಯದಲ್ಲೇ  ಅಂತರ್ವ್ಯಾಪೀ ಕೀಟನಾಶಕ – ರೋಗ ನಾಶಕ ಬಳಕೆ ಮಾಡುತ್ತಾರೆ. ಬೆಳೆದವರು ತಾವು ಬೆಳೆದ…

Read more

ಬಣ್ಣದ ಕ್ಯಾಪ್ಸಿಕಂ- 16 ಲಕ್ಷ ಆದಾಯ.

ಕೆಲವು ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳಿವೆ. ಅದರಲ್ಲಿ  ಒಂದು ದೊನ್ನೆ ಮೆಣಸು. ಇದು ತಿನ್ನುವ  ತರಕಾರಿ ಬೆಳೆಯಾದ ಕಾರಣ ಬೇಡಿಕೆಗೆ ಸಮಸ್ಯೆ ಇಲ್ಲ. ಇದನ್ನು ಪಾಲೀ ಹೌಸ್ ಒಳಗೆ ಯಾರು ಎಲ್ಲಿಯೂ ಬೆಳೆಸಬಹುದು. ಭವಿಷ್ಯದಲ್ಲಿ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಉತ್ಪಾದನೆ ಮಾಡುವ ತಂತ್ರ ಹಸುರು ಮನೆ. ಸಾಕಷ್ಟು ಜನ ರೈತರು ಈ ತಂತ್ರಜ್ಞಾನದ ಮೂಲಕ ಬೇರೆ ಬೇರೆ ಬೆಳೆ ಬೆಳೆಯುತ್ತಿದ್ದಾರೆ. ಇದಕ್ಕೆ  ಸರಕಾರದಿಂದ ದೊಡ್ಡ ಪ್ರಮಾಣದಲ್ಲಿ ಸಹಾಯ ಧನವೂ ಇದೆ. ದೊನ್ನೆ ಮೆಣಸು ಬೆಳೆಯನ್ನು ಪಾಲೀಹೌಸ್ ಒಳಗೆ …

Read more
ಉತ್ತಮ ಇಳುವರಿಯ ತೆಂಗಿನ ಮರ

ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

ಇತ್ತೀಚೆಗೆ ಥೈಲಾಂಡ್ ನ ತೆಂಗು ತೋಟದ ಒಂದು ವೀಡಿಯೋ ಎಲ್ಲರ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಒಡಾಡಿದೆ. ಇದು ನಮಗೆ ಹೇಗೆ ತೆಂಗು ಬೆಳೆದರೆ ಉತ್ತಮ ಎಂಬ ಕೆಲವು ಸಂಗತಿಗಳನ್ನು ತಿಳಿಸುತ್ತದೆ.  ತೆಂಗಿನ ಸಸಿ ನಾಟಿ ಮಾಡಿದ 4 -6 ವರ್ಷಕ್ಕೇ ಫಸಲಿಗಾರಂಭಿ ಸುತ್ತದೆ. ಒಂದು ತೆಂಗಿನ ಮರವು  ಸುಮಾರು 30-40 ರಷ್ಟು ಗರಿಗಳು ಹಾಗೂ 100 ಕ್ಕೂ ಹೆಚ್ಚಿನ ಕಾಯಿಗಳನ್ನು  ಧರಿಸಬೇಕಾದರೆ ಅದು ಎಷ್ಟೊಂದು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಊಹಿಸಿ!. ಪ್ರತೀ ವರ್ಷವೂ ಫಸಲಿಗೆ…

Read more

ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು.

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ.   ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ  ಮತ್ತು ಬಲಿಯುವ ಸಮಯದಲ್ಲಿ ಅದು ಇನ್ನೂ ಹೆಚ್ಚಾಗುತ್ತದೆ….

Read more

ಹೀಗೆ ಬೆಳೆ ಬೆಳೆದರೆ ಕೀಟ- ರೋಗ ಇಲ್ಲ.

ಬೆಳೆಗಳ  ಮೇಲೆ  ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ  ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ. Click to WhatsApp and build your website now! ಕ್ರಾಪ್ ಕವರ್ ಏನು? ಬೆಳೆ ಬೆಳೆಯುವಾಗ ಸಸ್ಯದ ಮೇಲೆ  ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ  ಇದನ್ನು spun…

Read more
error: Content is protected !!