Rain water to bore well

ಮಳೆ ನೀರು ಇಂಗಿಸುತ್ತೀರಾ – ಜಾಗ್ರತೆ ಇರಲಿ !

ಅಧಿಕ ಮಳೆಯಾಗುವ ಕರಾವಳಿ, ಮಲೆನಾಡಿನಲ್ಲಿ  ಜನ ಇತ್ತೀಚಿನ ವರ್ಷಗಳಲ್ಲಿ ಬೋರ್ ವೆಲ್ ರೀಚಾರ್ಜ್ , ವಿಫಲವಾದ ಬೋರ್ ವೆಲ್ ಗಳಿಗೆ ನೀರಿನ ಮರುಪೂರಣ , ಹಾಗೆಯೇ ಅಲ್ಲಲ್ಲಿ ಇಂಗು ಗುಂಡಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಪೋಲಾಗಿ ಸಾಗರ ಸೇರುತ್ತಿರುವ ನೀರಿನ ಮೇಲೆ ಇವರಿಗೆ ಕಾಳಜಿ, ಇದು ಮತ್ತೊಂದು ಕಡೆಯಲ್ಲಿ  ಅನಾಹುತದ ರೂಪದಲ್ಲಿ ಹೊರಹೋಗುತ್ತಿದೆಯೋ ತಿಳಿಯದಾಗಿದೆ. ಒಟ್ಟಿನಲ್ಲಿ ಇತ್ತೀಚೆಗೆ ಪ್ರಾರಂಭವಾದ ಭೂ ಕುಸಿತದಂತಹ ಘೋರ ಸಮಸ್ಯೆಗೆ  ಇಂತಹ ಯಾವುದೋ ಮಾನವ ಕೃತ ಕಾರ್ಯಗಳು ಕಾರಣ ಇರಲೇ ಬೇಕು. ಕರಾವಳಿಯ- ಮಲೆನಾಡಿನಲ್ಲಿ…

Read more

ಬೀಜ – ಸಸಿ ಖರೀದಿಸುವಾಗ ಈ ವಿಚಾರಗಳನ್ನು ತಪ್ಪದೆ ತಿಳಿದುಕೊಳ್ಳಿ.

ಹಿರಿಯರು ಹೇಳುವುದುಂಟು , ಪರವೂರಿನ ಸುಭಗನಿಗಿಂತ ( ನಯ ವಿನಯದ ವ್ಯಕ್ತಿ) ಊರಿನ ಕಳ್ಳನಾದರೂ ಆಗಬಬಹುದು ಎಂದು. ಇದು ನಿಜ. ರೈತರು ಖರೀದಿ ಮಾಡುವ ಸಸಿ, ಬೀಜ  ಇವುಗಳನ್ನು ಗೊತ್ತು ಪರಿಚಯ ಇರುವವರಿಂದಲೇ ಖರೀದಿ ಮಾಡಿ. ನಾಳೆ ಮೋಸವಾದರೆ ಅವರು ನಿಮ್ಮ ಕಣ್ಣು ಮುಂದೆಯೇ ಇರುತ್ತಾರೆ. ನೆಡು ಸಾಮಾಗ್ರಿಗಳಾದ ಬೀಜ, ಸಸಿಗಳ ವ್ಯವಹಾರ ಎಂದರೆ ಬಲವಾದ ನಂಬಿಕೆ. ಇದು ದೇವರಿಗೆ ನಮಸ್ಕರಿಸಿ ಆಶೀರ್ವಾದ ಬೇಡುವುದಕ್ಕಿಂತಲೂ ಮಿಕ್ಕಿದ ನಂಬಿಕೆಯ ವ್ಯವಹಾರ. ಒಬ್ಬ ರೈತ ಒಂದು ಬೀಜ ಅಥವಾ ಸಸಿಯನ್ನು…

Read more
root puller

ಕಳೆ ಗಿಡಗಳನ್ನು ಬೇರು ಸಮೇತ ತೆಗೆಯಬಹುದಾದ ಸಾಧನ.

    ಕೃಷಿ ಹೊಲದಲ್ಲಿ ಯಾವಾಗಲೂ ಕಳೆ ಸಸ್ಯಗಳು ಸಹಜವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಳೆದಂತೆ ಅದನ್ನು ಬೇರು ಸಹಿತ ತೆಗೆಯಲು ಸಾಧ್ಯವಾಗುವುದಿಲ್ಲ. ಅಂಥಹ ಕಳೆ ಸಸ್ಯಗಳನ್ನು ಬೇರು ಸಹಿತ ಯಾವ ಶ್ರಮದ ಅಗತ್ಯವೂ ಇಲ್ಲದೆ ತೆಗೆಯಬಹುದಾದ ಸಾಧನವನ್ನು  ಸಾಗರದ ಹೆಗಡೆ ಡೈನಾಮಿಕ್ಸ್ ಪ್ರೈ ಲಿಮಿಟೆಡ್ ಇವರು ಅಭಿವೃದ್ಧಿಪಡಿಸಿದ್ದಾರೆ. ಕೆಲವು ಸಾಧಾರಣ ಗಾತ್ರದ ಗಿಡಗಳನ್ನು ಕೀಳಲು ಹಾರೆ, ಗುದ್ದಲಿ ಮುಂತಾದ ಸಾಧನಗಳು ಬೇಕಾಗಿಲ್ಲ. ಇವುಗಳಿಂದ ಕೀಳಿಸುವ ಶ್ರಮಕ್ಕಿಂತ ತುಂಬಾ ಕಡಿಮೆ ಶ್ರಮದಲ್ಲಿ ಯುಕ್ತಿ ಆಧಾರಿತ ಸಾಧನದಲ್ಲಿ ಅದನ್ನ್ನು ತೆಗೆಯಬಹುದು. ಮುಖ್ಯವಾಗಿ…

Read more

ಸರಳ ವಿನ್ಯಾಸದ ಬಹು ಉಪಯೋಗಿ ಡ್ರೈಯರ್.

ಕೃಷಿ ಎಂದದೆ ಮಳೆಗಾಲದಲ್ಲಿ ಏನಾದರೂ ಒಣಗಿಸುವುದು ಇದ್ದೇ ಇರುತ್ತದೆ. ಅಂಗಡಿಯಿಂದ ತರುವ ಕೊತ್ತಂಬರಿ ಮೆಣಸು, ಮುಂತಾದವುಗಳನ್ನು ತೊಳೆದು ಒಣಗಿಸಿಯೇ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಇದು ತುಂಬಾ ಕಷ್ಟವಾಗುತ್ತದೆ. ಇಂಥ ಉದ್ದೇಶಕ್ಕೆ ಹಾಗೂ ಹಣ್ಣು ಹಂಪಲು, ಜಾಯೀಕಾಯಿ, ಕರಿಮೆಣಸು ಮುಂತಾದ ಆಹಾರ ವಸ್ತುಗಳು ಹಾಗೂ ಬೆಳೆಗಳಾದ ಅಲ್ಪ ಸ್ವಲ್ಪ ಕೊಬ್ಬರಿ, ಅಡಿಕೆ ಮುಂತಾದವುಗಳನ್ನು ಒಣಗಿಸಲು ಅವರರವರ ಅವಶ್ಯಕತೆಗೆ ಅನುಗುಣವಾಗಿ ಡ್ರೈಯರ್ ಗಳನ್ನು ಹೊಂದುವುದು ಉತ್ತಮ. ಇದರ ಒಂದು ವಿನ್ಯಾಸ ಇಲ್ಲಿ ಕೊಡಲಾಗಿದೆ. ಡ್ರೈಯರುಗಳಲ್ಲಿ ಅನುಕೂಲಕ್ಕೆ ತಕ್ಕುದಾಗಿ ಬೇರೆ ಬೇರೆ ಪ್ರಮಾಣ…

Read more

ಅಡಿಕೆ ಉತ್ಪಾದನೆ ಹೆಚ್ಚುತ್ತಿದೆ- ಮಿಶ್ರ ಬೆಳೆಗೆ ಗಮನ ಕೊಡಿ.

ನಾಗಾಲೋಟದಿಂದ ಹೆಚ್ಚುತ್ತಿರುವ ಅಡಿಕೆ ತೋಟಗಳು ಎಷ್ಟು ಸಮಯದ ತನಕ ರೈತರ ಬದುಕನ್ನು ಆಧರಿಸಬಲ್ಲವು ತಿಳಿಯದು. ಕೆಲವೇ ಸಮಯದಲ್ಲಿ ಬೆಲೆ ಕುಸಿತವಾದರೂ ಆಗಬಹುದು ಇಂತಹ ಸಂದರ್ಭದಲ್ಲಿ ನಮ್ಮ ಬದುಕಿನ ಬಧ್ರತೆಗೆ ಮಿಶ್ರ ಬೆಳೆ ಅಥವಾ ಬದಲಿ ಬೆಳೆ ಬೇಕೇ ಬೇಕು. ಅಡಿಕೆ ಯಿಂದ  ಬರುವಷ್ಟು ಬರಲಿ. ಕೈ ಬಿಟ್ಟಾಗ ಮಿಶ್ರ ಬೆಳೆ ನಮ್ಮನ್ನ ಆಧರಿಸುವಂತಿರಲಿ. ಒಂದು  ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅಡಿಕೆ ಬೆಳೆಯುವುದರಲ್ಲಿ ಪ್ರಥಮ ಸ್ಥಾನದಲ್ಲಿತ್ತು. ಕ್ರಮೇಣ  ಇಲ್ಲಿ  ಬೆಳೆ ಪ್ರದೇಶ ಕಡಿಮೆಯಾಗದಿದ್ದರೂ ಸಹ ಅವಕಾಶದ ಮಿತಿಯಿಂದಾಗಿ…

Read more

ಬೆಳೆಗಳಿಗೆ ಸುಣ್ಣ ಯಾಕೆ ಕೊಡಬೇಕು ಗೊತ್ತೇ?

ಬೆಳೆ ಬೆಳೆಸುವ ಮಣ್ಣಿಗೆ ಸುಣ್ಣ ಹಾಕುವುದು ಹಸಿರು ಕ್ರಾಂತಿಯ ತರುವಾಯ ಬಂದ ಪದ್ಧತಿ. ಮಣ್ಣಿಗೆ ಸುಣ್ಣ ಹಾಕಿದಾಗ ಮಣ್ಣಿನ ಸ್ಥಿತಿಗತಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅಲ್ಲಿ ಬೆಳೆಯುವ ಸಸ್ಯಗಳಿಗೆ ಮಣ್ಣಿನ ಮೂಲಕ  ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಹಕರಿಸುತ್ತದೆ. ಸಸ್ಯಗಳಿಗೆ ಬರೇ ಸಾರಜಕನ, ರಂಜಕ ಮತ್ತು ಪೊಟ್ಯಾಶ್ ಎಂಬ ಮೂರು ಮುಖ್ಯ ಪೋಷಕಗಳು ಬೇಕು. ಅದರ ಜೊತೆಗೆ ದ್ವಿತೀಯ ಮಧ್ಯಮ ಪೋಷಕಗಳಾದ ಕ್ಯಾಲ್ಸಿಯಂ ಗಂಧಕ, ಮತ್ತು ಮೆಗ್ನೀಶಿಯಂ ಸಹ ಅಗತ್ಯವಾಗಿ ಬೇಕಾಗುತ್ತದೆ. ಇವು ಮುಖ್ಯ ಪೋಷಕಗಳಷ್ಟು ಪ್ರಮಾಣದಲ್ಲಿ…

Read more
ನೆಲಕ್ಕೆ ಸುಣ್ಣ ಎರಚುವುದು

ಹೊಲಕ್ಕೆ ಸುಣ್ಣ ಹಾಕುವ ಕ್ರಮ ಮತ್ತು ಅದರ ಫಲ.

ಸಸ್ಯ ಬೆಳವಣಿಗೆಗೆ ಸಹಾಯಕವಾಗುವ ದ್ವಿತೀಯ ಪೋಷಕಗಳಲ್ಲಿ  ಸುಣ್ಣ ಒಂದನ್ನೇ ಕೊಟ್ಟರೆ ಸಾಲದು. ವರ್ಷಂಪ್ರತೀ ನಷ್ಟವಾಗುವ ಸುಣ್ಣ ಮತ್ತು ಮೆಗ್ನೀಶಿಯಂ ಎರಡನ್ನೂ ಕೊಡಬೇಕು. ಆಗಲೇ ಅದರ ಪೂರ್ಣ ಪ್ರಯೋಜನ. ಈ ಎರಡೂ ಪೋಷಕಗಳೂ ಮಳೆಗೆ ಕೊಚ್ಚಿಕೊಂಡು ಮತ್ತು ಬೆಳೆ ಬೆಳೆದಾಗ ಪಡೆಯುವ ಫಸಲು ಮತ್ತು ಉದುರಿದ ಎಲೆಗಳಿಂದ  ನಷ್ಟವಾಗುವ ಪೋಷಕಗಳು. ಸುಣ್ಣವನ್ನು ಮಣ್ಣಿಗೆ ಕೊಡುವುದರಿಂದ ಭೌತಿಕ, ರಾಸಾಯನಿಕ ಮತ್ತು ಜೈವಿಕ ಮೂರೂ   ಪರಿಣಾಮಗಳೂ ಉನ್ನತ ಮಟ್ಟಕ್ಕೆ ಏರಿ ಮಣ್ಣಿನ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ ಮಣ್ಣು ಗುಳಿಗೆಯಾಕಾರಕ್ಕೆ ಪರಿವರ್ತನೆಯಾಗುತ್ತದೆ. ಪೋಷಕಗಳು ಲಭ್ಯ…

Read more

ಡ್ರೋನುಗಳ ಹಾರಾಟಕ್ಕೆ ಅನುಮತಿಯೇ ಇಲ್ಲ – ಗೊತ್ತೇ?

ಬಹಳ ಜನ ಅದರಲ್ಲೂ ಕೃಷಿಗೆ ಪ್ರವೇಶಿಸುವ ಹೊಸ ತಲೆಮಾರು  ಅಡಿಕೆ ಮುಂತಾದ ಬೆಳೆಗಳಿಗೆ ಸಿಂಪರಣೆ ಎಂಬ ಪರಿಶ್ರಮದ ಕೆಲಸಕ್ಕೆ ಆತೀ ಆಧುನಿಕ ವ್ಯವಸ್ಥೆಯಾದ ಡ್ರೋನುಗಳನ್ನು ಬಳಸುವ ಬಗ್ಗೆ ಮಾತಾಡುತ್ತಾರೆ.  ಕೆಲವರು ಅದನ್ನು ತಯಾರಿಸಿ ಶ್ಲಾಘ್ಹನೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಆದರೆ ಡ್ರೋನು ಬಳಸಿ ಸಿಂಪರಣೆ ಮಾಡುವಂತಿಲ್ಲ. ಡ್ರೋನು ಹಾರಾಟಕ್ಕೆ ಅನುಮತಿಯೂ ಬೇಕು. The Union Government has clarified that drone-spraying is illegal. “As per the provisions of Insecticides Act 1968, aerial application of pesticides need…

Read more

ರಂಜಕ ಗೊಬ್ಬರವನ್ನು ಹೀಗೆ ಕೊಟ್ಟರೆ ಉತ್ತಮ.

ರಂಜಕ ಎಂಬುದು ಚಲಿಸುವ ಪೋಷಕವಲ್ಲ. ಕೆಲವು ನೀರಿನಲ್ಲಿ ಕರಗುತ್ತದೆ. ಇನ್ನು ಕೆಲವು  ಕರಗುವುದಿಲ್ಲ. ಹೊಲದ ಮಣ್ಣಿನ ಗುಣ ಹೇಗಿದೆ ಎಂಬುದರ ಮೇಲೆ ಅದಕ್ಕೆ ಹೊಂದುವ ರಂಜಕ ಗೊಬ್ಬರವನ್ನು ಕೊಡಬೇಕು. ಹಾಗೆಯೇ ಕೊಟ್ಟ ರಂಜಕವು ಬೆಳೆಗೆ ಲಭ್ಯವಾಗುವ ಸ್ಥಿತಿಯನ್ನು ಉಂಟುಮಾಡಬೇಕು. ಬಹಳಷ್ಟು  ರೈತರು ರಂಜಕ ಪೋಷಕದ ಬಳಕೆಯನ್ನು ಕಡಿಮೆ ಮಾಡುವುದಿಲ್ಲ. ಡಿಎಪಿ ಹಾಕಿದ್ದೇನೆ ಎನ್ನುತ್ತಾರೆ. ಆದರ ಬಹಳಷ್ಟು ರೈತರ ಹೊಲದ ಮಣ್ಣು ಪರೀಕ್ಷೆಯಲ್ಲಿ ರಂಜಕ ಪೋಷಕದ ಕೊರತೆ ಕಂಡು ಬರುತ್ತದೆ. ಇದಕ್ಕೆ ಕಾರಣ ಬಳಕೆ ಕ್ರಮ ಸರಿಯಿಲ್ಲದಿರುವಿಕೆ. ಹೇಗೆ…

Read more

ನಿಮ್ಮ ಹೊಲದಲ್ಲಿ ರಂಜಕ ಎಷ್ಟು ಲಭ್ಯ ಸ್ಥಿತಿಯಲ್ಲಿದೆ- ತಿಳಿಯುವುದು ಹೀಗೆ.

ಎಲ್ಲದಕ್ಕೂ ತಜ್ಞರನ್ನು ಸಂಪರ್ಕಿಸಿ  ಮಾರ್ಗದರ್ಶನ ಪಡೆಯುವ ಬದಲು  ನಾವೇ ಒಂದಷ್ಟು ತಜ್ಞತೆಯನ್ನು ಸಂಪಾದಿಸುವುದು ಉತ್ತಮ. ಈ ನಿಟ್ಟಿನಲ್ಲಿ ನಾವು ಬೆಳೆಗಳಿಗೆ ಬಳಕೆ ಮಾಡುವ ರಂಜಕ ಗೊಬ್ಬರ  ಸಸ್ಯಗಳಿಗೆ ದೊರೆಯುತ್ತದೆಯೇ ಎಂದು ತಿಳಿಯುವ ಸರಳ ವಿಧಾನಗಳು ಇವೆ. ನಿಮ್ಮ ಹೊಲದ ದ್ವಿದಳ ಸಸ್ಯಗಳು, ಅಧಿಕ ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆಯೋ ಅಲ್ಲಿ ರಂಜಕ ಅಂಶ ಇದೆ ಎಂದರ್ಥ. ಇದು ನಿಖರವಾದ ಲಕ್ಷಣ ಅಲ್ಲದಿದ್ದರೂ ಬಹುತೇಕ ಇದು ರಂಜಕದ ಲಭ್ಯತೆಯನ್ನು ಸೂಚಿಸುತ್ತದೆ. ರಂಜಕಾಂಶ ಎಂಬುದು ಫಲಾಪೇಕ್ಷೆ ಇದ್ದು ಬೆಳೆ ಬೆಳೆಯುವಾಗ ನಿರೀಕ್ಷಿತ…

Read more
error: Content is protected !!