ಸತ್ವಯುತ ಕಾಂಪೊಸ್ಟು ತಯಾರಿಕೆ ಹೀಗೆ.
ಕಾಂಪೋಸ್ಟು ಅದರಲ್ಲೇನಿದೆ. ಹೊಂಡ ಮಾಡುವುದು ಅದಕ್ಕೆ ಎಲ್ಲಾ ತ್ಯಾಜ್ಯಗಳನ್ನು ಹಾಕುವುದು ಗೋಬರ್ ಗ್ಯಾಸ್ ಸ್ಲರಿಯನ್ನು ಎರೆಯುವುದು. ಕೆಲವು ತಿಂಗಳಲ್ಲಿ ಕಾಂಪೋಸ್ಟು ತಯಾರಾಗುತ್ತದೆ. ಇದು ನಿಜವಾಗಿಯೂ ಸೂಕ್ತ ಕಾಂಪೋಸ್ಟು ತಾಂತ್ರಿಕತೆ ಆಲ್ಲ. ಇದರಲ್ಲಿ ಯಾವ ಪೋಷಕಗಳೂ ಇರುವುದಿಲ್ಲ. ಸಾವಯವ ತ್ಯಾಜ್ಯಗಳು ಹಾಕಿದ ತರಹವೇ ಯಾವುದೇ ರೂಪಾಂತರಗೊಳ್ಳದೆ ಇರುತ್ತವೆ. ಗುಂಡಿಯ ಒಳಗಡೆ ನೀರು ಹೆಚ್ಚಾಗಿರುತ್ತದೆ. ಇದು ಸೂಕ್ಷ್ಮ ಜೀವಿಗಳನ್ನು ಬದುಕಲು ಬಿಡುವುದಿಲ್ಲ. ಯಾವುದೇ ಸಾವಯವ ತ್ಯಾಜ್ಯ ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಾಗ ಅದು ಹುಡಿ ಆಗಬೇಕು. ಗುಂಡಿ ಪದ್ದತಿಯಲ್ಲಿ ಅದು ಆಗುವುದಿಲ್ಲ….