ಮಳೆ ನೀರು ಇಂಗಿಸುತ್ತೀರಾ – ಜಾಗ್ರತೆ ಇರಲಿ !
ಅಧಿಕ ಮಳೆಯಾಗುವ ಕರಾವಳಿ, ಮಲೆನಾಡಿನಲ್ಲಿ ಜನ ಇತ್ತೀಚಿನ ವರ್ಷಗಳಲ್ಲಿ ಬೋರ್ ವೆಲ್ ರೀಚಾರ್ಜ್ , ವಿಫಲವಾದ ಬೋರ್ ವೆಲ್ ಗಳಿಗೆ ನೀರಿನ ಮರುಪೂರಣ , ಹಾಗೆಯೇ ಅಲ್ಲಲ್ಲಿ ಇಂಗು ಗುಂಡಿಗಳನ್ನು ಮಾಡಲು ಪ್ರಾರಂಭಿಸಿದ್ದಾರೆ. ಪೋಲಾಗಿ ಸಾಗರ ಸೇರುತ್ತಿರುವ ನೀರಿನ ಮೇಲೆ ಇವರಿಗೆ ಕಾಳಜಿ, ಇದು ಮತ್ತೊಂದು ಕಡೆಯಲ್ಲಿ ಅನಾಹುತದ ರೂಪದಲ್ಲಿ ಹೊರಹೋಗುತ್ತಿದೆಯೋ ತಿಳಿಯದಾಗಿದೆ. ಒಟ್ಟಿನಲ್ಲಿ ಇತ್ತೀಚೆಗೆ ಪ್ರಾರಂಭವಾದ ಭೂ ಕುಸಿತದಂತಹ ಘೋರ ಸಮಸ್ಯೆಗೆ ಇಂತಹ ಯಾವುದೋ ಮಾನವ ಕೃತ ಕಾರ್ಯಗಳು ಕಾರಣ ಇರಲೇ ಬೇಕು. ಕರಾವಳಿಯ- ಮಲೆನಾಡಿನಲ್ಲಿ…