
ಕೀಟನಾಶಕ ಸಿಂಪಡಿಸುತ್ತೀರಾ? ಹಾಗಾದರೆ ಸುರಕ್ಷತೆ ಬಗ್ಗೆ ತಿಳಿದುಕೊಂಡಿರಿ.
ಪ್ರತೀಯೊಬ್ಬ ಕೃಷಿಕರೂ ಒಂದಲ್ಲ ಒಂದು ಬೆಳೆಗೆ ಕೀಟನಾಶಕ ಸಿಂಪಡಿಸುತ್ತಾರೆ. ಸಿಂಪಡಿಸುವವರು ಕೀಟನಾಶಕದಿಂದ ಆಗುವ ಯಾವುದೇ ಅನಾಹುತಗಳಿಗೆ ಮೊದಲ ಬಲಿಪಶುಗಳು. ಆದುದರಿಂದ ರೈತರೇ ಮೊದಲು ಜಾಗರೂಕತೆ ವಹಿಸಬೇಕು. ಕೀಟನಾಶದ ಬಳಕೆ ಪ್ರಮಾಣ, ಅದರ ಜೊತೆಗೆ ಕೊಟ್ಟಿರುವ ಹಸ್ತ ಪ್ರತಿ ಇತ್ಯಾದಿಗಳನ್ನು ಸರಿಯಾಗಿ ತಿಳಿದುಕೊಂಡು ಸುರಕ್ಷತೆಯಿಂದ ಬಳಸಬೇಕು. ರಾಸಾಯನಿಕ ಕೀಟ – ರೋಗ ನಾಶಕ ಗೊಬ್ಬರಗಳ ಬಗ್ಗೆ ಸಮಾಜ ಅಪಸ್ವರ ಎತ್ತಲು ಕೃಷಿಕರಾದ ನಾವೂ ಕಾರಣರು. ನಮ್ಮ ಕೃಷಿ ಜ್ಞಾನದಲ್ಲಿ ಬೆಳೆ ಪೊಷಕ,ಸಂರಕ್ಷಕಗಳನ್ನು ವೈಜ್ಞಾನಿಕವಾಗಿ ಹೇಗೆ ಬಳಕೆ ಮಾಡಬೇಕೆಂಬುದು ತಿಳಿದಿಲ್ಲ….