ಅಡಿಕೆ ಮರದಲ್ಲಿ ನಳ್ಳಿಗಳು ಯಾಕೆ ಉದುರುತ್ತವೆ?

ಅಡಿಕೆ ಮರದ ಹೂ ಗೊಂಚಲಿನಲ್ಲಿ  ಇರುವ ಎಲ್ಲಾ ಮಿಡಿಗಳೂ  ಕಾಯಿ ಕಚ್ಚಿಕೊಳ್ಳುವುದಿಲ್ಲ. ಸ್ವಲ್ಪ ಉದುರುತ್ತವೆ. ಹೆಚ್ಚಿನವು ಉಳಿಯುತ್ತದೆ. ಎಲ್ಲವೂ ಉದುರಿದರೆ , ಲೆಕ್ಕಕ್ಕಿಂತ ಹೆಚ್ಚು ಉದುರಿದರೆ   ಆಗ ತಲೆ ಬಿಸಿ ಮಾಡುವ ಬದಲಿಗೆ ಕೆಲವು ನಿರ್ವಹಣೆ ಮಾಡಿ ಉಳಿಸುವ ಪ್ರಯತ್ನ ಮಾಡಬೇಕು. ಅಡಿಕೆ ಮರದ ಹೂ ಗೊಂಚಲಿನಲ್ಲಿ ಅಕ್ಕಿಯ ತರಹ ಇರುವಂತದ್ದು, ಗಂಡು ಹೂವು. ಕಡಲೆ ಗಾತ್ರದ ತರಹ ಇರುವಂತದ್ದು ಹೆಣ್ಣು ಹೂವು. ಹೂ ಗೊಂಚಲು ಅರಳಿದ ತಕ್ಷಣದಿಂದಲೇ ಗಂಡು ಹೂವು ಅರಳಲಾರಂಭಿಸುತ್ತದೆ.  ಅದು ಸುಮಾರು 24…

Read more
mealy bug

ಬಿಳಿ ಉಣ್ಣಿ- ಹಿಟ್ಟು ತಿಗಣೆ; ತೊಂದರೆ ಮತ್ತು ಪರಿಹಾರಗಳು.

ಮಿಲಿಬಗ್, ಅಥವಾ ಹಿಟ್ಟು ತಿಗಣೆ  ಎಲೆ ಅಡಿ ಭಾಗದಲ್ಲಿ  ಮತ್ತು ಎಳೆ ಚಿಗುರು  ಹಾಗೆಯೇ ಕಾಯಿಯ ತೊಟ್ಟಿನ ಸನಿಹದಲ್ಲಿ  ಮುದ್ದೆಯಾಗಿ ಕುಳಿತು ರಸ ಹೀರುತ್ತದೆ. ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ. ಅಸಹ್ಯವೂ ಆಗುತ್ತದೆ.ಇದು ತರಕಾರಿ, ಹಣ್ಣು ಹಂಪಲು, ಹೂವಿನ ಗಿಡಗಳು ಸೇರಿದಂತೆ ಸುಮಾರು 200 ನಮೂನೆಯ ಬೆಳೆಗಳಿಗೆ  ಹಾನಿ ಮಾಡುತ್ತದೆ.ಮೈಬಣ್ಣ   ಬಿಳಿ ಹಿಟ್ಟು ತರಹ ಇರುವ ಕಾರಣ ಹಿಟ್ಟು ತಿಗಣೆ ಎಂಬ ಹೆಸರು ಕೊಡಲಾಗಿದೆ. ವಿಧಗಳು: ಇದರಲ್ಲಿ  ಮೂರು ನಾಲ್ಕು ಪ್ರಭೇಧಗಳಿದ್ದು ,ಕೆಲವು ಮರಮಟ್ಟುಗಳಿಗೂ ಇನ್ನು ಕೆಲವು ಕೆಳಸ್ಥರದ…

Read more

ಗೇರು ಬೆಳೆಯಲ್ಲಿ ಹೆಚ್ಚು ಇಳುವರಿ ಬೇಕಾದರೆ ಇದು ಅಗತ್ಯ.

ಗೇರು ಚಿಗುರು ಬಿಡುವ ಸಮಯ ಅಕ್ಟೋಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ತನಕವೂ ಮುಂದುವರಿಯುತ್ತದೆ. ಚಿಗುರುವ ಸಮಯದಲ್ಲಿ ಈ ಬೆಳೆಗೆ ಕೀಟಗಳ ತೊಂದರೆ  ಜಾಸ್ತಿ.ಇದನ್ನು  ನಿವಾರಣೆ ಮಾಡಿಕೊಳ್ಳದಿದ್ದರೆ , ಚಿಗುರು ಹಾಳಾಗುತ್ತದೆ. ಫಸಲು ಗಣನೀಯವಾಗಿ ಕಡಿಮೆಯಾಗುತ್ತದೆ. ಯಾವ ಕೀಟಗಳಿಂದ ತೊಂದರೆ: ಚಿಗುರುವ ಸಮಯದಲ್ಲಿ ಎಳೆ ಚಿಗುರನ್ನು ತಿನ್ನಲು ಗುಲಗುಂಜಿ ಹುಳದ ತರಹದ ಒಂದು ಹಾರುವ ಕೀಟ ತಿನ್ನುತ್ತದೆ. ಇದರಿಂದ ಎಳೆ  ಚಿಗುರು ಹಾಳಾಗಿ ಒಣಗುತ್ತದೆ. ಎಲೆಗಳಲ್ಲೊ ಹರಿತ್ತು  ಇರುವುದಿಲ್ಲ. ತಿಂದು ಹಾಕಿದ ಹಿಕ್ಕೆ  ಇರುತ್ತದೆ. ಕೆಲವು ಸಮಯದಲ್ಲಿ  ಇದರ…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಟಿ- ಸೊಳ್ಳೆ ನಿಯಂತ್ರಣಕ್ಕೆ – ಸಿಂಪರಣೆ ಬೇಕಾಗಿಲ್ಲ.

ಗೋಡಂಬಿ ಅಥವಾ ಗೇರು ಒಣ ಭೂಮಿಯಲ್ಲಿ ಬೆಳೆಯಬಹುದಾದ ಲಾಭದಾಯಕ ಬೆಳೆ. ಇದರ ಪ್ರಮುಖ ಸಮಸ್ಯೆ ಎಂದರೆ ಟಿ- ಸೊಳ್ಳೆ. ಇದರ ನಿಯಂತ್ರಣಕ್ಕೆ ಈ ತನಕ ವಿಷ  ರಾಸಾಯನಿಕ ಸಿಂಪರಣೆಯನ್ನು  ಶಿಫಾರಸು ಮಾಡಲಾಗುತ್ತಿದ್ದರೆ  ಈಗ ಸುರಕ್ಷಿತ ವಿಷ  ರಹಿತ  ಪರಿಹಾರ ಫಲಿತಾಂಶ ಕೊಟ್ಟಿದೆ. ಇನ್ನು “ಟಿ” ಸೊಳ್ಳೆ ನಿಯಂತ್ರಣಕ್ಕೆ ಸಿಕ್ಕ ಸಿಕ್ಕ ವಿಷ ಕೀಟ ನಾಶಕ ಬಳಸಬೇಕಾಗಿಲ್ಲ. “ಟಿ” ಸೊಳ್ಳೆಯಿಂದ ಗೋಡಂಬಿ ಬೆಳೆಯಲ್ಲಿ ಸುಮಾರು 50% ಕ್ಕೂ ಹೆಚ್ಚಿನ ಫಸಲು ನಷ್ಟವಾಗುತ್ತದೆ. ಗೇರು ಸಸಿಗಳು ಚಿಗುರುವ ಸಮಯದಿಂದ ಪ್ರಾರಂಭವಾಗಿ …

Read more

ವೀಳ್ಯದೆಲೆ ಬೆಳೆಗಾರರ ಸಮಸ್ಯೆಗೆ ಇಲ್ಲಿದೆ ಉತ್ತರ.

ದೈನಂದಿನ ಆದಾಯ ಕೊಡಬಲ್ಲ ವೀಳ್ಯದೆಲೆಗೆ, ನೋಟದ ಮೇಲೆ ಮಾರುಕಟ್ಟೆ ನಿಂತಿದೆ.ಉತ್ತಮ ನೋಟದ ಎಲೆಗಳು  ರೋಗ  ರಹಿತ ಬಳ್ಳಿಗಳಿಂದ ಮಾತ್ರ ದೊರೆಯಬಲ್ಲುದು. ವೀಳ್ಯದೆಲೆಯು ಒಂದು ಪ್ರಮುಖತೋಟಗಾರಿಕಾ ಬೆಳೆಯಾಗಿದ್ದು. ಕರ್ನಾಟಕದಲ್ಲಿಇದರ ವಿಸ್ತೀರ್ಣ  8288 ಹೆಕ್ಟರ್ ಹಾಗೂ ಇಳುವರಿ 153600 ಮೆ.ಟನ್. ಎಲೆಗಳು ಉತ್ಪತ್ತಿಯಾಗುತ್ತಿದೆ.ಈ ಬೆಳೆಯ ಬೆಳೆವಣಿಗೆಯ ಹಂತದಲ್ಲಿ ಅನೇಕ ರೋಗಗಳು ಬಾಧೆಗೊಳಗಾಗುತ್ತವೆ. ಅವುಗಳಲ್ಲಿ ಬುಡಕೊಳೆ ರೋಗ, ದುಂಡಾಣು ಎಲೆ ಚುಕ್ಕೆ ರೋಗ ಮತ್ತುಚಿಬ್ಬುರೋಗ ಪ್ರಮುಖ ರೋಗಗಳಾಗಿವೆ. ಅವುಗಳಲ್ಲಿ ದುಡಾಂಣು ಎಲೆಚುಕ್ಕೆ ರೋಗವು ಇತ್ತೀಚಿಗೆ ಎಲ್ಲಾ ಕಡೆ ಭಾರೀ ನಷ್ಟವನ್ನು ಉಂಟು…

Read more
ಮೊಡ ಕವಿದ ವಾತಾವರಣ

ಬದಲಾದ ಹವಾಮಾನ – ಕೃಷಿಗೆ ಆತಂಕ.

ಬೇಸಿಗೆ ಕಾಲದಲ್ಲಿ ಕೆಲವು ಸಮಯದಲ್ಲಿ ಒಂದೆರಡು ದಿನ ಮೋಡ ಕವಿದ ವಾತಾವರಣ ಇರುತ್ತದೆ. ಸಾಮಾನ್ಯವಾಗಿ ಮಾವು, ಗೇರು ಹೂ ಬೀಡುವ ಸಮಯದಲ್ಲಿ  ಇದು ಹೆಚ್ಚು. ಈ ಮೋಡ ಕವಿದ  ದಿನಗಳು ಬೆಳೆಗಳಿಗೆ  ಹಾಳು. ಈ ವರ್ಷದ ಹವಾಮಾನ ಯಾಕೋ ಭಿನ್ನವಾಗಿದೆ. ಡಿಸೆಂಬರ್ ವರೆಗೂ ಮಳೆ. ಚಳಿಯಂತೂ ತೀರಾ ಕಡಿಮೆ. ಆಗಾಗ ಮೋಡ ಕವಿದ ವಾತಾವರಣ. ಕೆಲವು  ತಜ್ಞರು ಹೇಳುವಂತೆ ಮುಂದಿನ ವರ್ಷಗಳಲ್ಲಿ  ಹವಾಮಾನ ಸ್ಥಿತಿ ಸ್ವಲ್ಪ ಸ್ವಲ್ಪವೇ ಬದಲಾವಣೆ ಆಗುತ್ತಾ, ಅಕಾಲಿಕ ಮಳೆ- ಅತಿಯಾದ ಬಿಸಿಲು ಬಂದು…

Read more
ಸೀಡ್ ಟ್ರೇ ನಲ್ಲಿ ಬೀಜ ಬಿತ್ತುವುದು

ತರಕಾರಿ ಬೆಳೆಗಾರರನ್ನು ರಕ್ಷಿಸಿದ ಸೀಡ್ ಟ್ರೇ ತಂತ್ರಜ್ಞಾನ

ಹಿಂದೆ ತರಕಾರಿ ಬೆಳೆಯುವವರು ಹೊಲದ ಸಿದ್ದತೆ ಮಾಡಿ, ಸಾಲುಗಳನ್ನು ಗುರುತು ಮಾಡಿ, ಬೀಜ ತಂದು ಬಿತ್ತನೆ ಮಾಡಿ ಜೋಪಾನವಾಗಿ ಆರೈಕೆ ಮಾಡಿ ತರಕಾರಿ ಬೆಳೆಸುತ್ತಿದ್ದರು. ಈಗ ಹಾಗಿಲ್ಲ. ನಾಳೆ ಟೊಮಾಟೋ ಅಥವಾ ಇನ್ಯಾವುದಾದರೂ ತರಕಾರಿ ಹಾಕಬೇಕೆಂದಾದರೆ ಇಂದು ಹೊಲದ ಸಿದ್ದತೆ ಮಾಡಿ, ನಾಳೆ ಸಸಿ ನೆಡಬಹುದು. ಮುಂಚಿತವಾಗಿಯೇ ಸಸಿ ಮಾಡಿಟ್ಟುಕೊಳ್ಳುವ ಸೀಡ್ ಟ್ರೇ ತಂತ್ರಜ್ಞಾನ ಇದೆ. ಇದರಲ್ಲಿ ಗಿಡ ಬೆಳೆಸಿ ಕೊಡುವವರೂ ಇದ್ದಾರೆ. ಇದು ತರಕಾರಿ ಬೆಳೆಗಾರರಿಗೆ ನಷ್ಟವನ್ನು ತುಂಬಾ ಕಡಿಮೆ ಮಾಡಿದೆ. ಸಮಯದ ಉಳಿತಾಯವನ್ನೂ ಮಾಡಿದೆ….

Read more
ಉತ್ತರ –ದಕ್ಷಿಣ (ನೈರುತ್ಯ) ಬಿಸಿಲು ಬೀಳುವ ಭಾಗಕ್ಕೆ ಸುಣ್ಣ ಅಗತ್ಯ

ಅಡಿಕೆ ಮರಗಳಿಗೆ ಸುಣ್ಣ ಬಳಿದರೆ ಇಳುವರಿ ಹೆಚ್ಚುತ್ತದೆ.

ಅಡಿಕೆ ಮರಗಳ ಕಾಂಡವನ್ನು ಬಿಸಿಲಿನ ಘಾಸಿಯಿಂದ ರಕ್ಷಿಸಿದರೆ ಧೀರ್ಘಾವಧಿ ತನಕ ಫಸಲು  ಕೊಡುತ್ತದೆ. ವರ್ಷ ವರ್ಷವೂ ಗಾಳಿಗೆ ಮರ ಬೀಳುವುದರಿಂದಾಗಿ ಉಂಟಾಗುವ ನಷ್ಟ ಕಡಿಮೆಯಾಗಿ ಇಳುವರಿ ಸ್ಥಿರವಾಗಿರುತ್ತದೆ . ಮರದ ಕಾಂಡಕ್ಕೆ ಸುಣ್ಣ ಬಳಿದರೆ ಕಾಂಡ   ಹಾಳಾಗದೆ  ಅಯುಸ್ಸು ಹೆಚ್ಚಿ ಇಳುವರಿಯು ಹೆಚ್ಚುತ್ತದೆ. ದಕ್ಷಿಣಾಯನ ಮುಗಿಯುವ ಮಕರ ಸಂಕ್ರಮಣದ ತನಕ ಸೂರ್ಯನ ಬಿಸಿಲು ಮರದ ಕಾಂಡಕ್ಕೆ ನೇರವಾಗಿ ಹೊಡೆದು ಮರ ಕಾಂಡ ಸೂರ್ಯ ಕಿರಣದ ಘ್ಹಾಸಿಗೆ ಒಳಗಾಗುತ್ತದೆ. ಅಂತಹ ಮರಗಳು ಬೇಗ ಹಾಳಾಗುತ್ತವೆ. ಒಂದು ವರ್ಷ ನೇರ…

Read more
error: Content is protected !!