
ಸೀತಾಫಲವೂ ಲಕ್ಷ್ಮಣ ಫಲದಂತೆ ಔಷಧೀಯ- ಬೆಳೆ ಸುಲಭ- ಲಾಭವು ಅಧಿಕ.
ಚಳಿಗಾಲದ ಮೊದಲ ಹಣ್ಣು ಎಂದರೆ ಸೀತಾಫಲ. ಮಳೆಗಾಲ ಕಳೆದ ತಕ್ಷಣ ಈ ಹಣ್ಣು ಮಾರುಕಟ್ಟೆಯಲ್ಲಿ ಹಾಜರ್. ಎಂತಹ ರುಚಿ. ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಅಧಿಕಾ ನಾರಿನ ಅಂಶ ಉಳ್ಳ ಈ ಹಣ್ಣನ್ನು ಸೀಸನ್ ನಲ್ಲಿ ತಿನ್ನುವುದರಿಂದ ಆರೋಗ್ಯ ಬಹಳ ಒಳ್ಳೆಯದು. ಇದನ್ನು ಬರಗಾಲದ ನಾಡಿನಲ್ಲಿ ಬೆಳೆಯುವ ಹಣ್ಣು ಎನ್ನುತ್ತಾರೆ. ಸೀತಾಫಲ ಅತ್ಯಂತ ರುಚಿಕಟ್ಟಾದ ಹಣ್ಣು. ಒಮ್ಮೆ ಈ ಹಣ್ಣನ್ನು ಸವಿದರೆ ಮತ್ತೆ ಬೇರೆ ಹಣ್ಣು ರುಚಿಸದು. ಅಂಥಹ ರುಚಿ ಹೊಂದಿದೆ. ಹಣ್ಣಿನ ಉತ್ಪಾದನೆ ತುಂಬಾ ಕಡಿಮೆ …