ರಾಸಾಯನಿಕ ಬಳಸದೆ ಹಣ್ಣು ಮಾಡುವ ಸರಳ ವಿಧಾನ
ಹೆಚ್ಚಾಗಿ ಮಾವಿನ ಕಾಯಿ ಹಣ್ಣು ಮಾಡಲು ಹಿಂದಿನಿಂದಲೂ ಕ್ಯಾಲ್ಸಿಯಂ ಕಾರ್ಬೇಟ್ ಎಂಬ ಅಪಾಯಕಾರೀ ವಸ್ತುವನ್ನು ಬಳಸಲಾಗುತ್ತಿತ್ತು. ಈಗ ಹಾಗಿಲ್ಲ. ಅದರ ಬದಲಿಗೆ ಅರೋಗ್ಯಕ್ಕೆ ಹಾನಿ ಇಲ್ಲದ ಹಣ್ಣು ಮಾಡುವ ವಿಧಾನವನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯವರು ಬೆಳೆಗಾರರಿಗೆ ತಿಳಿಸಿಕೊಟ್ಟಿದ್ದಾರೆ. ಇದನ್ನು ಬಹಳಷ್ಟು ಬೆಳೆಗಾರರು ಅಳವಡಿಸಿಕೊಂಡಿದ್ದಾರೆ. ನಮ್ಮ ರಾಜ್ಯದ ಮಾವಿನ ರಾಜದಾನಿ ಎಂದೇ ಖ್ಯಾತವಾದ ಶ್ರೀನಿವಾಸಪುರದಿಂದ ಸಂಜೆ ಹೊತ್ತು ಲಾರಿಗೆ ಲೊಡ್ ಆದ ಮಾವು ಮರುದಿನ ತಲುಪಬೇಕಾದಲ್ಲಿಗೆ ತಲುಪುವಾಗ ಮೆತ್ತಗಾಗುತ್ತದೆ. ಅದನ್ನು ಖರೀದಿಸಿವರು ಮರುದಿನ ಮಾರಾಟ ಮಾಡುವಾಗ ಬಣ್ಣ…