ದ್ರಾಕ್ಷಿ ಬೆಳೆಗಾರ ಸಂಕಷ್ಟಕ್ಕೆ ಉತ್ತರ – ಒಣ ದ್ರಾಕ್ಷಿ.

by | Apr 6, 2020 | Grape (ದ್ರಾಕ್ಷಿ) | 0 comments

ಮಣಕ ಅಥವಾ ಒಣ ದ್ರಾಕ್ಷಿ  ಮಾಡಿದರೆ ಅದನ್ನು ಹೆಚ್ಚು ಸಮಯದ ತನಕ ದಾಸ್ತಾನು ಇಟ್ಟು ಮಾರಾಟ ಮಾಡಬಹುದು. ಇದಕ್ಕೆ ಮಧ್ಯವರ್ತಿಗಳು, ದಾಸ್ತಾನುಗಾರರು, ಚಿಲ್ಲರೆ ಮಾರಾಟಗಾರರು ಬೇಕಾಗಿಲ್ಲ. ನೀವು  ಬುದ್ದಿವಂತರಾಗಿದ್ದರೆ ಆನ್ ಲೈನ್ ಮೂಲಕ ನೇರವಾಗಿ ಗ್ರಾಹಕರಿಗೆ  ಮಾರಾಟ ಮಾಡಬಹುದು.

 • ಸರಕಾರ ದ್ರಾಕ್ಷಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ವೈನರಿಯನ್ನು ಎಲ್ಲಾ ತೆರೆಯುವಂತೆ ಸೂಚಿಸಿದೆಯಂತೆ.
 • ಈ ವೈನರಿಗಳು ಕೊಡುವ ಬೆಲೆ ಬರೇ ಜುಜುಬಿ.
 • ಅದರ ಬದಲು ಮಣಕ ಮಾಡಿದರೆ ಲಾಭ ಹೆಚ್ಚು.

ಉತ್ತರ ಕರ್ನಾಟಕದ ಬಿಜಾಪುರ, ಬಾಗಲಕೊಟೆಯ ದ್ರಾಕ್ಷಿ ಬೆಳೆಗಾರರು ತಾವು ಬೆಳೆದ ದ್ರಾಕ್ಷಿಯನ್ನು ತಾಜಾ ಹಣ್ಣಾಗಿ ಮಾರಾಟ ಮಾಡುವುದಲ್ಲ.

 • ಅರ್ಧಕ್ಕೂ ಹೆಚ್ಚಿನ ದ್ರಾಕ್ಷಿಯನ್ನು  ಮಣಕ ಅಥವಾ ಒಣ ದ್ರಾಕ್ಷಿ ಮಾಡಿ ನಂತರ ಬೇಡಿಕೆ ಹೊಂದಿ ಮಾರಾಟ ಮಾಡುತ್ತಾರೆ. 
 • ಬಹುತೇಕ ದ್ರಾಕ್ಷಿ ಬೆಳೆಗಾರರು ಸಮೀಪದ  ಕೋಲ್ಡ್ ಸ್ಟೋರೇಜ್ ನಲ್ಲಿ ತಮ್ಮ ಒಣ ದ್ರಾಕ್ಷಿಯನ್ನು ಇಟ್ಟು ಕೊಂಡಿರುತ್ತಾರೆ.
 • ಸರಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರೆ ಒಣ ದ್ರಾಕ್ಷಿ ಮಾರಾಟಕ್ಕೆ ಈಗ ಕಷ್ಟ ಇಲ್ಲ.

ಒಣ ದ್ರಾಕ್ಷಿ ಹೇಗೆ:

ಬಲಿತ ಹಣ್ಣುಗಳನ್ನೇ ಕೊಯ್ಯಬೇಕು.

ಬಲಿತ ಹಣ್ಣುಗಳನ್ನೇ ಕೊಯ್ಯಬೇಕು.

 • ದ್ರಾಕ್ಷಿ ಹಂದರದಲ್ಲಿ ಸ್ವಲ್ಪ ಬೇಗ ಬೆಳೆ ಬಂದರೆ ಆಗ ಅದಕ್ಕೆ  ತಾಜಾ ಹಣ್ಣಾಗಿ ಬೇಡಿಕೆ ಇರುತ್ತದೆ.
 • ಮಾರ್ಚ್ ತನಕ ಬಿಜಾಪುರದ ದ್ರಾಕ್ಷಿಗೆ ತಾಜಾ ಹಣ್ಣಾಗಿ ಬೇಡಿಕೆ.
 • ನಂತರ  ಬೆಂಗಳೂರಿನ ದ್ರಾಕ್ಷಿ ಮಾರುಕಟ್ಟೆಗೆ ಬರುತ್ತದೆ.
 • ಇಲ್ಲಿಯ  ದ್ರಾಕ್ಷಿ ಮಣಕ ಆಗುತ್ತದೆ.
 • ಚೆನ್ನಾಗಿ ಹಣ್ಣಾದ  ದ್ರಾಕ್ಷಿಯನ್ನು  ಮಾತ್ರ ಮಣಕ ಮಾಡಲು ಬಳಸಲಾಗುತ್ತದೆ.
 • ತಡವಾಗಿ ಕೊಯಿಲು ಮಾಡಬೇಕು. ಆಗ ಅದರ TSS  ( ಸಕ್ಕರೆ ಪ್ರಮಾಣ) ಉತ್ತಮವಾಗಿರುತ್ತದೆ.
 • ಕೊಯಿಲು ಮಾಡಿದ ದ್ರಾಕ್ಷಿಯಲ್ಲಿ ಹಾಳಾದುದನ್ನು ಪ್ರತ್ಯೇಕಿಸಿ  ನೀರಿನಲ್ಲಿ ತೊಳೆದು ನಂತರ 100 ಲೀ ನೀರಿಗೆ 1 ಲೀ. ಈಥೇಲ್ ಓಲಿಯೇಟ್ ಮತ್ತು 2 ಕಿಲೊ ಪೊಟ್ಯಾಶಿಯಂ ಕಾರ್ಬೋನೇಟ್ ನಲ್ಲಿ 2-3 ನಿಮಿಷ ಅದ್ದಿ ( ಈಗ ಡಿಪ್ಪಿಂಗ್ ಆಯಿಲ್ ಎಂಬುದು ಸಿಗುತ್ತದೆ).
 • ಅದನ್ನು ಒಣಗಿಸುವ ಚಪ್ಪರದಲ್ಲಿ ಗೊಂಚಲುಗಳನ್ನು ತೆಳುವಾಗಿ ಹರಡಬೇಕು. 
 • ಹೀಗೆ ಇಟ್ಟಂತದ್ದನ್ನು ಅಗತ್ಯ ಇದ್ದರೆ ಮೇಲೆ ಕೆಳಗೆ ವರ್ಗಾಯಿಸಬೇಕಾಗುತ್ತದೆ.  
 • ಸುಮಾರು 15-20  ದಿನಗಳಲ್ಲಿ ಇದು ಒಣಗುತ್ತದೆ.
ಗಂಧಕ ಮತ್ತು ಡಿಫ್ಪಿಂಗ್ ಅಯಿಲ್ ನಲ್ಲಿ ಉಪಚಾರ ಅದ ದ್ರಾಕ್ಷಿ

ಗಂಧಕ ಮತ್ತು ಡಿಫ್ಪಿಂಗ್ ಅಯಿಲ್ ನಲ್ಲಿ ಉಪಚಾರ ಅದ ದ್ರಾಕ್ಷಿ

ಎರಡನೆಯ ಪದ್ದತಿ ಕೊಯಿಲು ಮಾಡಿದ ದ್ರಾಕ್ಷಿಯನ್ನು ಯಾವುದೇ ರಾಸಾಯನಿಕ ದ್ರಾವಣದಲ್ಲಿ ಅದ್ದದೆ ನೀರಿನಲ್ಲಿ ತೊಳೆದು ಒಣಗಿಸುವುದು. ಇದಕ್ಕೆ ಕೆಲವು  ಕಡೆ ಮಾರುಕಟ್ಟೆ ಇದೆ. ಇದು  ಉತ್ತಮ ಗುಣಮಟ್ಟದ ದ್ರಾಕ್ಷಿಯಗಿರುತ್ತದೆ.

 • ಮೊದಲ ಕ್ರಮದಲ್ಲಿ ಒಣಗಿಸಲ್ಪಟ್ಟ ದ್ರಾಕ್ಷಿ ಹಳದಿ ಬಣ್ಣದಲ್ಲಿ ಪಾರದರ್ಶಕವಾಗಿರುತ್ತದೆ.
 • ಎರಡನೇ ವಿಧಾನದಲ್ಲಿ ಒಣಗಿಸಿದ ದ್ರಾಕ್ಷಿ ಹಸುರು ನೈಸರ್ಗಿಕ ಬಣ್ಣದಲ್ಲಿರುತ್ತದೆ.
ಒಣಗಲು ಟ್ರೇ ಗಳಲ್ಲಿ ನೇತು ಹಾಕುವುದು

ಒಣಗಲು ಟ್ರೇ ಗಳಲ್ಲಿ ನೇತು ಹಾಕುವುದು

ವಿಜಯಪುರ ಒಣ ದ್ರಾಕ್ಷಿಗೆ ಪ್ರಸಿದ್ಧಿ:

 • ಒಣಗಿಸಲ್ಪಟ್ಟ ದ್ರಾಕ್ಷಿ ಗೂಂಚಲು ಕಬ್ಬ್ಬಿಣದ ಮೆಶ್ ನ ಹಂದರದಲ್ಲಿರುವಾಗ  ಎರಡು ಕಬ್ಬಿಣದ  ಪಟ್ಟಿ ರಾಡ್ ಅನ್ನು  ಕೀಳಗೆ ಮೇಲೆ ಇಟ್ಟು ಎರಡೂ ಕಡೆಯಲ್ಲಿ ಹಿಡಿದು  ಎಳೆದಾಗ ಗೊಂಚಲಿನಿಂದ ದ್ರಾಕ್ಷಿ ಹಣ್ಣುಗಳು ಬಿಡುತ್ತವೆ.
 • ಇದನ್ನು ನಂತರ ಬೇರೆ ವ್ಯವಸ್ಥೆಗೆ ಸಾಗಿಸಲಾಗುತ್ತದೆ.
 • ಬಿಜಾಪುರ  ರಾಜ್ಯದ ಒಣ  ಪ್ರದೇಶ.ಇಲ್ಲಿ ಅತಿಯಾದ ಬಿಸಿಲು ಇರುವ ಕಾರಣ ಇಲ್ಲಿನ ದ್ರಾಕ್ಷಿ  ಮಣಕ ಮಾಡಲು ಚೆನ್ನಾಗಿ ಹೊಂದಿಕೆಯಾಗುತ್ತದೆ.
 • ಇಲ್ಲಿ ಮಣಕ ಮಾಡುವ ವ್ಯವಹಾರವನ್ನೇ ಮಾಡುವ ಹಲವು ಜನ ಇದ್ದಾರೆ.
 • ಕೆಲವು ರೈತರೂ ಸಹ ಮಾಡುತ್ತಾರೆ. ಬೇರೆ ಬೇರೆ ಊರುಗಳಿಂದ ತಂದು ಇಲ್ಲಿ ಒಣಗಿಸುವುದೂ ಇದೆ.

 8 ಟ್ರೇಗಳ ಸ್ಟಾಂಡ್

ಚಪ್ಪರ:

 • ಇದು ಕಬ್ಬಿಣದ ರಾಡ್ ಮತ್ತು ಮೆಶ್ ಹಾಕಿ ಮಾಡಿದ ಚಪ್ಪರ.
 • ಇದರ ಮೇಲೆ ಕಪ್ಪು ನೆರಳು ಬಲೆಯನ್ನು ಹಾಕಿರುತ್ತಾರೆ.
 • 12 ಅಂತಸ್ತು ತನಕ  ದ್ರಾಕ್ಷಿಯನ್ನು ಹಾಕುತ್ತಾರೆ.
 • ಕೆಲವರ ಒಣಗಿಸುವ ಚಪ್ಪರ ಅರ್ಧ ಎಕ್ರೆಗೂ ಹೆಚ್ಚು ವಿಸ್ತಾರದಲ್ಲಿರುತ್ತದೆ.

ವರ್ಗೀಕರಣ

ಒಣಗಿದ ನಂತರ ಹಣ್ಣುಗಳನ್ನು ಯಂತ್ರಕ್ಕೆ ಹಾಕಿ ಅದನ್ನು  ಗಾರ್ಬಲಿಂಗ್ ಮಾಡಲಾಗುತ್ತದೆ. ಗಾರ್ಬಲಿಂಗ್ ಮಾಡಿದಾಗ ದೊರೆಯುವ ಬೇರೆ ಬೇರೆ ಗುಣಮಟ್ಟದ್ದನ್ನು ಪ್ರತ್ಯೇಕ ಪ್ರತ್ಯೇಕ ಪ್ಯಾಕ್ ಮಾಡಿ ಬೇರೆ ಬೇರೆ ಬಳಕೆಗೆ ವರ್ಗಾಯಿಸುತ್ತಾರೆ.

 • ಮಣಕ ಮಾಡಿದ ದ್ರಾಕ್ಷಿಯನ್ನು  ನಮ್ಮ ಸಾಮಾನ್ಯ ವಾತಾವರಣದಲ್ಲಿ ಇಡಲಿಕ್ಕೆ ಆಗುವುದಿಲ್ಲ.
 • ಅದಕ್ಕೆ ಶಿಲೀಂದ್ರ ಬರುತ್ತದೆ. ಅದನ್ನು 5 ಡಿಗ್ರಿ  ತಂಪು ಇರುವ ಶೀತಲ ಗ್ರಹದಲ್ಲಿ ದಾಸ್ತಾನು ಇಡುತ್ತಾರೆ.
 • ಇದು ವರ್ಷಗಳ ತನಕವೂ ಹಾಳಾಗುವುದಿಲ್ಲ.

ಕರ್ನಾಟಕ ಸರಕಾರವು ರೈತರು ಬೆಳೆದ ಉತ್ಪನ್ನವನ್ನು ಶೀತಲ ಗೃಹದಲ್ಲಿ ಇಡುವರೇ ಈ ವರ್ಷ ಯಾವುದೇ ಶುಲ್ಕ ವಿಧಿಸಬಾರದು ಎಂದಿರುವ ಕಾರಣ ಇದು ರೈತರಿಗೆ ಅನುಕೂಲಕರ. ಹಣ್ಣು ದ್ರಾಕ್ಷಿಯಲ್ಲಿ ನಷ್ಟವಾದುದನ್ನು ಇದರಲ್ಲಿ ಪಡೆಯುವ ಗುರಿಯನ್ನು ಇಟ್ಟುಕೊಳ್ಳಿ.

0 Comments

Submit a Comment

Your email address will not be published. Required fields are marked *

Get in Touch

For all kinds of inquiries, regarding the Krushiabhivruddi website and its other media channels, including corporate advertising contact us on 

support@krushiabhivruddi.com
+91-9663724066

ಒಂದು ಎಕ್ರೆಯಲ್ಲಿ ಮಿಶ್ರ ಬೆಳೆಯಿಂದ ಕನಿಷ್ಟ 3 ಲಕ್ಷ ಆದಾಯ ಗಳಿಸುವ ರೈತ.

Categories

error: Content is protected !!