ಕಾಲಬದ್ಧ ನಿರ್ವಹಣೆಯ ಉತ್ತಮ ಇಳುವರಿಯ ಅಡಿಕೆ

ಉತ್ತಮ ಇಳುವರಿ ಪಡೆಯಲು ಈ ವಿಧಾನ ಅನುಸರಿಸಿರಿ.

ಯಾವುದೇ ವೃತ್ತಿಯಲ್ಲಿ ನಾವು ಮಾಡಿದ  ಕೆಲಸವನ್ನು ಒಮ್ಮೆ ತಿರುಗಿ ನೋಡಿದರೆ  ನಮಗೆ ತಪ್ಪು ಯಾವುದು ಸರಿ ಯಾವುದು ಎಂದು ತಿಳಿಯುತ್ತದೆ. ಕೃಷಿಯಲ್ಲಿ ನಾವು ಮಾಡಿದ ನಾಲ್ಕು ಐದು ವರ್ಷಗಳ ಬೆಳೆ  ಕ್ರಮವನ್ನು ಅಭ್ಯಸಿದರೆ ನಮಗೆ ಹೇಗೆ ಮಾಡಿದರೆ ಉತ್ತಮ ಎಂಬುದು ತಿಳಿಯುತ್ತದೆ. ನಾವು ಮಾಡುವ ವೃತ್ತಿಯಲ್ಲಿ ಯಾವಾಗ ಏನು ಮಾಡಿದ್ದೇವೆ ಅದರ ಫಲಿತಾಂಶ ಏನಾಗಿದೆ ಎಂಬುದನ್ನು ಪರಾಂಬರಿಸಿ ಗಮನಿಸುತ್ತಿದ್ದರೆ, ತಪ್ಪು ಎಲ್ಲಿ ಅಗಿದೆ, ಸರಿ ಮಾಡುವುದು ಹೇಗೆ ಎಂದು ನಮಗೇ ತಿಳಿಯುತ್ತದೆ.  ಕೃಷಿಯೂ ಹಾಗೆಯೇ? ನಮ್ಮ ಕೃಷಿ…

Read more
ಅಂಡರ್ ಗ್ರೌಂಡ್ ಡ್ರೈನೇಜ್ ವ್ಯವಸ್ಥೆ -Underground Drainage system

ಅಂಡರ್ ಗ್ರೌಂಡ್ ಡ್ರೈನೇಜ್ – ನೀರು ಬಸಿಯಲು ಸುಲಭ- ಶಾಶ್ವತ ವ್ಯವಸ್ಥೆ.

ಅಡಿಕೆ ತೋಟ, ತೆಂಗಿನ ತೋಟ ಅಥವಾ ಇನ್ಯಾವುದೇ ಬೇಸಾಯದ ಹೊಲದಲ್ಲಿ ನೆಲದಿಂದ ಒಸರುವ (ಒರತೆ) ನೀರನ್ನು ಅಡಿಕೆಯಲ್ಲೇ ಬಂಧಿಸಿ ಅದನ್ನು ವಿಲೇವಾರಿ ಮಾಡಲು ಇರುವ ಅತ್ಯುತ್ತಮ ವ್ಯವಸ್ಥೆಯೊಂದಿದ್ದರೆ ಅದು ಅಂಡರ್ ಗ್ರೌಂಡ್ ಡೈನೇಜ್. ಈ ವ್ಯವಸ್ಥೆ ಮಾಡಿಕೊಂಡರೆ ಜೌಗು ಜಾಗವನ್ನೂ ಒಣ ಜಾಗವನ್ನಾಗಿ ಪರಿವರ್ತಿಸಬಹುದು. ತೋಟದಲ್ಲಿ ಓಡಾಡುವಾಗ ಯಾವುದೇ ಬಸಿಗಾಲುವೆ ಕಾಣುವುದಿಲ್ಲ. ನೆಲದಲ್ಲಿ ಒರತೆ ರೂಪದಲ್ಲಿ ಹೊರ ಉಕ್ಕುವ ನೀರನ್ನು ಅಲ್ಲೇ ಟ್ಯಾಪ್ ಮಾಡಿ, ಮೇಲೆ ಬಾರದಂತೆ ತಡೆಯುವ ವ್ಯವಸ್ಥೆಗೆ  ಅಂಡರ್ ಗ್ರೌಂಡ್ ಡ್ರೈನೇಜ್ ಎಂದು ಹೆಸರು….

Read more
coconut tree full of nuts

ತೆಂಗಿನ ತೋಟ – ಬೇಸಿಗೆಯಲ್ಲಿ ತೇವಾಂಶ ರಕ್ಷಣೆಗೆ ಹೀಗೆ ಮಾಡಿ.

ಬೇಸಿಗೆಯ ಕಾಲದಲ್ಲಿ ತೆಂಗಿನ ಮರ/ ಸಸಿಯ ಬೇರುಗಳಿರುವ ಭಾಗ ತೇವಾಂಶದಿಂದ ಕೂಡಿದ್ದರೆ ಇಳುವರಿ ಹೆಚ್ಚುತ್ತದೆ.ತೇವಾಂಶ ರಕ್ಷಣೆಗೆ ಹೀಗೆ ಮಾಡಬಹುದು. ಬೇಸಿಗೆಯ ಸಮಯದಲ್ಲಿ ನೀರಾವರಿ ಅತೀ ಪ್ರಾಮುಖ್ಯ ಕೆಲಸ. ಅದರ ಜೊತೆಗೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯೂ ನಡೆಯುತ್ತಿರಬೇಕು. ಹೀಗೆ ಆಗಲು ಬೆಳೆಗಾರರು ಮಾಡಬೇಕಾದ ಕೆಲವು ಅಗತ್ಯ ಕೆಲಸಗಳು ಹೀಗಿವೆ. ತೆಂಗಿನ ಮರ ಎಂದರೆ ನಾವು ಅದಕ್ಕೆ ಎಲ್ಲಾ ಸಾವಯವ ತ್ಯಾಜ್ಯಗಳನ್ನು ಬುಡಕ್ಕೆ ಹಾಕುತ್ತೇವೆ. ಅವು ಮಳೆಗಾಲದಲ್ಲಿ ಕರಗಿ ಬುಡದಲ್ಲಿ ಗೊಬ್ಬರವಾಗುತ್ತದೆ. ಬೇಸಿಗೆಯಲ್ಲಿ ಬಿಸಿಲಿಗೆ ಒಣಗುತ್ತಾ ಇರುತ್ತದೆ. ಬೇಸಿಗೆ…

Read more
ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ ವರ್ಜ್ಯ

ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ  ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು  ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು. ಬುಡ ಬುಡಿಸುವುದು ಹಳೆ ಪದ್ದತಿ: ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಒಂದು ಬುಡ…

Read more

ಕೊಕ್ಕೋ ಗಿಡ – ಪ್ರೂನಿಂಗ್ ಮಾಡುವ ವಿಧಾನ.

ಕೊಕ್ಕೋ ಸಸ್ಯ ಬೆಳೆಯಲು ಬಿಟ್ಟರೆ ಮರವೇ ಆಗಬಹುದು. ಹಾಗೆಂದು ಯಾವ ಬೆಳೆಗೂ ತೊಂದರೆ ಇಲ್ಲವಾದರೆ  ಅದನ್ನು ಅದರಷ್ಟಕ್ಕೇ ಬೆಳೆಯಲು ಬಿಡಿ. ಇಳುವರಿ ಹೆಚ್ಚುತ್ತದೆ. ಮಿಶ್ರ ಬೆಳೆಯಾಗಿ ಅಡಿಕೆ ತೋಟದಲ್ಲಿ ಬೆಳೆಸುವಾಗ ನಿಮ್ಮ ಒಡಾಟಕ್ಕೆ,ನೀರಾವರಿ, ಕೊಯಿಲು ಮತ್ತು ಇನ್ನಿತರ ಅನುಕೂಲಕ್ಕೆ ಸಮರ್ಪಕವಾಗಿ ಪ್ರೂನಿಂಗ್ ಮಾಡಬೇಕು. ಕೊಕ್ಕೋ ಬೆಳೆ ಕರಾವಳಿ, ಮಲೆನಾಡು, ಅರೆ ಮಲೆನಾಡು, ಹಾಗೆಯೇ  ಅಡಿಕೆ ತೆಂಗು ಬೆಳೆಯುವ ಬಯಲು ನಾಡಿಗೂ ಇದು  ಉತ್ತಮ ಅದಾಯದ  ಬೆಳೆ. ಕೊಕ್ಕೋವನ್ನು  ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ…

Read more
ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ

ತೋಟದಲ್ಲಿ ಫಸಲು ಕಡಿಮೆ- ರೋಗ ಹೆಚ್ಚಾಗಲು ಕಾರಣ ಏನು? .

ಹೆಚ್ಚಿನ ಫಸಲು  ಪಡೆಯಲು ಕೇವಲ ಗೊಬ್ಬರ,ನೀರಾವರಿ ಮಾಡಿದರೆ ಸಾಲದು.  ಬೆಳೆಯ ಉತ್ಪಾದನೆ ಮತ್ತು ಆರೋಗ್ಯಕ್ಕಾಗಿ ಭೂಮಿಯನ್ನು ಸದಾ ಸುಸ್ಥಿತಿಯಲ್ಲಿ  ಇಟ್ಟುಕೊಳ್ಳಲೇ ಬೇಕು. ನೀರು ಹೆಚ್ಚಾಗುವುದರಿಂದ ಮಣ್ಣಿನ ಆರೋಗ್ಯ ಕೆಡುತ್ತದೆ. ಮಣ್ಣಿನ ಸ್ವಾಸ್ತ್ಥ್ಯ ಸುಧಾರಣೆಗೆ ನಾವು ಗೊಬ್ಬರ ಹಾಕುತ್ತೇವೆ, ಉಳುಮೆ ಮಾಡುತ್ತೇವೆ. ಆದರೆ ಇದರಿಂದ ಮಣ್ಣಿನ ಆರೋಗ್ಯ ಸುಧಾರಿಸುತ್ತದೆ ಎಂಬುದು ಭ್ರಮೆ. ಮಣ್ಣಿನಲ್ಲಿ ಸಮರ್ಪಕ ಹಬೆಯಾಡುವಿಕೆ, ಉಷ್ಣತೆಯ  ಸಮತೋಲನ, ಇದ್ದರೆ ಮಾತ್ರ ನಾವು ಕೊಡುವ ನೀರು, ಗೊಬ್ಬರ ಫಲ ಕೊಡುತ್ತದೆ. ಬಹಳ ಜನ ನನ್ನ ತೋಟದಲ್ಲಿ ನೀರು ನಿಲ್ಲುವುದಿಲ್ಲ,…

Read more
areca nut plants

ಅಡಿಕೆಗಿಡ ನೆಡುವಾಗ ಟ್ರೆಂಚ್ ಪದ್ದತಿ ಬೇಡ- ಗಿಡ ಸೊರಗುತ್ತದೆ.

ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ  ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ…

Read more
ಸಮಗ್ರ ಕೃಷಿ ಯಲ್ಲಿ ಆಡು ಕುರಿ ಸಾಕಾಣಿಕೆ ಲಾಭದ್ದು- Goat and sheep farming is profitable in integrated farming

ಸಮಗ್ರ ಕೃಷಿ ಪದ್ದತಿಯಿಂದ ಕೃಷಿಕರ ಜೀವನ ಸುಬಧ್ರ.

ಕೃಷಿ ಮಾಡುವಾಗ ಲಾಭದ ಬೆಳೆಗಳ ಜೊತೆಗೆ ಕೃಷಿ ಆಧಾರಿತ ಉಪಕಸುಬುಗಳಾದ ಹೈನುಗಾರಿಕೆ, ಕೊಳಿ ಸಾಕಾಣಿಕೆ, ಆಡು ಮತ್ತು ಕುರಿ ಸಾಕಾಣಿಕೆ ಮುಂತಾದವುಗಳನ್ನು ಮಾಡಿಕೊಂಡರೆ ಅದು ಸುಸ್ಥಿರ.     ರೈತರು ತಮ್ಮಲ್ಲಿರುವ  ಸಂಪನ್ಮೂಲಗಳನ್ನು ಆಧರಿಸಿ  ಮಣ್ಣಿಗೆ ಹವಾಮಾನಕ್ಕೆ ಹೊಂದಿಕೊಳುವಂತೆ ಬೆಳೆ ಮತ್ತು ಕೃಷಿ ಪೂರಕ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು. ಇಂಥ ಇಂತಹ ಕೃಷಿ ಪದ್ದತಿಗೆ ಮಿಶ್ರಕ್ರೃಷಿ ಅಥವಾ ಸಮಗ್ರಕ್ರೃಷಿ ಪದ್ದತಿ ಎಂದು ಕರೆಯುತ್ತಾರೆ. ಬೇಕಾಗುವ ಸಂಪನ್ಮೂಲಗಳು: ಈ ಕೃಷಿ ಪದ್ದತಿ ಅಳವಡಿಸಲು ರೈತನಿಗೆ  ಬೇಕಾಗುವುದು ಲಭ್ಯವಿರುವ  ನೀರು, ಜಮೀನು, ಕುಟುಂಬದ…

Read more
error: Content is protected !!