
ನ್ಯಾನೋ ಯೂರಿಯಾ – ಉಪಯೋಗ ಮತ್ತು ಅನುಕೂಲ.
ನ್ಯಾನೋಯೂರಿಯಾ ಎಂಬ ಹೊಸ ಹೆಸರು ಬಹಳ ಜನರಿಗೆ ಹೊಸ ಆಕಾಂಕ್ಷೆಯನ್ನು ತಂದಿರಬಹುದು. ಒಂದು ಗೊಂದಲವನ್ನೂ ಉಂಟುಮಾಡಿರಬಹುದು. ಆದಾಗ್ಯೂ ನ್ಯಾನೋ ಯೂರಿಯಾ ಎಂದರೆ ಏನು ಎಂಬುದು ಪ್ರತೀಯೊಬ್ಬ ಕೃಷಿಕನಿಗೂ ತಿಳಿದಿರಬೇಕು. ಮುಂದಿನ ದಿನಗಳಲ್ಲಿ ನಮ್ಮ ತಂತ್ರಜ್ಞರು ಸರಿಯಾಗಿ ಕೆಲಸ ಮಾಡಿದ್ದೇ ಆದರೆ ಕೃಷಿ ಒಳಸುರಿಗಳಾದ ಕೀಟನಾಶಕ, ಶಿಲೀಂದ್ರ ನಾಶಕ , ಬೆಳವಣಿಗೆ ಪ್ರಚೋದಕ, ರಸ ಗೊಬ್ಬರ ಎಲ್ಲವೂ ನ್ಯಾನೋ ತಂತ್ರಜ್ಞಾನದ ಮೂಲಕ ರೈತರಿಗೆ ಸಿಗಲಿದೆ. ಕೃಷಿಯಲ್ಲಿ ನ್ಯಾನೋ ತಂತ್ರಜ್ಞಾನ ಹೊಸತಲ್ಲ. ನ್ಯಾನೋ ಎಂದರೆ ಬುಟ್ಟಿಯಲ್ಲಿ ಕೊಡುವುದನ್ನು ಮುಷ್ಟಿಯಲ್ಲಿ ಕೊಟ್ಟಂತೆ….