ಕಾಡು- ಮನುಕುಲದ ರಕ್ಷಕ- ತಿಳಿದಿರಲಿ.

ಕಾಡು ಮತ್ತು ಜೀವ ವೈವಿಧ್ಯ ಜೊತೆ ಜೊತೆಯಾಗಿ ಸಮತೋಲನದಲ್ಲಿದ್ದರೆ ಎಲ್ಲವೂ ಕ್ಷೇಮವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮತೋಲನ ಹಳಿ ತಪ್ಪಲಾರಂಭಿಸಿದೆ. ಇದಕ್ಕೆ ಪ್ರಕೃತಿಯು ಮನುಕುಲದ ಮೇಲೆ ತನ್ನ ಪ್ರತಿರೋಧವನ್ನೂ ಒಡ್ಡುತ್ತಿದೆ. ಇದು ನಮಗೆಷ್ಟು ಅರಿವಿಗೆ ಬಂದಿದೆಯೋ ತಿಳಿಯದು. ಆದರೆ ಪ್ರಕೃತಿ ಮಾತ್ರ ತನ್ನ ಮೇಲೆ ಏನೇ ಘಾಸಿಯಾದರೂ ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತದೆ. ಇಡೀ ಪ್ರಪಂಚದಲ್ಲಿ ಬುದ್ಧಿ ಉಳ್ಳ ಜೀವಿಗಳಾದ ಮಾನವ ಇದನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ತಪ್ಪನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ. ಮಾರ್ಚ್ 21 ನೇ ದಿನಾಂಕವನ್ನು ವಿಶ್ವ…

Read more
Shade net house

ಪಾಲೀ ಹೌಸ್ ಬೇಕಾಗಿಲ್ಲ – ನೆರಳು ಮನೆಯೇ ಸಾಕು.

ಬೆಳೆ ಬೆಳೆಸುವಾಗ ಎಷ್ಟು ಸಾಧ್ಯವೋ ಅಷ್ಟು ಖರ್ಚು ಕಡಿಮೆ  ಮಾಡಬೇಕು. ಪಾಲೀ ಹೌಸ್  ಎಂದರೆ ಅದು ಆನೆ ಸಾಕಿದಂತೆ. ಅದರ ಬದಲು ತುಂಬಾ ಕಡಿಮೆ ಖರ್ಚಿನಲ್ಲಿ  ಆಗುವ ನೆರಳು ಬಲೆ  ಅಥವಾ ನೆಟ್ ಹೌಸ್  ಒಳಗೆ  ಬಹುತೇಕ ಎಲ್ಲಾ ನಮೂನೆಯ  ಬೆಳೆಗಳನ್ನೂ ಬೆಳೆಯಬಹುದು. ರೈತರಿಗೆ ಇದೇ ಅನುಕೂಲಕರ.   ನೆರಳು ಮನೆ  ಎಂದರೆ ಬೆಳೆಗಳ ಮೇಲ್ಭಾಗದಲ್ಲಿ ನಿರ್ದಿಷ್ಟ ಪ್ರಮಾಣದ ನೆರಳನ್ನು ಒದಗಿಸುವ  ಪರದೆಯನ್ನು  ಹಾಸಿ ಮಾಡಿದ ರಚನೆ. ಇಲ್ಲಿ ನೆರಳು ಎಂಬುದು ಕೆಲವು ಬೆಳೆಗಳಿಗೆ ಬೇಕಾಗುತ್ತದೆಯಾದರೂ  ಇದರ…

Read more

ಕೃಷಿಕರು ಮೋಸಕ್ಕೊಳಗಾಗುವ ಅಮಾಯಕರು.

ಕೃಷಿಕ ಎಂದರೆ ಕಿಸಕ್ಕೆಂದು ನಗೆಯಾಡುವ ಈ ಸಮಾಜ, ಅವರ ಹಣಕಾಸಿನ ಚಲಾವಣೆಯಲ್ಲೇ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ.  ನಯವಾಗಿ ರೈತನಿಗೆ ದೊಡ್ದ ದೊಡ್ದ ಟೋಪಿಯನ್ನೂ ಹಾಕುವವರೂ ಇವರೇ.  ಕೃಷಿಕರ ಹುಟು ಗುಣ:  ‘ಮೋಸ ಹೋಗುವವರು ಇದ್ದ ಕಾರಣ ಮೋಸ ಮಾಡುವವರು ಇರುತ್ತಾರೆ’ ಇದು ಹೇಳಲಿಕ್ಕೆ ಮಾತ್ರ ಆಗುತ್ತದೆಯೇ ಹೊರತು ಮೋಸ ಹೋಗುವುದಲ್ಲ. ಕೃಷಿಕರು ಹುಟ್ಟು ಗುಣದಲ್ಲಿ ಸಜ್ಜನ ಗುಣದವರು. ಇವರು ಯಾರಿಗೂ ವಂಚನೆ ಮಾಡುವುದಿಲ್ಲ. ಬೇರೆಯವರು ಮೋಸ ಮಾಡುತ್ತಾರೆ ಎಂದು ಕಲ್ಪನೆಯನ್ನೂ ಮಾಡುವುದಿಲ್ಲ. ಕೃಷಿಕರಲ್ಲಿ ಲಾಭ ಬಡುಕತನ ಇಲ್ಲ….

Read more

ಕೀಟನಾಶಕಗಳಿಂದ ಜೇನು ನೋಣ ಸಾಯಿಸಬೇಕಾಗಿಲ್ಲ.

ಅಡಿಕೆ ಮರದ ಸಿಂಗಾರದ ಹುಳ ನಿವಾರಣೆಗೆ ಮತ್ತು ಸುಳಿ ತಿಗಣೆ ನಿಯಂತ್ರಣಕ್ಕೆ ರೈತರು ವಿಷ ರಾಸಾಯನಿಕ ಸಿಂಪರಣೆ ಮಾಡಿ ಜೇನು ನೊಣಗಳ ಮಾರಣಹೋಮ ನಡೆಯುತ್ತಿದೆ ಎಂಬ ಆರೋಪವಿದೆ. ನಿಜವಾಗಿ ಇದು ಕೀಟನಾಶಕದ ಫಲವೇ ಅಲ್ಲ ನಮ್ಮ ಅಜ್ಞಾನದ ಫಲವೇ ? ಹೌದು. ನಮ್ಮ ರೈತರು ಮಾಡುವ ಕೆಲವು ಅಚಾತುರ್ಯಗಳಿಂದ  ನಮ್ಮ ಕಣ್ಣೆದುರು  ಜೇನು ನೊಣಗಳು- ಇತರ ಪರಾಗ ಸ್ಪರ್ಷ ಮಾಡುವ ಕೀಟಗಳು ಸಾಯುತ್ತವೆ. ಮುಂದೆ ನಾವೂ ಇದೇ ಕಾರಣದಿಂದ ಅಸ್ವಸ್ಥರಾಗಿ ಸಾಯುವುದೇ. Click to WhatsApp us…

Read more

ಇಲಾಖೆಗಳ ಮುಖಾಂತರ ಕೀಟನಾಶಕ ಮಾರಾಟ!.

ಬೆಳೆಒಳಸುರಿಗಳಾದ ಕೀಟನಾಶಕ – ರೋಗನಾಶಕ- ಕಳೆನಾಶಕ ಬಳಸಿ ಕೃಷಿಕರ ಆರೋಗ್ಯ ಕೆಡುತ್ತದೆ. ಪರಿಸರದ ಜೀವ ವೈವಿಧ್ಯಗಳ ಮೇಲೆ  ತುಂಬಾ ತೊಂದರೆ ಆಗುತ್ತದೆ. ಇದನ್ನು ಹಿತ ಮಿತ ಬಳಸಲು ನಮ್ಮ ದೇಶದ ಕೃಷಿಕರಿಗೆ ವೈಜ್ಞಾನಿಕ ಶಿಕ್ಷಣ ಇಲ್ಲ. ಕಾನೂನು ಕಟ್ಟು ನಿಟ್ಟು ಮಾಡಿದರೆ , ಮದುವೆಯಾಗಿ ಮಕ್ಕಳನ್ನು ಮಾಡಬಾರದು ಎಂದು ತಾಕೀತು ಮಾಡಿದಂತಾತ್ತದೆ. ಇದೆಲ್ಲಕ್ಕೂ ಪರಿಹಾರ ನಮ್ಮ ದೇಶದ ಕೃಷಿ ತೋಟಗಾರಿಕೆ ಅಭಿವೃದ್ದಿ ಇಲಾಖೆಗಳೇ ಇದನ್ನು ರೈತರಿಗೆ ಮಾರಾಟ ಮಾಡುವುದು ಸರಿಯಲ್ಲವೇ?. ಹೊಸ  ಮಸೂದೆ: ಭಾತರ ಸರಕಾರ ಕಳಪೆ…

Read more
ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ

ಆಷಾಢ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ- ಕುಂಭ ಮಾಸಕ್ಕೆ ಸ್ವಾಗತ.

ಆಷಾಢದ ನಂತರ ಬೇಸಿಗೆ- ಮಾಗಿ ನಂತರ ಮಳೆಗಾಲ  ಎನ್ನುತ್ತಾರೆ ಹಿರಿಯರು. ಇದರ ಅರ್ಥ ಕೃಷಿಕರಿಗೆ ಮಾತ್ರ ಅರ್ಥವಾಗಬಲ್ಲದು.ಮಕರ ಸಂಕ್ರಮಣ ಕಳೆದ ತರುವಾಯ ಎಲ್ಲವೂ ಹಚ್ಚ ಹಸುರು.ರೈತನ ಶ್ರಮಕ್ಕೆ ಹವಾಮಾನದ ಬೆಂಬಲ ದೊರೆತಾಗ ಮಾತ್ರ ಅದು ಫಲಪ್ರದವಾಗುತ್ತದೆ. ಕೃಷಿ ಎಂಬ ವೃತ್ತಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ನಮ್ಮ ಹಿರಿಯರು ತಿಳಿದಿದ್ದ ಕೆಲವು ಅನುಭವ ಸೂಕ್ಷ್ಮಗಳನ್ನು ಇಂದಿನ ವಿಜ್ಞಾನ ಅರ್ಥ ಬಿಡಿಸಿ ಜನತೆಗೆ ತಿಳಿಸಿದೆ. ಹಿರಿಯರ ಅನುಭವ ಇಂದಿನ ವಿಜ್ಞಾನಿಗಳ ತಿಳುವಳಿಕೆಗಿಂತ ಇಂದಿಗೂ ಮುಂದೆಯೇ ಇದೆ. ಆಟಿ (ಆಷಾಢ ಮಾಸ) ಕಳೆದರೆ …

Read more

ಇವರಿಗೆ ಉತ್ತರಿಸುವಷ್ಟಾದರೂ ಕೃಷಿಕ ಬುದ್ದಿವಂತನಾಗಬೇಕು.

ನೀವು ಒಂದು ವಾಟ್ಸ್ ಆಪ್ ಗ್ರೂಪ್ ನೋಡಿ. ಫೇಸ್ ಬುಕ್  ಖಾತೆ ತೆರೆಯಿರಿ. ಅಲ್ಲಿಗೆ ಪ್ರಾರಂಭ. ಬೆಳೆ ಬೆಳೆಸುವಾಗ ಯಾವುದಾದರೂ ಒಂದು ಸಂದೇಹವನ್ನು ನಿಮ್ಮ ಮಿತ್ರರುಗಳಲ್ಲಿ  ಹಂಚಿಕೊಂಡರೆ ಸಾಕು ತಕ್ಷಣ ನಿಮ್ಮ ಕಮೆಂಟ್ ಬಾಕ್ಸ್ ಗೆ  call me xxxxxx8x90 ಹೀಗೆ ನೂರಾರು ನಂಬ್ರಗಳ ಜನ ಸಂದೇಶ ಕಳುಹಿಸುತ್ತಾರೆ. ಸಂಪರ್ಕಿಸಿದರೆ ನಿಮ್ಮನ್ನು ಕುಳಿತುಕೊಳ್ಳಲು ಬಿಡದೆ ಸಂಪರ್ಕ ಸಾಧಿಸುತ್ತಾರೆ.     ಇಷ್ಟಲ್ಲದೆ ಕೆಲವರು ನೇರವಾಗಿ ತಮ್ಮ ಉತ್ಪನ್ನಗಳ ಬಣ್ಣ ಬಣ್ಣದ ಬ್ರೋಶರ್ ಗಳನ್ನು ಅಟಾಚ್ ಮಾಡುತ್ತಾರೆ. ಕೆಲವರು…

Read more

ಇದೇ ಫೆಬ್ರವರಿ 5-6-7-8 ನೆನಪಿರಲಿ.

ದೇಶ ಸುತ್ತಿದರೆ ಕೋಶ ಓದಿದ ಫಲವಂತೆ. ಅದೇ ರೀತಿಯಲ್ಲಿ ರೈತರಿಗೆ  ಜ್ಞಾನ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಭೇಟಿ ಕೊಟ್ಟರೆ ಅದು ಅವರ ವೃತ್ತಿಗೆ ತೊಡಗಿಸಿದ ಬಂಡವಾಳ.  ನಿಮ್ಮ ಜ್ಞಾನ ಬಂಡವಾಳವನ್ನು ಹೆಚ್ಚಿಸಬೇಕೆಂಬ ಹಂಬಲ ಇದ್ದಲ್ಲಿ ಇದೇ ತಿಂಗಳ 5 -6-7 ಮತ್ತು 8 ರಂದು  ಹೇಸರಘಟ್ಟಕ್ಕೆ ಭೇಟಿ ಕೊಡಿ. ಸಂಸ್ಥೆಯ ನಿರ್ಧೇಶಕರಾದ ಡಾ| ಎಂ ಆರ್ ದಿನೇಶ್ ರವರು  ನಿಮ್ಮನ್ನು ಆಮಂತ್ರಿಸುತ್ತಾರೆ.     Click here to watch video of IIHR    …

Read more
ಬೆಳೆಗಳಿಗೆ ಹಾನಿ ಮಾಡುವ ಮಂಗ

ಮಂಗಗಳ ಹಾವಳಿ ಹೆಚ್ಚಾಗಲು ಕಾರಣ ಇದು.

ಪರಿಸರದಲ್ಲಿ ಯಾವುದು ಇದ್ದರೆ ಎಲ್ಲದಕ್ಕೂ ಒಳ್ಳೆಯದು ಎಂಬುದು ಪ್ರಕೃತಿಗೆ ಗೊತ್ತಿದೆ. ನಾವು ಪ್ರಕೃತಿಗೆ ಪಾಠ ಕಲಿಸಲು ಹೋಗಿ ಅದು ನಮಗೆ ಪಾಠ ಹೇಳಿದೆ. ತಿನ್ನಲು ಅಹಾರವಿಲ್ಲದೆ ಮಂಗಗಳು ತೋಟಕ್ಕೆ ಬಂದಿವೆ. ಇನ್ನಾದರೂ ಅಕೇಶಿಯಾ, ಮಹಾಘನಿ, ಮಾಂಜಿಯಂ ಮುಂತಾದ ಮರಮಟ್ಟು ಬೆಳೆಸುವುದನ್ನು ಬಿಟ್ಟು ಬಿಡಿ. ಈ ಮರಗಳಿದ್ದಲ್ಲಿ ಮಂಗಗಳಿಗೆ ಆಹಾರ ಇಲ್ಲ. ಅವು ನಮ್ಮತೋಟಕ್ಕೆ ಧಾಳಿ ಮಾಡುತ್ತವೆ.  ಏನು ನಡೆಯುತ್ತಿದೆ: ಕೃಷಿಕರು ಬದುಕಿಗಾಗಿ ಕೃಷಿ ಮಾಡುವವರು. ಅವರ ತಾಳ್ಮೆಗೂ ಒಂದು ಮಿತಿ ಇದೆ. ಇಗ ಮಾನವೀಯತೆಯನ್ನು ಬದಿಗಿಟ್ಟು ಕೃಷಿಕರು…

Read more
ರೈತರು

ರೈತರನ್ನು ಸುಲಿಗೆ ಮಾಡುವ ವ್ಯವಸ್ಥೆ ಹೀಗಿದೆ !

ರೈತರು ಎಂದರೆ ಅವರು ಒಬ್ಬ ವ್ಯಾಪಾರಸ್ಥ ಕೊಟ್ಟದ್ದನ್ನು ನಂಬಿಕೆಯಲ್ಲಿ ತೆಗೆದುಕೊಳ್ಳುವ ಪ್ರವೃತ್ತಿಯವ. ಇದನ್ನು ನಗದೀಕರಣ ಮಾಡಿಕೊಳ್ಳುವವರೇ ಹೆಚ್ಚಿನವರು. ಕಳಪೆ ಗುಣಮಟ್ಟದ , ನಕಲಿ ಉತ್ಪನ್ನಗಳ ಮೂಲಕ ರೈತರನ್ನು ಸದಾ ಸುಲಿಗೆ ಮಾಡಲಾಗುತ್ತಿದೆ. Finolex ಕಂಪೆನಿಯ ಯಾವುದಾದರೂ ಸಾಮಾಗ್ರಿ ಕೇಳಿದರೆ   Phinoleks ಕೊಡುತ್ತಾರೆ. TCM ಬ್ರಾಂಡಿನ ಮೈಲು ತುತ್ತೆ ಕೇಳಿದರೆ VCM, ಕೊಡುತ್ತಾರೆ. . Jain  ಕಂಪೆನಿಯ  ಉತ್ಪನ್ನ ಕೇಳಿದರೆ Lain  ಹೆಸರಿನ ಉತ್ಪನ್ನ ಮಾತ್ರ ಅಂಗಡಿಯಲ್ಲಿ  ಲಭ್ಯವಿರುತ್ತದೆ. ನಮಗೆ ನೈಜ ಸಾಮಾಗ್ರಿ ಹುಡುಕಿಕೊಂಡು ಹೋಗಲು ಬಿಡುವಿಲ್ಲ. ನಮ್ಮ …

Read more
error: Content is protected !!