ತೆಂಗಿನೆಣ್ಣೆ-ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೆಂಗಿನೆಣ್ಣೆಯೂ ವೈರಸ್ ವಿರುದ್ಧ ಕೆಲಸ ಮಾಡುತ್ತದೆ. ಇದು ಕೊರೋನಾ ವೈರಸ್ ಗೆ ಔಷಧಿ ,ತೆಂಗಿನೆಣ್ಣೆ ತಿನ್ನಿ ಎನ್ನುತ್ತಿದ್ದಾರೆ.  ಇದು ಸುಮ್ಮನೆ ಹೇಳಿದ ವಿಚಾರ ಅಲ್ಲ. ಈ ಬಗ್ಗೆ ಕೆಲವು ಅಧ್ಯಯನಗಳು ನಡೆಯುತ್ತಿವೆ.ಇತ್ತೀಚೆಗೆ ಕೆಲವರು ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಲಾರಂಭಿಸಿದ್ದಾರೆ. ಶುದ್ಧ ತೆಂಗಿನೆಣ್ಣೆ ಎಂಬುದು ಅನಾದಿ ಕಾಲದಿಂದಲೂ ಪರಮೌಷಧಿ ಎಂದೇ ಪರಿಗಣಿಸಲ್ಪಟ್ಟಿದೆ.  ಕ್ಕೊಬ್ಬರಿ ಎಣ್ಣೆಯನ್ನು ತಲೆಗೆ ಹಾಕಿದರೆ ಕೂದಲು ಬೆಳೆಯುತ್ತದೆ.  ತುಟಿ ಒಡೆದರೆ ತೆಂಗಿನೆಣ್ಣೆ. ಗಾಯವಾದರೆ ತೆಂಗಿನೆಣ್ಣೆ. ಅಲರ್ಜಿ ಇಂದ ಕಣ್ಣು ಉರಿ, ಮೈ ಉರಿ ಬಂದರೆ…

Read more

ಶ್ರೀಗಂಧದ ಬೆಳೆಗೆ ಆಸರೆ ಸಸ್ಯಗಳು

ಶ್ರೀಗಂಧ ಸಸಿ ಕೊಳ್ಳುವಾಗ ಅದರ ಜೊತೆಗೆ ಒಂದು ತೊಗರಿ ಗಿಡ ಉಚಿತವಾಗಿ ದೊರೆಯುತ್ತದೆ. ಇದು ಯಾಕೆಂದರೆ ಶ್ರೀಗಂಧಕ್ಕೆ ಪಾಸಾಡಿ ( ಜೊತೆ ಸಸ್ಯ) ಇದ್ದರೆ ಮಾತ್ರ ಅದಕ್ಕೆ ಬದುಕು. ಶ್ರೀಗಂಧದ ಬೇರು ಇನ್ನೊಂದು ಸಸ್ಯದ ಬೇರಿನಿಂದ ಆಹಾರವನ್ನು  ಪಡೆದು ಬದುಕುವ ವಿಶಿಷ್ಟ ಸಸ್ಯ. ಹಾಗೆಂದು ಇದು ಬದನಿಕೆ ಸಸ್ಯವಲ್ಲ. ಬದನಿಕೆ ಸಸ್ಯವು  ತಾನು ಆಸರೆ ಪಡೆದ ಸಸ್ಯವನ್ನು ಕೊಲ್ಲುತ್ತದೆ. ಇದು ಸಹಜೀವನ ನಡೆಸುತ್ತದೆ. ಜೊತೆಗೆ ಬೆಳೆದ ಸಸ್ಯವೂ ಬದುಕಿಕೊಳ್ಳುತ್ತದೆ. ಶ್ರೀಗಂಧಕ್ಕೆ ಆಸರೆ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿದ…

Read more

ತೃಣನಾದೆಯಲೋ ಮಾನವಾ.

ಸಮಸ್ತ ಆರ್ಥಿಕ ವ್ಯವಸ್ಥೆಯನ್ನೂ ಕ್ಷಣ ಮಾತ್ರದಲ್ಲಿ ನಾವು ಯಾರೂ ಕಲ್ಪಿಸದ ರೀತಿಯಲ್ಲಿ ಮಟ್ಟ ಹಾಕಿದ್ದು ಪ್ರಕೃತಿಯೇ. ಇನ್ನು ನಾವು ಪ್ರಕೃತಿಯ ಆಜ್ನೆಯಂತೆ ನಡೆಯಬೇಕು. ನಮ್ಮ ಆಟ ಏನೂ ನಡೆಯಲ್ಲ. ಬ್ಯಾಂಕುಗಳಲ್ಲಿ ಹಣ ಇಲ್ಲ. ಜನರ ತಿರುಗಾಟ ಇಲ್ಲ. ಮಾರುಕಟ್ಟೆ ಎಲ್ಲವೂ ಮಲಗಿದೆ. ಅಂಗಡಿ ಬಾಗಿಲುಗಳು ಮುಚ್ಚಿವೆ. ಸಾರಿಗೆಯ ವಾಹನಗಳಿಲ್ಲ. ಎಲ್ಲರೂ ಅವರವರ ಮನೆಯಲ್ಲಿದ್ದಾರೆ. ಇಡೀ ಅರ್ಥ ವ್ಯವಸ್ಥೆಯೇ ಸ್ಥಬ್ದವಾಗಿದೆ. ಇದು ಎಷ್ಟು ದಿನವೋ ಯಾರಿಗೂ ಗೊತ್ತಿಲ್ಲ. ಸಾಂಕ್ರಾಮಿಕ ರೋಗಗಳು ಕೋಟ್ಯಾಂತರ ರೂ.ಗಳನ್ನು ಬ್ಯಾಂಕಿನಲ್ಲಿಟ್ಟವರನ್ನೂ , ಸಾವಿರಾರು ಎಕ್ರೆ…

Read more

ನಮ್ಮ ಬೆಳೆಗಳಲ್ಲಿದೆ ರೋಗ ನಿರೋಧಕ ಶಕ್ತಿ.

ಜಗತ್ತನ್ನೇ ಅಂಜಿಸಿದ ಕೊರೋನಾ ವೈರಸ್ ಖಾಯಿಲೆಗೆ ಭಾರತೀಯರು ಸ್ವಲ್ಪ ಮಟ್ಟಿಗೆ ನಿರೋಧಕ ಶಕ್ತಿಯನ್ನು ಹೊಂದಿದವರೆಂದರೆ ತಪ್ಪಾಗಲಾರದು. ಇಲ್ಲಿನ ಜನ ಶೀತ ವಲಯದ ಜನಕ್ಕಿಂತ ಸ್ವಲ್ಪ ಗಡಸು. ಇಲ್ಲಿ ವಾತಾವರಣ, ಆಹಾರ ಪದ್ದತಿ, ಸಹಜವಾಗಿಯೇ ಮಾನವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ.   ಹಿಂದೆ ದೊಡ್ದ ರೋಗ ( ಸಿಡುಬು) ಬಂದ ಸಮಯದಲ್ಲಿ ಒಂದೊಂದು ಕುಟುಂಬದಲ್ಲಿ ಕೆಲವರು ಸತ್ತೇ  ಹೋಗಿದ್ದರೂ ಕೆಲವರು ಬದುಕಿ ಉಳಿದಿದ್ದರು. ಅದು ಮಾರಾಣಾಂತಿಕವಾಗಿದ್ದರೂ ಸಹ ಮಾನವನ ಅಂತರ್ಗತ ನಿರೋಧಕ ಶಕ್ತಿಯಿಂದ ಕೆಲವರು ಬದುಕಿ ಉಳಿದ…

Read more

ವಿಷ ಮಿಶ್ರಿತ -ನೇಂದ್ರ ಬಾಳೆ ಹಣ್ಣು

ಊಟದ ಹೊತ್ತಾಗಿತ್ತು. ಕೆ ಎಸ್ ಆರ್ ಟಿ ಸಿ ಬಸ್ ನವರ ಊಟದ ಹೋಟೆಲಿನಲ್ಲಿ ಉಣ್ಣಲು ಮನಸ್ಸು ಕೇಳಲಿಲ್ಲ. ಬಾಳೆ ಹಣ್ಣು ತಿನ್ನೋಣ ಎಂದು ಗುಂಡ್ಯದಲ್ಲಿ ಒಂದು ಅಂಗಡಿಯಲ್ಲಿ ಬಾಳೆ ಹಣ್ಣು ಕೇಳಿದರೆ ಅಂಗಡಿಯವನು ಹೇಳುತ್ತಾನೆ, ಈಗ ನೇಂದ್ರ ಬಿಟ್ಟರೆ ಬೇರೆ ಬಾಳೆ ಹಣ್ಣೇ ಇಲ್ಲ. ಒಂದೆಡೆ ಮಂಗಗಳ ಕಾಟ. ಇನ್ನೊಂದೆಡೆ ಬೆಲೆ ಇಲ್ಲ. ಎಲ್ಲರೂ ಹೆಚ್ಚು ಬೆಲೆ  ದೊರೆಯುತ್ತದೆ ಎಂದು ನೇಂದ್ರವನ್ನೇ ಬೆಳೆಯುತ್ತಾರೆ. ಇದರಿಂದಾಗಿ ಸ್ಥಳೀಯ ಬಾಳೆ ಕಾಯಿಯೇ ಕಡಿಮೆಯಾಗಿದೆ.  ಫೋರೇಟ್ ಹಾಕಿದರೆ ಮಂಗಸಹ ಬರುವುದಿಲ್ಲವಂತೆ….

Read more

ಪಪ್ಪಾಯ – ಇದು ಸಂಜೀವಿನಿ ಸಸ್ಯ.

ರೋಗ ಇರಲಿ  ಇಲ್ಲದಿರಲಿ. ಕೆಲವು ಹಣ್ಣು ಹಂಪಲು ಸೊಪ್ಪು ತರಕಾರಿಗಳು ಔಷಧೀಯ ಗಿಡಗಳನ್ನು ಅಲ್ಪ ಸ್ವಲ್ಪಬಳಕೆ ಮಾಡುತ್ತಾ ಇದ್ದರೆ  ದೇಹಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ. ರೋಗ ಬಾರದಂತೆಯೂ, ಬಂದರೆ  ಬೇಗ ಗುಣಮುಖವಾಗುವಂತೆಯೂ ಇದು ನೆರವಾಗುತ್ತದೆ. ಇಂತಹ ಗಿಡಗಳಲ್ಲಿ ಒಂದು ಪಪ್ಪಾಯಿ. ಪಪ್ಪಾಯಿ ಶಕ್ತಿ ಗಿಡ: ಪಪ್ಪಾಯಿ ತಿನ್ನುವಾಗ ಅದರ ಸಿಪ್ಪೆ ಮತ್ತು ಬೀಜಗಳನ್ನು ಎಸೆಯಲಾಗುತ್ತದೆ. ಆದರೆ ಬೀಜದಲ್ಲೂ ಉತ್ತಮ ಔಷಧೀಯ ಗುಣಗಳು ಇವೆ ಎನ್ನುತ್ತಾರೆ. ಪಪ್ಪಾಯ ಬೀಜದಲ್ಲಿ  ಲಿವರ್ ಸಂಬಂಧಿತ ಕಾಯಿಲೆ ದೂರ ಮಾಡುವ ಶಕ್ತಿ…

Read more

ತರಕಾರಿಗಳಲ್ಲಿ ವಿಷ ಹೆಚ್ಚಾಗುತ್ತಿದೆ- ಎಚ್ಚರ!

ಗ್ರಾಹಕರ ಓಲೈಕೆಗೆ ಸರಿಯಾಗಿ ನೋಟ ಚೆನ್ನಾಗಿರಲು ಮಾಡುವ ಉಪಚಾರ ನಮ್ಮನ್ನು ಕೊಲ್ಲುತ್ತದೆ. 2050 ರ ಸುಮಾರಿಗೆ ತರಕಾರಿ ತಿನ್ನುವವರೂ  ಅಧಿಕ ಪ್ರಮಾಣದಲ್ಲಿ ರೋಗಗಳಿಗೆ ತುತ್ತಾಗಿ ಬೇಗ ಸಾಯಬಹುದು, ಅಥವಾ ಅಸ್ವಾಸ್ತ್ಯಕ್ಕೊಳಗಾಗಬಹುದು ಎಂಬ ವರದಿ ಇದೆ.   ಕೃಷಿ ಉಳಿಸುವ ಭರದಲ್ಲಿ ರೈತರು ಬೇರೆ ಪರ್ಯಾಯ ವ್ಯವಸ್ಥೆಗಳಿಲ್ಲದೆ, ಅಪಾಯಕಾರಿಯೋ, ಅಲ್ಲವೋ ಎಂಬುದನ್ನೂ ಅರಿಯದೆ ಬೇರೆ ಬೇರೆ ಕೃಷಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಕೊಯಿಲಿನ ಸಮಯದಲ್ಲೇ  ಅಂತರ್ವ್ಯಾಪೀ ಕೀಟನಾಶಕ – ರೋಗ ನಾಶಕ ಬಳಕೆ ಮಾಡುತ್ತಾರೆ. ಬೆಳೆದವರು ತಾವು ಬೆಳೆದ…

Read more
ಅಕಾಲಿಕ ಮರಣ – ಕೃಷಿರು

ಅಕಾಲಿಕ ಮರಣ – ಕೃಷಿರು ಈ ಸಾಲಿನಲ್ಲಿ ಮೊದಲಿಗರು.

ಆರೋಗ್ಯವಂತರು ಎಂದು ಸಮಾಜ ಗುರುತಿಸಿದ್ದ ರೈತಾಪಿ ವರ್ಗಕ್ಕೆ ಈಗ ಆನಾರೋಗ್ಯ ಅಂಟಿದೆ. ಅನಾರೋಗ್ಯ,ಅಕಾಲಿಕ ಮರಣ ಹೊಂದುವವರೂ ಇವರೇ. ಇದಕ್ಕೆ  ಕೀಟ ನಾಶಕ ಕಾರಣವೇ?. ಹೌದು ಎನ್ನುತ್ತದೆ ಅಧ್ಯಯನಗಳು. ಘಟನೆ: ಅಕಾಲಿಕ ಮರಣ ಹೊಂದುವವರ ಸಾಲಿನಲ್ಲಿ ಕೃಷಿಕರು ಸೇರುತ್ತಿರುವುದು ಒಂದು ದುರಂತವೇ ಸರಿ. ಮಹಾರಾಷ್ಟ್ರದ ಯವತ್ಮಲ್ Yavatmal ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಕೃಷಿಕರು ಪ್ರೊಪೆಫೊನಸ್ ಎಂಬ ಕೀಟನಾಶಕವನ್ನು ಸಿಂಪಡಿಸಿದ ಕಾರಣ,  18 ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರಂತೆ. ಸುಮಾರು 467 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ. ಕೆಲವು…

Read more
ಸಂಪಿಗೆ ಹಣ್ಣು

ಸಂಪಿಗೆ ಹಣ್ಣು – ತಾತ್ಸಾರ ಬೇಡ ಇದು ಹೃದಯ ರಕ್ಷಕ

ಮಕ್ಕಳಾಟಿಕೆಯಲ್ಲಿ ಕಾಡು ಗುಡ್ಡಗಳಲ್ಲಿ ಹಿರಿಯರ ಜೊತೆಗೆ ಸುತ್ತಾಡಿ ತಿನ್ನುತ್ತಿದ್ದ  ಹಣ್ಣು  ಹಂಪಲುಗಳು ಎಷ್ಟೊಂದು ರುಚಿ. ಆ ಭಾಗ್ಯ ಹೊಸ ತಲೆಮಾರಿಗೆ ಇಲ್ಲ. ಮನೆ , ಪೇಟೆ, ಮಾಲುಗಳನ್ನು ಬಿಟ್ಟರೆ ಮತ್ತೇನೂ ಅರಿಯದ ಮುಗ್ಧ ಮಕ್ಕಳು ಮಕ್ಕಳಾಟಿಕೆಯೆ ಯಾವ  ಸುಖವನ್ನೂ ಅನುಭವಿಸಿಲ್ಲ. ಈ ಚಟುವಟಿಕೆ ಅವರ ಆರೋಗ್ಯವನ್ನೂ ಉಳಿಸಿಲ್ಲ. ಮಕ್ಕಳ  ಪ್ರೀತಿಯ  ಹಣ್ಣುಗಳು: ನಾವು ಮಕ್ಕಳಾಟಿಕೆಯಲ್ಲಿ  ಮಾಡಿದ ಕಾರುಬಾರುಗಳು ಅಷ್ಟಿಷ್ಟಲ್ಲ. ಶಾಲೆಗೆ ಹೋದರೂ ನಮಗೆ ಚಿಂತೆ ಬೇರೊಂದರ ಮೇಲೆ. ಶಾಲೆ ಹೋಗುವಾಗಲೂ , ಶಾಲೆ ಬಿಟ್ಟು ಬರುವಾಗಲೂ, ದಾರಿ…

Read more
error: Content is protected !!