ಅಕಾಲಿಕ ಮರಣ – ಕೃಷಿರು ಈ ಸಾಲಿನಲ್ಲಿ ಮೊದಲಿಗರು.

ಅಕಾಲಿಕ ಮರಣ – ಕೃಷಿರು

ಆರೋಗ್ಯವಂತರು ಎಂದು ಸಮಾಜ ಗುರುತಿಸಿದ್ದ ರೈತಾಪಿ ವರ್ಗಕ್ಕೆ ಈಗ ಆನಾರೋಗ್ಯ ಅಂಟಿದೆ. ಅನಾರೋಗ್ಯ,ಅಕಾಲಿಕ ಮರಣ ಹೊಂದುವವರೂ ಇವರೇ. ಇದಕ್ಕೆ  ಕೀಟ ನಾಶಕ ಕಾರಣವೇ?. ಹೌದು ಎನ್ನುತ್ತದೆ ಅಧ್ಯಯನಗಳು.

ಘಟನೆ:

  • ಅಕಾಲಿಕ ಮರಣ ಹೊಂದುವವರ ಸಾಲಿನಲ್ಲಿ ಕೃಷಿಕರು ಸೇರುತ್ತಿರುವುದು ಒಂದು ದುರಂತವೇ ಸರಿ.
  • ಮಹಾರಾಷ್ಟ್ರದ ಯವತ್ಮಲ್ Yavatmal ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಕೃಷಿಕರು ಪ್ರೊಪೆಫೊನಸ್ ಎಂಬ ಕೀಟನಾಶಕವನ್ನು ಸಿಂಪಡಿಸಿದ ಕಾರಣ,  18 ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರಂತೆ.
  • ಸುಮಾರು 467 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ.
  • ಕೆಲವು ಮಂದಿ ನಿರ್ದಿಷ್ಟ ಕಾರಣ ಇಲ್ಲದೆ ಅಸ್ವಾಸ್ತ್ಯಕ್ಕೆ ಬಲಿಯಾಗಿ ಆಸ್ಪತ್ರೆ ಸೇರಿದ್ದಿದೆಯಂತೆ. ಇದು ಎರಡು ವರ್ಷದ ಹಿಂದಿನ ಘಟನೆ.
  • ಸರಕಾರ  ಇದಕ್ಕೆ ಪರಿಹಾರ  ಕೊಟ್ಟಿರಬಹುದು. ಆದರೆ  ಯಾರಿಗೂ  ಹೋದ ಜೀವ ಕೊಡಲಿಕ್ಕಾಗುವುದಿಲ್ಲ.
  • ಅನಾರೋಗ್ಯವನ್ನು ಹಂಚಿಕೊಳ್ಳಲಿಕ್ಕೆ ಆಗುವುದಿಲ್ಲ.
  • ಇಂದು ಕೆಲವು  ಊರುಗಳಿಂದ ಆಸ್ಪತ್ರೆಗಳಿರುವ ಊರಿಗೆ ಕೆ ಎಸ್ ಆರ್ ಟಿ ಸಿ ಬಸ್ ಸೌಲಭ್ಯವನ್ನು ಕಲ್ಪಿಸಿದೆ.
  • ಇದರಲ್ಲಿ  ರೈತಾಪಿ ವರ್ಗ ಒಂದಿಲ್ಲೊಂದು ಅಸ್ವಾಸ್ತ್ಯವನ್ನು  ಹಿಡಿದುಕೊಂಡು ಬರುತ್ತಿದ್ದಾರೆ. ವಾರದ ಏಳು ದಿನವೂ ಬಸ್ ಫುಲ್.

ಬಹಳಷ್ಟು ಕೃಷಿಕರು ನಾವು ಬೆಳೆದ ವಸ್ತುವನ್ನು ತಿನ್ನುವವರು ಬೇರೆ ಅಲ್ಲವೇ? ಆದ ಕಾರಣ ಕೀಟನಾಶಕ ಬಳಸಿದ್ದರಲ್ಲಿ ತಪ್ಪೇನು ಎಂದು ಹೇಳುವುದಿದೆ. ಆದರೆ ವಾಸ್ತವ ಬೇರೆ. ಈ ಕೀಟನಾಶಕದ ಪರಿಣಾಮ ಮೊದಲು ನಮಗೆ. ನಂತರ ತಿನ್ನುವವರಿಗೆ. ಅವರಿಗೆ ಸ್ವಲ್ಪ ಕಡಿಮೆ. ನಮಗೆ ಜಾಸ್ತಿ ತೊಂದರೆ.
ಸಿಕ್ಕ ಸಿಕ್ಕ ಕೀಟನಾಶಕ ಬಳಕೆ

ಸ್ಥಿತಿ ಬದಲಾಯಿತು:

  • ಸಮಾಜದಲ್ಲಿ ಆರೋಗ್ಯವಂತರೆಂದರೆ ರೈತರು ಮತ್ತು ಕೂಲಿ ಕಾರ್ಮಿಕರು ಎಂಬ ಮಾತಿತ್ತು ಅದು ಈಗ ಬದಲಾಗಿದೆ. ಇವರೇ ಆಸ್ಪತ್ರೆಗೆ ಗಿರಾಕಿಗಳಾಗಿದ್ದಾರೆ.
  • ನೀವು ಎಂದಾದರೂ ಸೋನಾ ಮಸೂರಿ ಬೆಳೆಯುವ ರಾಯಚೂರು, ಬಳ್ಳಾರಿಯ ಗಡಿಯಲ್ಲಿ ಪ್ರಯಾಣಿಸಿದರೆ ನಿಮ್ಮ ಮೂಗಿಗೆ ಕೀಟನಾಶಕದ ವಾಸನೆಯೇ ಬಡಿಯುತ್ತದೆ.
  • ಭತ್ತದ ಪೈರಿಗೆ ಯಾವುದೇ ಕೀಟಗಳು ಬರದಿರಲಿ ಎಂದು ಥಿಮೆಟ್ ಎರಚುತ್ತಾರೆ. ಇದರ ವಾಸನೆ ಹೊಟ್ಟೆ ಹಳಸು ಬರುವಷ್ಟು ಹಿಂಸೆ ಕೊಡುತ್ತದೆ. ಅದೆಷ್ಟು ಜನ ಅದನ್ನು ಉಸಿರಾಡಿ ಅಸ್ವಾಸ್ತ್ಯಕ್ಕೊಳಗಾಗುತ್ತರೋ ತಿಳಿಯದು.
  • ಬರೇ ಇಷ್ಟೇ ಅಲ್ಲ. ದಿನ ನಿತ್ಯ ಇಲ್ಲಿ ಚಿತ್ರದಲ್ಲಿ ತೋರಿಸಲಾದ ದೃಷ್ಯ ಕಂಡು ಬರುತ್ತದೆ.
  • ಹತ್ತಿ ಬೆಳೆಯುವ ಪ್ರದೇಶದಲ್ಲೂ ಹಾಗೆಯೇ. ಬಿಟಿ ಹತ್ತಿ ಬಂದು ಇದು ಕೊಂಚ ಕಡಿಮೆಯಾಗಿದೆ.

ಕೃಷಿ ಉತ್ಪಾದನೆ ಹೆಚ್ಚಿಸಿಕೊಂಡು ಸಮಾಜದಲ್ಲಿ ಇತರ ವರ್ಗ ಬದುಕುವಂತೆ ಬಳಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ  ರೈತ ಏನೆಲ್ಲಾ ಕಸರತ್ತು ಮಾಡಿ ಬೆಳೆ ಬೆಳೆಯುತ್ತಿದ್ದಾನೆ. ಇದು ಅವನ ಜೀವಕ್ಕೇ ಸಂಚಕಾರವನ್ನು ತಂದೊಡ್ಡುತ್ತಿದೆ.  

 ಅನಿವಾರ್ಯ ಹೌದು

  • ಬೆಳೆಸಂರಕ್ಷಣೆ ಕೃಷಿಯಲ್ಲಿ ಅಗತ್ಯ. ಸೂಕ್ತ ಕೀಟ- ರೋಗ ನಿಯಂತ್ರಣ ಕ್ರಮ ಕೈಗೊಂಡಲ್ಲಿ ಮಾತ್ರ ಬೆಳೆ ಉಳಿಯುತ್ತದೆ.
  • ಹಾಗೆಂದು ಇದನ್ನು ಮನಬಂದಂತೆ ಬಳಕೆ ಮಾಡುವಂತಿಲ್ಲ. ಅದನ್ನು ಯಾವ ರೀತಿ, ಯಾವ ಸಮಯದಲ್ಲಿ ಪ್ರಯೋಗಿಸಬೇಕು ಎಂದು ತಿಳಿದೇ ಬಳಕೆ ಮಾಡಬೇಕು.
  • ನಮ್ಮಲ್ಲಿ ರೈತರಿಗೆ ಈ ಶಿಕ್ಷಣ ಕೊಡುವ ವ್ಯವಸ್ಥೆಗಳು ಇದ್ದರೂ  ರೈತರಿಗೆ ಅದು ತಲುಪಿಲ್ಲ. ಇದರಲ್ಲಿ  ರೈತರ ತಾತ್ಸಾರವೂ ಇದೆ.  

ಶಿಕ್ಷಣದ ಕೊರತೆ:

  • ಹೆಚ್ಚಿನ ರೈತರು- ಕೃಷಿ ಕೂಲಿ ಕಾರ್ಮಿಕರು ಬೆಳೆ ಸಂರಕ್ಷಕ- ಪೋಷಕಾಂಶಗಳನ್ನು ಉಪಯೋಗಿಸುವಾಗ ಕೈಗೊಳಬೇಕಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿಲ್ಲ.
  • ಯಾವುದೇ ಮೈ ಕೈ ಮುಚ್ಚಿಕೊಳ್ಳದೆ, ರಾಸಾಯನಿಕ ಬೆಳೆ ಒಳಸುರಿಗಳನ್ನು ಬಳಕೆ ಮಾಡುತ್ತಾರೆ.ಕೆಲವು ಕೀಟನಾಶಕವನ್ನು ಸಿಂಪಡಿಸುವಾಗ ಮೈ ಕೈಗೆ  ತಾಗಿದರೆ ಯಾತೆನೆಯ ಉರಿ ಬರುತ್ತದೆ.
  • ಕೆಲವು ಉರಿ ಬಾರದೆ ಇದ್ದರೂ ಶರೀರದ ಒಳಗೆ ಹೋಗುತ್ತದೆ. ಸುರಕ್ಷಾ ಉಡುಗೆ ಬಳಸದೆ ಸಿಂಪಡಿಸಿದರೆ ಅದು ಮನುಷ್ಯನ ಜೀವ ಕೋಶಗಳನ್ನೂ ಕೊಲ್ಲುತ್ತದೆ.
  • ರೈತರಿಗೆ ಉಳಿದ ಎಲ್ಲಾ ಶಿಕ್ಷಣ ಕೊಡುವ ಮುನ್ನ ಬೆಳೆ ಒಳ ಸುರಿಗಳ ಸುರಕ್ಷಿತ ಬಳಕೆ ಬಗ್ಗೆ ತರಬೇತಿ ನೀಡುವುದು ಅಗತ್ಯ.
  • ಬರೇ ಕೀಟನಾಶಕ ರೋಗ ನಾಶಕ ಮಾತ್ರವಲ್ಲ. ರಸ ಗೊಬ್ಬರಗಳೂ ಸಹ ಮಾನವನ ಶರೀರದ ಒಳಗೆ ಸೇರಿಕೊಳ್ಳುತ್ತಿದೆ.
  • ರೈತರಿಗೆ ಈ ಸಸ್ಯ ಸಂರಕ್ಷಕಗಳು ತಮ್ಮ ಶರೀರದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಬಗ್ಗೆ ತಿಳುವಳಿಕೆ ಇಲ್ಲ.
  • ಅದನ್ನು ತಿಳಿಸಬೇಕಾದ ಅಗತ್ಯ ಇದೆ. ಪ್ರತೀಯೊಬ್ಬ ರೈತನೂ ಸುರಕ್ಷಾ ಉಡುಗೆ ಧರಿಸಿಯೇ ಬೆಳೆ ಸಂರಕ್ಷಕಗಳನ್ನು ಬಳಕೆ ಮಾಡಬೇಕು.
  • ಸಮಾಜದಲ್ಲಿ ಕೃಷಿಕರು- ಕೃಷಿ ಕಾರ್ಮಿಕರ ಅಸ್ವಾಸ್ಥ್ಯ ಒಂದು ದುರಂತ.  ಇದು ಬರೇ ಸಮಾಜದ ಒಂದು ವರ್ಗಕ್ಕೆ ಸಂಬಂಧಿಸಿದ್ದಲ್ಲ.
  • ಸಮಸ್ತ ಸಮುದಾಯಕ್ಕೆ  ಸಂಬಂಧಿಸಿದ್ದು. ಆದುದರಿಂದ ರಾಸಾಯನಿಕ ಬೆಳೆ ಒಳಸುರಿಗಳ ಬಳಕೆಯ ಬಗ್ಗೆ ತಿಳುವಳಿಕೆ ನೀಡಬೇಕಾದ್ದು ಅತ್ಯಗತ್ಯ

ವಿಷ ರಾಸಾಯನಿಕಗಳನ್ನು ಅಗತ್ಯ ಇದ್ದರೆ  ಮಾತ್ರ ಬಳಸಿ. ಮನ ಬಂದಂತೆ ಬಳಸ ಬೇಡಿ. ಸುರಕ್ಷಿತ ಉಡುಗೆ ತೊಟ್ಟುಕೊಳ್ಳಿ.
 
 
 

Leave a Reply

Your email address will not be published. Required fields are marked *

error: Content is protected !!