ಸತ್ತ ಅಡಿಕೆ ಮರಗಳನ್ನು ತಕ್ಷಣ ಕಡಿಯದಿದ್ದರೆ ಏನೇನು ಸಮಸ್ಯೆಗಳಾಗುತ್ತದೆ?

ಸತ್ತ ಅಡಿಕೆ ಮರಗಳನ್ನು ತಕ್ಷಣ ಕಡಿಯದಿದ್ದರೆ ಏನೇನು ಸಮಸ್ಯೆಗಳಾಗುತ್ತದೆ?

ಅಡಿಕೆ ಮರಗಳು ಗಾಳಿಗೆ, ರೋಗಕ್ಕೆ ತುತ್ತಾಗಿ ಸತ್ತರೆ ಅಂತಹ ಮರಗಳನ್ನು ತಕ್ಷಣ ಕಡಿದು ಸೂಕ್ತ ವಿಲೇವಾರಿ ಮಾಡಬೇಕು. ಈ ವರ್ಷ ಶಿರ ಕೊಳೆ ಬಂದು, ಗಾಳಿಗೆ ಭಾರೀ ಪ್ರಮಾಣದಲ್ಲಿ ಮರಗಳು ಅರ್ಧರ್ಧ ತುಂಡಾಗಿ ಬಿದ್ದಿದೆ. ರೈತರು ಅದನ್ನು ಹಾಗೆಯೇ ಬಿಡುತ್ತಾರೆ. ಅದನ್ನು ಕಡಿಯದೆ ಹಾಗೆಯೇ ಬಿಟ್ಟರೆ ಏನಾಗುತ್ತದೆ ಈ ಬಗ್ಗೆ  ವಿಸ್ತೃತ ಲೇಖನ ಇದು. ಸತ್ತ ಮರಮಟ್ಟು,ಮನುಷ್ಯ , ಪ್ರಾಣಿ ಯಾವುದಿದ್ದರೂ ಅದನ್ನು ತಕ್ಷಣ ಸೂಕ್ತ ವಿಲೇವಾರಿ ಮಾಡಬೇಕು. ಅದನ್ನು ಹಾಗೆಯೇ ಉಳಿಸಿಕೊಂಡರೆ ಅದರಿಂದ ಜೀವ ಇರುವಂತದ್ದಕ್ಕೆ…

Read more
ಬೇರು ಹುಳ ನಿಯಂತ್ರಣಕ್ಕೆ ಇದು ಸಕಾಲ.

ಬೇರು ಹುಳ ನಿಯಂತ್ರಣಕ್ಕೆ ಇದು ಸಕಾಲ.

ಬೇರು ಹುಳ white grub ಅಡಿಕೆ ಬೆಳೆಗೆ ಅತೀ ದೊಡ್ಡ ಶತ್ರು ಎಂತಲೇ ಹೇಳಬಹುದು. ಇದು ಬರೇ ಅಡಿಕೆ ಬೆಳೆಗೆ ಮಾತ್ರವಲ್ಲ.ಕಬ್ಬು, ತೆಂಗು ಹಾಗೆಯೇ ಇನ್ನಿತರ ಮರಮಟ್ಟು ಬೆಳೆಗಳಿಗೂ ಇದು ತೊಂದರೆ ಮಾಡುತ್ತದೆ. ಮರಗಳ ಕಾಂಡ ಕೊರಕ, ಗೆಲ್ಲು ಕೊರಕ, ಬೇರು ತಿನ್ನುವ ಹುಳಗಳ ತೊಂದರೆ ಈ ಸಮಯದಲ್ಲೇ ಜಾಸ್ತಿ. ಇದನ್ನು ನೀವೂ ಗಮನಿಸಿರಬಹುದು. ಕಾರಣ ಇಷ್ಟೇ. ಈ ಸಮಯದಲ್ಲಿ ಜೂನ್ , ಜುಲೈ ತಿಂಗಳಲ್ಲಿ ದುಂಬಿಗಳು ಮೊಟ್ಟೆ ಇಟ್ಟದ್ದು ಮರಿಗಳಾಗಿ ತಮ್ಮ  ಆಹಾರ ಸೇವನೆ ಕೆಲಸ…

Read more
ಅಡಿಕೆ ಮರಗಳ ಶಿರ ಒಣಗಲು ಕಾರಣ ಮತ್ತು ಪರಿಹಾರ.

ಅಡಿಕೆ ಮರಗಳ ಶಿರ ಒಣಗಲು ಕಾರಣ ಮತ್ತು ಪರಿಹಾರ.

ಅಡಿಕೆ ಮರಗಳಲ್ಲಿ ಶಿರ ಒಣಗಿ ಕೊಳೆಯುವ ಸಮಸ್ಯೆ ಬಹಳ ಹಿಂದಿನಿಂದಲೂ ಇದ್ದದ್ದು. ಕೆಲವು ವರ್ಷ ಹೆಚ್ಚಾಗುತ್ತದೆ. ಕೆಲವು ವರ್ಷ ಗೌಣವಾಗಿರುತ್ತದೆ. ಈ ವರ್ಷ ಇದು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದ್ದು,  ಬೆಳೆಗಾರರು ಯಾಕೆ ಹೀಗಾಗುತ್ತಿದೆ ಎಂದು ಗಾಬರಿಯಾಗಿದ್ದರೆ. ಇದು ಒಂದು ಶಿಲೀಂದ್ರ ರೋಗವಾಗಿದ್ದು,  ಸರಿಯಾದ ನಿರ್ವಹಣೆ ವಿಧಾನಗಳಿಂದ  ಬಾರದಂತೆ ಮಾಡುವುದು ಸಾಧ್ಯ.ಇದನ್ನು ತೆಂಡೆ ರೋಗ ಎಂದು ಕೆಲವರು ಹೇಳುವುದಿದೆ. ತೆಂಡೆ, ಅಥವಾ ಚೆಂಡೆ ರೋಗ ಎಂದರೆ ಮಲೆನಾಡಿನಲ್ಲಿ ಕಂಡುಬರುವ ಹಿಡಿಮುಂಡಿಗೆ ಅಥವಾ ಬಂದ್ ರೋಗ. ಇದು ಶಿರ ಕೊಳೆಯುವ…

Read more
1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.

1 ಎಕ್ರೆಗೆ 1000 ಅಡಿಕೆ ಸಸಿ-ವಿಶಿಷ್ಟ ವಿಧಾನದ ಅಡಿಕೆ ಬೇಸಾಯ.

1 ಎಕ್ರೆ ಅಡಿಕೆ ಬೆಳೆಸುವವರು ಸಾಮಾನ್ಯವಾಗಿ 500 ಅಡಿಕೆ ಸಸಿಗಳನ್ನು ನೆಡುತ್ತಾರೆ. ಅದರ ಬದಲು ಈ ರೀತಿಯ ವಿಶೇಷ ಅಂತರದ ಅಡಿಕೆ ಬೇಸಾಯದಲ್ಲಿ ಹೆಚ್ಚು ವಿಸ್ತೀರ್ಣ ಇಲ್ಲದೆ ಅಡಿಕೆ ಸಸಿಗಳನ್ನು ಹಿಡಿಸಿ ಅಧಿಕ ಫಸಲು ಪಡೆಯಬಹುದು. ಇಲ್ಲಿ ನೀರು, ಗೊಬ್ಬರ, ಶ್ರಮ ಉಳಿತಾಯವಾಗುತ್ತದೆ. ಮುಂದಿನ ದಿನಗಳಲ್ಲಿ ಎದುರಾಗುವ ತೋಟ ನಿರ್ವಹಣೆ ಮೇಲ್ವಿಚಾರಣೆ ಸಮಸ್ಯೆಗೆ ಇದು ಉತ್ತಮ ಬೇಸಾಯ ವಿಧಾನ ಎನ್ನಿಸಬಲ್ಲದು. ಅಡಿಕೆ ತೋಟ ಎಂದರೆ ಸಾಲಾಗಿ ಸಸಿಗಳನ್ನು ನೆಡುವುದು, ಪರಸ್ಪರ ನಿರ್ಧಿಷ್ಟ ಅಂತರ. ಅದರಲ್ಲೂ ಚದರ ಚೌಕ…

Read more
ಕೆಂಪಡಿಕೆ ಧಾರಣೆ 49000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49,000 ಕ್ಕೆ ಏರಿದೆ- ಚಾಲಿ ಸಹ ಸಧ್ಯವೇ ಏರುತ್ತದೆ.

ಕೆಂಪಡಿಕೆ ಧಾರಣೆ 49000 ಸಮೀಪಕ್ಕೆ ತಲುಪಿದೆ. ಇನ್ನೂ ಏರಿಕೆಯಾಗಬಹುದು ಎಂಬ ಸುದ್ದಿಗಳಿವೆ. ಕೆಂಪಡಿಕೆ ಏರಿದರೆ ಸಹಜವಾಗಿ ಚಾಲಿಯೂ ಏರಿಕೆಯಾಗಲೇಬೇಕು. ಈಗಾಗಲೇ ಚಾಲಿ ದಾರಣೆ ತುಸು ಏರಲಾರಂಭಿಸಿದೆ. ಇನ್ನೂ ಸ್ವಲ್ಪ ಏರಿಕೆ ಸಾಧ್ಯತೆಗಳಿವೆ. ಉತ್ಪಾದನಾ ಕ್ಷೇತ್ರದಿಂದ ಬೇಡಿಕೆ ಪ್ರಾರಂಭವಾಗಿದೆ. ಧೀರ್ಘ ಕಾಲದವರೆಗೆ ದರ ಇಳಿಕೆ ಹಾದಿಯಲ್ಲಿದ್ದ ಕಾರಣ ಈ ಬಾರಿ ದರ ಏರಿಕೆ ಸ್ವಲ್ಪ ಹೆಚ್ಚು ಸಮಯದ ತನಕ ಮುಂದುವರಿಯಬಹುದು ಎಂಬ ಲೆಕ್ಕಾಚಾರ ಇದೆ. ಕೆಂಪಡಿಕೆ ಮಾರುಕಟ್ಟೆಯಲ್ಲಿ ಖರೀದಿ ಉತ್ಸಾಹ ಇದೆ. ಹಾಗಾಗಿ ದರ ಸ್ವಲ್ಪ ಸ್ವಲ್ಪವೇ ಏರಿಕೆಯಾಗುತ್ತಿದೆ….

Read more
ಏರಿಕೆಯತ್ತ ಅಡಿಕೆ – ಕರಿಮೆಣಸು ಧಾರಣೆಯೂ ಏರಿಕೆ.

ಏರಿಕೆಯತ್ತ ಅಡಿಕೆ – ಕರಿಮೆಣಸು ಧಾರಣೆಯೂ ಏರಿಕೆ.   

ಅಡಿಕೆ ಧಾರಣೆ ಇನ್ನೇನು ನೆಗೆದು ಬೀಳುತ್ತದೆಯೋ ಎಂಬ ಅನುಮಾನ ಉಂಟಾಗಿತ್ತು.ಅದರೆ ಕೆಲವೇ ದಿನದಲ್ಲಿ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಜೊತೆಗೆ ಕರಿಮೆಣಸೂ ಸಹ. ನಿನ್ನೆಯೇ ಖಾಸಗಿ ವರ್ತಕರು ಹಳೆ ಅಡಿಕೆ, ಡಬ್ಬಲ್ ಚೋಳ್ ಹಾಗೂ ಹೊಸ ಅಡಿಕೆಗೆ ದರ ಎರಿಸಿದ್ದಾರೆ. ಇಂದು ಕ್ಯಾಂಪ್ಕೋ ಸಹ ಏರಿಕೆ ಮಾಡಿದೆ. ಕೆಂಪಡಿಕೆ ಮಾರುಕಟ್ಟೆ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಅದೂ ಸ್ವಲ್ಪ ಏರಿಕೆ ಆಗುವ ಸಂಭವ ಇದೆ. ಏರಿಕೆಗೆ ಕಾರಣ ಅಡಿಕೆ ಅವಕ ಕಡಿಮೆಯಾದದ್ದು ಎನ್ನುತ್ತಾರೆ ವರ್ತಕರು. ಅಡಿಕೆ ಧಾರಣೆ ಇಳಿಕೆಯಾದಾಗ …

Read more
ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಬೆಳೆಯಲ್ಲಿ ಸಸ್ಯ ಹೇನು ನಿಯಂತ್ರಣ

ಅಲಸಂಡೆ ಬೆಳೆಗೆ ಸಸ್ಯ ಹೇನು ಎಂಬ ಕೀಟ ಭಾರೀ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡರೆ ಅಧಿಕ ಲಾಭದ  ಸರ್ವ ರೂತು ತರಕಾರಿ ಎಂದರೆ ಅಲದಂಡೆ. ಈ ಕೀಟವನ್ನು ರಾಸಾಯನಿಕವಾಗಿ, ಜೈವಿಕವಾಗಿ ಹಾಗೆಯೇ ರಾಸಾಯನಿಕ ಬಳಸದೆ ಯಾವ ಯಾವ ವಿಧಾನದಲ್ಲಿ ನಿಯಂತ್ರಣ ಮಾಡಬಹುದು ಎಂಬುದನ್ನು ನೋಡೋಣ. ಅಲಸಂಡೆ ಮಳೆಗಾಲದಲ್ಲಿ – ಚಳಿಗಾಲದಲ್ಲಿ ಬೇಸಿಗೆಯಲ್ಲಿ  ಬೆಳೆಯಬಹುದಾದ ಉತ್ತಮ ತರಕಾರಿ ಬೆಳೆಯಾಗಿದ್ದು ಈ ಬೆಳೆಗೆ ಬರುವ ಪ್ರಮುಖ ಕೀಟ ಹೇನು. ಈ ಹೇನು  ಎಲೆಗಳಿಗೆ ಬಾಧಿಸಿ…

Read more
ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಹಾವಳಿ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಹೇಗೆ? ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ, ಕೀಟಗಳಿಂದಲೂ  ಪ್ರಭಲವಾದದ್ದು  ಕೆಂಪು ಮೂತಿ ದುಂಬಿ…

Read more
ಎಲೆಚುಕ್ಕೆ ರೋಗ ಸಿಂಪರಣೆಯಿಂದ ವಾಸಿಯಾಗುವುದಿಲ್ಲ. ಯಾಕೆ ಗೊತ್ತೇ?

ಸಿಂಪರಣೆಯಿಂದ ಎಲೆ ಚುಕ್ಕೆರೋಗ ವಾಸಿ ಅಸಾಧ್ಯ. ಯಾಕೆ?

ಅಡಿಕೆಗೆ ಬಾದಿತವಾದ ಎಲೆ ಚುಕ್ಕೆರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ.  ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ ಶಿಲೀಂದ್ರ ನಾಶಕ- ದುಬಾರಿ ಕೂಲಿ ಸಂಭಾವನೆಯೊಂದಿಗೆ ಎಲೆಚುಕ್ಕೆ ರೋಗ ಓಡಿಸುವ ರೈತರ ಶ್ರಮ ಹೇಳತೀರದು. ಎಲೆ ಚುಕ್ಕೆ ರೋಗವನ್ನು ಅಲ್ಪ ಕಾಲದ ತನಕ ಹತೋಟಿ ಮಾಡಬಹುದೇ ಹೊರತು ಇಲ್ಲದಂತೆ ಮಾಡಲು  ಪ್ರಕೃತಿಯೇ ಸಹಕರಿಸಬೇಕು. ಎಲೆ ಚುಕ್ಕೆರೋಗ ಅಡಿಕೆ ಬೆಳೆಗಾರರ ಪಾಲಿಗೆ ಇಷ್ಟು ದೊಡ್ಡ …

Read more
ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ಹಾಸ್ ತಳಿಯನ್ನು ಹೇಗೆ ಬೆಳೆಯಬೇಕು

ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ಹಾಸ್ ತಳಿಯನ್ನು ಹೇಗೆ ಬೆಳೆಯಬೇಕು?

ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಬೆಳೆಯಬಹುದು. ಈ ತಳಿಯ ಬೆಣ್ಣೆ ಹಣ್ಣಿಗೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಹಾಗಾಗಿಯೇ ಇದಕ್ಕೆ ಉತ್ತಮ ಬೆಲೆ ಮತ್ತು ಬೇಡಿಕೆ. ಹಾಗಾದರೆ ಹ್ಯಾಸ್ ತಳಿ ಏನು, ಇದನ್ನು ಎಲ್ಲೆಲ್ಲಿ ಬೆಳೆದರೆ ಮಾತ್ರ ಫಲ ಪಡೆಯಬಹುದು ಎಂಬುದನ್ನು ತಿಳಿಯೋಣ. ಬೆಣ್ಣೆ ಹಣ್ಣು, ಅವಕಯಾಡೋ,ದಲ್ಲಿ ಹಲವಾರು ತಳಿಗಳಿವೆ. ಗಾತ್ರದಲ್ಲಿ, ಬಣ್ಣದಲ್ಲಿ, ರಚನೆಯಲ್ಲಿ  ಇರುವ ವ್ಯತ್ಯಾಸಕ್ಕನುಗುಣವಾಗಿ ತಳಿಗಳಿಗೆ ನಾಮಕರಣ…

Read more
error: Content is protected !!