ಬದನೆಯ ಕಾಯಿಗಳು ಯಾಕೆ ಕೊಳೆಯುತ್ತವೆ.
ಬದನೆ ಪ್ರಮುಖ ತರಕಾರಿ ಬೆಳೆಯಾಗಿದ್ದು, ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಇದನ್ನು ಬೆಳೆಸುತ್ತಾರೆ. ಹೆಚ್ಚಿನ ಕೃಷಿಕರು ಅಧಿಕ ಬೇಡಿಕೆ –ಬೆಲೆ ಕಾರಣಕ್ಕೆ ನಾಟಿ ತಳಿಯನ್ನೇ ಬೆಳೆಸುತ್ತಿದ್ದು, ಇತ್ತೀಚಿಗಿನ ಬೇಸಾಯ ಕ್ರಮ, ಹವಾಮಾನದಿಂದಾಗಿ ಬೆಳೆಗೆ ಸೊರಗು ರೋಗದ ಬಾಧೆ ಅಧಿಕವಾಗಿದೆ. ಇದರಿಂದ ಕಾಯಿ ಕೊಳೆಯುವಿಕೆ ಹಚ್ಚಾಗುತ್ತದೆ. ಹೆಚ್ಚಿನ ಬೆಳೆಗಾರರು ಸಣ್ಣ ಮತ್ತು ಅತೀ ಸಣ್ಣ ಬೆಳೆಗಾರರಾಗಿದ್ದು ಇದು ರೋಗವೋ – ಕೀಟವೂ ಎಂಬುದರ ಜ್ಞಾನ ಹೊಂದಿರುವುದಿಲ್ಲ. ಸಮೀಪದ ಗೊಬ್ಬರ– ಕೀಟನಾಶಕ ಮಾರಾಟ ಅಂಗಡಿಯವರ ಸಲಹೆಯ ಮೇರೆಗೆ ಅದಕ್ಕೆ ಉಪಚಾರ …