ತೆಂಗು- 4 ವರ್ಷಕ್ಕೆ ಇಳುವರಿ ಪ್ರಾರಂಭವಾಗಲು ಹೇಗೆ ಸಾಕಬೇಕು?
ತೆಂಗಿನ ಸಸಿ ನೆಟ್ಟು ನಂತರ ಎಲ್ಲಾ ನಿರ್ವಹಣೆಯನ್ನೂ ಚಾಚೂ ತಪ್ಪದೆ ಮಾಡುತ್ತಾ ಬಂದರೆ ಅದು 4 ನೇ ವರ್ಷಕ್ಕೆ ಹೂ ಬಿಟ್ಟು 5 ವರ್ಷಕ್ಕೆ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಹೈಬ್ರೀಡ್ ತಳಿಗಳು ನಾಲ್ಕನೇ ವರ್ಷಕ್ಕೇ ಫಲ ಕೊಡಲು ಪ್ರಾರಂಭವಾಗುತ್ತದೆ. ನಾವೆಲ್ಲಾ ತೆಂಗಿನ ಸಸಿ ನೆಡುತ್ತೇವೆ. ಫಲ ಬರುವ ತನಕ ಆರೈಕೆ ಮಾಡಲು ಉದಾಸೀನ ಮಾಡುತ್ತೇವೆ. ಫಲ ಬಂದ ನಂತರ ಹೆಚ್ಚು ಇಳುವರಿ ಬೇಕು ಎಂದು ಗೊಬ್ಬರ ಕೊಡುವ ಉತ್ಸಾಹ ತೋರುತ್ತೇವೆ. ಆದರೆ ಇದು ಸೂಕ್ತ ಕ್ರಮ ಅಲ್ಲ. ಸಸಿ ನೆಟ್ಟಾದಾಗಿನಿಂದ…