ತೆಂಗಿನ ನುಶಿ ಪೀಡೆಗೆ ಗೊಬ್ಬರದಲ್ಲೇ ಔಷಧಿ ಇದೆ.

[et_pb_section][et_pb_row][et_pb_column type=”4_4″][et_pb_text]

ತೆಂಗಿನ ನುಶಿ ಪೀಡೆ ಎಂಬುದು ಬಹಳ ಹಿಂದಿನಿಂದಲೂ ಇದ್ದಂತಹ  ತೊಂದರೆ . ಈಗಿನ ವಾತಾವರಣ ಮತ್ತು ನಮ್ಮ ಬೇಸಾಯ ಕ್ರಮದಿಂದ ಈ ಕೀಟ ಸಮಸ್ಯೆ ಸ್ವಲ್ಪ ಹೆಚ್ಚಾಗಲಾರಂಭಿಸಿದೆ. ಇದನ್ನು ಬೇಸಾಯ ವಿಧಾನದಲ್ಲೇ ನಿಯಂತ್ರಣಕ್ಕೆ  ತರುವುದು ಉತ್ತಮ ವಿಧಾನ.

coconut mite attach
  • ಪರಾಗ ಸ್ಪರ್ಷ ಹೊಂದಿ ಕಾಯಿ ಸೆಟ್ ಆಗುವ ಹಂತದಲ್ಲಿ ಮಿಡಿ ಕಾಯಿಯ ಮೇಲೆ ಒಂದು ರೀತಿಯ ಮೈಟ್ ಅಥವಾ ನುಶಿ ಪ್ರವೇಶಿಸುತ್ತದೆ.
  • ಅದು ಪುಷ್ಪದಳದ ಒಳ ಸೇರಿ  ಕಾಯಿ ಬೆಳೆಯುತ್ತಿದ್ದಂತೆ ಕಲೆಗಳ ಮೂಲಕ  ಗೋಚರಕ್ಕೆ ಬರುತ್ತದೆ.
  • ಎಳೆಯ ಕಾಯಿಗಳ ಮೇಲ್ಮೈಯಲ್ಲಿ ಬಿಳಿ ಗೆರೆಗಳು ಕಾಣಿಸಿಕೊಂಡು, ಕ್ರಮೇಣ ಅದು ಹಳದಿ ಮಚ್ಚೆಯಾಗಿ  ಎಳನೀರಿನ ಹಂತಕ್ಕೆ ಬರುವಾಗ ಅದು ಕಂದು ಬಣ್ಣಕ್ಕೆ ತಿರುಗುತ್ತದೆ.
  • ಕಾಯಿಯ ಮೇಲ್ಮೈಯಲ್ಲಿ ಸಿಪ್ಪೆ ಒರಟಾಗಿರುವ ಕಲೆ ಕಾಣುತ್ತದೆ. ಕೆಲವೊಮ್ಮೆ ತೀವ್ರವಾಗಿದ್ದರೆ ಒಂದು ಹೂ ಗೊಂಚಲಿನ ಕೆಲವು ಕಾಯಿಗಳು ಮಿಡಿ ಹಂತದಲ್ಲೇ ಉದುರುತ್ತವೆ.

ತೆಂಗಿನ ನುಶಿ ಒಂದು ಈ ಕೀಟ:

injury by mite
  • ಇದನ್ನು ನುಶಿ ರೋಗ ಎನ್ನುತ್ತಾರೆ. ಇದು ರೋಗ ಅಲ್ಲ. ಒಂದು ಕೀಟ ಅದನ್ನು ನುಶಿ ಪೀಡೆ ಎಂದು  ಕರೆಯಲಾಗುತ್ತದೆ.
  • ಇದು ಬರೇ ತೆಂಗು ಮಾತ್ರವಲ್ಲ ಅಡಿಕೆ ಮಿಡಿಗಳಿಗೂ ಕೆಲವೊಮ್ಮೆ ತೊಂದರೆ ಮಾಡಿ ಮಿಡಿ ಕಾಯಿಗಳು ಉದುರುತ್ತವೆ.
  • ಈ ನುಶಿ ಅಥವಾ ಮೈಟ್ ನ ಜೀವನಾವಧಿ 7-10  ದಿನಗಳು.  ಇದನ್ನು ಬರಿ ಕಣ್ಣಿಗೆ ಕಾಣಲು ಸಾಧ್ಯವಿಲ್ಲ.
  • ಸೂಕ್ಷ್ಮದರ್ಷಕದಲ್ಲಿ ಮಾತ್ರ ಇದನ್ನು ಕಾಣಬಹುದು. ಈ ಕೀಟದ ಶಿರ ಭಾಗದಲ್ಲಿ ಸೂಜಿ ಮೆನೆಯಾಕಾರದ  ಬಾಯಿ ಮತ್ತು  ಹೊಟ್ಟೆಯ ಭಾಗದಲ್ಲಿ ಎರಡು ಕಾಲುಗಳಿರುತ್ತವೆ.
  • ಇದೀ ಶರೀರದಲ್ಲಿ ಒತ್ತೊತ್ತಾಗಿ ಹರಿತವಾದ ರೋಮಗಳು ಇರುತ್ತವೆ.  ಹೆಣ್ಣು ನುಶಿ ತನ್ನ ಜೀವನದುದ್ದಕೂ ಸುಮಾರು 100-150 ರಷ್ಟು ಮೊಟ್ಟೆಗಳನ್ನು  ಇಡುತ್ತವೆ.
  • ಈ ನುಶಿ ಬರೇ ಕಾಯಿ ಮಾತ್ರವಲ್ಲ ಹೂ ಗೊಂಚಲಿನ ದಳಗಳಲ್ಲಿ, ಮತ್ತು ಎಳೆ ಭಾಗಗಳಲ್ಲೆಲ್ಲಾ ಇರುತ್ತದೆ.
  • ಇದು ಗಾಳಿಯ ಮೂಲಕ ಹರಡುತ್ತದೆ.  ವಾತಾವರಣದ ತಾಪಮಾನ 32 ಡಿಗ್ರಿಯಿಂದ ಮೇಲಕ್ಕೇರಿದಾದಾಗ ಹೆಚ್ಚು ಚಟುವಟಿಕೆ ಪ್ರಾರಂಭಿಸಿ ತಾಪಮಾನ ಹೆಚ್ಚಾದಂತೆ ಹಾನಿಯೂ ಹೆಚ್ಚಾಗುತ್ತದೆ.
the scarch by mite

ತೆಂಗಿನ ನುಶಿ ನಿರ್ವಹಣೆ:

  • ನಮ್ಮ ಹಿರಿಯರು ತೆಂಗಿನ ಮರದ ಶಿರ ಭಾಗವನ್ನು ಕಾಯಿ ತೆಗೆಯುವ ಸಮಯದಲ್ಲಿ ಸ್ವಚ್ಚ ಮಾಡುತ್ತಿದ್ದರು. ಈಗ ಆ ಅಭ್ಯಾಸ ಹೋಗಿದೆ.
  • ಶುಚಿಗೊಳಿಸಿದಲ್ಲಿ ಇದರ ಹಾವಳಿ ಕಡಿಮೆ ಎನ್ನುತ್ತಾರೆ ವಿಜ್ಞಾನಿಗಳು.
  • ವರ್ಷಕ್ಕೆ ಮೂರು  ಬಾರಿ (ಎಪ್ರೀಲ್- ಮೇ, ಸಪ್ಟೆಂಬರ್ – ಅಕ್ಟೋಬರ್, ಜನವರಿ ಫೆಬ್ರವರಿ) 4 ಮಿಲಿ ಅಜ಼ಡಿರಕ್ಟಿನ್  ಬೇವು ಮೂಲದ ಕೀಟ ನಾಶಕ  ಸಿಂಪಡಿಸಿದರೆ ಹತೋಟಿ ಆಗುತ್ತದೆಯಂತೆ.
  • ಇದಲ್ಲವಾದರೆ ಬೇವಿನ ಎಣ್ಣೆ 20 ಮಿಲಿ+ 20 ಗ್ರಾಂ ಬೆಳ್ಳುಳ್ಳಿ, ಮತ್ತು 5  ಗ್ರಾಂ ಸಾಬೂನನ್ನು 1  ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬಹುದು.
  • 200 ಮಿಲಿ ಪಾಮೆಣ್ಣೆ, 5 ಗ್ರಾಂ ಗಂಧಕ,  ಮತ್ತು 12  ಗ್ರಾಂ ಸಾಬೂನು  ಇಷ್ಟನ್ನು 1 ಲೀ . ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
  • ಹಿರ್ಸುಟೇಲ್ಲಾ ಥಾಮ್ಸಾನಿ ಎಂಬ ಶಿಲೀಂದ್ರವು ಈ ಕೀಟಕ್ಕೆ ಮಾರಕವಾಗುತ್ತದೆ. ಇದನ್ನು ಮರದ ಹೂ ಗೊಂಚಲು ಸೇರಿದಂತೆ ಶಿರ ಭಾಗಕ್ಕೆ ವರ್ಷಕೆ ಮೂರು ಬಾರಿ ಸಿಂಪರಣೆ ಮಾಡಿದರೆ ಶೇ. 80 ನುಶಿ ಪೀಡೆ ಕಡಿಮೆಯಾಗುತ್ತದೆ.
  • ಇದನ್ನು ವಾತಾವರಣ ತಂಪು ಇರುವ ಸಮಯದಲ್ಲಿ ಬಳಸಿದರೆ ಮಾತ್ರ ಫಲ ಹೆಚ್ಚು.
  • ಮರವೊಂದಕ್ಕೆ 50 ಕಿಲೋ ಸಾವಯವ ಗೊಬ್ಬರ, 5 ಕಿಲೋ ಬೇವಿನ ಹಿಂಡಿ ಮತ್ತು ಶೀಫಾರಿತ ಪ್ರಮಾಣದ ಪೋಷಕಗಳನ್ನು ಬಳಸಿದರೆ ಬಾಧೆ ಕಡಿಮೆಯಾಗುತ್ತದೆ.
  • ಕಲ್ಪ ಹರಿತ ಎಂಬ ತಳಿ ಈ ನುಶಿಯ ಬಾಧೆಗೆ ಹೆಚ್ಚು ಬಾಧಿತವಾಅಗುವುದಿಲ್ಲ. ಅದನ್ನು ಬೆಳೆಸಬೇಕು ಎನ್ನುತ್ತರೆ.
here no mite because of all nutrient supply

 ಹೀಗೆ  ಗೊಬ್ಬರ ಕೊಡಿ:

  • ತೆಂಗಿನ ಮರಕ್ಕೆ 500 ಗ್ರಾಂ ಸಾರಜನಕ, 320  ಗ್ರಾಂ ರಂಜಕ ಮತ್ತು 1200  ಗ್ರಾಂ ಪೊಟ್ಯಾಶ್ ಗೊಬ್ಬರ ವನ್ನು ಮೂರು ವಿಭಜಿತ ಕಂತು ಮಾಡಿಕೊಳ್ಳಿ
  •  ಮಳೆಗಾಲ ಪೂರ್ವದಲ್ಲಿ 350  ಗ್ರಾಂ ಯೂರಿಯಾ, 1 ಕಿಲೋ ಶಿಲಾ ರಂಜಕ ಅಥವಾ ಸೂಪರ್ ಫೋಸ್ಫೇಟ್ ಮತ್ತು 700  ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಿ.
  • ಮಳೆಗಾಲ ಮುಗಿಯುತ್ತಿರುವಾಗ 850- 1000  ಗ್ರಾಂ  20:20:0-13   ಮತ್ತು 700  ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಿ.
  • ಬೇಸಿಗೆಯಲ್ಲಿ ಮತ್ತೆ 350 ಗ್ರಾಂ ಯೂರಿಯಾ ಮತ್ತು 700  ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಕೊಡಿ.
  • 20:20:0-13   ರಲ್ಲಿ ಇರುವ ಗಂಧಕ ಮತ್ತು ಗರಿಷ್ಟ ಪೊಟ್ಯಾಶಿಯಂ ಗೊಬ್ಬರವು ನುಶಿಯ ಕಾಟದಿಂದ ಸಸಿಯನ್ನು ರಕ್ಷಿಸುತ್ತದೆ.
  • ಗಂಧಕವು ಕೀಟ ರೋಗ ನಿರೋಧಕ ಶಕ್ತಿ ಕೊಡಬಲ್ಲ ಪೋಷಕಾಂಶ. 20:20:0-13 ಇದರ ಲಭ್ಯತೆ ಇಲ್ಲದಿದ್ದರೆ  ಮೆಗ್ನಿಶೀಯಂ ಸಲ್ಫೆಟ್- ಜಿಂಕ್ ಸಲ್ಫೆಟ್  ಬಳಸಿದರೂ  ಸಾಕು.
  • ಇದಲ್ಲದೆ ಒಮ್ಮೆ ಫೆಬ್ರವರಿಯಲ್ಲಿ ಮರದ ಶಿರದ ಎಳೆ ಭಾಗಗಳಿಗೆ ಬೀಳುವಂತೆ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪಡಿಸಿರಿ.

ಎಳೆಯ ಗಿಡಗಳಾಗಿದ್ದರೆ , ಗರಿಯ ಮತ್ತು ಗೊಂಚಲು ಭಾಗಕ್ಕೆ ಬೇಸಿಗೆಯಲ್ಲಿ ಪವರ್ ಸ್ಪ್ರೇಯರ್ ಮೂಲಕ ನೀರನ್ನು ಪ್ರೆಷರ್ ನಲ್ಲಿ ಬಿಡಿ. ತಂಪು ಆದಷ್ಟು ನುಶಿ ಕಾಟ ಕಡಿಮೆಯಾಗುತ್ತದೆ.

ಈ ನುಶಿ ಪೀಡೆಗೆ ತೆಂಗು ಬೆಳೆಗಾರರು ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇದು ಕೆಲವೊಮ್ಮೆ ಮಾತ್ರ ಹೆಚ್ಚು ಕಂಡುಬಂದರೂ ಅಂತಹ  ಸಮಸ್ಯೆ ಇಲ್ಲ. ಇಳುವರಿ ಮೇಲೆ ಇದರ ಪರಿಣಾಮ ಶೇ. 5-10 ಮಾತ್ರ. ಎಳನೀರಿಗೆ ಕೊಡುವಾಗ ಮಾತ್ರ ಬೆಲೆ ಕಡಿಮೆಯಾಗುತ್ತದೆ.

[/et_pb_text][/et_pb_column][/et_pb_row][/et_pb_section]

Leave a Reply

Your email address will not be published. Required fields are marked *

error: Content is protected !!