ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಹಾವಳಿ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಹೇಗೆ? ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ, ಕೀಟಗಳಿಂದಲೂ  ಪ್ರಭಲವಾದದ್ದು  ಕೆಂಪು ಮೂತಿ ದುಂಬಿ…

Read more
ಕುರುವಾಯಿ ದುಂಬಿ

ಕುರುವಾಯಿ ದುಂಬಿಯ ಕಾಟ ಹೆಚ್ಚಾಗಲು ಕೊಟ್ಟಿಗೆ ಗೊಬ್ಬರ ಕಾರಣ

ಯಾವಾಗಲೂ  ಕತ್ತಲಾಗುತಲೇ ನಿಮ್ಮ ಮನೆಯ ವಿದ್ಯುತ್ ದೀಪಕ್ಕೆ  ಒಂದು ದೊಡ್ದ ದುಂಬಿ ಬಂದು ನೆಲಕ್ಕೆ  ಬೀಳುತ್ತದೆ. ಅದರಲ್ಲಿ  ಹೆಚ್ಚಿನದು ತೆಂಗಿನ ಮರದ ಸುಳಿಯನ್ನು ಕೊರೆಯುವ ಕುರುವಾಯಿ  ದುಂಬಿಯಾಗಿರುತ್ತದೆ. ಇದು ವಂಶಾಭಿವೃದ್ದಿಯಾಗುವುದು ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಗೊಬ್ಬರದಲ್ಲಿ. ಕುರುವಾಯಿ ನಿಯಂತ್ರಣವಾಗಬೇಕಿದ್ದರೆ ಸಾವಯವ ಗೊಬ್ಬರವನ್ನು  ಉಪಚರಿಸಿ ಬಳಕೆ ಮಾಡಬೇಕು. ತೆಂಗಿನ ಮರವನ್ನು ಕೊಲ್ಲದೇ, ಅದನ್ನು ಏಳಿಗೆಯಾಗಲು ಬಿಡದ ಒಂದು ಸಾಮಾನ್ಯ ಕೀಟ ಕುರುವಾಯಿ. ನಮ್ಮ ಹಿರಿಯರು ಹೇಳುವುದಿದೆ, ಒಂದು ಕುರುವಾಯಿ ಕೊಂದರೆ 1 ದೇವಾಸ್ಥಾನ ಕಟ್ಟಿದ ಪುಣ್ಯವಿದೆ ಎಂದು….

Read more
ತೆಂಗಿನ ಸಸಿ ಆರೋಗ್ಯವಾಗಿದ್ದರೆ ಹೀಗೆ ಇರುತ್ತದೆ.

ತೆಂಗಿನ ಸಸಿ ಬೇಗ ಫಲಕೊಡಬೇಕಾದರೆ ಮಾಡಬೇಕಾದ ಅಗತ್ಯ ಕೆಲಸ.

ತೆಂಗಿನ ಸಸಿ ಹಾಗೂ ತಾಳೆ ಜಾತಿಯ ಎಲ್ಲಾ ಮರಗಳಿಗೂ ಕುರುವಾಯಿ ದುಂಬಿ ಕಾಟ ಇಲ್ಲದಿದ್ದರೆ, ಸಸಿ ಆರೋಗ್ಯವಾಗಿ ಬೆಳೆದು ಬೇಗ ಫಲ ಕೊಡುವುದರಲ್ಲಿ ಅನುಮಾನ ಇಲ್ಲ. ತೆಂಗು ಜಾತಿಯ ಮರಗಳಲ್ಲಿ ಒಂದೇ ಮೊಳಕೆ (Bud) ಇರುವುದು. ಇವುಗಳ ತಲೆ ಕಡಿದರೆ ಅವು ಮತ್ತೆ ಇತರ ಮರಗಳಂತೆ ಚಿಗುರಿ ಬೆಳೆಯಲಾರದು. ಆದರೆ ಇತರ ಮರ ಮಟ್ಟುಗಳ  ಎಲ್ಲಾ ಎಲೆ ಗೆಲ್ಲು ಕಡಿದರೂ ಅದು ಮತ್ತೆ ಚಿಗುರಿ ಬೆಳೆಯುತ್ತದೆ. ಆದ ಕಾರಣ ತೆಂಗಿನಂತಹ ಮರಗಳಿಗೆ ಎಲೆಯೇ ಆಧಾರ. ಕೆಲವು ಸಂದರ್ಭಗಳಲ್ಲಿ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು

ತೆಂಗಿನ ಸಸಿ ಕಳೆಗುಂದಿ ಸಾಯುವುದಕ್ಕೆ ಇದು ಕಾರಣ.

ಬಹಳಷ್ಟು ಕೃಷಿಕರ ತೆಂಗಿನ ಮರಗಳು ನೋಡು ನೋಡುತ್ತಿದ್ದಂತೆ ಕಳೆಗುಂದಿ ಸಾಯುತ್ತವೆ.ಇದಕ್ಕೆ ಕಾರಣ ಏನಿರಬಹುದು? ನಮ್ಮ ಹಿರಿಯರು ತೆಂಗಿನ ಮರದ ಯಾವುದೇ ಹಸಿ ಭಾಗ ಕಡಿಯಬಾರದು ಎಂದಿದ್ದಾರೆ. ಹಾಗೆಯೇ ತೆಂಗಿನ ಮರ ಕಡಿಯಬಾರದು ಎಂದು ತಾಕೀತು ಮಾಡಿದ್ದಾರೆ. ಇದು ಯಾಕೆ ಗೊತ್ತೇ? ಒಂದು ಮರ ಕಡಿದರೆ ಅದರ ಫಲವಾಗಿ ನಾಲು ಮರ ಹೋಗುತ್ತದೆ. ಕಾರಣ ಮರದ ರಸದ ಆ ವಾಸನೆಯನ್ನು ಹುಡುಕಿಕೊಂಡು ಕೆಂಪು ಮೂತಿ ಹುಳ ಬರುತ್ತದೆ.ಅದು ಯಾವುದಾದರೂ ಮರದಲ್ಲಿ ತನ್ನ ಸಂತಾನಾಭಿವೃದ್ದಿ ಮಾಡುತ್ತದೆ. ತೆಂಗಿನ  ಮರಗಳಿಗೆ ಕುರುವಾಯಿ…

Read more
ಬೇರು ಹುಳ ಬಾಧಿತ ತೆಂಗು

ತೆಂಗಿಗೂ ತೊಂದರೆ ಮಾಡುತ್ತಿದೆ- ಬೇರು ಹುಳ

ಎಷ್ಟೇ ಪೊಷಕಾಂಶ ಒದಗಿಸಿದರೂ ಸ್ಪಂದಿಸದೆ, ಮರದ ಗರಿಗಳು ಸದಾ ತಿಳಿ ಹಸುರು ಬಣ್ಣದಲ್ಲಿದ್ದರೆ, ಇಳುವರಿ ತೀರಾ ಕಡಿಮೆ  ಇರುವುದೇ ಆಗಿದ್ದರೆ   ಅಂತಹ ಮರಕ್ಕೆ ಬೇರು ಹುಳದ ತೊಂದರೆ  ಇದೆ ಎಂದು ಸಂಶಯ ಪಡಬಹುದು. ತೆಂಗಿನ ಮರಕ್ಕೆ  ಸಾಕಷ್ಟು ನೀರು ಒದಗಿಸಿ- ಗೊಬ್ಬರ ಕೊಡಿ ಒಂದು ವರ್ಷ ತನಕ ಕಾಯಿರಿ. ಎಲೆಗಳು ಹಸುರಾಗದೇ, ಗರಿಗಳು ಹೆಚ್ಚದೇ ಇದ್ದರೆ ಅಂತಹ ಮರಗಳಿಗೆ ಬೇರು ಹುಳ ಬಾಧಿಸಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಬಹುತೇಕ ಹೆಚ್ಚು ಕಡಿಮೆ …

Read more
error: Content is protected !!