ಭೂಮಿ ಉಳುತ್ತಿರುವ ರೈತ

ಹೊಸ ಭೂ ಸುಧಾರಣೆಯ ಅವಶ್ಯಕತೆ.

ಉಡುಪಿ  ಜಿಲ್ಲಾಧಿಕಾರಿಗಳು  ಕೃಷಿ ಮಾಡದೆ ಭೂಮಿಯನ್ನು ಪಾಳು ಬಿಟ್ಟವರಿಗೆ ನೋಟಿಸು ಜ್ಯಾರಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇದು ಈಗಿನ ಕಾಲಕ್ಕೆ ಸಯೋಚಿತ ನಿರ್ಧಾರ ಎನ್ನಬಹುದು.  ಜಿಲ್ಲಾಧಿಕಾರಿಗಳ ಹೇಳಿಕೆಯನ್ನು ಜನ ತಮ್ಮ ಸಮಸ್ಯೆಗಳನ್ನು ಮುಂದಿಟ್ಟು  ವಿರೋಧಿಸಿದ್ದಾರೆ. ಜನರ ಅಭಿಪ್ರಾಯವೂ ಸತ್ಯ. ಆದರೆ ಎಲ್ಲಾ ಸಮಸ್ಯೆಗಳ ಮೂಲ ಬೇರು  ಇರುವುದು, ಪಾಳು ಬಿದ್ದ ಜಮೀನಿನಲ್ಲೇ ಎಂಬುದು ಸತ್ಯ.  ಇಂತಹ ಜಿಲ್ಲಾಧಿಕಾರಿಗಳು, ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಳಕಳಿ ಉಳ್ಳ ಜನ ಪ್ರತಿನಿಧಿಗಳು ಇದ್ದರೆ  ಭವಿಷ್ಯದಲ್ಲಿ ಕೃಷಿ ಉಳಿಯಲು ಸಾಧ್ಯ. ಬದಲಾವಣೆ…

Read more
ಜೈವಿಕ ಗೊಬ್ಬರ ಸಿಂಪರಣೆ

ಜೈವಿಕ ಗೊಬ್ಬರಗಳ ಮಾರಾಟ ಮತ್ತು ನಂಬಿಕಾರ್ಹತೆ.

ಇತ್ತೀಚಿನ ಕೆಲವು ವರ್ಷಗಳಿಂದ ಜೈವಿಕ ಉತ್ಪನ್ನಗಳ  ತಯಾರಿಕೆ ಮತ್ತು ಮಾರಾಟ ಹೆಚ್ಚಾಗುತ್ತಿದೆ. ಈ ಜೈವಿಕ ಉತ್ಪನ್ನಗಳು ಒಳ್ಳೆಯ  ಉತ್ಪನ್ನಗಳಾದರೂ ನಾಯಿಕೊಡೆಗಳಂತೆ ತಯಾರಕರು ಹುಟ್ಟಿಕೊಳ್ಳುತ್ತಿದ್ದಾರೆ.ಜೊತೆಗೆ ದರ ಸ್ಪರ್ಧೆ ಇರುವಾಗ ಗ್ರಾಹಕರಿಗೆ ಇದು ಒಂದು ಗೊಂದಲದ ಗೂಡಾಗಿದೆ. ಯಾವುದು ಉತ್ತಮ, ಯಾವುದು ಕಳಪೆ ಎಂದು ಅರಿಯುವುದಕ್ಕೆ ಅಸಾಧ್ಯವಾದ ಈ ಉತ್ಪನ್ನಗಳಲ್ಲಿ ಹೇಗಾದರೂ ನಂಬಿಕೆ ಇಡುವುದು ತಿಳಿಯದಾಗಿದೆ.   ಜೈವಿಕ ಗೊಬ್ಬರ ಅಥವಾ ಜೀವಾಣುಗಳು ಎಂದರೆ ಅದು ಕಣ್ಣಿಗೆ ಕಾಣದ ಜೀವಿಗಳು.ಇದರಲ್ಲಿ ಕೆಲವು ಪೋಷಕ ಒದಗಿಸುವಂತವುಗಳು ಮತ್ತೆ ಕೆಲವು ಕೀಟ  ರೋಗ…

Read more
ಕರಂಡೆ ಕಾಯಿ

ಆರೋಗ್ಯಕರ ಉಪ್ಪಿನಕಾಯಿಗೆ -ಕರಂಡೆ

ಹಿಂದೆ ಬೇಕಾಬಿಟ್ಟಿಯಾಗಿ ಸಿಗುತ್ತಿದ್ದ ಕರಂಡೆ ಕಾಯಿ/ ಹಣ್ಣುಗ ಳು ಈಗ  ಮಾಯವಾಗಿವೆ. ಹಿಂದೆ  ಕರಂಡೆ ಬೇಕಿದ್ದರೆ  ಒಂದು ತಾಸು ಗುಡ್ಡಕ್ಕೆ  ಹೋದರೆ ಅಲ್ಲಿ  ಬೇಕಾದರೂ ಕರಂಡೆ ಕಾಯಿ ತರುತ್ತಿದ್ದರು. ಈಗ ಹಳ್ಳಿಯ ಜನ ಪೇಟೆಗೆ ಕರಂಡೆ ಕಾಯಿ ತರಲು ಹೋಗುವಂತಾಗಿದೆ. ಈಗ ಯಾವ ಗುಡ್ದದಲ್ಲೂ ಕರಂಡೆ ಗಿಡಗಳೇ ಕಾಣಿಸುತ್ತಿಲ್ಲ. ಕರಂಡೆಯ ಉಪ್ಪಿನಕಾಯಿ ಧೀರ್ಘ ಬಾಳ್ವಿಕೆ ಬರುವಂತದ್ದು. ಕರಂಡೆ ಹಿನ್ನೆಲೆ: ಕರಂಡೆ (Karronda) ಸಸ್ಯ ಗುಡ್ಡದಲ್ಲಿ ನೀರಿಲ್ಲದೆ ಬೆಳೆಯುವ ಪೊದೆ. ಇದು ಬಹುವಾರ್ಷಿಕ ಸಸ್ಯವಾಗಿದ್ದು, ಕುರುಚಲು ಗಿಡಗಳು ಬೆಳೆಯುವ ಗುಡ್ದದಲ್ಲಿ ಮುಳ್ಳಿನ…

Read more
ತೋಟದ ಒಳಗೆ ಗ್ಲೆರಿಸೀಡಿಯಾ

ಗ್ಲೆರಿಸೀಡಿಯಾ – ಯೂರಿಯಾ ಗೊಬ್ಬರ ಕೊಡುವ ಗಿಡ.

ಪ್ರಕೃತಿಯಲ್ಲಿ ಎಲ್ಲವೂ ಇದೆ. ಆದರೆ ನಮಗೆ ಗೊತ್ತಾಗುವುದಿಲ್ಲ. ರೈತರು ಸೂಕ್ಷ್ಮವಾಗಿ ಪ್ರಕೃತಿಯನ್ನು ಗಮನಿಸಬೇಕು. ಆಗ ಅವರಿಗೆ ಹಲವಾರು  ಸಂಗತಿಗಳು, ಹಾಗೆ ತಪ್ಪು ತಿಳುವಳಿಕೆಗಳು ಪರಿಹಾರವಾಗುತ್ತವೆ. ಸಾರಜನಕ ಏನು? ಸಾರಜನಕ ಗೊಬ್ಬರ ಎಂಬುದು ಸಸ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುವ ಪೋಷಕ. ಈ ಪೋಷಕವು ಹೆಚ್ಚಿನ ಸಾವಯವ ವಸ್ತುಗಳಲ್ಲಿ ಇರುತ್ತದೆ. ಇದನು ಕೃತಕವಾಗಿ ಯೂರಿಯಾ ರೂಪದಲ್ಲಿ ಒದಗಿಸಲಾಗುತ್ತದೆ. ಸಾರಜನಕ ಎಂಬುದು ವಾತಾವರಣದಲ್ಲಿ ಅನಿಲ ರೂಪದಲ್ಲಿ ಇರುವ ಮೂಲವಸ್ತುವಾಗಿದ್ದು   ಪ್ರೊಟೀನು ರಚನೆಯಲ್ಲಿ ಅತಿ ಮುಖ್ಯ ಭಾಗವಾಗಿರುತ್ತದೆ. ಸಸ್ಯಗಳು ಈ ಸಾರಜನಕವನ್ನು ನೇರವಾಗಿ…

Read more
ರಾಸಾಯನಿಕ ಗೊಬ್ಬರ ಬಳಸಿ ಇಳುವರಿ

ರಾಸಾಯನಿಕ ಗೊಬ್ಬರಗಳಿಂದ ನೈಜ ತೊಂದರೆ ಏನು?

ಕೆಲವು ರಾಸಾಯನಿಕ ಗೊಬ್ಬರಗಳ ವಿರೋಧಿಗಳು  ಹುಟ್ಟಿಕೊಂಡು  ಉಳಿದ ರೈತರಿಗೆ ತುಂಬಾ ದ್ವಂದ್ವ ಉಂಟಾಗಿದೆ. ಇದು ಒಂದು ರೈತ ಕಳಕಳಿ ವಿಚಾರವೊ ಅಥವಾ ಒಂದು ಅಪರೋಕ್ಷ  ವ್ಯವಹಾರ ದಂಧೆಯೋ ಗೊತ್ತಾಗುತ್ತಿಲ್ಲ. ಕೃಷಿಕ ಸಮುದಾಯದಲ್ಲಿ ರಾಸಾಯನಿಕ ಬಳಕೆ ಮಾಡುವವರನ್ನು ಅಸ್ಪೃಷ್ಯರ ತರಹ ಕಾಣುವವರೂ ಸೃಷ್ಟಿಯಾಗಿದ್ದಾರೆ.   ರಾಸಾಯನಿಕ ಗೊಬ್ಬರ ಎಂದ ಮಾತ್ರಕ್ಕೆ ಅದರ ವಿರೋಧಿಗಳು ಮೈಮೇಲೆ ಬಂದವರಂತೆ ಮಾತನಾಡಬೇಕಾಗಿಲ್ಲ. ಇದು ಅವರರವರ ವೈಯಕ್ತಿಕ ಆಯ್ಕೆ. ಆದರೆ ಬರೇ ರಾಸಾಯನಿಕ ಮಾತ್ರ ಬಳಸುವುದರಿಂದ ಮಣ್ಣಿನ ರಚನೆ ಹಾಳಾಗುತ್ತದೆ. ಹಾಗಾಗಿ ರಸಗೊಬ್ಬರ ಹಾಕುವವರು ಸಾವಯವ…

Read more
error: Content is protected !!