ಅಡಿಕೆ ಮಾರುಕಟ್ಟೆಯ ಸ್ಥಿತಿ- ಕೆಂಪಡಿಕೆ ಅಬಾಧಿತ- ಚಾಲಿ ಅಸ್ಥಿರ.
ಕೆಂಪಡಿಕೆ ಮಾರುಕಟ್ಟೆಯಲ್ಲಿ ದೊಡ್ದ ಸಂಚಲನ ಇಲ್ಲ. ಆದರೆ ಚಾಲಿ ಮಾತ್ರ ಬಹಳ ಅಸ್ಥಿರತೆಯಲ್ಲಿ ಮುನ್ನಡೆಯುತ್ತಿದೆ. ಖಾಸಗಿಯವರ ದರ ಸಾಂಸ್ಥಿಕ ಮಾರುಕಟ್ಟೆಗಿಂತ ಕಡಿಮೆಯಾಗಿದೆ. ಸಾಂಸ್ಥಿಕ ಮಾರುಕಟ್ಟೆಯಲ್ಲಿ ಪ್ರಕಟಣೆಯ ದರಕ್ಕೂ ಖರೀದಿ ದರಕ್ಕೂ ತುಂಬಾ ವ್ಯತ್ಯಾಸ ಇದೆ. ಗುಣಮಟ್ಟಕ್ಕೆ ಹೆಚ್ಚಿನ ಪ್ರಾತಿನಿಧ್ಯ ಬಂದಿದೆ. ಗುಣಮಟ್ಟದ ಅಡಿಕೆಗೆ ಮಾತ್ರ ಗರಿಷ್ಟ ದರ ಇದೆ. ಖಾಸಗಿಯವರ ನಿರುತ್ಸಾಹ ಚಾಲಿ ಅಡಿಕೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ವಲ್ಪ ಹಿಂದೆ ಬರುವಂತೆ ಮಾಡುತ್ತದೆಯೋ ಎಂಬ ಅನುಮಾನ ಉಂಟಾಗಿದೆ. ವಿದೇಶಗಳಿಂದ ಸರಕಾರದ ಅನುಮತಿಯ ಮೇರೆಗೆ ಅಡಿಕೆ ಆಮದಾಗುತ್ತಿದೆ ಎಂಬ…