ಕೃಷಿ ಕ್ಷೇತ್ರವನ್ನು ಬಗ್ಗು ಬಡಿಯಲಿದೆ ಕೊರೋನಾ ಮಹಾಮಾರಿ.

ಹೂ ಬೆಳೆದವರಿಗೂ ನಷ್ಟ ಮಾರುವವರಿಗೂ ನಷ್ಟ

ಈಗಾಗಾಲೇ ಹಣ್ಣು ಹಂಪಲು, ಹೂವು, ತರಕಾರಿ ಬೆಳೆದ ರೈತರು ಭಾರೀ ನಷ್ಟ ಅನುಭವಿಸಿದ್ದಾರೆ. ಸದ್ಯವೇ ಹಾಲಿಗೆ ಬೇಡಿಕೆ ಕಡಿಮೆಯಾದ ಕಾರಣ ಹಾಲಿನ ಬೆಲೆಯೂ ಇಳಿಮುಖವಾಗುವ ಸೂಚನೆ ಇದೆ. ನಷ್ಟ ಭರ್ತಿಗಾಗಿ ಮತ್ತೆ ಅದೇ ಬೆಳೆ ಬೆಳೆಯುವ ಬದಲು ಆಹಾರ ಬೆಳೆಗಳ ಕಡೆಗೆ ಗಮನಹರಿಸುವುದು ಉತ್ತಮ. ಪರಿಸ್ಥಿತಿ ಸುಧಾರಣೆಯಾದ ನಂತರ ಇಂತಹ ಬೆಳೆಗಳನ್ನು ಬೆಳೆಸುವುದು ಸೂಕ್ತ.

ಹೂವಿನ ಬೆಳೆಗಾರರಿಗೆ ಭಾರೀ ನಷ್ಟ-Flower farmers are facing loss

  •  ಕೊರೋನಾ ಮಹಾಮಾರಿ ಪ್ರಾರಂಭವಾಗಿ 3 ತಿಂಗಳು ಕಳೆದಿದೆ ಅಷ್ಟೇ .
  • ಈ ತನಕ ಕೆಲವು ಬೆಳೆಗಾರರಿಗೆ ನಷ್ಟವಾಯಿತು.
  • ಅದು ಮುಗಿದ ಸುದ್ದಿಯಾಯಿತು.
  • ಇನ್ನು ಬರಲಿರುವ ದಿನಗಳು ಬಹಳ ಕಷ್ಟದ ದಿನಗಳಾದರೂ ಅಚ್ಚರಿ ಇಲ್ಲ.
  • ರಸಗೊಬ್ಬರ , ಕೃಷಿ ಉಪಕರಣ ಎಲ್ಲವೂ ದುಬಾರಿಯಾಗಲಿವೆ.
  • ಲಭ್ಯತೆಯೂ ಕಡಿಮೆಯಾಗುವ ಸಾಧ್ಯತೆ ಇದೆ.

ದೇಶ- ರಾಜ್ಯದ ಅರ್ಥಿಕ ಪರಿಸ್ಥಿತಿ:

  • ದೇಶದ ಮಾನವ ಸಂಪನ್ಮೂಲಕ್ಕೆ ಒಂದು ಅಧಾರ ಎಂದಿದ್ದರೆ ಅದು ಸುಬಧ್ರ ಅರ್ಥಿಕತೆ.
  • ಕೊರೋನಾ  ಕಾರಣದಿಂದ ದೇಶದ ಆರ್ಥ ವ್ಯವಸ್ಥೆಗೆ ಸಹಜವಾಗಿ ದೊಡ್ಡ ಹೊಡೆತ ಬಿದ್ದಿದೆ.
  • ಪೆಟ್ರೋಲು ಹಾಗೂ ಮಾಧ್ಯ ಬಿಟ್ಟರೆ ಬೇರೆ ಆದಾಯ ಮೂಲಗಳು ಕಡಿಮೆಯಾಗಿವೆ.
  • ಹೀಗಾಗಾಗ ಸರಕಾರ ಕೂಡಾ ರೈತರ ನೆರವಿಗೆ ಬರುವುದೂ ಕಷ್ಟವಾಗುತ್ತದೆ.

ಹಾಳಾದ ರೈತನ ಬದುಕು:

  • ದೇಶದ ಆಥಿ೯ಕ ಪರಿ‌‌ಸ್ಥಿತಿಯನ್ನು ಹದಗೆಡಿಸುವುದರ ಜೊತೆಗೆ ದೇಶದ ರೈತರ ಹಾಗೂ ಅವರು ಬೆಳೆದ ಕೃಷಿ ಉತ್ಪನ್ನಗಳ ಮೇಲೆ ಭಾರಿ ದುಷ್ಪರಿಣಾಮ ಬೀರುತ್ತಿದೆ.
  • ಈಗಾಗಲೇ ರೈತರ ಹೊಲದಲ್ಲಿ ಕೊಯ್ಲಿಗೆ ಸಿದ್ದವಾದ ಫಸಲು ಲಾಕ್ಡೌನ್ ಕಾರಣದಿಂದ ಸಾಕಷ್ಟು ಹಾನಿಯಾಗಿದೆ.
  • ಉತ್ತರ ಭಾರತ ಮುಂತಾದ ಕಡೆಯ ಕೂಲಿ ಆಳುಗಳು ಊರಿಗೆ ಹೋಗಿದ್ದಾರೆ.
  • ಸ್ಥಳೀಯವಾಗಿ ಕೆಲಸಗಾರರ ಕೊರೆತೆ ಹಾಗೆಯೇ ಇದೆ.
  • ಕೊಯ್ಲು ಯಂತ್ರ ಚಾಲಕರು ಸಿಗದೆ ರೈತರು ಕಂಗಾಲಾಗಿದ್ದಾರೆ.
  • ಹಾಕಿದ ಬಂಡವಾಳ ಸಂಪಾದಿಸಲು ಹರಸಾಹಸ ಪಡುವಂತಾಗಿದೆ.
  • ದೇಶದ ಕೃಷಿ, ಕೈಗಾರಿಕೆ, ಸೇವಾವಲಯಗಳಲ್ಲಿನ ದುಸ್ಥಿತಿಹೇಳತೀರದು.

ರೈತರಿಗೆ ನಿತ್ಯ ಕಷ್ಟ:

  • ಬರಗಾಲ, ನೆರೆಹಾವಳಿ, ಹೀಗೆ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿರುವ ರೈತರು ಈ ಬಾರಿಯಾದರೂ ಉತ್ತಮ ಬೆಳೆಪಡೆಯಬಹುದು ಎಂಬ ಕನಸು ಕಾಣುವಷ್ಟರಲ್ಲಿ ಕೊರೊನ ಎಂಬ ವೈರಸ್ ದೊಡ್ಡ ಆಘಾತವನ್ನು ಉಂಟುಮಾಡಿದೆ.
  • ಬೆಳೆದು ನಿಂತಿರು ವಫಸಲನ್ನು ಕೋಯ್ಲು ಮಾಡಲಾಗದೆ ಮಾರುಕಟ್ಟೆಗೆ ರವಾನಿಸಲಾಗದೆ ರೈತರು ಕಂಗಾಲಾಗಿದ್ದಾರೆ.
  • ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಕಾ೯ರದ ಕಟ್ಟುನಿಟ್ಟಿನ ನಿಭಂದನೆಯನ್ನು ಪಾಲಿಸುವ ಸಲುವಾಗಿ ಕೂಲಿ ಆಳುಗಳು ,ಕೊಯ್ಲು ಯಂತ್ರಚಾಲಕರು,ವ್ಯಾಪಾರಿಗಳೂ ಸಹಬರುತ್ತಿಲ್ಲ.

ಗ್ರಾಹಕರಿಲ್ಲದೆ ಹಾಳಾದ ಕಲ್ಲಂಗಡಿ

ವೆಲ್ಲಾ ಕಾರಣ ಹಾಗೂ ಪರಿಸ್ಥಿತಿಗಳನ್ನು ಗಮನಿಸಿದರೆ ಈ ಅನಿದಿ೯ಷ್ಟಾವದಿ ಲಾಕ್ಡೌನ್  ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಲುವ ಪರಿಸ್ಥಿತಿ ಮುಂದುವರಿದರೆ ಭಾರಿಪ್ರಮಾಣದ ಆಹಾರದ ಕೊರತೆಯೂ ದೇಶವನ್ನು ಬಾದಿಸುವ ಆತಂಕವಿದೆ.

  • ಲಾಕ್ಡೌನ್ ಕಾರಣದಿಂದ ಹಾಲು, ಹಣ್ಣು, ತರಕಾರಿ, ಹೂವು   ಬೆಳೆಗಾರರು ಮತ್ತು ಮಾರಾಟಗಾರರು ತುಂಬ ಸಮಸ್ಯೆ ಎದುರಿಸಬೇಕಾಗಿದೆ.
  • ಯಾವ ಸಾಮಾಜಿಕ,ಸಾಂಸ್ಕೃತಿಕ ದೈವಿಕ ಕಾಯ೯ಕ್ರಮಗಳೂ ಜರುಗುತ್ತಿಲ್ಲ.
  • ಹಬ್ಬ, ಮದುವೆಗಳನ್ನೂ ಸಹ ವಿಜ್ರಂಬಣೆಯಿಂದ ಮಾಡುವಂತಿಲ್ಲ, ಹೆಚ್ಚು ಜನಸೇರುವಂತಿಲ್ಲ.
  • ಹೊಟೇಲ್,ಬೇಕರಿಗಳು,ರೆಸ್ಟೋರೆಂಟುಗಳು ಬಂದ್ ಆಗಿರುವುದರಿಂದ ತರಕಾರಿ ,ಹಾಲು, ಹಣ್ಣುಕೊಳ್ಳುವವರಿಲ್ಲ.
  • ಇದರಿಂದಾಗಿ ಅವುಗಳ ಬೆಲೆಯೂ ಕಡಿಮೆಯಾಗಿ ಹಾಕಿದ ಬಂಡವಾಳ ಸಂಪಾದಿಸಲು ಹರಸಾಹಸ ಪಡುವಂತಾಗಿದೆ.

ರೈತರಿಗೆ ಸಲಹೆ:

  • ಕೊರೋನಾ ಮಹಾ ಮಾರಿ ಹದ್ದು ಬಸ್ತಿಗೆ ಬರುವ ತನಕ ಅಧಿಕ ಪ್ರಮಾಣದಲ್ಲಿ ಕೃಷಿ , ಜನ ಸಾಮಾನ್ಯರು ಬಳಕೆ ಮಾಡುವ ಕೃಷಿ ಪೂರಕ ಕಸುಬು, ಹೈನುಗಾರಿಕೆ ಮುಂತಾದವುಗಳನ್ನು  ಮಾಡದೆ ತಕ್ಕಮಟ್ಟಿಗೆ ಮಾಡಿ ಇರುವ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಿ, ಹೆಚ್ಚು ಬೆಲೆ ಪಡೆಯುವಂತಾಗಬೇಕು.
  • ಪರಿಸ್ಥಿತಿ ಹೀಗೇ ಮುಂದುವರಿದರೆ ಮಾರುಕಟ್ಟೆ ಸಮಸ್ಯೆ ಇನ್ನಷ್ಟು ಕಠಿಣವಾಗಲಿದೆ. ಸಾಗಾಣಿಕೆ ದುಬಾರಿಯಾಗಲಿದೆ. ಇದೆಲ್ಲವನ್ನೂ ಭರಿಸಲು ದೊರೆಯುವ ಆದಾಯ ಸಾಲದು.

ಲೇಖಕರು:  ಶ್ರುತಿ ಎಸ್ ಎಂ,ಎಂ ಎಸ್ ಸಿ ಕೃಷಿ ಕೃಷಿ ವಿಶ್ವವಿಧ್ಯಾನಿಲಯ ಧಾರವಾಡ. ಮಾನಸ ಎಲ್ ಪಿ ಎಂ ಎಸ್ ಸಿ ಕೃಷಿ ವಿಶ್ವವಿಧ್ಯಾನಿಲಯ ಧಾರವಾಡ  ಮತ್ತು ಪೂಜಾ ಎಸ್ ಪಿ ಎಂ ಎಸ್ ಸಿ ಪಿಎಚ್ ಡಿ ಕೃ ವಿ ವಿ ಬೆಂಗಳೂರು.

Leave a Reply

Your email address will not be published. Required fields are marked *

error: Content is protected !!