ಬಿಳಿ ಉಣ್ಣಿ- ಹಿಟ್ಟು ತಿಗಣೆ; ತೊಂದರೆ ಮತ್ತು ಪರಿಹಾರಗಳು.

mealy bug

ಮಿಲಿಬಗ್, ಅಥವಾ ಹಿಟ್ಟು ತಿಗಣೆ  ಎಲೆ ಅಡಿ ಭಾಗದಲ್ಲಿ  ಮತ್ತು ಎಳೆ ಚಿಗುರು  ಹಾಗೆಯೇ ಕಾಯಿಯ ತೊಟ್ಟಿನ ಸನಿಹದಲ್ಲಿ  ಮುದ್ದೆಯಾಗಿ ಕುಳಿತು ರಸ ಹೀರುತ್ತದೆ. ಸಸ್ಯ ಬೆಳವಣಿಗೆ ಕುಂಠಿತವಾಗುತ್ತದೆ. ಅಸಹ್ಯವೂ ಆಗುತ್ತದೆ.ಇದು ತರಕಾರಿ, ಹಣ್ಣು ಹಂಪಲು, ಹೂವಿನ ಗಿಡಗಳು ಸೇರಿದಂತೆ ಸುಮಾರು 200 ನಮೂನೆಯ ಬೆಳೆಗಳಿಗೆ  ಹಾನಿ ಮಾಡುತ್ತದೆ.ಮೈಬಣ್ಣ   ಬಿಳಿ ಹಿಟ್ಟು ತರಹ ಇರುವ ಕಾರಣ ಹಿಟ್ಟು ತಿಗಣೆ ಎಂಬ ಹೆಸರು ಕೊಡಲಾಗಿದೆ.

mealy bugs in lemon fruit

ವಿಧಗಳು:

  • ಇದರಲ್ಲಿ  ಮೂರು ನಾಲ್ಕು ಪ್ರಭೇಧಗಳಿದ್ದು ,ಕೆಲವು ಮರಮಟ್ಟುಗಳಿಗೂ ಇನ್ನು ಕೆಲವು ಕೆಳಸ್ಥರದ ಸಸ್ಯಗಳಿಗೂ ಹಾನಿಮಾಡುತ್ತವೆ.
  • ಚಳಿಗಾಲದಲ್ಲಿ ಇದರ ತೊಂದರೆ ಹೆಚ್ಚು. ಈ ಸಮಯದಲ್ಲಿ ಮೊಟ್ಟೆ ಇಡುತ್ತವೆ.
  • ಇದು ಹೆಚ್ಚು ಕ್ರಿಯಾತ್ಮಕವಾಗಿದ್ದು, ಸಂತಾನಾಭಿವೃದ್ದಿಯಾಗುತ್ತದೆ.
  • ಬೆಳೆದಂತೆ  ದೊಡ್ದದಾಗುತ್ತಾ ಬಿಳಿ ಬಣ್ಣ ಹೆಚ್ಚುತ್ತಾ ಹೋಗುತ್ತದೆ. ವರ್ಷದುದ್ದಕೂ  ಇದು ಇರುತ್ತದೆ, ಹೆಚ್ಚು ಬಿಸಿ ವಾತಾವರಣ ಇರುವಾಗ ಮರದ ಬುಡದ ಸಂದುಗಳಲ್ಲಿ ಇರುತ್ತದೆ.

mealy bug in hibiscus plant

  • ಡಿಸೆಂಬರ್ ಜನವರಿ ತಿಂಗಳಲ್ಲಿ ಇದರ ಸಂಖ್ಯೆ  ಹೆಚ್ಚು.
  • ಇದು ತನ್ನ ಶರೀರದ ಮೇಣವನ್ನು ಹನಿಡ್ಯೂ honeydew ಎಲೆ ಭಾಗ ಮತ್ತು ಕಾಯಿ ಭಾಗ, ಹಾಗೆಯೇ ತೊಟ್ಟಿನ ಭಾಗದಲ್ಲಿ ಸ್ರವಿಸಿ ಅಲ್ಲಿ ಶಿಲೀಂದ್ರ  ಬೆಳೆಯುವಂತೆ  ಮಾಡಿ ಆ ಭಾಗ ಕೃಶವಾಗುತ್ತದೆ ಅಲ್ಲದೆ ಸಾಯುತ್ತದೆ .
  • ಅನನುಕೂಲ ಪರಿಸ್ಥಿತಿಯಲ್ಲಿ  ಮಣ್ಣಿನಲ್ಲಿ ವಾಸಿಸುತ್ತದೆ.
  • ಜಗತ್ತಿನಾದ್ಯಂತ ಇದರ ತೊಂದರೆ  ಇದೆ. ಇದು ಒಂದು ರೋಗ ವಾಹಕವೂ  ಹೌದು.

ಹತೋಟಿ:

ಇದನ್ನು  ಒಂದೇ ವಿಧಾನದಲ್ಲಿ ನಿಯಂತ್ರಣಕ್ಕೆ  ತರಲು ಕಷ್ಟವಾಗುತ್ತದೆ. ಸಮಗ್ರ ಕೀಟ ಹತೋಟಿ ವಿಧಾನದಲ್ಲಿ  ನಿಯಂತ್ರಣ ತರಬಹುದು.

  • ಮೊದಲನೆಯದಾಗಿ ಚಳಿಗಾಲದಲ್ಲಿ ಯಾವ ಬೆಳೆ ಬೆಳೆಯುತ್ತಿರೋ ಅದರಲ್ಲಿ ಎಳೆ ಭಾಗದಲ್ಲಿ ಇರುವೆಗಳು ಬರುತ್ತಿವೆಯೇ ಗಮನಿಸಿ.
  • ಒಂದು ವೇಳೆ ಇರುವೆಗಳು ಇದ್ದರೆ  ತಿಗಣೆ ಜಾತಿಯ ಕೀಟ ಬಂದಿದೆ ಎಂದರ್ಥ.
  • ಆಗ ಸೂಕ್ಷ್ಮವಾಗಿ ಗಮನಿಸಿ ಚಿಗುರು ಆಗಿದ್ದರೆ ಅದನ್ನು ಸಾಧ್ಯವಾದರೆ ತೆಗೆದು ಸುಡಿ. ಇದು ಕಡಿಮೆ ಸಂಖ್ಯೆಯಲ್ಲಿದ್ದಾಗ ಮಾತ್ರ ಸಾಧ್ಯ.
  • ಕೆಲವು ಕಳೆಗಳು ಇದರ ಇರುವಿಕೆಯ ಸೂಚನೆ ಕೊಡುತ್ತವೆ.ಕಳೆಗಳು ಯಾವುದೂ ಬುಡ ಭಾಗದಲ್ಲಿ ಬೆಳೆಯದಂತೆ  ಮಲ್ಚಿಂಗ್ ಶೀಟು  ಹೊದಿಸಬೇಕು.
  • ನಿಸರ್ಗದಲ್ಲಿ ಕೆಲವು ನೊಣಗಳು ಮತ್ತು ಗುಲಗುಂಜಿ ಹುಳಗಳು ಇದರ  ನೈಸರ್ಗಿಕ ಶತ್ರುಗಳು. ಗುಲಗುಂಜಿ ಹುಳು ಇದನ್ನು  ಹೆಚ್ಚಿನ ಪ್ರಮಾಣದಲ್ಲಿ ಭಕ್ಷಿಸುತ್ತದೆ. 17 ಬಗೆಯ ಪರಭಕ್ಷಕಗಳು ಇವೆ.

mealy bug

  • ಸುರಕ್ಷಿತವಾಗಿ ಇದರ ನಿಯಂತ್ರಣಕ್ಕೆ ಪ್ರಾರಂಭಿಕ ಹಂತದಲ್ಲಿ ನೀರಿನಲ್ಲಿ ಕರಗುವ ಗಂಧಕವನ್ನು ಸಿಂಪಡಿಸಬೇಕು.
  • ಜೈವಿಕ ಕೀಟನಾಶಕವಾದ ಬವೇರಿಯಾ ಬಾಸಿಯಾನ ಇದನ್ನು ಸಿಂಪಡಿಸಿ ನಿಯಂತ್ರಣಕ್ಕೆ ತರಬಹುದು.ಪರಿಸರಕ್ಕೆ ಮತ್ತು ತಿನ್ನುವವರಿಗೆ ಇದರಿಂದ ಯಾವುದೇ ಹಾನಿ ಇಲ್ಲ.
  • ಸಸ್ಯ ಜನ್ಯ ಕೀಟ ನಾಶಕವಾದ ಬೇವು ಹೊಂಗೆ ಸಾಬೂನು ಇದರಲ್ಲಿ ಪ್ರಾರಂಭಿಕ ಹಂತದಲ್ಲಿ ಫಲಿತಾಂಶ ಸಿಗುತ್ತದೆ.
  • ಕೊನೇ ಹಂತದಲ್ಲಿ ಮಾತ್ರ ರಾಸಾಯನಿಕ ಕೀಟ ನಾಶಕ ಬಳಕೆ ಮಾಡಬೇಕು.

mealy bug family

 ಕೀಟ ನಾಶಕ ಬಳಕೆ:

  • ಇಮಿಡಾ ಕ್ಲೋಫ್ರಿಡ್ .5 ಮಿಲಿ, ಅಥವಾ ಕ್ಲೋರೋಫೆರಿಫೋಸ್ 3 ಮಿಲಿ ಎಲೆ ಅಡಿ ಭಾಗಕ್ಕೆ ಸಹ ಬೀಳುವಂತೆ ಸಿಂಪರಣೆ  ಮಾಡಬೇಕು. ಬುಡ ಭಾಗಕ್ಕೂ ಸಿಂಪರಣೆ ಮಾಡಬಹುದು. ಬೇರಿನ ಸುತ್ತಮುತ್ತಲೂ ಇವು ಇರುತ್ತವೆ.
  • ಒಂದು ವೇಳೆ ಹಿಂದಿನ ಸೀಸನ್ ನಲ್ಲಿ ಇದರ ಇರುವಿಕೆ ಇದ್ದರೆ ಆ ಭೂಮಿಯಲ್ಲಿ ಮತ್ತೆ ಬೆಳೆ ಬೆಳೆಸುವಾಗ ಮಣ್ಣನ್ನು  ಉಪಚಾರ ಮಾಡಿ ಕೃಷಿ ಮಾಡಬೇಕು.

predators of mealy bug

  • ಕೀಟನಾಶಕ ಬಳಕೆ ಮಾಡುವಾಗ ಯಾವ ಬೆಳೆ , ಕೊಯಿಲಿಗೆ ಸಮಯ ಎಷ್ಟು ಇದೆ ಎಂಬುದನ್ನು ತಿಳಿದು ಅದಕ್ಕನುಗುಣವಾಗಿ ಸಿಂಪರಣೆ ಮಾಡಬೇಕು.
  • ಇಮಿಡಾ ಕ್ಲೋಫ್ರಿಡ್ ಮತ್ತು ಕ್ಲೋರೋಫೆರಿಫೋಸ್ ಬಳಸಿ  ಫಲವನ್ನು ಕೊಯಿಲು ಮಾಡಲು 7-10 ದಿನ ಕಾಯಬೇಕು. ಅದಕ್ಕಿಂತ ಮುಂಚೆ ಕೊಯಿದರೆ ಉಳಿಕೆ ಅಂಶ ಇರುತ್ತದೆ.
  • ನೋಡಲು ಇದು ಸಭ್ಯ ಕೀಟದಂತೆ ಕಂಡರೂ ಬಹಳಷ್ಟು ಹಾನಿ ಮಾಡುತ್ತದೆ.

ಹಿಟ್ಟು ತಿಗಣೆ ನಮ್ಮ ದೇಶದ ಬಹುತೇಕ ಹಣ್ಣು ಹಂಪಲು ತರಕಾರಿ ಬೆಳೆಗಳ ಮಾರುಕಟ್ಟೆ ಮೌಲ್ಯವನ್ನು ಕಡಿಮೆ ಮಾಡಿದ ಕೀಟ. ಇದನ್ನು ನಿರ್ಲಕ್ಷ ಮಾಡದೆ ನಾಶ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!