ಭಾರತ ಸರಕಾರವು ಮುಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಬೆಂಬಲ ಬೆಲಯನ್ನು ಹೆಚ್ಚಿಸಿದೆ.
ಭಾರತ ಸರಕಾರದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ದೇಶದ ವಿವಿಧ ಬೆಳೆಗಳಿಗೆ ಭರ್ಜರಿ ಬೆಂಬಲಬೆಲೆಯನ್ನು ಘೋಷಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ದೇಶದಲ್ಲಿ ಆಗಲೇ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರು ಬಿತ್ತನೆ ಇತ್ಯಾದಿ ಕೃಷಿ ಕೆಲಸಗಳಲ್ಲಿ ತೊಡಗಿದ್ದಾರೆ. ಕೆಲವು ಬೆಳೆಗಳಿಗೆ ಕೊರೋನಾ ಕಾರಣದಿಂದ ಸ್ವಲ್ಪ ಮಾರುಕಟ್ಟೆ ಸಮಸ್ಯೆ ಉಂಟಾಗಿದ್ದರೂ, ಸರಕಾರ ಕಳೆದ ವರ್ಷದಂತೆ ಬಿಗುವನ್ನು ಸಡಿಲಿಕೆ ಮಾಡಿದ್ದ ಕಾರಣ ಭಾರೀ ತೊಂದರೆ ಉಂಟಾಗಿರಲಿಲ್ಲ. ರೈತರು ದೇಶದ ಆರ್ಥಿಕತೆಯ ಜೀವಾಳ. ರೈತರ ಕಲ್ಯಾಣಕ್ಕೆ ಸರಕಾರ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಲೇ ಇದೆ. ಅವುಗಳ ಜೊತೆಗೆ ಇದೂ ಒಂದು ಎನ್ನುತ್ತಾರೆ ಪ್ರಧಾನಿಯವರು.ಯಾವ ಬೆಳೆಗೆ ಎಷ್ಟು ಕನಿಷ್ಟ ಬೆಂಬಲ ಬೆಲೆ ಎಂಬುದರ ವಿವರ ಇಲ್ಲಿದೆ.
ಭತ್ತ:
- ಭತ್ತದ ಬೆಳೆಗೆ ಬೆಂಬಲ ಬೆಲೆಯನ್ನು 3.8% ಭತ್ತಕ್ಕೆ ಏರಿಸಲಾಗಿದೆ.
- ಪ್ರತೀ ಕ್ವಿಂಟಾಲು ಭತ್ತಕ್ಕೆ ಹಿಂದೆ 1868 ರೂ. ಬೆಲೆ ನಿಗದಿಯಾಗಿತ್ತು.
- ಈಗ ಅದನ್ನು ರೂ. 72 ಹೆಚ್ಚಿಸಲಾಗಿದೆ.
- ರೂ 1940, 2021-2022 ರ ಬೆಂಬಲ ಬೆಲೆಯಾಗಿರುತ್ತದೆ.
ಎಳ್ಳು:
- ಎಲ್ಲದಕ್ಕಿಂತ ಹೆಚ್ಚಿನ ಬೆಂಬಲ ಬೆಲೆಯನ್ನು (6.59%) ಎಳ್ಳಿಗೆ ನಿಗದಿ ಮಾಡಲಾಗಿದೆ.
- ಎಳ್ಳಿನ ಬೇಸಾಯವೇ ಕಡಿಮೆಯಾಗುತ್ತಿದ್ದು, ಬಹಳ ಖರ್ಚಿನ ಬೆಳೆಯಾಗಿರುತ್ತದೆ.
- ಆದ ಕಾರಣ ಎಳ್ಳಿನ ಬೇಸಾಯದಿಂದ ರೈತರು ಹಿಂದೆ ಸರಿಯುತ್ತಿದ್ದು , ಈ ಬೆಂಬಲ ಕನಿಷ್ಟ ಬೆಂಬಲ ಬೆಲೆ ಎಳ್ಳು ಬೆಳೆಸುವವರಿಗೆ ಅನುಕೂಲವಾಗಲಿದೆ ಎನ್ನಲಾಗುತ್ತದೆ.
- ಹಿಂದೆ ಎಳ್ಳು ಕ್ವಿಂಟಾಲಿಗೆ ರೂ.6855 ಇದ್ದುದು ಈಗ ರೂ.7307 ಕ್ಕೆ ಏರಿಕೆಯಾಗಿದೆ.
ನೆಲಕಡಲೆ:
- ನೆಲಕಡಲೆ ಬೆಳೆಗೆ ಎಳ್ಳಿನ ನಂತರದ ಸ್ಥಾನ.
- ಹಿಂದೆ ಕ್ವಿಂಟಾಲಿಗೆ 5275 ರೂ. ಇದ್ದ ಬೆಂಬಲ ಬೆಲೆಯನ್ನು ಈಗ ಕ್ವಿಂಟಾಲಿಗೆ 5550 ಕ್ಕೆ ಏರಿಸಲಾಗಿದೆ.
- ಇದು ಹಿಂದಿನದಕ್ಕಿಂತ 5.21% ಹೆಚ್ಚಾಗಿರುತ್ತದೆ.
ತೊಗರಿ:
- ತೊಗರಿ ಬೆಳೆಗೆ ಸುಮಾರು ಹಿಂದಿನ ವರ್ಷಕ್ಕಿಂತ ಈ ವರ್ಷ 5% ದಶ್ಟು ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿದೆ.
- ಹಿಂದೆ ಕ್ವಿಂಟಾಲಿಗೆ 6000 ಇದ್ದ ಬೆಂಬಲ ಬೆಲೆಯನ್ನು ಈ ವರ್ಷ ರೂ. 6300 ಕ್ಕೆ ಏರಿಸಲಾಗಿದೆ.
ಹತ್ತಿ:
- ಕಳೆದ ವರ್ಷ ಹತ್ತಿಗೆ ಕ್ವಿಂಟಾಲಿಗೆ ರೂ. 5515 ಇತ್ತು.
- ಈ ವರ್ಷ ಅದನ್ನು ಶೇ. ಹೆಚ್ಚಿಸಿ ರೂ.5726 ಕ್ಕೆ ನಿಗದಿ ಮಾಡಲಾಗಿದೆ.
ರಾಗಿ ಮತ್ತು ಸೂರ್ಯಪಾನ:
- ಈ ಹಿಂದೆ ರಾಗಿ ಹಾಗೂ ಸೂರ್ಯ ಕಾಂತಿ ಬೆಳೆಗೆ ಇದ್ದ ಬೆಂಬಲ ಬೆಲೆಯನ್ನು 2.21 ಕ್ಕೆ ಏರಿಸಲಾಗಿದೆ.
- ರಾಗಿಗೆ ಹಿಂದಿನ ಬೆಂಬಲ ಬೆಲೆಯನ್ನು 2.49 % ಹೆಚ್ಚಿಸಲಾಗಿದೆ.ಸಜ್ಜೆಯ ಬೆಂಬಲ ಬೆಲೆಯನ್ನು ಹಿಂದಿಗಿಂತ 4.65 % ಹೆಚ್ಚಿಸಲಾಗಿದೆ.
- ಹಿಂದೆ ಕ್ವಿಂಟಾಲು ಸಜ್ಜೆಗೆ 2,150 ರೂ. ಇದ್ದುದು ಈಗ 2,250 ರೂ ಗೆ ಏರಿಸಲಾಗಿದೆ.
ಜೋಳ:
- ಜೋಳಕ್ಕೆ ಅತೀ ಕಡಿಮೆ ಕನಿಷ್ಟ ಬೆಂಬಲ ಬೆಲೆಯನ್ನು ನಿರ್ದರಿಸಲಾಗಿದೆ.
- ಜೋಳದ ಬೆಳೆಯನ್ನು ಹೆಚ್ಚು ಪ್ರೋತ್ಸಾಹಿಸುವ ಬದಲು ಬೇರೆ ವೈವಿಧ್ಯಮಯ ಬೆಳೆಗಳನ್ನು ಪ್ರೋತ್ಸಾಹಿಸುವುದು ಸರಕಾರದ ಉದ್ದೇಶ.
- ಹಿಂದೆ ಜೋಳಕ್ಕೆ ಇದ್ದ ಬೆಂಬಲ ಬೆಲೆ ರೂ. 1,850 ಈಗ ಅದನ್ನು 1.08% ಹೆಚ್ಚಿಸಿ ರೂ. 1,870 ನಿಗದಿಮಾಡಲಾಗಿದೆ.
- ಕಳೆದ ವರ್ಷ ಇದನ್ನು 5.5% ಹೆಚ್ಚಿಸಲಾಗಿತ್ತು.
ಬೆಳೆ ವೈವಿಧ್ಯತೆ ಹೆಚ್ಚಬೇಕು. ಕಡಿಮೆಯಾಗುತ್ತಿರುವ ಬೆಳೆಗಳನ್ನು ರೈತರು ಮತ್ತೆ ಬೆಳೆಯಲು ಪ್ರಾರಂಭಿಸಬೇಕು ಎಂಬ ಕಾರಣಕ್ಕೆ ಕೆಲವು ಬೆಳೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂಬುದಾಗಿ ಕೇಂದ್ರ ಕೃಷಿ ಸಚಿನ ನರೇಂದ್ರ ಸಿಂಗ್ ತೋಮರ್ ಇವರ ಅಭಿಪ್ರಾಯ.
ರೈತರ ಪ್ರತಿಭಟನೆ, ದೇಶದಲ್ಲಿ ಸರಕಾರದ ವಿರುದ್ಧ ರೈತರ ಆಕ್ರೋಶವನ್ನು ಶಮನ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಸರಕಾರ ಬೆಂಬಲ ಬೆಲೆಯನ್ನು ಹೆಚ್ಚಿಸಿದೆಯಾದರೂ ರೈತರು ಹೇಳುತ್ತಾರೆ ಈ ಬೆಲೆಗೆ ಬೆಳೆ ಬೆಳೆದರೆ ನಾವು ನಷ್ಟವನ್ನೇ ಅನುಭವಿಸಬೇಕಾಗುತ್ತದೆ ಎಂದು. ರೈತ ಮುಖಂಡರುಗಳು ಹೇಳುವಂತೆ ಎಲ್ಲಾ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆಯನ್ನು ಪೂರ್ತಿಯಾಗಿ ಪರಿಷ್ಕರಿಸಬೇಕು ಅದನ್ನು ಈಗಿನದ್ದಕ್ಕಿಂತ ದುಪ್ಪಟ್ಟು ಮಾಡಿದರೆ ಮಾತ್ರ ರೈತರು ಆ ಬೆಳೆಯನ್ನು ಬೆಳೆದು ಬದುಕಬಹುದು. ನಿರ್ಧರಿತ ಬೆಂಬಲ ಬೆಲೆಯಲ್ಲಿ ರೈತ ಬೆಳೆ ಬೆಳೆಯಲು ಹಿಂಜರಿಯುವಂತಿದೆ ಎನ್ನುತ್ತಾರೆ.