ತೆಂಗಿನ ಮರಕ್ಕೆ ನೀರು ಹೆಚ್ಚು ಕೊಟ್ಟರೆ ಉತ್ತಮ !
ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಬಿಡುವ ಹೂ ಗೊಂಚಲಿನಲ್ಲಿ ಕಾಯಿಯೇ ಇರುವುದಿಲ್ಲ. ಒಂದೆರಡು ಎಳನೀರು ತೆಗೆಯಲೂ ಸಿಗುವುದಿಲ್ಲ. ಸಿಕ್ಕ ಎಳನೀರಿನಲ್ಲಿ ಬೊಗಸೆಯಷ್ಟೂ ನೀರು ಇರುವುದಿಲ್ಲ. ಇದಕ್ಕೆ ಕಾರಣ ಆ ಸಮಯದಲ್ಲಿ ಮರಕ್ಕೆ ಸಾಕಷ್ಟು ತೇವಾಂಶ ಲಭ್ಯವಾಗದೇ ಇರುವುದು ! ಕೆಲವು ಪ್ರದೇಶಗಳಲ್ಲಿ ಬೇಸಿಗೆ, ಮಳೆಗಾಲ ಎರಡೂ ಕಾಲಾವಧಿಯಲ್ಲೂ ಏಕ ಪ್ರಕಾರ ಕಾಯಿ ಇರುತ್ತದೆ. ಆದುದರಿಂದಲೇ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ಎಳನೀರು ಕುಡಿಯಲು ಸಿಗುತ್ತಿದೆ. ಒಂದು ತೆಂಗಿನ ಮರಕ್ಕೆ ದಿನಕ್ಕೆ 30-40 ಲೀ. ನೀರು ಸಾಕು ಎನ್ನುತ್ತಾರೆ. ಆದರೆ ಅಷ್ಟು ನೀರು…