ಬೇಗ ಮಳೆ ಬರುವ ಸೂಚನೆ ಇದೆ- ಎಚ್ಚರ.

ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಇದು ಮಳೆ ಬರುವ ಮುನ್ಸೂಚನೆಯಾಗಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವ ಸಾಧ್ಯತೆ ಹೆಚ್ಚು. ನಮ್ಮ  ಹಿರಿಯರು  ಕೆಲವು  ಹವಾಮಾನ ಮುನ್ಸೂಚನೆಗಳನ್ನು ಹೇಳಿದ್ದಾರೆ. ಗಣಪತಿ ಜಾತ್ರೆಯ ಓಕುಳಿಯಂದು ಮಳೆ ಬರುತ್ತದೆ. ಧರ್ಮಸ್ಥಳ ದೀಪೋತ್ಸವದಂದು ಮಳೆ ಬರುತ್ತದೆ. ಹಾಗೆಯೇ ಇನ್ನೂ ಕೆಲವು ವಿಷೇಶ ದಿನಗಳ ಸಂಧರ್ಭದಲ್ಲಿ ಮಳೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ. ಅದು ಸುಮ್ಮನೆ ಅಲ್ಲ. ಸಾಮಾನ್ಯವಾಗಿ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ  ಇದು ನಿಜವಾಗುತ್ತದೆ. ಮಳೆಯ ಈ ಮುನ್ಸೂಚನೆಯು ಹವಾಮಾನಕ್ಕೂ…

Read more

ಹತ್ತಿ ಬೀಜದ ದರ ಏರಿದೆ- ರಾಯಧನ ಇಳಿದಿದೆ.

ಜೈವಿಕ ತಂತ್ರಜ್ಞಾನದ ಬಿಟಿ ಹತ್ತಿಗೆ ಬೇಯರ್ ಕಂಪೆನಿಗೆ ಕೊಡಬೇಕಾದ ರಾಯಲ್ಟಿಯನ್ನು  ಭಾರತ ಸರಕಾರ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಆದರ ಪರಿಣಾಮ ಇಲ್ಲಿ ಹತ್ತಿ ಬೀಜದ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಬೆಲೆ  ಮಾತ್ರ 2.5 %  ಹೆಚ್ಚಳವಾಗಿದೆ. ನಾವು ಬೆಳೆಯುವ ಬಿಟಿ ಹತ್ತಿಯ ಬಿಟಿ ತಂತ್ರಜ್ಞಾನದ ಮೂಲ ಅಮೆರಿಕಾ ದೇಶದ ಮಾನ್ಸಂಟೋ ಕಂಪೆನಿ.  (ಈ ಕಂಪೆನಿಯನ್ನು ಜರ್ಮನ್ ಮೂಲದ ಬೇಯರ್ ಎಂಬ ಔಷಧ ಕಂಪೆನಿ ಖರೀದಿಸಿದೆ) ಇಲ್ಲಿ ಯಾವುದೇ ಕಂಪೆನಿ ಬಿಟಿ ಹತ್ತಿ ಬೀಜ ಉತ್ಪಾದಿಸಿದರೂ ಅದರ…

Read more

ವರ್ಜಿನ್ ಕೋಕೋನಟ್ (VCO) ಎಂಬುದು ಎಲ್ಲಾ ಸತ್ಯವಲ್ಲ.

ಕೊರೋನಾ ರೋಗದ ವಿರುದ್ಧ ದೇಹದ ಅಂತಃ ಶಕ್ತಿ ಹೆಚ್ಚಿಸಲು ವರ್ಜಿನ್ ಕೋಕೋನಟ್ ಆಯಿಲ್ ಒಳ್ಳೆಯದು ಎಂದು ಪ್ರಚಾರ ಪ್ರಾರಂಭವಾಗಿದೆ. ಅದರ ಜೊತೆಗೆ ಈ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ನಿಜವಾಗಿ ವರ್ಜಿನ್ ಕೋಕೋನಟ್ ಆಯಿಲ್ ಮತ್ತು ತೆಂಗಿನೆಣ್ಣೆಗೆ ಏನು ವ್ಯತ್ಯಾಸ. ತೆಂಗಿನ ಕಾಯಿಯಿಂದಲೇ ಹಿಂದಿನಿಂದಲೂ ಎಣ್ಣೆ ತೆಗೆಯುತ್ತಿದ್ದುದು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಶತಮಾನಗಳಿಂದ ಪ್ರಚಲಿತದಲ್ಲಿದ್ದ ಗಾಣದಿಂದ ಎಣ್ಣೆ ತೆಗೆಯುವ ತಂತ್ರಜ್ಞಾನ ವನ್ನು ಓವರ್ ಟೇಕ್ ಮಾಡಿ ಬಂದ ತಂತ್ರಜ್ಞಾನವೇ ವರ್ಜಿನ್ ಕೋಕೋನಟ್ ಆಯಿಲ್. ತೆಂಗಿನ ಕಾಯಿಯಿಂದ…

Read more
ripped coco beans

ಕೊಕ್ಕೋ – ಹಸಿ ಬೀಜದ ಸಂಸ್ಕರಣೆಯ ವಿಧಾನ .

ಅಡಿಕೆ – ರಬ್ಬರ್ ಒಂದಷ್ಟು ಸಮಯ ದಾಸ್ತಾನು ಇಟ್ಟು ನಂತರ ಮಾರಾಟ ಮಾಡಬಹುದು. ಆದರೆ ಕೊಕ್ಕೊ ಹಸಿ ಬೀಜವನ್ನು ಕೋಡು ಒಡೆದ ದಿನವೇ ಮಾರಾಟ ಮಾಡಬೇಕು. ಖರೀದಿದರಾರೇ ಇಲ್ಲದ ಮೇಲೆ ಮಾರುವುದು ಯಾರಿಗೆ? ಚಿಂತೆ ಬೇಡ ಅದನ್ನು ಒಣಗಿಸಿ. ಮತ್ತೆ ಮಾರಾಟ ಮಾಡಬಹುದು.    ನಮ್ಮಿಂದ ಖರೀದಿ ಮಾಡಿದ  ಕೊಕ್ಕೋ ಹಸಿ ಬೀಜಗಳನ್ನು ಖರೀದಿದಾರರು ವೈಜ್ಞಾನಿಕ ಹುಳಿ ಬರಿಸಿ  ಒಣಗಿಸುತ್ತಾರೆ. ನಂತರ ಅದರ ಉತ್ಪನ್ನಗಳನ್ನು ತಯಾರಿ ಮಾಡುತ್ತಾರೆ. ಸರಿಯಾಗಿ ಒಣಗಿಸಿ ನಾವು ಮಾರಾಟ ಮಾಡಿದರೂ ಸಹ ಅವರು…

Read more

ಅಡಿಕೆ ನಿಷೇಧವಾದರೂ ಅಚ್ಚರಿ ಇಲ್ಲ.

ಉತ್ತರ ಪ್ರದೇಶದಲ್ಲಿ ಸರಕಾರೀ ಕಚೇರಿಗಳ ಪರಿಸರದಲ್ಲಿ ಗುಟ್ಕಾ ,ಪಾನ್ ಮಸಾಲೆ ತಿನ್ನಬಾರದು ಎಂದು ಅಲ್ಲಿನ ಮುಖ್ಯಮಂತ್ರಿಗಳು  ಆದೇಶ ನೀಡಿದ್ದಾರೆ. UP CM Yogi Adityanath bans gutkha, paan masala in all government offices – India today) ಇತರ ರಾಜ್ಯಗಳೂ ಇದನ್ನು ಅನುಸರಿಸಿದರೆ ಅಡಿಕೆ ಬೆಳೆಗಾರರ ಪಾಡು ಹೇಳ ತೀರದು. ಸ್ವಚ್ಚ ಪರಿಸರದಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಕೃಷಿಕರು ಮತ್ತು ಕೃಷಿ ವ್ಯವಸ್ಥೆ ಯ ಮೇಲೆ ದೊಡ್ಡ ಹೊಡೆತವೇ  ಬಿದ್ದಿದೆ. ಎಷ್ಟು ಸಮಯವೋ ತಿಳಿಯದಾಗಿದೆ.  ಎಲ್ಲಾ…

Read more

ಸ್ವಾವಲಂಬಿ ಬದುಕಿಗೆ ಮನೆಯಂಗಳದಲ್ಲಿ ತರಕಾರಿ.

ಅವರವರು ಬೆಳೆದ ತರಕಾರಿ ಹಣ್ಣು  ಹಂಪಲುಗಳನ್ನು ಅವರವರೇ ಬಳಸಿದರೆ  ಅದರಷ್ಟು ಆರೋಗ್ಯಕ್ಕೆ ಒಳ್ಳೆಯದು ಬೇರೊಂದಿಲ್ಲ. ನಾವು ಅಂಗಡಿಯಿಂದ ತರುವ ತರಕಾರಿ ಹಣ್ಣು  ಹಂಪಲುಗಳು ಎಷ್ಟೆಂದರೂ ಅಷ್ಟೇ. ಅದರ ಗಾತ್ರ ದೊಡ್ದದಾಗಲು ನೋಟ ಆಕರ್ಷಕವಾಗಿರಲು ಲೆಕ್ಕಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ,ನಿಷೇಧಿತ ರಕ್ಷಕಗಳನ್ನು  ಬಳಕೆ  ಮಾಡಲಾಗುತ್ತದೆ ಎನ್ನುತ್ತಾರೆ. ಎಂದೋ ಕೊಯಿದ, ಎಲ್ಲಿಂದಲೋ ತಂದ ತರಕಾರಿ ಹಣ್ಣು ಹಂಪಲುಗಳಲ್ಲಿ ಶಿಲೀಂದ್ರ ಬೆಳೆದಿರುವುದೂ ಇದೆ. ವಿಷ ರಾಸಾಯನಿಕ ಬಳಸಿದ ಉಳಿಕೆ ಅಂಶ ಇರುವುದೂ ಇದೆ. ಇದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅವರವರೇ…

Read more

ಕಲ್ಲಂಗಡಿ ಬೆಳೆಗಾರರ ಕಣ್ಣೀರ ಕಥೆ.

ಕಲ್ಲಂಗಡಿ ಬೆಳೆಗಾರರಾದ ಹಿರಿಯಡ್ಕದ ಸುರೇಶ್ ರವರು ಹೇಳುತ್ತಾರೆ ಈ ವರ್ಷ ಯಾವ ಗ್ರಹಚಾರವೋ ತಿಳಿಯದು. 14  ಎಕ್ರೆಯಲ್ಲಿ ಮಾಡಿದ ಕಲ್ಲಂಗಡಿಯನ್ನು ಯಾರಿಗೆ ಮಾರುವುದೋ , ಯಾರು ಕೊಳ್ಳುವವರೋ ಗೊತ್ತಾಗುತ್ತಿಲ್ಲ. ಈ ನಷ್ಟವನ್ನು ಹೇಗೆ ಹೊಂದಿಸಿಕೊಳ್ಳುವುದು ಎಂದೇ ತಿಳಿಯುತ್ತಿಲ್ಲ ಎನ್ನುತ್ತಾರೆ. ಉಡುಪಿಯಿಂದ ಹೊನ್ನಾವರ ತನಕ ವ್ಯಾಪಿಸಿರುವ ಸಾವಿರ ಎಕ್ರೆಗೂ ಮಿಕ್ಕಿದ ಕಲ್ಲಂಗಡಿ ಬೆಳೆಗಾರರ  ಕಣ್ಣೀರ ಕಥೆ ಹೀಗೆಯೇ. ಅದೇ ರೀತಿ ರಾಜ್ಯದುದ್ದಕ್ಕೂ ಕಲ್ಲಂಗಡಿ ಬೆಳೆದವರ ಪಾಡು ಹೇಳ ತೀರದು. ಈ ವರ್ಷ ಯುಗಾದಿಯ ತರುವಾಯ ಮೇ ತನಕ ಕಲ್ಲಂಗಡಿಗೆ…

Read more

ತೆಂಗಿನೆಣ್ಣೆ-ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.

ತೆಂಗಿನೆಣ್ಣೆಯೂ ವೈರಸ್ ವಿರುದ್ಧ ಕೆಲಸ ಮಾಡುತ್ತದೆ. ಇದು ಕೊರೋನಾ ವೈರಸ್ ಗೆ ಔಷಧಿ ,ತೆಂಗಿನೆಣ್ಣೆ ತಿನ್ನಿ ಎನ್ನುತ್ತಿದ್ದಾರೆ.  ಇದು ಸುಮ್ಮನೆ ಹೇಳಿದ ವಿಚಾರ ಅಲ್ಲ. ಈ ಬಗ್ಗೆ ಕೆಲವು ಅಧ್ಯಯನಗಳು ನಡೆಯುತ್ತಿವೆ.ಇತ್ತೀಚೆಗೆ ಕೆಲವರು ಈ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಲಾರಂಭಿಸಿದ್ದಾರೆ. ಶುದ್ಧ ತೆಂಗಿನೆಣ್ಣೆ ಎಂಬುದು ಅನಾದಿ ಕಾಲದಿಂದಲೂ ಪರಮೌಷಧಿ ಎಂದೇ ಪರಿಗಣಿಸಲ್ಪಟ್ಟಿದೆ.  ಕ್ಕೊಬ್ಬರಿ ಎಣ್ಣೆಯನ್ನು ತಲೆಗೆ ಹಾಕಿದರೆ ಕೂದಲು ಬೆಳೆಯುತ್ತದೆ.  ತುಟಿ ಒಡೆದರೆ ತೆಂಗಿನೆಣ್ಣೆ. ಗಾಯವಾದರೆ ತೆಂಗಿನೆಣ್ಣೆ. ಅಲರ್ಜಿ ಇಂದ ಕಣ್ಣು ಉರಿ, ಮೈ ಉರಿ ಬಂದರೆ…

Read more

ಶ್ರೀಗಂಧದ ಬೆಳೆಗೆ ಆಸರೆ ಸಸ್ಯಗಳು

ಶ್ರೀಗಂಧ ಸಸಿ ಕೊಳ್ಳುವಾಗ ಅದರ ಜೊತೆಗೆ ಒಂದು ತೊಗರಿ ಗಿಡ ಉಚಿತವಾಗಿ ದೊರೆಯುತ್ತದೆ. ಇದು ಯಾಕೆಂದರೆ ಶ್ರೀಗಂಧಕ್ಕೆ ಪಾಸಾಡಿ ( ಜೊತೆ ಸಸ್ಯ) ಇದ್ದರೆ ಮಾತ್ರ ಅದಕ್ಕೆ ಬದುಕು. ಶ್ರೀಗಂಧದ ಬೇರು ಇನ್ನೊಂದು ಸಸ್ಯದ ಬೇರಿನಿಂದ ಆಹಾರವನ್ನು  ಪಡೆದು ಬದುಕುವ ವಿಶಿಷ್ಟ ಸಸ್ಯ. ಹಾಗೆಂದು ಇದು ಬದನಿಕೆ ಸಸ್ಯವಲ್ಲ. ಬದನಿಕೆ ಸಸ್ಯವು  ತಾನು ಆಸರೆ ಪಡೆದ ಸಸ್ಯವನ್ನು ಕೊಲ್ಲುತ್ತದೆ. ಇದು ಸಹಜೀವನ ನಡೆಸುತ್ತದೆ. ಜೊತೆಗೆ ಬೆಳೆದ ಸಸ್ಯವೂ ಬದುಕಿಕೊಳ್ಳುತ್ತದೆ. ಶ್ರೀಗಂಧಕ್ಕೆ ಆಸರೆ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿದ…

Read more
Silk cocoon for sale

ಸರ್ಕಾರೀ ಸಂಬಳ ಪಡೆದಂತೆ -ರೇಶ್ಮೆ ಕೃಷಿ.

ರೇಶ್ಮೆ ವ್ಯವಸಾಯ ಮನೆ ಮಂದಿ ಸೇರಿ ತಮ್ಮ ಸಂಪಾದನೆಯನ್ನು ತಾವೇ ಗಳಿಸುವ ವೃತ್ತಿ. ಇದನ್ನು ಮಾಡಲು ದೈಹಿಕ ಶ್ರಮ ಬೇಕಾಗಿಲ್ಲ. ಮಕ್ಕಳಿಂದ ಹಿಡಿದು ವೃದ್ದರ ವರೆಗೆ ಈ ವೃತ್ತಿಯಲ್ಲಿ  ತೊಡಗಿಸಿಕೊಳ್ಳಲು ಅವಕಾಶವಿದೆ. ಬರೇ ಇಷ್ಟೇ ಅಲ್ಲ. ರೇಶ್ಮೆ  ವ್ಯವಸಾಯ ಹೆಚ್ಚು ಇರುವ ಕಡೆ ಇದಕ್ಕೆ ಪೂರಕವಾಗಿ ಸ್ವ ಉದ್ಯೋಗ ಮಾಡಿ ಆದಾಯಗಳಿಸಲೂ ಅನುಕೂಲ ಇದೆ. ನಮ್ಮ ರಾಜ್ಯದ ರಾಮನಗರ, ಕನಕಪುರ, ಕೋಲಾರ, ಶಿಡ್ಲಘಟ್ಟ, ಹಾಗೆಯೇ ಚಿತ್ರದುರ್ಗ ಕಡೆ, ಅಲ್ಲದೆ ಉತ್ತರದಲ್ಲಿ ರಾಮದುರ್ಗ, ಬೆಳಗಾವಿ ಸುತ್ತಮುತ್ತ ಹಲವಾರು ರೈತರು…

Read more
error: Content is protected !!