ಸ್ಥಳೀಯ ರಾಮ ಫಲ ಹಣ್ಣು

ಸ್ಥಳೀಯ ಹಣ್ಣು ಬೆಳೆಸಿ- ಈಗ ಇದಕ್ಕೆ ಭಾರೀ ಬೇಡಿಕೆ.

ರಾಮಫಲ ಹಣ್ಣಿನ  ಬೆಲೆ ಏನಾದ್ರೂ ಗೊತ್ತೇ? ಕಿಲೋ 200 ಕ್ಕೆ ಮಾರಾಟ ಮಾಡುತ್ತಾರೆ. ರೈತರಿಗೆ  ರೂ.50 ಸಿಗುವುದಕ್ಕೆ ತೊಂದರೆ  ಇಲ್ಲ. ಸೀತಾಫಲದ ಯಥಾವತ್ ರುಚಿಯ ಈ ಹಣ್ಣಿನ ಬೆಳೆಗೆ ನೀರು, ಗೊಬ್ಬರ, ಕೀಟನಾಶಕ, ರೋಗನಾಶಕ ಬೇಕಾಗಿಲ್ಲ. ಚಳಿಗಾಲದಲ್ಲಿ ಮೊದಲು ದೊರೆಯುವ ಹಣ್ಣು. ಉತ್ತಮ ಬೇಡಿಕೆ  ಇದೆ. ಒಮ್ಮೆ ತಿಂದವರು ಮತ್ತೆ ಬೇಕು ಎಂದು ಬಯಸುವ ಹಣ್ಣು ಇದು.  ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ….

Read more
less water ans weed less

15 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು!

ಪಾಲಿಥೀನ್ ಶೀಟನ್ನು ಮಳೆಗಾಲ ಮುಗಿಯುವಾಗ ನೆಲಕ್ಕೆ ಹಾಕಿ. ತೀವ್ರ ಬೇಸಿಗೆಯ ಜನವರಿ ನಂತರ  15 ದಿನಕ್ಕೊಮ್ಮೆ ನೀರುಣಿಸಿದರೆ ಯತೇಚ್ಚ ಸಾಕಾಗುತ್ತದೆ.ಈ ವಿಧಾನದಿಂದ ಗರಿಷ್ಟ ನೀರು ಉಳಿಸಬಹುದು. ಸಸ್ಯಗಳ ಬೇರುಗಳಿಗೆ ಬೇಕಾಗುವ ಸೂಕ್ತ ವಾತಾವರಣವನ್ನೂ ದೊರಕಿಸಿಕೊಡಬಹುದು.  ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸುಧಾರಣೆಗೆ ನೀಡಿದ ಕೋಡುಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಭವಿಷ್ಯದಲ್ಲಿ  ನೀರಿನ ಸಮಸ್ಯೆಯಿಂದ ಪಾರಾಗಬಹುದು.    ಒಂದು ಕಾಲದಲ್ಲಿ ತರಕಾರಿ ಬೆಳೆಗಳಿಗೆ ಮಾತ್ರ ಬಳಸಲ್ಪಡುತ್ತಿದ್ದ ಈ ಮಲ್ಚಿಂಗ್ ಶೀಟುಗಳು ಈಗ ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆಯಾಗುತ್ತಿವೆ.  ಮಲ್ಚಿಂಗ್…

Read more

ನಮ್ಮ ಬೆಳೆಗಳಲ್ಲಿದೆ ರೋಗ ನಿರೋಧಕ ಶಕ್ತಿ.

ಜಗತ್ತನ್ನೇ ಅಂಜಿಸಿದ ಕೊರೋನಾ ವೈರಸ್ ಖಾಯಿಲೆಗೆ ಭಾರತೀಯರು ಸ್ವಲ್ಪ ಮಟ್ಟಿಗೆ ನಿರೋಧಕ ಶಕ್ತಿಯನ್ನು ಹೊಂದಿದವರೆಂದರೆ ತಪ್ಪಾಗಲಾರದು. ಇಲ್ಲಿನ ಜನ ಶೀತ ವಲಯದ ಜನಕ್ಕಿಂತ ಸ್ವಲ್ಪ ಗಡಸು. ಇಲ್ಲಿ ವಾತಾವರಣ, ಆಹಾರ ಪದ್ದತಿ, ಸಹಜವಾಗಿಯೇ ಮಾನವರಿಗೆ ರೋಗ ನಿರೋಧಕ ಶಕ್ತಿ ಇರುತ್ತದೆ.   ಹಿಂದೆ ದೊಡ್ದ ರೋಗ ( ಸಿಡುಬು) ಬಂದ ಸಮಯದಲ್ಲಿ ಒಂದೊಂದು ಕುಟುಂಬದಲ್ಲಿ ಕೆಲವರು ಸತ್ತೇ  ಹೋಗಿದ್ದರೂ ಕೆಲವರು ಬದುಕಿ ಉಳಿದಿದ್ದರು. ಅದು ಮಾರಾಣಾಂತಿಕವಾಗಿದ್ದರೂ ಸಹ ಮಾನವನ ಅಂತರ್ಗತ ನಿರೋಧಕ ಶಕ್ತಿಯಿಂದ ಕೆಲವರು ಬದುಕಿ ಉಳಿದ…

Read more

ಆರ್ಕಿಡ್ ಬೆಳೆಯಲ್ಲಿದೆ ಉತ್ತಮ ಆದಾಯ.!

ಆರ್ಕಿಡ್ ಸಸ್ಯಗಳನ್ನು ಅಪ್ಪುಗೆ ಗಿಡಗಳು ಎಂದು  ಕರೆಯಲಾಗಿದೆ. ಇದು ಬೇರೆ  ಮರದ ರೆಂಬೆ ಅಥವಾ ಇನ್ಯಾವುದಾದರೂ ಆಸರೆಯಲ್ಲಿ ತಮ್ಮ ಇಳಿಬಿಟ್ಟ ಬೇರುಮತ್ತು ಎಲೆಗಳ ಮೂಲಕ ಮಳೆ ನೀರನ್ನು ಹೀರಿಕೊಂಡು ಬದುಕುತ್ತವೆ.ಇವು ಹುಲ್ಲಿ ಜಾತಿಗೆ  ಸೇರಿದ ಸಂತತಿ. ಮೂಲ: ಭಾರತದ ಪಶ್ಚಿಮ ಘಟ್ಟ ಸಸ್ಯ, ಜೀವ ವೈವಿಧ್ಯಗಳ ಖನಿ. ಇಲ್ಲಿ ಏನುಂಟು ಏನಿಲ್ಲ ಎಂಬುದಿಲ್ಲ. ಅಪರೂಪದ ಸಸ್ಯಗಳು ಪುಷ್ಪಗಳು, ಹಣ್ಣು ಹಂಪಲುಗಳು, ಪಕ್ಷಿ ಪ್ರಾಣಿಗಳು, ಮಣ್ಣು ಜನ್ಯ ಜೀವಿಗಳು ಒಂದೋ ಎರಡೂ ಸಾವಿರಾರು. ಇಂತದ್ದರಲ್ಲಿ ಒಂದು ಆರ್ಕಿಡ್ ಗಳು….

Read more
silk cocoon decoration item

ಕೃಷಿಕರಿಗೆ ಇದು ಲಾಭದ ಸ್ವ ಉದ್ಯೊಗದ ಅವಕಾಶ

ಕೃಷಿಯ ವ್ಯವಸ್ಥೆಯೊಳಗೆ ಆದಾಯ ಹೆಚ್ಚಿಸಿಕೊಳ್ಳಲು ಎಷ್ಟೊಂದು ಅವಕಾಶಗಳಿವೆ.  ಇದನ್ನು ಬಳಸಿಕೊಂಡು ರೈತರು ತಮ್ಮ ಈಗಿನ ಆದಾಯವನ್ನು ದುಪ್ಪಟ್ಟು ಮಾಡಿಕೊಳ್ಳಲು ಸಾಧ್ಯವಿದೆ.  ಕೃಷಿ ಬರೇ ಕೃಷಿಕರನ್ನು ಮಾತ್ರ  ಬದುಕಿಸುವುದಲ್ಲ.  ಸಮಾಜದಲ್ಲಿ ಬಹಳಷ್ಟು ಜನರಿಗೆ  ಬದುಕು ನೀಡುವಂತದ್ದು ! ರೇಶ್ಮೆ ವ್ಯವಸಾಯ  ನಮ್ಮ ದೇಶದ ಅಸಂಖ್ಯಾತ ರೈತರಿಗೆ ಬದುಕು ನೀಡಿದ ಬೆಳೆ. ಹಿಪ್ಪು ನೇರಳೆ ಬೆಳೆ ಬೆಳೆಸಿ, ಅದರಲ್ಲಿ ಹುಳು ಸಾಕಿ ಅದರ ಗೂಡುಗಳನ್ನು  ಮಾರುಕಟ್ಟೆಗೆ  ಒಯ್ದು ಮಾರಾಟ ಮಾಡಿ ಸಂಪಾದನೆ  ಮಾಡುವುದು ಒಂದಾದರೆ, ಇದೇ ಗೂಡುಗಳಿಂದ ಬೇರೆ ಬೇರೆ…

Read more
ಚನ್ನರಾಯಪಟ್ನದ ಸೌತೆ ಕಾಯಿ

ಚನ್ನರಾಯಪಟ್ನದ ವಿಶಿಷ್ಟ ರುಚಿಕರ ಸೌತೇಕಾಯಿ.!!ಇದು ಇಲ್ಲಿಯ ವಿಶೇಷ.

  ಹಾಸನ ಜಿಲ್ಲೆ, ಚನ್ನರಾಯಪಟ್ಟಣ ಸುತ್ತಮುತ್ತ ನೂರಾರು ರೈತರು ಹಲವಾರು ವರ್ಷಗಳಿಂದ   ಬಿಳೀ ಬಣ್ಣದ ಸೌತೇ ಕಾಯಿ ಬೆಳೆಯುತ್ತಾರೆ. ಬಸ್ ಗಳಲ್ಲಿ ಪ್ರಯಾಣಿಸುವವರೆಲ್ಲಾ ಇದರ ಸವಿ ಕಂಡವರು. ರುಚಿಯಾದ  ಈ ಸೌತೇ ಕಾಯಿ ಹೇಗೆ ಎಲ್ಲಿ ಬೆಳೆಯಲ್ಪಡುತ್ತದೆ ಎಂಬ ಬಗ್ಗೆ ಇಲ್ಲಿದೆ  ಮಾಹಿತಿ.! ಈ ಸೌತೇಕಾಯಿ ಬೆಳೆಯುವವರು ಹಳ್ಳಿಯ ರೈತರು. ರೈತರ ಶ್ರಮಕ್ಕೆ ಬೆಲೆ ತಂದು ಕೊಡುವವರು ರಸ್ತೆ ಬದಿಯ ವ್ಯಾಪಾರಿಗಳು. ಈ ವ್ಯಾಪಾರಿಗಳಿಲ್ಲದಿದ್ದರೆ ರೈತರು ಶ್ರಮಕ್ಕೆ ಬೆಲೆ ಇಲ್ಲ. ನಾವೆಲ್ಲಾ ವ್ಯಾಪಾರಿಗಳನ್ನು ದೂರುತ್ತೇವೆ. ಅವರಿಲ್ಲದಿದ್ದರೆ ನಾವು…

Read more
ಫ್ಯುರಡಾನ್ ಹರಳು

ಫ್ಯುರಡಾನ್- ಫೋರೇಟ್ ಇದು ಅಪಾಯಕಾರೀ ಕೀಟನಾಶಕ.

ಹೆಚ್ಚಿನ ರೈತರು ನೆಲದ ಹುಳಕ್ಕೆ ಪ್ಯುರಡಾನ್ – ಫೋರೇಟ್  ಬಳಸುತ್ತಾರೆ . ಇದು ಪ್ರಭಲ ಕೀಟನಾಶಕ. ಅಗತ್ಯ ಇದ್ದರೆ ಮಾತ್ರ ಬಳಸಿದರೆ ಕ್ಷೇಮ. ಮಣ್ಣು ಸಂಬಂಧಿತ ಕೆಲವು ಜಂತು ಹುಳು ಹಾಗೂ ದುಂಬಿಗಳ ನಾಶಕ್ಕೆ ಫ್ಯುರಡಾನ್. ಫೋರೇಟ್ ಎಂಬ ಎರಡು  ಬಗೆಯ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ಮರಳಿನ (ರೆಸಿನ್) ಮೇಲೆ ಕೀಟನಾಶಕವನ್ನು ಲೇಪನಮಾಡಿ ತಯಾರಿಸುತ್ತಾರೆ. ಫ್ಯುರಡಾನ್ ನಲ್ಲಿ ವಾಸನೆ ಇಲ್ಲ ಫೋರೇಟ್ ನಲ್ಲಿ  ವಾಸನೆ ಇದೆ. ಫ್ಯುರಡಾನ್ ನಲ್ಲಿ ಕಾರ್ಬೋಸಲ್ಫಾನ್ ಎಂಬ ಅಂಶ 3% (G…

Read more

ಆಡಿಕೆ ಗರಿ ಹಳದಿಯಾಗಲು ಇದು ಕಾರಣ.

ಸಸ್ಯಗಳಿಗೆ ಉತ್ತಮ ಬಿಸಿಲು ದೊರೆತಾಗ ಅವುಗಳ ಎಲೆಗಳು ಹೆಚ್ಚು ಹೆಚ್ಚು ಉಸಿರಾಟ  ಕ್ರಿಯೆ  ನಡೆಸಿ ಚೆನ್ನಾಗಿ ಬೆಳೆಯುತ್ತವೆ. ಆದರೆ  ಕೆಲವೊಮ್ಮೆ ಈ ಅತಿಯಾದ ತಾಪಮಾನ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ. ಇಂತದ್ದರಲ್ಲಿ ಒಂದು ಅಡಿಕೆಯ ಗರಿಯಲ್ಲಿ ವಾಸ ಮಾಡುವ ಕೆಂಪು ಮತ್ತು ಬಿಳಿ ತಿಗಣೆ. ಅಡಿಕೆ ಬೆಳೆಗೆ  ಸಹ್ಯ ತಾಪಮಾನ 35 ಡಿಗ್ರಿ  ತನಕ. ಅದಕ್ಕಿಂತ ಹೆಚ್ಚಾದರೆ ಅದು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ  ನಮ್ಮ ಹಿರಿಯರು ಅಡಿಕೆ ತೋಟವನ್ನು ಅದಕ್ಕೆ ಸೂಕ್ತವಾದ ಜಾಗದಲ್ಲಿ ಮಾತ್ರ ಮಾಡಬೇಕು ಎನ್ನುತ್ತಿದ್ದರು. ಅಡಿಕೆ ಬೆಳೆಯಲು…

Read more
ಈರುಳ್ಳಿ

ಈರುಳ್ಳಿ ಬೆಳೆಸುವವರಿಗೆ- ಇಲ್ಲಿದೆ ವಿಶೇಷ ತಳಿಗಳು!

ಈರುಳ್ಳಿ ನಮ್ಮ ದೇಶದ ಪ್ರಮುಖ  ತರಕಾರಿ ಬೆಳೆ. ಇದನ್ನು ಬಲ್ಬ್ ಕ್ರಾಪ್ ಎನ್ನುತ್ತಾರೆ. ಪ್ರಪಂಚದಲ್ಲೇ ಈರುಳ್ಳಿ ಬೆಳೆಯುವ ಎರಡನೇ ದೊಡ್ಡ ದೇಶ ನಮ್ಮದು. ಮಹಾರಾಷ್ಟ್ರ ಮೊದಲ ಸ್ಥಾನದಲ್ಲೂ  ಕರ್ನಾಟಕ ಎರಡನೇ ಅತೀ ದೊಡ್ಡ ಈರುಳ್ಳಿ ಬೆಳೆಯುವ ರಾಜ್ಯ. ಈರುಳ್ಳಿ ತಳಿ ಅಭಿವೃದ್ದಿಯಲ್ಲಿ  ಕರ್ನಾಟಕದ ಪಾಲು ಅತೀ ದೊಡ್ದದು.  ಇದೇ ಕಾರಣಕ್ಕೆ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ,ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯನ್ನು  ಈರುಳ್ಳಿ ತಳಿ ಅಭಿವೃದ್ದಿಗೆ ನಿಯೋಜಿಸಿದೆ. ಇಲ್ಲಿ ಅರ್ಕಾ ಹೆಸರಿನ ಸುಮಾರು 10 ಬೇರೆ ಬೇರೆ…

Read more

ಸತ್ವಯುತ ಕಾಂಪೊಸ್ಟು ತಯಾರಿಕೆ ಹೀಗೆ.

ಕಾಂಪೋಸ್ಟು ಅದರಲ್ಲೇನಿದೆ. ಹೊಂಡ ಮಾಡುವುದು ಅದಕ್ಕೆ  ಎಲ್ಲಾ  ತ್ಯಾಜ್ಯಗಳನ್ನು  ಹಾಕುವುದು ಗೋಬರ್ ಗ್ಯಾಸ್ ಸ್ಲರಿಯನ್ನು  ಎರೆಯುವುದು. ಕೆಲವು ತಿಂಗಳಲ್ಲಿ ಕಾಂಪೋಸ್ಟು  ತಯಾರಾಗುತ್ತದೆ. ಇದು ನಿಜವಾಗಿಯೂ ಸೂಕ್ತ  ಕಾಂಪೋಸ್ಟು ತಾಂತ್ರಿಕತೆ ಆಲ್ಲ. ಇದರಲ್ಲಿ ಯಾವ ಪೋಷಕಗಳೂ ಇರುವುದಿಲ್ಲ. ಸಾವಯವ ತ್ಯಾಜ್ಯಗಳು ಹಾಕಿದ ತರಹವೇ ಯಾವುದೇ ರೂಪಾಂತರಗೊಳ್ಳದೆ ಇರುತ್ತವೆ. ಗುಂಡಿಯ  ಒಳಗಡೆ ನೀರು ಹೆಚ್ಚಾಗಿರುತ್ತದೆ. ಇದು ಸೂಕ್ಷ್ಮ ಜೀವಿಗಳನ್ನು ಬದುಕಲು ಬಿಡುವುದಿಲ್ಲ.  ಯಾವುದೇ ಸಾವಯವ ತ್ಯಾಜ್ಯ ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಾಗ ಅದು ಹುಡಿ ಆಗಬೇಕು. ಗುಂಡಿ ಪದ್ದತಿಯಲ್ಲಿ ಅದು ಆಗುವುದಿಲ್ಲ….

Read more
error: Content is protected !!