ಉತ್ತಮ ಇಳುವರಿಯ ತೆಂಗಿನ ಮರ

ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

ಇತ್ತೀಚೆಗೆ ಥೈಲಾಂಡ್ ನ ತೆಂಗು ತೋಟದ ಒಂದು ವೀಡಿಯೋ ಎಲ್ಲರ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಒಡಾಡಿದೆ. ಇದು ನಮಗೆ ಹೇಗೆ ತೆಂಗು ಬೆಳೆದರೆ ಉತ್ತಮ ಎಂಬ ಕೆಲವು ಸಂಗತಿಗಳನ್ನು ತಿಳಿಸುತ್ತದೆ.  ತೆಂಗಿನ ಸಸಿ ನಾಟಿ ಮಾಡಿದ 4 -6 ವರ್ಷಕ್ಕೇ ಫಸಲಿಗಾರಂಭಿ ಸುತ್ತದೆ. ಒಂದು ತೆಂಗಿನ ಮರವು  ಸುಮಾರು 30-40 ರಷ್ಟು ಗರಿಗಳು ಹಾಗೂ 100 ಕ್ಕೂ ಹೆಚ್ಚಿನ ಕಾಯಿಗಳನ್ನು  ಧರಿಸಬೇಕಾದರೆ ಅದು ಎಷ್ಟೊಂದು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಊಹಿಸಿ!. ಪ್ರತೀ ವರ್ಷವೂ ಫಸಲಿಗೆ…

Read more

ಉತ್ತಮ ಬಾಳೆಗೊನೆಗೆ ಎಷ್ಟು ಪೋಷಕಾಂಶ ಕೊಡಬೇಕು.

ಯಾವುದೇ ಬೆಳೆಗೆ ಅದರ ಬೆಳೆ ಅವಧಿಗನುಗುಣವಾಗಿ ಪೋಷಕಾಂಶಗಳನ್ನು  ಬಳಸಿಕೊಳ್ಳುತ್ತದೆ. ಧೀರ್ಘಾವಧಿ ಬೆಳೆಗಳು  ನಿಧಾನ ಗತಿಯಲ್ಲಿ ಪೋಷಕಗಳನ್ನು ಬಳಕೆ ಮಾಡಿಕೊಂಡರೆ ಅಲ್ಪಾವಧಿ ಬೆಳೆಗಳು ಅಧಿಕ ಪೋಷಕಗಳನ್ನು ಬಳಸಿಕೊಳ್ಳುತ್ತವೆ.   ಬಾಳೆ ಬೆಳೆ ಅಲ್ಪಾವಧಿ ಬೆಳೆ ಎಂದರೆ ತಪ್ಪಾಗಲಾರದು. ಇದು ನಾಟಿ ಮಾಡಿ 6 ರಿಂದ10  ತಿಂಗಳ ಒಳಗೆ ಫಸಲನ್ನು ಕೊಡುತ್ತದೆ. ಇಷ್ಟು ಕನಿಷ್ಟ ಅವಧಿಯಲ್ಲಿ  ಅದು ತನ್ನ ಶರೀರ ಸುಮಾರು ಕ್ವಿಂಟಾಲಿಗೂ ಹೆಚ್ಚು ಬೆಳೆಯುತ್ತದೆ. ಗೊನೆ ಹೊರ ಬೀಳುವ ಸಮಯದಲ್ಲಿ  ಮತ್ತು ಬಲಿಯುವ ಸಮಯದಲ್ಲಿ ಅದು ಇನ್ನೂ ಹೆಚ್ಚಾಗುತ್ತದೆ….

Read more

ಹೀಗೆ ಬೆಳೆ ಬೆಳೆದರೆ ಕೀಟ- ರೋಗ ಇಲ್ಲ.

ಬೆಳೆಗಳ  ಮೇಲೆ  ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ  ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ. Click to WhatsApp and build your website now! ಕ್ರಾಪ್ ಕವರ್ ಏನು? ಬೆಳೆ ಬೆಳೆಯುವಾಗ ಸಸ್ಯದ ಮೇಲೆ  ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ  ಇದನ್ನು spun…

Read more

ಒಂದು ತೆಂಗಿನ ಕಾಯಿಗೆ ರೂ.60 ಪಡೆಯಬಹುದು.

ತೆಂಗಿನ ಮರ ಒಂದು ಕಲ್ಪ ವೃಕ್ಷ. ಇದರ ಸರ್ವಾಂಗವೂ ಉಪಯುಕ್ತ. ಇದನ್ನು ನಾವು ಬಳಸಿಕೊಳ್ಳುವುದರಿಂದ ಗರಿಷ್ಟ  ಲಾಭವನ್ನು  ಪಡೆಯಬಹುದು.  ಇದು ಹೇಗೆ  ಎಂದನ್ನು ಪ್ರಾತ್ಯಕ್ಷಿಕೆಯಾಗಿ ತೋರಿಸಿಕೊಟ್ಟ ತೆಂಗಿನ ಪ್ಲಾಂಟೇಷನ್  ಗೋವಾದ ಮರ್ಗಾವ್ ನಲ್ಲಿ ಇದೆ. ಇಲ್ಲಿ ಬರೇ  ತೆಂಗು ಬೆಳೆಯನ್ನು ಆಧರಿಸಿ ಬೇರೆ ಬೇರೆ ಮೌಲ್ಯ ವರ್ಧಿತ ಉತ್ಪನ್ನವನ್ನು  ತಯಾರಿಸಿ  ಆ ಬೆಳೆಯಿಂದ  ಗರಿಷ್ಟ ಲಾಭವನ್ನು ಪಡೆಯಲಾಗುತ್ತಿದೆ.  ಒಂದು ತೆಂಗಿನ ಕಾಯಿಯ ಮೌಲ್ಯವನ್ನು ಇವರು ಲೆಕ್ಕ ಹಾಕಿ ರೂ. 6೦ ರೂ  ಆ ಗಳಿಗೂ  ಹೆಚ್ಚು ಪಡೆಯುತ್ತಾರೆ….

Read more
ಇಂಟರ್ ಸಿ ಮಂಗಳ ತಳಿಯ ಅಡಿಕೆ ಗೊನೆ

ಮಂಗಳ ಇಂಟರ್ಸಿ – ಇದು ಹೊಸ ತಳಿ ಅಲ್ಲ.

ಅಧಿಕ ಇಳುವರಿ ಮತ್ತು ಎತ್ತರಕ್ಕೆ  ಬೆಳೆಯುವುದಿಲ್ಲ ಎಂಬ ಕಾರಣಕ್ಕೆ  ರೈತರು   ಇಂಟರ್ಸಿ ಅಥವಾ ಇಂಟರ್ ಮಂಗಳ, ಅಥವಾ ಇಂಟರ್ ಸೆ, ತಳಿಯನ್ನು  ಬಯಸುತ್ತಾರೆ. ಆದರೆ ಇಂಟರ್ ಸೆ ಎಂಬುದರ ವಾಸ್ತವಿಕತೆ ಏನು ಗೊತ್ತೇ? ಇದು ಅಡಿಕೆ ಸಸಿ  ನೆಡುವ ಸೀಸನ್. ಕೆಲವು ಕಡೆ ಬೀಜದ ಅಯ್ಕೆಯೂ  ಪ್ರಾರಂಭವಾಗಿದೆ. ಬಹುತೇಕ ನರ್ಸರಿಗಳಲ್ಲಿ ಇಂಟರ್ ಮಂಗಳಕ್ಕೇ ಹೆಚ್ಚು ಬೇಡಿಕೆ. ಇದನ್ನೇ ಎಲ್ಲರೂ ಅಧಿಕ ಪ್ರಮಾಣದಲ್ಲಿ ಮಾಡುವವರು. ರೈತರು ಬಯಸುವುದು ಇದನ್ನೇ. ಇಂಟರ್ ಸಿ ಎಂದರೇನು: ಇಂಟರ್ಸಿ ಎಂದರೆ ಏನು. ಎಂಬ…

Read more

ಖರ್ಚು ಇಲ್ಲದ ಕೀಟ ನಿಯಂತ್ರಣ ಮತ್ತು ಅಧಿಕ ಫಲ.

ಇದು ಪ್ರಾಕೃತಿಕ ಕೃಷಿ ಪದ್ದತಿ. ಪ್ರಕೃತಿಯ ನಡೆಗೆ ಸರಿಯಾಗಿ ನಮ್ಮ ಹೆಜ್ಜೆ. ಇದಕ್ಕೆ ಖರ್ಚು ಇಲ್ಲ. ನಿಮ್ಮ ಆರೋಗ್ಯಕ್ಕೂ ಇದು ಒಳ್ಳೆಯದು. ಬೆಳೆಗಳು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ನಿಮಗೆ ಅಧಿಕ ಇಳುವರಿಯ ಮೂಲಕ ಪ್ರತಿಫಲ ಕೊಡುತ್ತವೆ. ತೀರ್ಥಹಳ್ಳಿಯ ಶ್ರೀ. ಪುರುಷೋತ್ತಮರಾಯರು ಎಲ್ಲಾ ಕಡೆ ಹೇಳುತ್ತಿದ್ದ ಮಾತು ಇದು, “ನೀವು ನಿಮ್ಮ ಹೊಲದ ಮೂಲೆ ಮೂಲೆಗೂ ಹೋಗಿದ್ದೀರಾ?, ಮರಗಳ ಬಳಿ ಹೋಗಿ ಮಾತನಾಡಿದ್ದೀರಾ” ಇದನ್ನು ಕೇಳಿ ಜನ ನಗೆಯಾಡಿದ್ದೂ ಇರಬಹುದು. ಆದರೆ ಈ ವಿಚಾರ ತಿಳಿಯದೆ ಆಡಿದ ಮಾತು…

Read more

ಸೂಕ್ಷ್ಮ ನೀರಾವರಿಯ ಹೃದಯ – ಫಿಲ್ಟರ್ ಗಳು.

ಫಿಲ್ಟರ್ ಎಂದರೆ ಯಾವ ನೀರಿನಲ್ಲಿ  ಯಾವ ರೀತಿಯ ಕಶ್ಮಲ ಇದೆ ಎಂಬುದನ್ನು  ಗಮನಿಸಿ ಅದನ್ನು ಸಮರ್ಪಕವಾಗಿ ಸೋಸಿ ಕೊಡುವ  ವ್ಯವಸ್ಥೆ.  ಬರಿ ಕಣ್ಣಿನಲ್ಲಿ ನೀರನ್ನು ಕಾಣುವಾಗ ಬಹಳ ಸ್ವಚ್ಚವಾಗಿ ಕಂಡರೂ ಅದರಲ್ಲಿ ಏನಾದರೂ ಕಶ್ಮಲ ಇದ್ದೇ ಇರುತ್ತದೆ. ಅದನ್ನು ಸೋಸದೇ ಹನಿ ನೀರಾವರಿಯ ಮೂಲಕ ಹರಿಸಿದರೆ  ವ್ಯವಸ್ಥೆ  ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಕಶ್ಮಲಗಳನ್ನು ನೀರಿನಿಂದ ಪ್ರತ್ಯೇಕಿಸಿ ಸೋಸಿ ಕೊಡುವ ಬೇರೆ ಸೋಸು ವ್ಯವಸ್ಥೆಗಳು ಇವು. ಮೆಷ್  ಫಿಲ್ಟರ್: (ಸ್ಕ್ರೀನ್ ) ಇದು 80-100-120 ಮೈಕ್ರಾನ್…

Read more

ದಾಳಿಂಬೆ-ಗುಣಮಟ್ಟದ ಹಣ್ಣು ಪಡೆಯುವ ವಿಧಾನ

ದಾಳಿಂಬೆ  ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಕಾಯಿ ಒಡೆಯುವಿಕೆ ಮತ್ತು ಕಾಯಿಯ ನೋಟ ಕೆಡುವಿಕೆ. ಬೆಳೆದು ಇನ್ನೇನು ಕಠಾವಿಗೆ ಸಿದ್ದವಾಗುವ ಸಮಯದಲ್ಲಿ ನೋಟವನ್ನು ಕೆಡಿಸುವ  ಕಾಯಿ ಒಡಕ, ಮತ್ತು ಸನ್ ಬರ್ನ್ ಸಮಸ್ಯೆ ಕಂಡು ಬರುತ್ತದೆ. ಇದರಿಂದ ಅರ್ಧಕ್ಕೂ  ಹೆಚ್ಚು ಕಾಯಿ ಉಪಯೋಗಕ್ಕಿಲ್ಲದೆ ನಷ್ಟವಾಗುತ್ತದೆ. ಈ ತೊಂದರೆ  ಮತ್ತು ರೋಗ ,ಕೀಟ ಸಮಸ್ಯೆಗಳಿಂದ ಪಾರಾದರೆ ಇದು ಲಾಭದ ಉತ್ತಮ ಬೆಳೆ.   ಯಾಕೆ ಆಗುತ್ತದೆ? ದಾಳಿಂಬೆಯ ಕಾಯಿಗೆ ಯಾವ ರೋಗಾಣು – ಕೀಟಾಣು ಬಾಧೆ ಇಲ್ಲದಿದ್ದರೂ ಇದು…

Read more
ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…

Read more

ಇದೇ ಫೆಬ್ರವರಿ 5-6-7-8 ನೆನಪಿರಲಿ.

ದೇಶ ಸುತ್ತಿದರೆ ಕೋಶ ಓದಿದ ಫಲವಂತೆ. ಅದೇ ರೀತಿಯಲ್ಲಿ ರೈತರಿಗೆ  ಜ್ಞಾನ ಎಲ್ಲಿ ಸಿಗುತ್ತದೆಯೋ ಅಲ್ಲಿಗೆ ಭೇಟಿ ಕೊಟ್ಟರೆ ಅದು ಅವರ ವೃತ್ತಿಗೆ ತೊಡಗಿಸಿದ ಬಂಡವಾಳ.  ನಿಮ್ಮ ಜ್ಞಾನ ಬಂಡವಾಳವನ್ನು ಹೆಚ್ಚಿಸಬೇಕೆಂಬ ಹಂಬಲ ಇದ್ದಲ್ಲಿ ಇದೇ ತಿಂಗಳ 5 -6-7 ಮತ್ತು 8 ರಂದು  ಹೇಸರಘಟ್ಟಕ್ಕೆ ಭೇಟಿ ಕೊಡಿ. ಸಂಸ್ಥೆಯ ನಿರ್ಧೇಶಕರಾದ ಡಾ| ಎಂ ಆರ್ ದಿನೇಶ್ ರವರು  ನಿಮ್ಮನ್ನು ಆಮಂತ್ರಿಸುತ್ತಾರೆ.     Click here to watch video of IIHR    …

Read more
error: Content is protected !!