ಮೆಣಸಿನ ಬಳ್ಳಿಯ ವಿಹಂಗಮ ನೊಟ

ವಿಯೆಟ್ನಾಂ ಮೀರಿಸುವ ಕರಿಮೆಣಸು ಬೆಳೆಗಾರರು ಇವರು.

ವಿಯೆಟ್ನಾಂ ದೇಶದಲ್ಲಿ ಕರಿಮೆಣಸು, ಗೋಡಂಬಿ ಬೆಳೆಯನ್ನು ತೀರಾ ವಾಣಿಜ್ಯಿಕವಾಗಿ ಬೆಳೆದು ಗರಿಷ್ಟ ಇಳುವರಿ ಪಡೆಯುತ್ತಾರಂತೆ.  ಅಲ್ಲಿರುವ  ಎಲ್ಲಾ ಅನುಕೂಲಗಳು ನಮಲ್ಲೂ ಇದ್ದಿದ್ದರೆ  ನಮ್ಮ ರೈತರೂ ಅವರನ್ನು ಮೀರಿಸುತ್ತಿದ್ದರು. ಆದರೂ ನಮ್ಮ ರೈತರು ಹಿಂದೆ ಬಿದ್ದಿಲ್ಲ. ಅಂದು -ಇಂದು: ಹಿಂದೆ ನಮಗೆ ನಮ್ಮ ಊರು, ಹೆಚ್ಚೆಂದರೆ ರಾಜ್ಯ , ಹೊರಗಡೆಯ ಪರಿಚಯ ಇರಲಿಲ್ಲ. ಹೆಚ್ಚೇಕೆ ಬೆಂಗಳೂರಿಗೆ ಹೋಗಿ  ಎನಾದರೂ ತಿಳಿದುಕೊಳ್ಳುವುದೂ ಸಹ ಕಷ್ಟವಿತ್ತು. ಸ್ಥಳೀಯ  ಬೆಳೆ ಮಾಹಿತಿಗಳಲ್ಲೇ ಕೃಷಿ ಮಾಡುತ್ತಿದ್ದೆವು. ಕೃಷಿ ವಿಜ್ಞಾನ, ತಂತ್ರಜ್ಞಾನಗಳು ಇದ್ದವಾದರೂ ಅದನ್ನು ಪಡೆದುಕೊಳ್ಳಲು…

Read more
ಅಕಾಲಿಕ ಮರಣ – ಕೃಷಿರು

ಅಕಾಲಿಕ ಮರಣ – ಕೃಷಿರು ಈ ಸಾಲಿನಲ್ಲಿ ಮೊದಲಿಗರು.

ಆರೋಗ್ಯವಂತರು ಎಂದು ಸಮಾಜ ಗುರುತಿಸಿದ್ದ ರೈತಾಪಿ ವರ್ಗಕ್ಕೆ ಈಗ ಆನಾರೋಗ್ಯ ಅಂಟಿದೆ. ಅನಾರೋಗ್ಯ,ಅಕಾಲಿಕ ಮರಣ ಹೊಂದುವವರೂ ಇವರೇ. ಇದಕ್ಕೆ  ಕೀಟ ನಾಶಕ ಕಾರಣವೇ?. ಹೌದು ಎನ್ನುತ್ತದೆ ಅಧ್ಯಯನಗಳು. ಘಟನೆ: ಅಕಾಲಿಕ ಮರಣ ಹೊಂದುವವರ ಸಾಲಿನಲ್ಲಿ ಕೃಷಿಕರು ಸೇರುತ್ತಿರುವುದು ಒಂದು ದುರಂತವೇ ಸರಿ. ಮಹಾರಾಷ್ಟ್ರದ ಯವತ್ಮಲ್ Yavatmal ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಕೃಷಿಕರು ಪ್ರೊಪೆಫೊನಸ್ ಎಂಬ ಕೀಟನಾಶಕವನ್ನು ಸಿಂಪಡಿಸಿದ ಕಾರಣ,  18 ರೈತರು ಅದರ ಗಾಳಿಯನ್ನು ಉಸಿರಾಡಿ ಸತ್ತರಂತೆ. ಸುಮಾರು 467 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರಂತೆ. ಕೆಲವು…

Read more
ನಾವೇ ಪಶು ಆಹಾರ ತಯಾರಿಸಿಕೊಂಡ ಹಸು ಸಾಕಾಣಿಕೆ

ನಾವೇ ಪಶು ಆಹಾರ ತಯಾರಿಸಿಕೊಂಡರೆ ಹಸು ಸಾಕಾಣಿಕೆ ಪೂರೈಸುತ್ತದೆ

ಹೈನುಗಾರಿಕೆ ಮಾಡುವವರು ಅವರವರೇ ಪಶು ಆಹಾರ ತಯಾರಿಸಿಕೊಂಡರೆ ಹಸು ಸಾಕಾಣಿಕೆ ಪೂರೈಸುತ್ತದೆ. ನೀವು ನಿಮ್ಮ ಹೈನು ರಾಸುಗಳಿಗೆ ಹುಲ್ಲು ಬಿಟ್ಟು ಬೇರೆ ಎಲ್ಲವನ್ನೂ ತರುವುದು ಹೊರಗಡೆಯಿಂದ. ಇದು ನಿಮ್ಮನ್ನು   ವೃತ್ತಿಯಲ್ಲಿ  ಹೆಚ್ಚು ಸಮಯ ಮುನ್ನಡೆಸಲು ಬಿಡುವುದಿಲ್ಲ. ಕಾರಣ ನಿಮ್ಮ ಆದಾಯದ ಬಹುಪಾಲು ಅವರ ಕೈ ಸೇರುತ್ತದೆ. ಅವರು ಬೇಗ ಮೇಲೇರುತ್ತಾರೆ. ನೀವು ಹೈನುಗಾರಿಕೆ ಬೇಡ ಎಂದು ಹಸು ಮಾರಾಟ ಮಾಡಿ ಮತ್ತೆ ಹಿಂದಿನ ಸ್ಥಿತಿಗೇ ಬರುತ್ತೀರಿ. ಕೊಂಡು ತರುವ ಪಶು ಆಹಾರ: ಮಾರುಕಟ್ಟೆಯಲ್ಲಿ ತರಾವಳಿಯ ಪಶು ಆಹಾರಗಳಿವೆ….

Read more
ತೆಂಗಿನ ಗರಿಯ ಕೀಟ

ತೆಂಗಿನ ಗರಿಗಳ ಜೀವ ಹಿಂಡುತ್ತಿದೆ ಬಿಳಿ ನೊಣ.

ಕರ್ನಾಟಕ-  ಕೇರಳದ ಕರಾವಳಿಯುದ್ದಕ್ಕೂ ತೆಂಗಿನ ಗರಿಗಳಿಗೆ ಬಿಳಿ ನೊಣ ತೊಂದರೆ ಮಾಡಿ, ಈಗ ಇದು ತೆಂಗು ಬೆಳೆಯಲಾಗುವ  ಎಲ್ಲಾ ಕಡೆಗೂ ವ್ಯಾಪಿಸಿದೆ. ತೆಂಗಿನ ಗರಿಯ ಅಡಿ  ಭಾಗದಲ್ಲಿ ಬಿಳಿ ಬಿಳಿಯಾಗಿ ಕಾಣುವ ಈ ಕೀಟ, ದೊಡ್ದ ಹಾನಿ ಮಾಡುವುದಿಲ್ಲ ಎನ್ನುತ್ತಾರೆಯಾದರೂ, ನಿಯಂತ್ರಣ ಕೈಗೊಳ್ಳದಿದ್ದರೆ ಬೇರೆ ಬೆಳೆಗೆ  ಹಾನಿ ಮಾಡುವ ಸಂಭವ ಇದೆ. ಅದನ್ನು  ನಿಯಂತ್ರಿಸಲು  ಪ್ರಕೃತಿಯಲ್ಲಿ  ಬೇರೆ ಜೀವಿಗಳಿವೆ. ರೈತರು ಯಾವುದೇ ಕಾರಣಕ್ಕೆ ಪ್ರಭಲ ಕೀಟ ನಾಶಕದ ಬಳಕೆ  ಮಾಡದೆ ಸುರಕ್ಷಿತ ಕ್ರಮ ಅನುಸರಿಸಿರಿ ಇದನ್ನು ನಿಯಂತ್ರಣಕ್ಕೆ…

Read more

ಗೇರು ಬೆಳೆಯಲ್ಲಿ ಹೆಚ್ಚು ಇಳುವರಿ ಬೇಕಾದರೆ ಇದು ಅಗತ್ಯ.

ಗೇರು ಚಿಗುರು ಬಿಡುವ ಸಮಯ ಅಕ್ಟೋಬರ್ ನಿಂದ ಪ್ರಾರಂಭವಾಗಿ ಫೆಬ್ರವರಿ ತನಕವೂ ಮುಂದುವರಿಯುತ್ತದೆ. ಚಿಗುರುವ ಸಮಯದಲ್ಲಿ ಈ ಬೆಳೆಗೆ ಕೀಟಗಳ ತೊಂದರೆ  ಜಾಸ್ತಿ.ಇದನ್ನು  ನಿವಾರಣೆ ಮಾಡಿಕೊಳ್ಳದಿದ್ದರೆ , ಚಿಗುರು ಹಾಳಾಗುತ್ತದೆ. ಫಸಲು ಗಣನೀಯವಾಗಿ ಕಡಿಮೆಯಾಗುತ್ತದೆ. ಯಾವ ಕೀಟಗಳಿಂದ ತೊಂದರೆ: ಚಿಗುರುವ ಸಮಯದಲ್ಲಿ ಎಳೆ ಚಿಗುರನ್ನು ತಿನ್ನಲು ಗುಲಗುಂಜಿ ಹುಳದ ತರಹದ ಒಂದು ಹಾರುವ ಕೀಟ ತಿನ್ನುತ್ತದೆ. ಇದರಿಂದ ಎಳೆ  ಚಿಗುರು ಹಾಳಾಗಿ ಒಣಗುತ್ತದೆ. ಎಲೆಗಳಲ್ಲೊ ಹರಿತ್ತು  ಇರುವುದಿಲ್ಲ. ತಿಂದು ಹಾಕಿದ ಹಿಕ್ಕೆ  ಇರುತ್ತದೆ. ಕೆಲವು ಸಮಯದಲ್ಲಿ  ಇದರ…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಟಿ- ಸೊಳ್ಳೆ ನಿಯಂತ್ರಣಕ್ಕೆ – ಸಿಂಪರಣೆ ಬೇಕಾಗಿಲ್ಲ.

ಗೋಡಂಬಿ ಅಥವಾ ಗೇರು ಒಣ ಭೂಮಿಯಲ್ಲಿ ಬೆಳೆಯಬಹುದಾದ ಲಾಭದಾಯಕ ಬೆಳೆ. ಇದರ ಪ್ರಮುಖ ಸಮಸ್ಯೆ ಎಂದರೆ ಟಿ- ಸೊಳ್ಳೆ. ಇದರ ನಿಯಂತ್ರಣಕ್ಕೆ ಈ ತನಕ ವಿಷ  ರಾಸಾಯನಿಕ ಸಿಂಪರಣೆಯನ್ನು  ಶಿಫಾರಸು ಮಾಡಲಾಗುತ್ತಿದ್ದರೆ  ಈಗ ಸುರಕ್ಷಿತ ವಿಷ  ರಹಿತ  ಪರಿಹಾರ ಫಲಿತಾಂಶ ಕೊಟ್ಟಿದೆ. ಇನ್ನು “ಟಿ” ಸೊಳ್ಳೆ ನಿಯಂತ್ರಣಕ್ಕೆ ಸಿಕ್ಕ ಸಿಕ್ಕ ವಿಷ ಕೀಟ ನಾಶಕ ಬಳಸಬೇಕಾಗಿಲ್ಲ. “ಟಿ” ಸೊಳ್ಳೆಯಿಂದ ಗೋಡಂಬಿ ಬೆಳೆಯಲ್ಲಿ ಸುಮಾರು 50% ಕ್ಕೂ ಹೆಚ್ಚಿನ ಫಸಲು ನಷ್ಟವಾಗುತ್ತದೆ. ಗೇರು ಸಸಿಗಳು ಚಿಗುರುವ ಸಮಯದಿಂದ ಪ್ರಾರಂಭವಾಗಿ …

Read more
ವಯಸ್ಸಿನಲ್ಲಿ ಮರ ಗಾತ್ರದಲ್ಲಿ ಗಿಡ

ವಯಸ್ಸಿನಲ್ಲಿ ಮರ – ಗಾತ್ರದಲ್ಲಿ ಗಿಡ.

ಇವು ವಯಸ್ಸಿನಲ್ಲಿ  ಮರಗಳಾದರೂ  ನೋಡಲು  ಸಸಿಗಳು. ಇದು ನಾವು ಮಾಡುವುದು. ಇದರ ಉದ್ದೇಶ ಭವಿಷ್ಯದಲ್ಲಿ ಕೃಷಿಗೆ ಎದುರಾಗಲಿರುವ  ಕಾರ್ಮಿಕರ ಕೊರತೆಗೆ ಪರಿಹಾರ.  ಮರ ಸಣ್ಣದಿರಬಹುದು. ಇದಕ್ಕೆ  ನೀರು, ಗೊಬ್ಬರ, ಮತ್ತು ಇನ್ನಿತರ ನಿರ್ವಹಣೆ  ಮಾಡಿದಾಗ  ಇದರಲ್ಲಿ ದೊಡ್ದ  ಮರದಲ್ಲಿ ಪಡೆಯುವಷ್ಟೇ ಇಳುವರಿಯನ್ನು  ಪಡೆಯಬಹುದು. ಇದುವೇ ಅತ್ಯಧಿಕ ಸಾಂದ್ರ ಬೇಸಾಯ ತಾಂತ್ರಿಕತೆ. ಅಧಿಕ ಸಾಂದ್ರ ಬೆಳೆ: ಸಾಂಪ್ರದಾಯಿಕವಾಗಿ ಮಾವನ್ನು 30 ಅಡಿ ಅಂತರದಲ್ಲಿ ಬೆಳೆಸುತ್ತಾರೆ. ಆಗ ಅದು ದೊಡ್ದ ಮರ ಈ ಪ್ರಕಾರ  ಬೆಳೆಸಿದಾಗ ಎಕ್ರೆಗೆ  80 ಗಿಡ…

Read more
ದಾಳ್ಚಿನಿ ಮೊಗ್ಗು

ಸರ್ವಾಂಗಕ್ಕೂ ಬೆಲೆ ಇದೆ- ದಾಳ್ಚಿನಿ – ಬೆಳೆಸಿ.

ಯಾವುದೇ ರೋಗ ಇಲ್ಲ. ಕೀಟ ಇಲ್ಲ. ಬೆಳೆಸಲು ಗೊಬ್ಬರ, ನೀರಾವರಿ ಬೇಕಿಲ್ಲ . ಫಸಲಿಗೆ ಮಾತ್ರವಲ್ಲದೆ, ಎಲೆ , ತೊಗಟೆ, ಕಾಯಿ ಎಲ್ಲದಕ್ಕೂ ಬೇಡಿಕೆ ಇರುವ ನಮ್ಮೆಲ್ಲರ ಚಿರಪರಿಚಿತ ಸಂಬಾರ ಮರ ದಾಳ್ಚಿನಿ.  ಬೆಳೆಸಿದವರಿಗೆ  ನಿರಂತರ ಲಾಭ ತಂದು ಕೊಡಬಲ್ಲ ಸಸ್ಯ ದಾಳ್ಚಿನಿ. ದಾಳ್ಚಿನಿ ಕಾಯಿಗೆ 750 ರೂ ತನಕ ಇರುತ್ತದೆ. ಎಲೆಗೆ ಕಿಲೋ 50 ರೂ. ಚೆಕ್ಕೆಗೆ ಕಿಲೋ 75-100 ತನಕವೂ ಇರುತ್ತದೆ  ಒಂದು ಗಿಡದ ಸರ್ವಾಂಗಕ್ಕೂ ಬೆಲೆ ಇರುವ ಏಕಮಾತ್ರ ಸಾಂಬಾರ ಬೆಳೆ ದಾಳ್ಚಿನಿ….

Read more
ಫ್ರೂನಿಂಗ್ ಕ್ರಮ

ಕಾಫೀ ಗಿಡದ ವೈಜ್ಞಾನಿಕ ಪ್ರೂನಿಂಗ್ ವಿಧಾನ.

ಕಾಫೀ ಸಸ್ಯ ಅದರಷ್ಟಕ್ಕೇ ಬೆಳೆದರೆ  ಸಣ್ಣ ಮರವೇ ಆಗಬಲ್ಲುದು. ಆದರೆ  ಕೊಯಿಲು ಮುಂತಾದ ನಿರ್ವಹಣೆಗೆ ಅದನ್ನು ವ್ಯವಸ್ಥಿತವಾಗಿ ಆಕಾರ ಕೊಡಬೇಕು. ಅದನ್ನೇ ಪ್ರೂನಿಂಗ್ ಎನ್ನುತ್ತಾರೆ. ಹಂತ ಹಂತವಾಗಿ ನೇರ ಚಿಗುರನ್ನು ತೆಗೆದು ರೆಕ್ಕೆ  ಚಿಗುರನ್ನು ಮಾತ್ರ ಉಳಿಸುವ ಈ ವಿಧಾನ ಕಾಫಿ ಬೆಳೆಯ ಪ್ರಮುಖ ನಿರ್ವಹಣೆ. ಕಾಫೀ ಬೆಳೆಯ ನಾಡಿನಲ್ಲಿ  ನಿತ್ಯ ಕಾಫೀ ತೋಟದ ಕೆಲಸ ಇದ್ದೇ ಇರುತ್ತದೆ. ಮಳೆಗಾಲ ಪ್ರಾರಂಭದಲ್ಲಿ ಮರದ ನೆರಳು ತೆಗೆಯುವ ಕೆಲಸವಾದರೆ ಮಳೆಗಾಲ ಮುಗಿಯುವಾಗ ಸಸ್ಯದಲ್ಲಿ ಬರುವ ಚಿಗುರು ತೆಗೆಯುವ ಕೆಲಸ….

Read more
pepper raw

ಕರಿಮೆಣಸಿನ ಈ ವಿಶೇಷ ಗೊತ್ತೇ..?!

ಜನ ಸ್ಲಿಂ ಆಗಬೇಕು ಎಂದು ಜಿಮ್ ಗೆ ಹೋಗುತ್ತಾರೆ. ಓಡುತ್ತಾರೆ. ವ್ಯಾಯಾಮ ಮಾಡುತ್ತಾರೆ. ದುಬಾರಿ ಬೆಲೆ ತೆತ್ತು ಯಾವ್ಯಾವುದೋ ಔಷಧಿ ಬಳಕೆ ಮಾಡುತ್ತಾರೆ. ಆದರೆ ಅದಕ್ಕಿಂತೆಲ್ಲಾ ಸುಲಭವಾಗಿ ತ್ವರಿತವಾಗಿ ದೇಹ ಸ್ಲಿಂ ಆಗಬೇಕಿದ್ದರೆ  ದಿನಾ 5-10  ಕಾಳು ಕರಿಮೆಣಸು  ತಿನ್ನಿ. ಸ್ಲಿಂ ಗಾಗಿ- ಜಿಮ್ ಮಾಡಿ  ದೇಹಾರೋಗ್ಯ ಕೆಡಿಸಿಕೊಳ್ಳಬೇಕಾಗಿಲ್ಲ. ಏನಪ್ಪಾ ಕರಿಮೆಣಸು , ಇದರಲ್ಲೇನಿದೆ ಎನ್ನುತ್ತೀರಾ? ಖಂಡಿತಾ ನೀವು ತಿಳಿದುಕೊಂಡದ್ದು ತುಂಬಾ ಕಡಿಮೆ. ನಮ್ಮ ಪೂರ್ವಜರಿಂದ ಲಗಾಯ್ತು ಇದನ್ನು ಬಹು ಔಷಧಿಯಾಗಿ ಬಳಕೆ ಮಾಡುತ್ತಾ ಬಂದಿದ್ದಾರೆ. ಬೆಳಗ್ಗೆದ್ದು…

Read more
error: Content is protected !!