ಸೂರ್ಯನ ಶಾಖದಲ್ಲೂ ದುಡ್ಡು ಮಾಡಬಹುದು ಎಂಬುದು ಸರಕಾರದ ಲೆಕ್ಕಾಚಾರ. ಇದು ಸೋಲಾರ್ ಎನರ್ಜಿ ಮನಿ. ಇದಕ್ಕೆ ಒಮ್ಮೆ ಬಂಡವಾಳ ಹಾಕಿದರೆ ಸಾಕು, ನಂತರ ಕೀಟ, ರೋಗ, ಮಾರುಕಟ್ಟೆ ಮುಂತಾದ ಸಮಸ್ಯೆಗಳೇ ಇಲ್ಲ. ನಿರಂತರ ಆದಾಯ ಕೊಡುತ್ತಿರುತ್ತದೆ.
- ಉತ್ತರ ಕರ್ನಾಟಕದ ವರ್ಷದ ಹೆಚ್ಚಿನ ದಿನಗಳಲ್ಲಿ ಬಿಸಿಲು ಇರುವ ಕಡೆಗಳಲ್ಲಿ ಈಗ ಸೂರ್ಯನ ಬೆಳಕಿನಲ್ಲೂ ಹಣ ಮಾಡುವುದು ಸಾಧ್ಯವಾಗಿದೆ.
- ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್ ಗೆ ಮಾರಿದರೆ ಅದಕ್ಕೆ ಹಣ ದೊರೆಯುತ್ತದೆ.
- ಹಲವಾರು ಜನ ಇದಕ್ಕೆ ಕೈ ಹಾಕಿದ್ದಾರೆ.
- ಕೆಲವು ಕಾರ್ಪೊರೇಟ್ ಸಂಸ್ಥೆಗಳೂ ಕೈ ಹಾಕಿವೆ.
- ನಿರುಪಯುಕ್ತ ಭೂಮಿಯನ್ನು ಪಾಳು ಬಿಡುವ ಬದಲು ಇದನ್ನು ಮಾಡಬಹುದು. ಇದಕ್ಕೆ ಬ್ಯಾಂಕ್ ಸಾಲವೂ ಲಭ್ಯ.
ಹಾಗೆ ನೋಡಿದರೆ ಗಾಳಿಯೂ ಸಹ ಹಣ ಮಾಡಿಕೊಡುತ್ತದೆ. ಅಲ್ಲಲ್ಲಿ ದೈತ್ಯ ಗೋಪುರಗಳಲ್ಲಿ ತಿರುಗುವ ಪ್ಯಾನು, ಪವನ ಯಂತ್ರಗಳೂ ಸಹ ಭಾರೀ ಹಣವನ್ನು ಕೊಡುತ್ತವೆ. ಅದಕಿಂತಲೂ ಸುಲಭ ಮತ್ತು ಯಾವುದೇ ನಿರ್ವಹಣೆ ಇಲ್ಲದೆ ಹಣ ತಂದುಕೊಡುವಂತದ್ದು
ಸರಕಾರದ ಪ್ರೋತ್ಸಾಹ ಇದೆ.
- ಕರ್ನಾಟಕ ರಾಜ್ಯದಲ್ಲಿ ಸೌರಶಕ್ತಿ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಸೂರ್ಯರೈತ ಯೋಜನೆಯನ್ನು ಜಾರಿಗೊಳಿಸಿದೆ.
- ರೈತರು ಇನ್ನು ಮುಂದೆ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ, ಅದನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದಾದ ಅವಕಾಶವನ್ನು ಈ ಯೊಜನೆಯು ಕಲ್ಪಿಸಿ ಕೊಟ್ಟಿದೆ.
- ಈ ಯೊಜನೆಯಡಿ ರೈತರು ಐದು ಎಚ್.ಪಿ ಸೊಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ.
- ಅದರಿಂದ ಉತ್ಪಾದನೆಯಾಗುವ ವಿದ್ಯುತ್ ನಲ್ಲಿ ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದಷ್ಟು ಬಳಕೆಮಾಡಿಕೊಂಡು ಹೆಚ್ಚುವರಿ ವಿದ್ಯುತ್ತನ್ನು ಪ್ರತಿಯೂನಿಟ್ ಗೆ 9.56 ರೂ. ದರದಲ್ಲಿ ರೈತರು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ.
- ಇದರಿಂದ ರೈತರು ಆದಾಯ ಗಳಿಸಿದಂತಾಗುತ್ತದೆ.
ಸಬ್ಸಿಡಿ ಇದೆ:
- ಸೌರಶಕ್ತಿ ಬಳಕೆಯನ್ನು ಹೆಚ್ಚಿಸಲುಕೇಂದ್ರ ಸರ್ಕಾರದ ಸಹಕಾರದಲ್ಲಿಯೂ ಯೋಜನೆಯನ್ನು ಜಾರಿಗೆ ತರಲಾಗಿದೆ.
- ರಾಜ್ಯದಲ್ಲಿ ಸುಮಾರು 21.5 ಲಕ್ಷ ಕೃಷಿ ಪಂಪ್ ಸೆಟ್ಗಳಿವೆ ಎಂದು ಅಂದಾಜಿಸಲಾಗಿದ್ದು ಸರ್ಕಾರ ಇವುಗಳಿಗೆ 10 ಎಚ್.ಪಿ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ.
- ಇದರಂದಾಗಿ ವಿದ್ಯುತ್ತಿನ ಬೇಡಿಕೆಯೂ ಹೆಚ್ಚಾಗುತ್ತಿದೆ.
- ಸದ್ಯ ಸೋಲಾರ್ ಪಂಪ್ ಸೆಟ್ ಅಳವದಿಕೆ ಮಾಡಿಕೊಂಡರೆ ಸರ್ಕಾರಕ್ಕೆ ಶೇ. 39 ರಷ್ಟು ವಿದ್ಯುತ್ ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.
ಸೋಲಾರ್ ಪಂಪ್ ಸೆಟ್ ಅಳವಡಿಕೆ ಮಾಡಿಕೊಂಡ ರೈತರು 200 ದಿನ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇದರಲ್ಲಿ ತಮಗೆ ಅಗತ್ಯವಿರುವಷ್ಟು ವಿದ್ಯುತ್ ಅನ್ನು ಬಳಸಿಕೊಂಡು, ಉಳಿದದ್ದನ್ನು ಸರ್ಕಾರಕ್ಕೆ ಮಾರಾಟಮಾಡಿ ವಾರ್ಷಿಕವಾಗಿ 50ಸಾವಿರ ರೂ. ಆದಾಯ ಗಳಿಸಬಹುದಾಗಿದೆ.
- ರೈತರು ತಮ್ಮ ಜಾಗದಲ್ಲಿ ಅವರೇ ಸ್ವತ: ಸೋಲಾರ್ ಗ್ರಿಡ್ ಅಳವಡಿಸುವುದಾದರೆ ಸರ್ಕಾರದಿಂದ ಶೇ.90 ರಷ್ಟು ಸಬ್ಸಿಡಿ ನೀಡಲಾಗುತ್ತದೆ.
ಸೌರ ವಿದ್ಯುತ್ ಉತ್ಪಾದನೆ ಮತ್ತು ಅದರ ಬಳಕೆಯನ್ನು ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ಪ್ರತಿ ತಿಂಗಳು ಮಾಪನ ಮಾಡುತ್ತದೆ. ಖರೀದಿ ಬಗ್ಗೆ ತಿಳಿಯಲು ಒಂದು ಮೀಟರ್ ಅಳವಡಿಸಲಾಗುತ್ತದೆ. ಅದರ ಮೂಲಕ ರೈತರು ನೀಡಿದ ವಿದ್ಯುತ್ ಬಗ್ಗೆ ಲೆಕ್ಕಾಚಾರ ಮಾಡಿ ಆರು ತಿಂಗಳಿಗೊಮ್ಮೆ ಅವರ ಬ್ಯಾಂಕ್ಖಾತೆಗೆ ನೇರವಾಗಿ ಹಣಜಮಾ ಮಾಡಲಾಗುತ್ತದೆ.
ಲೇಖಕರು:
1) ಶೃತಿಎಸ್. ಎಮ್ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ.
2) ಮಾನಸಎಲ್.ಪಿ. ಎಂ.ಎಸ್ಸಿ (ಅಗ್ರಿ) ಕೃ.ವಿ.ವಿ.ಧಾರಾವಾಡ.