ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more

ಬೆಳೆಗಾರರೇ – ಮೈಲುತುತ್ತೆ ಖರೀದಿಸುವಾಗ ಬುದ್ದಿವಂತರಾಗಿರಿ.

ಇನ್ನೇನೋ ಮಳೆಗಾಲ ಬರಲಿದೆ. ಅಡಿಕೆಗೆ ಭಾರೀ ಬೆಲೆ ಬಂದಿದೆ. ಅಡಿಕೆ ಬೆಳೆಗಾರರಲ್ಲಿ ದುಡ್ಡು ಇದೆ. ಅದರಲ್ಲಿ ತಮ್ಮ ಹೆಚ್ಚಳವಾಗುತ್ತದೆ. ಈಗಲೇ ಖರೀದಿ ಮಾಡಿ ಎಂದು ವ್ಯಾಪಾರಿಗಳು ಹಳೆ ಸ್ಟಾಕು ಮುಗಿಸಿ ಮುಂದಿನ ಹೊಸ ಸ್ಟಾಕು ಮಾಡಲು ಬಂಡವಾಳ ಕ್ರೋಢೀಕರಣದಲ್ಲಿದ್ದಾರೆ. ಅಡಿಕೆ ಬೆಳೆಗಾರರೇ ನೀವು ಈಗ ಬುದ್ದಿವಂತರಾಗುವುದು ಅಗತ್ಯವಾಗಿದೆ. ಅಡಿಕೆ ಕೊಳೆ ರೋಗಕ್ಕೆ ಮೈಲುತುತ್ತೆ ಬೇಕು. ಹಾಗೆಂದು ಖರೀದಿಸಿದರೆ ದರ ಕಡಿಮೆ, ಮುಂದೆ ಹೆಚ್ಚು. ಇದೆಲ್ಲಾ ಯಾವ ಕ್ರಮವೋ ತಿಳಿಯದು. ಸರಕಾರದ ಸಂಬಂಧಿಸಿದ ಇಲಾಖೆ ಇದನ್ನೆಲ್ಲಾ ಗಮನಿಸಿದೆಯೋ ಇಲ್ಲವೋ…

Read more

ಅಡಿಕೆ- ಈ ರೀತಿಯಾಗಿ ಯಾಕೆ ಉದುರುತ್ತಿದೆ?

ಈ ವರ್ಷ ಅಡಿಕೆ ಬೆಳೆಗಾರರು ಬಹಳ ಸಮಸ್ಯೆಯನ್ನು  ಅನುಭವಿಸಿದ್ದಾರೆ. ಮೊದಲು ಸಿಂಗಾರ ಒಣಗುವ ಸಮಸ್ಯೆ , ನಂತರ ಮಿಡಿ ಕಾಯಿ ಉದುರುವುದು, ಈಗ ಮತ್ತೆ ಬಲಿಯುತ್ತಿರುವ (ಹಸ) ಕಾಯಿಗಳ ಉದುರುವಿಕೆ. ಬರೇ ಉದುರುವುದು ಮಾತ್ರವಲ್ಲ. ಕಾಯಿಯಲ್ಲಿ  ಸುಟ್ಟಂತಹ ಕಪ್ಪು ಕಲೆಗಳಿವೆ. ಕೊಳೆತ ಇಲ್ಲ. ಇದು ಯಾವ ಸಮಸ್ಯೆ ಎಂಬುದು ನಿಘೂಢವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೇಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ  ಅದೇನೂ ಮಹಾ ಮಳೆಯೋ, ಅಡಿಕೆಗೆ ಭಾರೀ ಕೊಳೆ ರೋಗ ಬಂತು. ಸುಮಾರು 25-30% ಬೆಳೆ ನಷ್ಟವಾಯಿತು. ಈ…

Read more
ಬೋರ್ಡೋ ದ್ರಾವಣ ಸಿಂಪಡಿಸಿದ ಮರ

ಬೋರ್ಡೋ ದ್ರಾವಣ ತಾಯಾರಿಕೆ ವಿಧಾನ ಇದು.

ಸುಣ್ಣ ಮತ್ತು ಮೈಲು ತುತ್ತೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸುವ ದ್ರಾವಣಕ್ಕೆ ಬೋರ್ಡೋ  ದ್ರಾವಣ (Bordeaux mixture )ಎಂದು ಹೆಸರು. ಇದು  ಕೊಳೆಯುವ ರೋಗಕ್ಕೆ ಕಾರಣವಾದ  ಶಿಲೀಂದ್ರದ ಬೀಜಾಣುಗಳನ್ನು ಮೊಳಕೆಯೊಡೆಯದಂತೆ  ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ. ಪ್ರಾನ್ಸ್ ದೇಶದ ಬೊರ್ಡೋ ಎಂಬ ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಲ್ಲಿ ಸಸ್ಯಾಣುಗಳಿಂದ ಉಂಟಾಗುವ ರೋಗವನ್ನು ನಿಯಂತ್ರಿಸಲು ಈ ಸಾಮಾಗ್ರಿಗಳ ಪಾಕವನ್ನು ಬಳಸಲಾಗುತ್ತಿತ್ತಂತೆ. ಅದನ್ನು ಮೈಸೂರು ಪ್ರಾಂತ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಪರಿಚಯಿಸಿದವರು  ಲೆಸ್ಲಿ ಸಿ ಕೋಲ್ ಮನ್ Leslie Charles Coleman…

Read more
error: Content is protected !!