ಗೇರು – ಈಗ ಮರಗಳ ಮೇಲೆ ಒಮ್ಮೆ ದೃಷ್ಟಿ ಹರಿಸುತ್ತಿರಿ
ಈ ಸಮಯದಲ್ಲಿ ಗೇರು ಮರಗಳಲ್ಲಿ ಗೇರು ಬೀಜದ ಕೊಯಿಲು ನಡೆಯುತ್ತಿರುತ್ತದೆ. ಗೇರು ಬೀಜ ಕೊಯಿಲಿಗೆ ಹೋಗುವ ಸಮಯದಲ್ಲಿ ಬುಡ ಭಾಗವನ್ನು ತಪ್ಪದೇ ಗಮನಿಸಿರಿ. ಈ ಸಮಯದಲ್ಲಿ ಬುಡದ ಕಾಂಡಕ್ಕೆ ಕಾಂಡ ಕೊರಕ ಹುಳು ಬಾಧಿಸುತ್ತದೆ. ಈ ಹುಳು ಬಾಧಿಸಿದ ಸಮಯದಲ್ಲಿ ಉಪಚಾರ ಮಾಡಿದರೆ ಮಾತ್ರ ಅದನ್ನು ಬದುಕಿಸಲು ಸಾಧ್ಯ. ಪತ್ತೆ ಕ್ರಮ: ಗೇರು ಮರಕ್ಕೆ ಮಾರಣಾಂತಿಕವಾಗಿ ಹಾನಿ ಮಾಡುವ ಕೀಟ ಕಾಂಡ ಕೊರಕ (Stem borer of cashew). ಈ ಸಮಯದಲ್ಲಿ ಕಾಂಡ ಕೊರಕ ಕೀಟ ಕಾಡದ…