ಕಳೆದ ವರ್ಷ 7500. ಈ ವರ್ಷ 6300. ಅಡಿಕೆ ಮಾರುಕಟ್ಟೆ ಅಸ್ಥಿರವಾದೀತೇ?
ಕಳೆದ ವರ್ಷ ಈ ಸಮಯದಲ್ಲಿ ಹಸಿ ಅಡಿಕೆಗೆ 7500 ರೂ. ಬೆಲೆಗೆ ಖರೀದಿ ಮಾಡಲಾಗುತ್ತಿತ್ತು. ಈ ವರ್ಷ ಪ್ರಾರಂಭಿಕ ದರ 6500, ಇನ್ನೂ ಇಳಿಕೆಯಾಗಿ 6300 ಕ್ಕೆ ಬಂದಿದೆ. ಇನ್ನೂ ಇಳಿಯುವ ಸಂಭವ. ಇದು ಮುಂದಿನ ಅಡಿಕೆ ಧಾರಣೆಯ ಅಸ್ಥಿರತೆಯನ್ನು ತೋರಿಸುತ್ತಿದೆ. ಕೆಂಪಡಿಕೆಯ ಉತ್ಪಾದನೆ ಭಾರೀ ಹೆಚ್ಚಳವಾಗುತ್ತಿದ್ದು, ಸಾಂಪ್ರದಾಯಿಕ ಪ್ರದೇಶಗಳ ಇಳುವರಿಯನ್ನು ಹೊಸ ಪ್ರದೇಶಗಳು ಹಿಂದಿಕ್ಕುತ್ತಿದೆ. ಜೋಳ, ರಾಗಿ, ಭತ್ತ ತರಕಾರಿ ಬೆಳೆಯುತ್ತಿದ್ದ ಬಯಲು ಸೀಮೆ ಪ್ರದೇಶಗಳಲ್ಲಿ ಉತ್ತಮ ಇಳುವರಿ ಕಾಣಿಸುತ್ತಿದ್ದು, ಮಾರುಕಟ್ಟೆ ಈ ಉತ್ಪಾದನೆಯನ್ನು ತಾಳಿಕೊಳ್ಳಬಹುದೇ…