coconut garden

ತೆಂಗು- ಕಾಂಡದಲ್ಲಿ ರಸ ಸೋರುವುದನ್ನು ಹೀಗೆ ನಿಲ್ಲಿಸಬಹುದು

ಹಾಸನ ಜಿಲ್ಲೆಯ ತೆಂಗು ರಾಜ್ಯದಲ್ಲೇ ಹೆಸರುವಾಸಿ. ಚನ್ನರಾಯಪಟ್ಟಣದ ತೆಂಗು ಎಂದರೆ ಹೆಸರುವಾಸಿ. ಆದರೆ ಇಲ್ಲೆಲ್ಲಾ ಈಗ ಪ್ರಾರಂಭವಾಗಿದೆ  ಕಾಂಡದಲ್ಲಿ ರಸ ಸೋರುವ  ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿದೆ. ಹಾಸನ ಜಿಲ್ಲೆಯಲ್ಲಿ ಉತ್ತಮ  ಆದಾಯ ಕೊಡುವಂತಹ ಬೆಳೆ. ಈ ಜಿಲ್ಲೆಗಳಲ್ಲಿ ತೆಂಗಿನ ಪ್ರದೇಶ ವರ್ಷ ವರ್ಷವೂ ಹೆಚ್ಚಾಗುತ್ತಿದೆ. ತೆಂಗಿನ ಪ್ರದೇಶ ವಿಸ್ತರಣೆ ಆದಷ್ಟು ಇಳುವರಿ ಹೆಚ್ಚಾಗುತ್ತಿಲ್ಲ. ಹೊಸ ತೋಟಗಳಲ್ಲಿ ಇಳುವರಿ ಇದ್ದರೂ ಹಳೆ ಮರಗಳಿಗೆ  ಭಾರೀ ಪ್ರಮಾಣದಲ್ಲಿ  ರೋಗ ಮತ್ತು ಕೀಟ ಬಾಧೆ ಕಾಣಿಸಿಕೊಳ್ಳುತ್ತಿವೆ. ಕಾಡದ ರಸ ಸೊರುವಿಕೆ,…

Read more

ತೆಂಗಿನ ಮರದಲ್ಲಿ ಕಾಯಿ ಹೆಚ್ಚುವಿಕೆ ಒಂದು ಕುತೂಹಲ.

ತೆಂಗು ಬೆಳೆಯುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ಸಂಗತಿ ಅದರಲ್ಲಿ ಕಾಯಿಗಳು ಹೇಗೆ ಆಗುತ್ತವೆ ಎಂಬುದು. ತೆಂಗಿನ ಮರದಲ್ಲಿ ಹೂ ಗೊಂಚಲು ಆಗುತ್ತದೆ. ಅದರಲ್ಲಿ ಮಿಡಿಗಳು ಬೆಳೆದು ಅದು ಕಾಯಿಯಾಗುತ್ತದೆ ಎಂದಷ್ಟೇ ತಿಳಿದರೆ ಸಾಲದು. ಈ ಪ್ರಕ್ರಿಯೆಯಲ್ಲಿ ಯಾರೆಲ್ಲಾ ಪಾತ್ರ ವಹಿಸುತ್ತಾರೆ. ಇವರೇನಾದರೂ ಕೈಕೊಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಲೇ ಬೇಕು. ಹೂ ಗೊಂಚಲು ತನ್ನಷ್ಟಕ್ಕೇ ಕಾಯಿ ಕಚ್ಚುವುದಲ್ಲ. ಅದು ಬೇರೆ ಜೀವಿಗಳನ್ನು ಅವಲಂಭಿಸಿ ಆಗುತ್ತದೆ. ಸೃಷ್ಟಿಯ ಈ ವೈಚಿತ್ರ್ಯವನ್ನು ಪ್ರತೀಯೊಬ್ಬ ರೈತರು ತಿಳಿಯಲೇ ಬೇಕು. ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ…

Read more
ಬೀಜದ ಕಾಯಿ ಆಯ್ಕೆಗೆ ಸೂಕ್ತವಾದ ಲಕ್ಷಣವುಳ್ಳ ತಾಯಿ ಮರ

ಬೀಜದ ತೆಂಗಿನ ಕಾಯಿ- ನಿಮ್ಮದೇ ಮರದಿಂದ ಆಯ್ಕೆ ಹೇಗೆ?

ತೆಂಗು ಬೆಳೆಯಯಲ್ಲಿ ಬೀಜದ ಆಯ್ಕೆ ಪ್ರಾಮುಖ್ಯ ಹಂತ. ಬೀಜದ ತೆಂಗಿನ ಕಾಯಿ ಅವರವರ  ತೋಟದ ಮರಗಳಿಂದ ಆಯ್ಕೆ ಮಾಡಿಕೊಂಡರೆ ಬಹಳ ಉತ್ತಮ. ತೆಂಗಿನ ಕುರಿತಾಗಿ ಯಾವುದೇ ಲೇಖನಗಳು ಹಾಕಿದಾಗಲೂ ಇದರ ಬೀಜ ಎಲ್ಲಿ ಸಿಗುತ್ತದೆ ಎಂಬುದಾಗಿ ಕೇಳುತ್ತಾರೆ. ಇವರಿಗೆಲ್ಲಾ ನಾವು ಹೇಳುವುದು ನಿಮ್ಮ ಮನೆಯಲ್ಲಿರುವ ಅಥವಾ ನಿಮ್ಮ ಪರಿಚಯಸ್ಥರ ಮನೆಯಿಂದ ಬೀಜ ತಂದು ನೀವೇ ಸಸಿ ಮಾಡಿ ಎಂದು. ಇದು ಧೀರ್ಘಾವಧಿಯ ಬೆಳೆ ಆದ ಕಾರಣ ನೀವು ಆಯ್ಕೆ ಮಾಡಿದ ಬೀಜವೇ ಆಗಬೇಕು.ನಿಮ್ಮ ಕಣ್ಣೆದುರೇ ಇದ್ದ  ಮರದ…

Read more
ಹುಳ ತಿಂದು ಸತ್ತ ತೆಂಗಿನ ಮರ

ತೆಂಗಿನ ಮರಗಳು ಸಾಯುತ್ತಿರುವುದಕ್ಕೆ ಕಾರಣ ಏನು?

ಸಿಡಿಲು, ಸುಳಿ ಕೊಳೆ, ಅಥವಾ ಇನ್ನೇನಾದರೂ ಕೀಟ ಬಾಧೆಯಿಂದ ತೆಂಗಿನ ಮರ ಸತ್ತರೆ ಅದನ್ನು ತಕ್ಷಣ ಕಡಿದು ಏನಿಲ್ಲವಾದರೂ ಸೌದೆ ಮಾಡಿಯಾದರೂ ವಿಲೇವಾರಿ ಮಾಡಿ. ಹೆಚ್ಚಿನ ರೈತರು  ತೆಂಗಿನ ಮರ ಸತ್ತು ಹೋದರೆ ಅದರಿಂದ ನಮಗೇನು ನಷ್ಟ ಎಂದು ಅದನ್ನು ಹಾಗೆ  ಬಿಡುತ್ತಾರೆ. ಸತ್ತು ಒಣಗಿ ಶಿಥಿಲವಾದ ಮೇಲೆ ವಿಲೇವಾರಿ ಸುಲಭ ಎಂಬ ಕಾರಣಕ್ಕೆ ಹೀಗೆ ಮಾಡುತ್ತಾರೆ. ಆದರೆ ಸತ್ತ ಮರವನ್ನು ಹಾಗೇ ಬಿಟ್ಟರೆ ಮತ್ತೆ ಒಂದೆರಡು ಮರ ಸಸಿ ಸಾಯುತ್ತದೆ ಏಕೆ ಗೊತ್ತೇ? ನಮ್ಮಲ್ಲಿ ಹಿರಿಯರು…

Read more
Wide bole

ತೆಂಗಿನ ಮರಕ್ಕೆ ಬೊಡ್ಡೆ ಬರುವುದು ಹೇಗೆ ಮತ್ತು ಇದರ ಪ್ರಯೋಜನ.

ತೆಂಗಿನ ಮರದ ಬುಡದಲ್ಲಿ ಬೆಳೆಯುವ ಒಂದು ರೀತಿಯ ಬೊಡ್ಡೆಯೇ (Bole) ಆ ಮರದ ಶಕ್ತಿ ಕೇಂದ್ರ. ಯಾವ ತೆಂಗಿನ ಮರಕ್ಕೆ  ಬೊಡ್ಡೆ ಇದೆಯೋ ಆ ಮರ ಸ್ವಲ್ಪ ಮಟ್ಟಿಗೆ ಬರ ನಿರೋಧಕ ಶಕ್ತಿಯನ್ನು ಪಡೆದಿರುತ್ತದೆ.    ಮರಳುಗಾಡಿನಲ್ಲಿ ವಾಸಿಸುವ ಒಂಟೆ ತನ್ನ ಬೆನ್ನಿನ ಭಾಗದಲ್ಲಿ ಆಪತ್ಕಾಲಕ್ಕೆ ಬೇಕಾಗುವ ಆಹಾರ ನೀರನ್ನು ಲಭ್ಯವಿರುವಾಗ ಸಂಗ್ರಹಿಸಿಟ್ಟುಕೊಂಡು ಅಭಾವದ ಸಮಯದಲ್ಲಿ  ಅದನ್ನು ಬಳಸಿಕೊಂಡು ಬದುಕುತ್ತದೆ. ಅದೇ ರೀತಿ ಕೆಲವು ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಆಪತ್ಕಾಲಕ್ಕೆ  ಬಳಕೆಗಾಗುವಂತೆ ತಮ್ಮಲ್ಲಿ ಆಹಾರ ದಾಸ್ತಾನು ಇಟ್ಟುಕೊಂಡಿರುತ್ತವೆ….

Read more
ಉತ್ತಮ ಇಳುವರಿಯ ತೆಂಗಿನ ಮರ

ತೆಂಗು- ಅಧಿಕ ಇಳುವರಿಯ ಗುಟ್ಟು ಇದು.

ಇತ್ತೀಚೆಗೆ ಥೈಲಾಂಡ್ ನ ತೆಂಗು ತೋಟದ ಒಂದು ವೀಡಿಯೋ ಎಲ್ಲರ ಫೇಸ್ ಬುಕ್, ವಾಟ್ಸ್ ಆಪ್ ಗಳಲ್ಲಿ ಒಡಾಡಿದೆ. ಇದು ನಮಗೆ ಹೇಗೆ ತೆಂಗು ಬೆಳೆದರೆ ಉತ್ತಮ ಎಂಬ ಕೆಲವು ಸಂಗತಿಗಳನ್ನು ತಿಳಿಸುತ್ತದೆ.  ತೆಂಗಿನ ಸಸಿ ನಾಟಿ ಮಾಡಿದ 4 -6 ವರ್ಷಕ್ಕೇ ಫಸಲಿಗಾರಂಭಿ ಸುತ್ತದೆ. ಒಂದು ತೆಂಗಿನ ಮರವು  ಸುಮಾರು 30-40 ರಷ್ಟು ಗರಿಗಳು ಹಾಗೂ 100 ಕ್ಕೂ ಹೆಚ್ಚಿನ ಕಾಯಿಗಳನ್ನು  ಧರಿಸಬೇಕಾದರೆ ಅದು ಎಷ್ಟೊಂದು ಪ್ರಮಾಣದಲ್ಲಿ ಪೋಷಕಾಂಶಗಳನ್ನು ಬಳಸಿಕೊಳ್ಳಬೇಕು ಊಹಿಸಿ!. ಪ್ರತೀ ವರ್ಷವೂ ಫಸಲಿಗೆ…

Read more
error: Content is protected !!