ಮಣ್ಣಿನ pH ಎಂದರೇನು? ಕಡಿಮೆ-ಹೆಚ್ಚು ಆದಾಗ ಏನಾಗುತ್ತದೆ?
ಮಣ್ಣಿನ ಸಮಸ್ಥಿತಿಯನ್ನು ವೈಜ್ಞಾನಿಕ ಭಾಷೆಯಲ್ಲಿ pH (Potentila hydrogen) ಎಂಬುದಾಗಿ ಕರೆಯುತ್ತಾರೆ. ಇದನ್ನು ಕನ್ನಡದಲ್ಲಿ ರಸ ಸಾರ ಎಂಬುದಾಗಿ ಕರೆಯುತ್ತಾರೆ. ಹುಳಿ ಹೆಚ್ಚಾದರೆ ಅದು ಆಮ್ಲ, ಸುಡುವಿಕೆ ಆದರೆ ಅದು ಕ್ಷಾರ. ಇವೆರಡೂ ಆಗದಿದ್ದರೆ ಅದು ಸಮಸ್ಥಿತಿ. ಇದನ್ನು ಸಹನಾ ಸ್ಥಿತಿ ಎಂಬುದಾಗಿ ಹೇಳಬಹುದು.ಇದು ಮಣ್ಣಿಗೆ ಮಾತ್ರವಲ್ಲ. ಪ್ರತೀಯೊಂದು ಜೀವಿಗೂ ಇರುವಂತದ್ದು. ಮನುಷ್ಯನ ಶರೀರದಲ್ಲಿ ಜೊಲ್ಲು, ರಕ್ತ ಇವುಗಳಲ್ಲೂ ಆಮ್ಲ, ಕ್ಷಾರ, ಮತ್ತು ತಟಸ್ಥ ಎಂಬುದಿದೆ. ಮಣ್ಣು ಎಂಬುದು ಸಮಸ್ಥಿತಿಯಲ್ಲಿದ್ದರೆ ( nutral) ಅಲ್ಲಿ ಬೆಳೆಯುವ ಬೆಳೆಗೆ…