ಮಳೆಗಾಲಕ್ಕೆ ಮುಂಚೆ ಬಸಿಗಾಲುವೆ ಸ್ವಚ್ಚ ಮಾಡಬೇಕಾದದ್ದು ಅಗತ್ಯ ಕೆಲಸ

ಮಳೆಗಾಲಕ್ಕೆ ಮುಂಚೆ ಅಡಿಕೆ ತೋಟದಲ್ಲಿ ಮಾಡಬೇಕಾದ ಅಗತ್ಯ ಕೆಲಸಗಳು.

ಇನ್ನೇನು ಮಳೆಗಾಲ ಬರುವುದಕ್ಕೆ ಹೆಚ್ಚು ಸಮಯ ಇಲ್ಲ. ಅಡಿಕೆ ತೋಟದಲ್ಲಿ ಈಗ ನೀವು ಮಾಡಬೇಕಾದ ಕೆಲವು ಕೆಲಸಗಳು ತೋಟದ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ಯಾವ ಕೆಲಸವನ್ನೂ ಓರಣವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಕೆಲಸಗಾರರ ಲಭ್ಯತೆಯೂ ಕಡಿಮೆ ಇರುತ್ತದೆ. ಇದಕ್ಕಿಂತೆಲ್ಲಾ ಮುಖ್ಯವಾಗಿ ಮಳೆಗಾಲದಲ್ಲಿ ಮಾಡಲೇ ಬಾರದ ಕೆಲವು ಕೆಲಸಗಳಿವೆ ಅದನ್ನು ಈಗಲೇ ಮಾಡುವುದು ಬಹಳ ಒಳ್ಳೆಯದು. ಈ ಸಮಯದಲ್ಲಿ  ಕಳೆ ತೆಗೆಯುವುದು, ಬಸಿ ಗಾಲುವೆ ಸ್ವಚ್ಚ ಮಾಡುವುದು ಮಾಡಿದರೆ ಉದುರಿ ಹೆಕ್ಕಲು ಸಿಕ್ಕದ ಅಡಿಕೆ ಸಿಗುತ್ತದೆ. ಅದರಿಂದ…

Read more
ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ

ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ .

ಮಣ್ಣು ಅದರಷ್ಟಕ್ಕೇ ಇದ್ದರೆ ಅಂದರೆ ಕಾಡು , ಮರಮಟ್ಟು ಬೆಳೆಯುತ್ತಾ ಇದ್ದರೆ ಅದರ ಆರೋಗ್ಯ ಸ್ಥಿತಿ ವ್ಯತ್ಯಾಸ ಆಗುವುದಿಲ್ಲ. ಬೆಳೆ ಬೆಳೆಸುವಾಗ ಬಳಸುವ ಬೆಳೆ ಪೋಷಕಗಳು ಮಣ್ಣಿನ ಗುಣವನ್ನು ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಮಾಡುತ್ತವೆ. ಇದನ್ನು ಮಣ್ಣಿನ ಆರೋಗ್ಯ ಕೆಡುವುದು ಎಂದು ಹೇಳಬಹುದು. ಮಣ್ಣಿನ ಆರೋಗ್ಯ ಗುಣದ ಮೇಲೆ ನಾವು ಬೆಳೆಸುವ ಬೆಳೆಯ ಪ್ರತಿಫಲ ಇರುತ್ತದೆ. ಇದನ್ನು ತಿಳಿದು ಕೃಷಿ ಮಾಡಿದರೆ ನಿರೀಕ್ಷೆಯ ಫಲಿತಾಂಶ ಲಭ್ಯವಾಗುತ್ತದೆ. ಮಣ್ಣು ಸೃಷ್ಠಿಯ ಅತ್ಯದ್ಬುತ ಕೊಡುಗೆ. ಮಣ್ಣಿಲ್ಲದೆ ಯಾವಜೀವಿಯೂ ಬದುಕಲಾರದು, ಮಣ್ಣಿನಿಂದ…

Read more
ಮಣ್ಣು ಪರೀಕ್ಷೆಗೆ ಮಾದರಿಯನ್ನು ತೆಗೆಯುವ ವಿಧಾನ

ಮಣ್ಣು ಪರೀಕ್ಷೆಗೆ ಮಾದರಿಯನ್ನು ತೆಗೆಯುವ ವಿಧಾನ

ಮನುಷ್ಯನ ದೇಹಾರೋಗ್ಯವನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಿ ಅನಾರೋಗ್ಯ ಪತ್ತೆ ಮಾಡಿ ಅದರ ಪ್ರಕಾರ ಚಿಕಿತ್ಸೆ ಮಾಡಲಾಗುತ್ತದೆ. ಹೀಗೆ ಮಾಡಿದಾಗ ಅದರ ಫಲಿತಾಂಶ  ಕರಾರುವಕ್ಕಾಗಿರುತ್ತದೆ. ಅದೇ ರೀತಿಯಲ್ಲಿ ಬೆಳೆಗಳಿಗೆ ಕೊಡುವ ಯಾವುದೇ ಪೋಷಕಗಳನ್ನು ಸಸ್ಯಕ್ಕೆ ಅಗತ್ಯವಿದ್ದರೆ ಮಾತ್ರ ಕೊಟ್ಟರೆ ಒಳ್ಳೆಯದು. ಯಾವುದು ಇದೆ, ಯಾವುದರ ಕೊರತೆ ಇದೆ, ಎಷ್ಟು ಕೊಡಬೇಕು ಎಂಬುದನ್ನು ಮಣ್ಣು ಪರೀಕ್ಷೆ ಮಾಡಿ ತಿಳಿಯಲಾಗುತ್ತದೆ.  ಮಣ್ಣು ಎಂಬುದು ಪ್ರಕೃತಿದತ್ತ ಅಮೂಲ್ಯ ಸಂಪತ್ತು. ನಾವು ಬೆಳೆಸುವ ಬೆಳೆಗಳಿಗೆಲ್ಲಾ ಮಣ್ಣೇ ಮೂಲಾಧಾರ. ಮಣ್ಣಿನ ಆರೋಗ್ಯ ಹದಗೆಟ್ಟರೆ ಬೆಳೆಗಳ ಹಾಗೂ…

Read more
error: Content is protected !!