ನೀರಿಗೆ ಬರ ಬಂದರೆ ? -. ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು

ನೀರಿಗೆ ಬರ ಬಂದರೆ ? ಕಡಿಮೆ ನೀರಿನಲ್ಲಿ ಹೇಗೆ ಬೆಳೆ ಉಳಿಸಿಕೊಳ್ಳುವುದು?  

2023 ನೇ ಇಸವಿ ನಮಗೆ ಮಳೆ ಇಲ್ಲದೆ ಬರಗಾಲದ ಸನ್ನಿವೇಶವನ್ನು ತೋರಿಸಿಯೇ ಬಿಡುತ್ತದೆಯೋ ಎಂಬ ಅನುಮಾನ ಮೂಡುತ್ತಿದೆ. ಜುಲೈ ತಿಂಗಳ ಕೊನೆಗೆ ಕಾಣೆಯಾದ ಮಳೆ ಮತ್ತೆ ಬಂದುದು ಆಗಾಗ ನೆಂಟರಂತೆ.  ಹೀಗೆ ಮುಂದುವರಿದರೆ ಬರಗಾಲ ಗ್ಯಾರಂಟಿ. ಯಾವುದಕ್ಕೂ ನಾವು ಸಿದ್ದರಾಗಿರಬೇಕು. ಕೆಲವು ಮೂಲಗಳ ಪ್ರಕಾರ ಇನ್ನು ಬರುವ  ಮಳೆ ಅಲ್ಪ ಸ್ವಲ್ಪ ಪ್ರಮಾಣದ್ದೇ ಹೊರತು, ತಳಕ್ಕಿಳಿದ ನೀರಿನ ಮಟ್ಟವನ್ನು ಮತ್ತೆ ಮೇಲಕ್ಕೇರಿಸುವಷ್ಟು  ಬಲವಾಗಿರುವುದಿಲ್ಲ. ಹಾಗಾಗಿ ನೀರಿನ ಕ್ಷಾಮ ಉಂಟಾಗಲೂಬಹುದು. ಅದಕ್ಕಾಗಿ ಈಗಲೇ ಸಿದ್ದರಾಗೋಣ. ಪ್ರಕೃತಿಯ ಮುಂದೆ ಮಾನವ…

Read more
ಡ್ರಿಪ್ ವ್ಯವಸ್ಥೆಯಲ್ಲಿ ಅಡಿಕೆ ಬೆಳೆ

ಡ್ರಿಪ್ ಸಮಸ್ಯೆ ಕೊಡುತ್ತಿದೆಯೇ ? ಕಾರಣ ಇಲ್ಲಿದೆ.

ಸರಕಾರ ಡ್ರಿಪ್ ನೀರಾವರಿಗೆ  ಸಹಾಯಧನ ಕೊಡುತ್ತದೆ ಎಂದು ಹನಿ ನೀರಾವರಿ ಮಾಡಿಸಿಕೊಳ್ಳಬೇಡಿ. ನಿಮಗೆ ಅದರ ಮೇಲ್ವಿಚಾರಣೆ ಮಾಡಲು ಜ್ಞಾನ  ಇದ್ದರೆ ಮಾತ್ರ ಮಾಡಿಕೊಳ್ಳಿ. ಗರಿಷ್ಟ ಪ್ರಮಾಣದಲ್ಲಿ ನೀರು ಉಳಿಸುವ ನೀರಾವರಿ ವ್ಯವಸ್ಥೆ ಎಂದರೆ ಹನಿ ನೀರಾವರಿ. ಇದು ಸಸ್ಯಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಒದಗಿಸಿಕೊಡುವ ವ್ಯವಸ್ಥೆ. ಗಂಟೆಗೆ ಕೆಲವೇ ಲೀಟರುಗಳಷ್ಟು  ನೀರನ್ನು ಸಸ್ಯದ ಬೇರು ವಲಯದ ಒಂದು ಅಥವಾ ಎರಡು ಕಡೆಗೆ ತೊಟ್ಟಿಕ್ಕುವ ಈ ವ್ಯವಸ್ಥೆ ಉತ್ತಮ ಹೌದು ಆದರೆ ಮಣ್ಣು, ನೀರು  ಮುಂತಾದವುಗಳನ್ನು …

Read more
inline drip

ಅಧಿಕ ಫಸಲಿಗೆ ನೆರವಾಗುವ ಹೊಸ ಹನಿ ನೀರಾವರಿ ವ್ಯವಸ್ಥೆ.

ಇಡೀ ಹೊಲವನ್ನೇ ಅತ್ಯಂತ ಕಡಿಮೆ ಪ್ರಮಾಣದ ನೀರಿನಲ್ಲಿ ಒದ್ದೆ ಮಾಡುವ ಮಿತ ನೀರಾವರಿ ವ್ಯವಸ್ಥೆ ಎಂದರೆ ಇನ್ ಲೈನ್ ಡ್ರಿಪ್. ನೀರಾವರಿ ಮಾಡಿದ್ದು, ಸಸ್ಯದ ಎಲ್ಲಾ ಬೇರು ವಲಯಕ್ಕೂ ದೊರೆಯುವಂತೆ ಮಾಡಲು ಇನ್ ಲೈನ್ ಡ್ರಿಪ್ ಸೂಕ್ತ. ಇದು ಇಂಚು  ಇಂಚೂ ಭೂಮಿಯನ್ನು ಒದ್ದೆ ಮಾಡುತ್ತದೆ. ಅಲ್ಲೆಲ್ಲಾ ಬೇರುಗಳು ಚಟುವಟಿಕೆಯಿಂದ ಇರುತ್ತದೆ. ಹಾಗೆಂದು ಹನಿ ನೀರವಾರಿಯಷ್ಟೇ ನೀರಿನ ಬಳಕೆ ಆಗುತ್ತದೆ. ಇಂತಹ ನೀರಾವರಿ ವ್ಯವಸ್ಥೆಯಿಂದ ಬೆಳೆಯಲ್ಲಿ ಫಸಲು ಗಣನೀಯ ಹೆಚ್ಚಳವಾಗುತ್ತದೆ.ಹನಿ ನೀರಾವರಿ ಎಂದರೆ ಅದಕ್ಕೆ ಇನ್ನೊಂದು ಹೆಸರು…

Read more
sprinkler installation

ಸ್ಪ್ರಿಂಕ್ಲರ್ ನೀರಾವರಿ ಮಾಡುವವರು ತಿಳಿಯಬೇಕಾದ ಮಾಹಿತಿ.

ಬಹುತೇಕ ಕರಾವಳಿ ಮಲೆನಾಡಿನ ಅಡಿಕೆ ತೋಟದ ಬೆಳೆಗಾರರ ಮೊದಲ ಆಯ್ಕೆ ಸ್ಪ್ರಿಂಕ್ಲರ್. ಈ  ವ್ಯವಸ್ಥೆ ಹೇಗಿದ್ದರೆ ಉತ್ತಮ ಇಲ್ಲಿದೆ ಮಾಹಿತಿ. ಸ್ಪ್ರಿಂಕ್ಲರ್ ನೀರಾವರಿ ಎಂದರೆ ಹೇಳಿದಷ್ಟು ಸರಳ ಅಲ್ಲ. ಈ ನೀರಾವರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿದರೆ ಮಾತ್ರ ಅದರಲ್ಲಿ ಫಲ.ಹೆಸರೇ ಹೇಳುವಂತೆ ನೀರು ಮಳೆಯಂತೆ ಎಲ್ಲಾ ಕಡೆಗೂ ಸಿಂಚನವಾಗಬೇಕು. ಎಲ್ಲಾ ಭಾಗವೂ ಒದ್ದೆಯಾಗಬೇಕು. ಹೀಗೆ ಆಗಬೇಕಿದ್ದರೆ ಅದಕ್ಕೂ ಒಂದು ಡಿಸೈನ್ ಎಂಬುದು ಇದೆ. ಆ ಡಿಸೈನ್ ಪ್ರಕಾರ ಮಾಡಿದ್ದೇ ಆದರೆ ಸ್ರಿಂಕ್ಲರ್ ನೀರಾವರಿ ಉತ್ತಮ ಫಲ ಕೊಡುತ್ತದೆ.  ಹರಿ…

Read more

ಸೂಕ್ಷ್ಮ ನೀರಾವರಿಯ ಹೃದಯ – ಫಿಲ್ಟರ್ ಗಳು.

ಫಿಲ್ಟರ್ ಎಂದರೆ ಯಾವ ನೀರಿನಲ್ಲಿ  ಯಾವ ರೀತಿಯ ಕಶ್ಮಲ ಇದೆ ಎಂಬುದನ್ನು  ಗಮನಿಸಿ ಅದನ್ನು ಸಮರ್ಪಕವಾಗಿ ಸೋಸಿ ಕೊಡುವ  ವ್ಯವಸ್ಥೆ.  ಬರಿ ಕಣ್ಣಿನಲ್ಲಿ ನೀರನ್ನು ಕಾಣುವಾಗ ಬಹಳ ಸ್ವಚ್ಚವಾಗಿ ಕಂಡರೂ ಅದರಲ್ಲಿ ಏನಾದರೂ ಕಶ್ಮಲ ಇದ್ದೇ ಇರುತ್ತದೆ. ಅದನ್ನು ಸೋಸದೇ ಹನಿ ನೀರಾವರಿಯ ಮೂಲಕ ಹರಿಸಿದರೆ  ವ್ಯವಸ್ಥೆ  ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಕಶ್ಮಲಗಳನ್ನು ನೀರಿನಿಂದ ಪ್ರತ್ಯೇಕಿಸಿ ಸೋಸಿ ಕೊಡುವ ಬೇರೆ ಸೋಸು ವ್ಯವಸ್ಥೆಗಳು ಇವು. ಮೆಷ್  ಫಿಲ್ಟರ್: (ಸ್ಕ್ರೀನ್ ) ಇದು 80-100-120 ಮೈಕ್ರಾನ್…

Read more
error: Content is protected !!