ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯನ್ನೂ ಮೇಲೆತ್ತಬಹುದು!

ಚೇತರಿಕೆಯತ್ತ ಕೆಂಪಡಿಕೆ ಮಾರುಕಟ್ಟೆ – ಚಾಲಿಯೂ ಮೇಲೆ.

ಬಹಳ ಸಮಯದ ತನಕ ಅಲ್ಲಾಡದೆ ಅಸ್ಥಿರವಾಗಿದ್ದ ಕೆಂಪಡಿಕೆ ಧಾರಣೆ ಜೂನ್ ಎರಡನೇ ವಾರ ಮತ್ತೆ ಚೇತರಿಕೆ ಕಾಣಲಾರಂಭಿಸಿದೆ. ಪ್ರತೀ ವರ್ಷದ ಮಾರುಕಟ್ಟೆ ಲಯವನ್ನು ಗಮನಿಸಿದರೆ ಸಾಮಾನ್ಯವಾಗಿ ಜೂನ್ ತಿಂಗಳಿಗೆ ಏರಿಕೆ ಪ್ರಾರಂಭವಾಗುತ್ತದೆ. ನಿಧಾನವಾಗಿ ಏರುತ್ತಾ ಆಗಸ್ಟ್ ಸಪ್ಟೆಂಬರ್ ತಿಂಗಳಿಗೆ ಮತ್ತೆ ಹಿಮ್ಮುಖವಾಗುತ್ತದೆ. ಈ ವರ್ಷವೂ ಅದೇ ಆಗಿದೆ. ಕೆಂಪಡಿಕೆ ದರ ಏರಿದ ಪರಿಣಾಮ ಚಾಲಿ ದರ ಚೇತರಿಕೆ ಆಗಲಾರಂಭಿಸಿದೆ. ಕರಿಕೋಕಾ, ಪಟೋರಾ, ಉಳ್ಳಿಗಡ್ಡೆ ಸಹ ಏರಿಕೆ ಕಂಡಿದೆ. ಇಂದು ಖಾಸಗಿ ವ್ಯಾಪಾರಿಗಳು ಹೊಸ ಅಡಿಕೆ ರೂ.405-410 ಕ್ಕೆ…

Read more
ಅಡಿಕೆ ಕ್ರಯ ಏರಲಿದೆ- ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ

ಅಡಿಕೆ ಕ್ರಯ ಏರಲಿದೆ-  ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ.

ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ  ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ….

Read more
ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ

ಕೆಂಪು ರಾಶಿ ಸ್ವಲ್ಪ ಹಿನ್ನಡೆ – ಚಾಲಿಗೆ ಬೇಡಿಕೆ ಕಡಿಮೆ -ಮಾರುಕಟ್ಟೆಗೆ ಮಾಲು ಇಲ್ಲ.

ಕೆಂಪು ರಾಶಿ ಅಡಿಕೆ ಮಾರುಕಟ್ಟೆ ಹೇಗಾದರೂ ಒಮ್ಮೆ 55,000 ತಲುಪಿತು. ಆದರೆ ಶುಕ್ರವಾರದ ಮಾರುಕಟ್ಟೆ, ಭಾನುವಾರದ ತೀರ್ಥಹಳ್ಳಿ ಮಾರುಕಟ್ಟೆಯಲ್ಲಿ ಹಾಗೂ ಇಂದು 12-09-2022 ಸಾಗರ, ಶಿವಮೊಗ್ಗದಲ್ಲಿನ ವ್ಯವಹಾರ ನೋಡುವಾಗ ಸ್ವಲ್ಪ ಸ್ವಲ್ಪ ಹಿಂದೆ ಬರುವ ಲಕ್ಷಣ ಕಾಣಿಸುತ್ತಿದೆ.  ನಿಖರವಾಗಿ ಹಿಂದೆ ಬಂತು ಎಂಬಂತಿಲ್ಲ. ಇನ್ನೂ ಒಂದೆರಡು ದಿನಗಳ ಮಾರುಕಟ್ಟೆ ಸ್ಥಿತಿ ನೋಡಿ ಅಂದಾಜು ಮಾಡಬಹುದಷ್ಟೇ. ಚಾಲಿ ಮಾರುಕಟ್ಟೆಯಲ್ಲಿ ಖಾಸಗಿಯವರು ಸ್ವಲ್ಪ ಮುಂದೆ ಬಂದಿದ್ದಾರೆ. ಅಡಿಕೆ ಬರುತ್ತಿಲ್ಲ ಎಂಬ ಕಾರಣಕ್ಕೆ ದರ ಏರಿಸಲಾಗಿದೆ ಎನ್ನುತ್ತಾರೆ. ಚಾಲಿ ದರ ಏರಿಕೆ-…

Read more
error: Content is protected !!