ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿಗೆ ಯಾಕೆ ಈ ಕೀಟದ ಹಾವಳಿ ಹೆಚ್ಚಾಯಿತು? ಏನು ಪರಿಹಾರ.

ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಹಾವಳಿ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಹೇಗೆ? ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ, ಕೀಟಗಳಿಂದಲೂ  ಪ್ರಭಲವಾದದ್ದು  ಕೆಂಪು ಮೂತಿ ದುಂಬಿ…

Read more
ಅಡಿಕೆ ಮರದ ಸುಳಿ ಭಾಗಕ್ಕೆ ಹಾನಿ

ಅಡಿಕೆ ಮರಗಳು ಸಾಯುತ್ತಿವೆಯೇ? ಒಮ್ಮೆ ಸುಳಿ ಭಾಗವನ್ನು ಪರೀಕ್ಷಿಸಿರಿ.

ಅಡಿಕೆ ಮರದ ಸುಳಿ  ಏನೋ  ವ್ಯತ್ಯಾಸವಾದಂತೆ ಕಂಡರೆ,  ಕೆಂಪು ಮೂತಿ ಹುಳವೂ ಉಪಟಳ  ಇರಬಹುದು. ಮರದ ಸುಳಿ ಭಾಗ ಬಾಡಿದಂತೆ ಕಂಡರೆ, ಅಥವಾ ಕಾಂಡದಲ್ಲಿ  ಸುಳಿಭಾಗದಿಂದ ಪ್ರಾರಂಭಗೊಂಡು ರಸ ಇಳಿದಂತೆ ಕಂಡರೆ , ಸುಳಿ ಭಾಗ ಸ್ವಲ್ಪ ಹರಿದಂತೆ ಕಂಡರೆ ಮರ ಏರಿ ಸುಳಿ ಭಾಗವನ್ನು ಒಮ್ಮೆ ಪರಿಶೀಲಿಸಿರಿ. ಸುಳಿಯಲ್ಲಿ ಏನೋ ಆಗಿದೆ ಎಂಬುದು ಈ ಮೇಲಿನ ಲಕ್ಷಣಗಳು ಹೇಳುತ್ತವೆ. ಕಳೆದ ಎರಡು ವರ್ಷಗಳಿಂದ ಅಡಿಕೆ  ಮರಗಳು ಸುಳಿ ಕೊಳೆತು ಸಾಯುತ್ತಿವೆ. ರೈತರು ಅದನ್ನು ಕಡಿಯದೇ ಹಾಗೇ…

Read more
ploughing

“ಮಾಗಿ ಉಳುಮೆ” ಮಾಡುವುದರಿಂದ ಪ್ರಯೋಜನ

ಬೆಳೆ ಬೆಳೆಯುವ ಮಣ್ಣು ಪ್ರಾಕೃತಿಕವಾಗಿ ಸೂರ್ಯನ ಬೆಳಕಿನಿಂದ ವರ್ಷ ವರ್ಷವೂ ಪುನಶ್ಚೇತನ ಆಗಬೇಕು. ಅದಕ್ಕೆ ನೆರವಾಗುವ ಒಂದು ಬೇಸಾಯ ಕ್ರಮ ಮಾಗಿ ಉಳುಮೆ. ಕೃಷಿ ಮಾಡುವಾಗ ಮಣ್ಣಿನ ಉತ್ಪಾದಕತೆ ಎಂಬುದು ಅತೀ ಪ್ರಾಮುಖ್ಯ. ಹೊಲದ ಉತ್ಪಾದಕತೆಯು ಮಣ್ಣಿನ ಗುಣಲಕ್ಷಣಗಳು ಆರೋಗ್ಯ ಮತ್ತು ಪ್ರಮುಖವಾಗಿ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ. ಸಸ್ಯಗಳ ಬೆಳವಣಿಗೆಗೆ ಅತ್ಯವಶ್ಯವಿರುವ ನೀರು ಮತ್ತು ಗಾಳಿಯನ್ನು ಹಿಡಿದಿಟ್ಟುಕೊಳ್ಳುವುದು, ಅಗತ್ಯವಾದಷ್ಟು ಪೋಷಕಾಂಶಗಳನ್ನು ಒದಗಿಸುವುದು ಮಣ್ಣು. ಮಣ್ಣು ಪೋಷಕಾಂಶಗಳ ಆಗರ..ಮಣ್ಣು ಸವೆತದೊಂದಿಗೆ ಮಣ್ಣಲ್ಲಿನ ಉಪಯುಕ್ತವಾದ ಪ್ರಧಾನ ಮತು ಲಘು ಪೋಷಕಾಂಶಗಳು…

Read more

ಹೈನುಗಾರಿಕೆ- ನೊಣಗಳ ನಿಯಂತ್ರಣಕ್ಕೆ ಸುರಕ್ಷಿತ ಉಪಾಯ.

ಹಟ್ಟಿ, ಮನೆ, ಬೆಳೆ ಮುಂತಾದ ಕಡೆಗಳಲ್ಲಿ ತುಂಬಾ ಕಿರಿ ಕಿರಿ ಉಂಟುಮಾಡುವ ಹಾರುವ ಕೀಟಗಳ ನಿಯಂತ್ರಣಕ್ಕೆ ಈ ವ್ಯವಸ್ಥೆ ಯನ್ನು ಮಾಡಿಕೊಂಡರೆ ಯಾವ ಕೀಟನಾಶಕವೂ ಬೇಕಾಗಿಲ್ಲ. ಬಹುತೇಕ ರೈತರು ತಿಳಿದಿರುವಂತೆ ಹಾರುವ ಕೀಟಗಳನ್ನು ನಿಯಂತ್ರಿಸಲು ವಿಷ ರಾಸಾಯನಿಕ ಫಲಕೊಡುವುದಕ್ಕಿಂತ ಹೆಚ್ಚು, ಕೆಲವು ಉಪಾಯಗಳು ಫಲ ಕೊಡುತ್ತವೆ. ಹಾರುವ ನೊಣ, ಪತಂಗಗಳಿಗೆ ಕೀಟನಾಶಕ  ಸರಿಯಾಗಿ ತಗಲುವುದಿಲ್ಲ. ಅವು  ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಬಂಧಿಸಲು ಕೆಲವು ಸುರಕ್ಷಿತ ಉಪಾಯಗಳಿವೆ. ಇದರ ಬಳಕೆಯಿಂದ ಯಾರಿಗೂ ಯಾವ ಹಾನಿಯೂ ಇರುವುದಿಲ್ಲ. ನಾವು ಯಾವಾಗಲೂ ಕೈಯಿಂದ…

Read more
hibiscus flower

ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.

ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ.  ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ  ಕಡೆಯ  ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….

Read more

ತಜ್ಞರ ಮೌನ – ಭವಿಷ್ಯದಲ್ಲಿ ಅಪಾಯ ತರಬಹುದೇ?

ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ. ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ…

Read more

ಹೀಗೆ ಬೆಳೆ ಬೆಳೆದರೆ ಕೀಟ- ರೋಗ ಇಲ್ಲ.

ಬೆಳೆಗಳ  ಮೇಲೆ  ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ  ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ. Click to WhatsApp and build your website now! ಕ್ರಾಪ್ ಕವರ್ ಏನು? ಬೆಳೆ ಬೆಳೆಯುವಾಗ ಸಸ್ಯದ ಮೇಲೆ  ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ  ಇದನ್ನು spun…

Read more
error: Content is protected !!