ಹೈನುಗಾರಿಕೆ- ನೊಣಗಳ ನಿಯಂತ್ರಣಕ್ಕೆ ಸುರಕ್ಷಿತ ಉಪಾಯ.

ಹಟ್ಟಿ, ಮನೆ, ಬೆಳೆ ಮುಂತಾದ ಕಡೆಗಳಲ್ಲಿ ತುಂಬಾ ಕಿರಿ ಕಿರಿ ಉಂಟುಮಾಡುವ ಹಾರುವ ಕೀಟಗಳ ನಿಯಂತ್ರಣಕ್ಕೆ ಈ ವ್ಯವಸ್ಥೆ ಯನ್ನು ಮಾಡಿಕೊಂಡರೆ ಯಾವ ಕೀಟನಾಶಕವೂ ಬೇಕಾಗಿಲ್ಲ.
ಬಹುತೇಕ ರೈತರು ತಿಳಿದಿರುವಂತೆ ಹಾರುವ ಕೀಟಗಳನ್ನು ನಿಯಂತ್ರಿಸಲು ವಿಷ ರಾಸಾಯನಿಕ ಫಲಕೊಡುವುದಕ್ಕಿಂತ ಹೆಚ್ಚು, ಕೆಲವು ಉಪಾಯಗಳು ಫಲ ಕೊಡುತ್ತವೆ. ಹಾರುವ ನೊಣ, ಪತಂಗಗಳಿಗೆ ಕೀಟನಾಶಕ  ಸರಿಯಾಗಿ ತಗಲುವುದಿಲ್ಲ. ಅವು  ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಬಂಧಿಸಲು ಕೆಲವು ಸುರಕ್ಷಿತ ಉಪಾಯಗಳಿವೆ. ಇದರ ಬಳಕೆಯಿಂದ ಯಾರಿಗೂ ಯಾವ ಹಾನಿಯೂ ಇರುವುದಿಲ್ಲ.

ತರಕಾರಿಗಳಿಗೆ ಬಳಸುವ ನೀಲಿ ಅಂಟಿನ ಹಾಳೆ ಹಟ್ಟಿಯಲ್ಲಿ ನೇತಾಡಿಸುವುದು ಅಗತ್ಯ .  Blue sticky trap
ತರಕಾರಿಗಳಿಗೆ ಬಳಸುವ ನೀಲಿ ಅಂಟಿನ ಹಾಳೆ ಹಟ್ಟಿಯಲ್ಲಿ ನೇತಾಡಿಸುವುದು ಅಗತ್ಯ .
  • ನಾವು ಯಾವಾಗಲೂ ಕೈಯಿಂದ ಕೊಯ್ಯಲು ಆಗುವುದಿದ್ದರೆ ಕೈಯಿಂದಲ್ಲೇ ಅದನ್ನು ಕೊಯ್ಯಬೇಕು.
  • ಕೊಕ್ಕೆಯ ಬಳಕೆ ಅಲ್ಲಿ ಪ್ರಸ್ತುತವಲ್ಲ. ಸುಲಭದಲ್ಲಿ ಆಗುವಂತದ್ದನ್ನು ಸುಲಭದಲ್ಲಿ ಮಾಡಬೇಕು.
  • ಇಲಿ ಕೊಲ್ಲಲು ಹುಲಿ ಕೊಲ್ಲುವ ತಯಾರಿ ಬೇಕಾಗುವುದಿಲ್ಲ.

 ಕೀಟನಾಶಕಗಳಿಗೆ ಬಗ್ಗದ  ನೊಣಗಳು:

  • ಮನೆ ನೊಣಗಳು ಸಾಮಾನ್ಯವಾಗಿ ಎಲ್ಲರಿಗೂ ತೊಂದರೆ  ಮಾಡುವಂತವುಗಳು.
  • ಹಸುಗಳು, ಎಮ್ಮೆಗಳು, ಕುರಿ, ಆಡುಗಳ ಮೈ ಮೇಲೆ ಕುಳಿತು ಚುಚ್ಚುವ ನೊಣಗಳು ಬಹಳ ಉಪದ್ರವಕಾರೀ ನೊಣಗಳು.
  • ಹಣ್ಣು ಹಂಪಲುಗಳ ಮೇಲೆ ಕುಳಿತು ಮೊಟ್ಟೆ ಇಟ್ಟು ಅದರಲ್ಲಿ ಹುಳ ಆಗುವಂತೆ ಮಾಡುವ  ಹಣ್ಣು ನೊಣಗಳು.
  • ಪತಂಗಗಳಾಗಿ ಹಾರುತ್ತಾ ಎಲೆಗಳು, ಕಾಯಿಗಳ ಮೇಲೆ ಕುಳಿತು ಮೊಟ್ಟೆ ಇಟ್ಟು ಕಾಯಿ ಕೊರೆಯುವ ಕಾಂಡ ಕೊರೆಯುವ ಹುಳು ಗಳಿಗೆ ಜನ್ಮ ನೀಡುವ ಚಿಟ್ಟೆಗಳು.
  • ಸಣ್ಣ ಸಣ್ಣ ಚುಚ್ಚುವ ಹಾರುವ ಕೀಟಗಳು ಇವೆಲ್ಲಾ ಸಾಧುಗಳಂತೆ ಕಂಡರೂ ಸಹ ಮಾಡುವ ಉಪಟಳ ಅಷ್ಟಿಷ್ಟಲ್ಲ.

ಇವುಗಳನ್ನು ಕೀಟನಾಶಗಳನ್ನು ಸಿಂಪಡಿಸಿ ನಿಯಂತ್ತ್ರಣ ಮಾಡುವುದು ತುಂಬಾ ಕಷ್ಟ. ಹೆಚ್ಚಾಗಿ ಅವುಗಳ ನಿಯಂತ್ರಣಕ್ಕೆ ಅಂತರ್ ವ್ಯಾಪೀ ಕೀಟನಾಶಕಗಳನ್ನು ಬಳಕೆ ಮಾಡಲಾಗುತ್ತದೆ. ಒಂದು ಎರಡು ಸಲ ಇವು ಫಲಿತಾಂಶ ಕೊಡುತ್ತವೆ. ನಂತರ ಅವುಗಳಿಗೆ ಕೀಟಗಳು ನಿರೋಧಕ ಶಕ್ತಿ ಪಡೆದುಕೊಂಡು ಹೊಸ ಕೀಟನಾಶಕ ಬಳಕೆ ಮಾಡಬೇಕಾಗಬಹುದು.

ಅಂಟಿನ ಹಾಳೆಗಳು ಹಾರುವ ನೊಣಗಳನ್ನು ಸಾಯಿಸುತ್ತವೆ-Glue sticky trap
ಅಂಟಿನ ಹಾಳೆಗಳು ಹಾರುವ ನೊಣಗಳನ್ನು ಸಾಯಿಸುತ್ತವೆ
  • ಕೀಟನಾಶಕದ ಬಳಕೆ ಮಾಡುವವನಿಗೂ ಆರೋಗ್ಯಕ್ಕೆ ತೊಂದರೆ .
  • ಜೊತೆಗೆ ಖರ್ಚೂ ಸಹ ಹೆಚ್ಚು.
  • ಮಾರುಕಟ್ಟೆಯಲ್ಲಿ ಹಸುಗಳ ಮೇಲೆ ಕಾಣಿಸುವ ಉಣ್ಣಿ, ಅದೇ ರೀತಿ ನೊಣಗಳ ನಿಯಂತ್ರಣಕ್ಕೆ ಲಭ್ಯವಾಗುವ ಔಷಧಿ ಯಾವುದು ಗೊತ್ತೇ?
  • ನಾವು ಬೆಳೆಗಳಿಗೆ ಬಳಕೆ ಮಾಡುವ ಡೆಲ್ಟ್ರಾಮೆಥ್ರಿನ್ ಕೀಟನಾಶಕವೇ ಆಗಿರುತ್ತದೆ.
  • ಇದನ್ನು ಮೈ ಮೇಲೆ ಹಾಕುತ್ತೇವೆ. ಅದನ್ನು ಹಸು, ಎಮ್ಮೆಗಳು ನೆಕ್ಕುತ್ತವೆ, ಅದರ ಹಾಲು ಕುಡಿದ ನಮಗೂ ಈ ಕೀಟನಾಶಕ ಉಚಿತವಾಗಿ ದೊರೆಯುತ್ತದೆ!
  • ಈ ರಗಳೆಗಳೆಲ್ಲಾ ಬೇಡ.
  • ಬದಲಿಗೆ ಕೆಲವು ಸುರಕ್ಷಿತ  ಉಪಾಯಗಳ ಮೂಲಕ ಅವುಗಳ ಸಂತತಿಯನ್ನು ಕಡಿಮೆಯಾಗುವಂತೆ ಮಾಡುವುದು ಎಲ್ಲರಿಗೂ ಕ್ಷೇಮಕರ.

ಯಾವುದು ಸುರಕ್ಷಿತ ಪರಿಹಾರ:

ಮನೆ ನೊಣಗಳ ಆಕರ್ಷಣೆಗೆ ಹಗ್ಗ ನೇತಾಡಿಸುವುದು.House fly control
ಮನೆ ನೊಣಗಳ ಆಕರ್ಷಣೆಗೆ ಹಗ್ಗ ನೇತಾಡಿಸುವುದು.
  • ಸಾಮಾನ್ಯವಾಗಿ ಕೃಷಿ ಬೆಳೆಗಳಿಗೆ ಹಾನಿ ಮಾಡುವ ಹಾರುವ ಕೀಟಗಳನ್ನು ನಿಯಂತ್ರಿಸಲು ಸುಲಭ ವ್ಯವಸ್ಥೆ ಎಂದರೆ ಅಂಟಿನ ಹಾಳೆಗಳು.(Stickey Traps)
  • ಹೆಚ್ಚು ಸಮಯದ ತನಕ ಅಂಟಿಕೊಳ್ಳುವ ಗುಣ ಹೊಂದಿದ ಕೆಲವು ಗಮ್ ಗಳನ್ನು ಹಳದಿ ಮತ್ತು ಹಸುರು (Yellow and blue sticky traps)  ಕಾಗದಗಳಿಗೆ ಲೇಪನಮಾಡಿ ನೇತಾಡಿಸುವುದರಿಂದ ಹಾರುವ ಕೀಟಗಳು ಅದಕ್ಕೆ ಅಂಟಿಕೊಂಡು ಮುಂದೆ ಅಲ್ಲಿಂದ ಕದಲಲಾರದೆ ಸತ್ತೇ ಹೋಗುತ್ತವೆ.
  • ಇದರಿಂದ ನೊಣಗಳ ಸಂತತಿ ಕಡಿಮೆಯಾಗಿ ಹೆಚ್ಚು ಹೆಚ್ಚು ಮರಿಗಳಾಗುವುದು ತಪ್ಪುತ್ತದೆ.
  • ನಿಧಾನವಾಗಿ ನೊಣಗಳು ಪತಂಗಗಳು ಕಡಿಮೆಯಾಗುತ್ತವೆ.
  • ಮನೆ ನೊಣ ನಿಯಂತ್ರಣಕ್ಕೆ ಹಗ್ಗಕ್ಕೆ ಪೇಪರಿಗೆ ತಗಲಿಸುವ ಅಂಟನ್ನು ಮೆತ್ತಿ ಅಲ್ಲಲ್ಲಿ ನೇತು ಹಾಕಿದರೆ ಅವು ಅದರಲ್ಲಿ ಕುಳಿತು ಸತ್ತು ಹೋಗುತ್ತವೆ. (ಹಳದಿ, ನೀಲಿ, ಅಂಟಿನ ಕಾಗದಗಳು, ಜೊತೆಗೆ ಅದಕ್ಕೆ ಹಾಕುವ ಅಂಟು ಸಹ ಆನ್ ಲೈನ್ ತರಿಸಬಹುದು)

ಖರ್ಚು ಇಲ್ಲದ ಸುಲಭ ಕ್ರಮಗಳು:

ಹಳದಿ ಅಂಟಿನ ಹಾಳೆಗಳು ನೊಣಗಳನ್ನು ಆಕರ್ಷಿಸುತ್ತವೆ.-Yellow sticky trap
ಹಳದಿ ಅಂಟಿನ ಹಾಳೆಗಳು ನೊಣಗಳನ್ನು ಆಕರ್ಷಿಸುತ್ತವೆ.
  • ಕೆಲವು ನೊಣಗಳಿಗೆ ಆಕರ್ಷಣೆ ಯಾವುದು ಎಂಬುದನ್ನು ನಾವು ಮೊದಲಾಗಿ ಪತ್ತೆ ಮಾಡಬೇಕು.
  • ಹಸುಗಳ ಮೇಲೆ ಕುಳಿತು ರಕ್ತ ಹೀರುವ ನೊಣಗಳು ಉತ್ಪಾದನೆಯಾಗುವುದೇ ಸಗಣಿಯಲ್ಲಿ.
  • ಹಟ್ಟಿಯ ಸುತ್ತ, ಸಗಣಿ ಬಿದ್ದತೆ ಅದನ್ನು  ತೆಗೆಯುತ್ತಾ ಇರಬೇಕು.
  • ಅದನ್ನು ರಾಶಿ  ಹಾಕಿದಲ್ಲಿ ತೆರೆದು ಇಡಕೂಡದು. ಅದಕ್ಕೆ ಪ್ಲಾಸ್ಟಿಕ್ ಮುಚ್ಚಬೇಕು.
  • ಆಗ ಅದರಲ್ಲಿ ಸಂತಾನಾಭಿವೃದಿ ಆಗುವುದಿಲ್ಲ.
  • ಸ್ಲರಿ ನೀರು ಇತ್ಯಾದಿ ಶೇಖರಣೆ ಆಗುವ ಸ್ಥಳದಲ್ಲಿ ನೊಣಗಳ ಸಂತಾನಾಭಿವೃದ್ದಿಯಾಗುತ್ತದೆ.
  • ಅಲ್ಲಿ ಎರಡು ದಿನಕ್ಕೊಮ್ಮೆ ಕೆಲವು ಬಿಂದುಗಳಷ್ಟು ಕೆರೋಸಿನ್ ಎಣ್ಣೆಯನ್ನು ಚೆಲುವುದರಿಂದ ಅಲ್ಲಿ ಮೊಟ್ಟೆ
    ಇಡುವುದಕ್ಕೆ ಅಡ್ದಿಯಾಗುತ್ತದೆ.
  • ಸಾಮಾನ್ಯವಾಗಿ ಬೆಲ್ಲಕ್ಕೆ, ಮೀನಿಗೆ ಮನೆ ನೊಣಗಳು ಬರುವುದು ಜಾಸ್ತಿ.
  • ಇವುಗಳನ್ನು ಸ್ವಲ್ಪ ಒಂದೆಡೆ ಇಟ್ಟು ಅದಕ್ಕೆ ಯವುದಾದರೂ ವಿಷವನ್ನು ಹಾಕಿ ಇಟ್ಟರೆ ಅದರಲ್ಲಿ ಬಂದುಕುಳಿತ ನೊಣಗಳು ಸತ್ತು ಹೋಗುತ್ತವೆ.
  • ನಾಯಿ ಬೆಕ್ಕುಗಳು ಇರುವಲ್ಲಿ ಜಾಗರೂಕತೆ ಮಾಡಬೇಕು.
  • ಹಟ್ಟಿಯನ್ನು ದಿನಕ್ಕೆ ಎರಡು ಬಾರಿ ತೊಳೆಯುವುದು, ಹಾಲು ಇತ್ಯಾದಿ ಚೆಲ್ಲಿದರೆ ಅದನ್ನು ತಕ್ಷಣ ತೊಳೆದು ಬಿಡುವುದು.
  • ಅಕ್ಕಚ್ಚು ಚೆಲ್ಲದಿರುವುದು, ಹಸುಗಳಿಗೆ ಹಾಕಿದ ಪಶು ಆಹಾರ ಅಲ್ಲಿ ಉಳಿಯದಂತೆ ಮಾಡುವುದರಿಂದ ನಿಯಂತ್ರಣ ಸುಲಭವಾಗುತ್ತದೆ.
  • ಹಸು, ಎಮ್ಮೆ, ಕುರಿ ಆಡು ಸಾಕುವ ಮನೆಗಳಿಗೆ ಪ್ಯಾನ್ ಹಾಕುವುದರಿಂದ ನೊಣಗಳು ಸಾಕಷ್ಟು ದೂರವಾಗುತ್ತವೆ.
  • ಸುತ್ತಲೂ ನೀರು ನಿಲ್ಲುವಂತೆ ಇರಬಾರದು. ಹಟ್ಟಿಯಲ್ಲೂ ನೀರು ನಿಲ್ಲಬಾರದು.
  • ಇವೆಲ್ಲಾ ಕ್ರಮಗಳಿಂದ ವಿಷ ರಹಿತವಾಗಿ ನೊಣ ನಿಯಂತ್ರಣ ,ಮಾಡಬಹುದು.

ಮನೆ ನೊಣ ನಿಯಂತ್ರಿಸಿದರೆ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ. ಹಟ್ಟಿ ಕೊಟ್ಟಿಗೆಯ ನೊಣ ನಿಯಂತ್ರಿಸಿದರೆ ಹಸು, ಎಮ್ಮೆ, ಕುರಿ ಆಡುಗಳ ರಕ್ತ ಹೀರುವುದು ಕಡಿಮೆಯಾಗಿ ಆರೋಗ್ಯ ಉತ್ತಮವಾಗುತ್ತದೆ. ಬೇಗ ಕರು ಹಾಕುತ್ತದೆ. ಹಾಲು ಹೆಚ್ಚು ಕೊಡುತ್ತದೆ. ಬೆಳೆಗಳಿಗೆ ಅಂಟಿನ ಕಾಗದದ ಬಳಕೆ ಮಾಡುವುದರಿಂದ ಕೀಟನಾಶಕದ ಖಾರ್ಚು ಉಳಿತಾಯವಾಗುತ್ತದೆ.

error: Content is protected !!