ಅಡಿಕೆ- ಸಿಂಗಾರಕ್ಕೆ ಸಿಂಪರಣೆ ಮಾಡುವವರಿಗೆ ಇಲ್ಲಿದೆ ಮಾಹಿತಿ.

ಅಡಿಕೆ ಮರದ ಸಿಂಗಾರಕ್ಕೆ ಸಿಂಪರಣೆ

ಬೇಸಿಗೆಯಲ್ಲಿ ಅಡಿಕೆ ಕಾಯಿ ಉದುರುವ ಸಮಸ್ಯೆಗಾಗಿ ಬೆಳೆಗಾರರು ಸಿಂಗಾರಕ್ಕೆ ಸಿಂಪರಣೆ ಮಾಡುತ್ತಾರೆ. ಯಾವಾಗ ಸಿಂಗಾರಕ್ಕೆ ಕೀಟ- ರೋಗಗಳಿಂದ ತೊಂದರೆ ಉಂಟಾಗುತ್ತದೆ ಎಂದು ತಿಳಿದು ಆ ಸಮಯಕ್ಕೆ ಸರಿಯಾಗಿ ಸಿಂಪರಣೆ ಮಾಡಬೇಕು.  ಕೀಟವೋ, ರೋಗವೋ ಎಂಬುದನ್ನು ಗಮನಿಸಿ ಅದಕ್ಕೆ ಬೇಕಾದ ಔಷಧಿಯನ್ನು ಸಿಂಪಡಿಸಬೇಕು.  

ಮೊಡ ಕವಿದ ವಾತಾವರಣ, ಮಳೆಯಾದ ಸಮಯ ಅಡಿಕೆ ಬೆಳೆಗೆ ಕೆಲವೊಂದು ಸಮಸ್ಯೆಗಳನ್ನು  ತರುತ್ತದೆ. ಅದನ್ನು ತಡೆಯಲು ಆ ವಾತಾವರಣ ಇರುವಾಗಲೇ ಕ್ರಮ ಕೈಗೊಂಡರೆ ಫಲ ಹೆಚ್ಚು.
ಎಲ್ಲಾ ಬೆಳೆಗಳಿಗೂ ಅನುಕೂಲಕರ ವಾತಾವರಣ ಎಂದರೆ ಹಿತ ಮಿತವಾದ ಬಿಸಿಲಿನ ವಾತಾವರಣ. ನಮ್ಮ ಉಷ್ಣವಲಯದ  ಬೆಳೆಗಳಿಗೆ ಹಗಲು ಧೀರ್ಘಾವಧಿಯ ತನಕದ  ಸೂರ್ಯನ ಬೆಳೆಕು ಬೇಕು. ರಾತ್ರೆಯ ತಾಪಮಾನ ತಣ್ಣಗೆ ಇರಬೇಕು. ಇದನ್ನು ಲಕ್ಸ್ ಅಳತೆಯಲ್ಲಿ ತಿಳಿಸಲಾಗುತ್ತದೆ. ಬಿಸಿಲಿನ ವಾತಾವರಣ ಬೆಳೆಗಳಿಗೆ ಒಳ್ಳೆಯದು. ಈ ಅವಧಿಯಲ್ಲಿ ಮೊಡ ಕವಿದ ವಾತಾವರಣ ಉಂಟಾದರೆ ಕೀಟ, ರೋಗ ಬಾಧೆಗಳು  ಹೆಚ್ಚುತ್ತವೆ. ಇದರ ನಿಯಂತ್ರಣಕ್ಕೆ ಆಗಲೇ ಸೂಕ್ತ ಕ್ರಮ ಕೈಗೊಂಡರೆ ಕಳ್ಳನನ್ನು ಸ್ಥಳದಲ್ಲೇ ಹಿಡಿದು ಬಂಧಿಸಿದಂತೆ.

ಉದುರುವ ಅಡಿಕೆ ಮಿಡಿಗಳು

 • ಹೆಚ್ಚು ತಾಪಮಾನ ಬಯಸುವ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಮುಂತಾದ ಬೆಳೆ ಬೆಳೆಯುವ ರೈತರು ಯಾವಾಗಲೂ ಸಸ್ಯ ಸಂರಕ್ಷಣೆಗೆ ಸಿದ್ದರಾಗಿಯೇ ಇರುತ್ತಾರೆ.
 • ಮೋಡ ತುಂತುರು ಮಳೆ ಬಂದ ಮರುದಿನ ಶಿಲೀಂದ್ರ ನಾಶಕ ಸಿಂಪಡಿಸಿ ಬೆಳೆ ರಕ್ಷಣೆ ಮಾಡುತ್ತಾರೆ.
 • ಇಲ್ಲವಾದರೆ ಕಾಯಿ ಒಡೆಯುವಿಕೆ, ಉದುರುವಿಕೆ ಪ್ರಾರಂಭವಾಗುತ್ತದೆ.

ಅಡಿಕೆ ಬೆಳೆಯ ಮೇಲೆ ಪರಿಣಾಮ:

 • ಅಡಿಕೆ ಮರದ ಸಿಂಗಾರದಿಂದ ಮಿಡಿ ಕಾಯಿಗಳು ಉದುರುವುದು, ಕಾಯಿ ಕಚ್ಚಿದ ಮಿಡಿಗಳು ಹೆಚ್ಚಾಗಿ ಉದುರುವುದು ಮೊಡ ಕವಿದ ವಾತಾವರಣ ಮತ್ತು ತುಂತುರು ಮಳೆಯಾಗುವ ಸಮಯದಲ್ಲಿ.

 • ಕೆಲವು ರೋಗಾಣುಗಳು ಮತ್ತು ಕೀಟಗಳು ಹೆಚ್ಚು ಚಟುವಟಿಕೆಯಲ್ಲಿ ಇರುವುದು ಇದೇ ಸಮಯದಲ್ಲಿ.
 • ಆಗ ಅವುಗಳಿಂದ ತೊಂದರೆಗಳು ಹೆಚ್ಚಾಗುತ್ತದೆ.
 • ವಿಶೇಷವಾಗಿ ಚಹ ಸೊಳ್ಳೆ ಅಥವಾ T mosquito  ಗಳು ಮೋಡ ಕವಿದ ವಾತಾವರಣದಲ್ಲಿ ಚಟುವಟಿಕೆ ಹೆಚ್ಚು ಮಾಡುತ್ತವೆ.
 • ಇನ್ನೂ ಕೆಲವು ರಸ ಹೀರುವ ಕೀಟಗಳ ಚಟುವಟಿಕೆ ಈ ಸಮಯದಲ್ಲಿ ಅಧಿಕ. ಮಿಡಿಗಳು ಮರದ ಕೆಳಭಾಗದಲ್ಲಿ ಉದುರಿರುತ್ತವೆ.
 • ಈಗ ಸೋಂಕಿಗೆ ಒಳಗಾದ ಫಸಲು  ನಂತರ ಕೆಲವು  ಸಮಯದ ತನಕವೂ ಮುಂದುವರಿಯುತ್ತದೆ.

pest damage symptom

ಮಿಡಿ ಉದುರುವ ಸಮಸ್ಯೆ ಮತ್ತು ವಾತಾವರಣ:

 • ಅಡಿಕೆಯ ಮಿಡಿಕಾಯಿಗಳು ಯಾವಾಗ ಹೆಚ್ಚು ಉದುರುತ್ತವೆ ಎಂಬುದನ್ನು ಸರಿಯಾಗಿ ಗಮನಿಸಿರಿ.
 • ವಾತಾವರಣ ಏರು ಪೇರು ಆದಾಗಲೇ ಉದುರುವಿಕೆ ಪ್ರಮಾಣ ಹೆಚು.
 • ಮೋಡಕವಿದ ವಾತಾವರಣ ಎರಡು ಮೂರು ದಿನ ಮುಂದುವರಿದಾಗ  ಎಲ್ಲಾ ಬೆಳೆಗಳಿಗೂ ಸಮಸ್ಯೆಗಳು ಹೆಚ್ಚು.
 • ಇದಕ್ಕೆ ಶಿಲೀಂದ್ರ ಸೋಂಕು ಒಂದು ಕಾರಣ.  ಕಾಯಿ ಕಚ್ಚಿ ಬಲಿಯುತ್ತಿರುವ ಮಿಡಿಗಳೂ ಸಹ ಈ ಸಮಯದಲ್ಲಿ ಉದುರುವುದಿದೆ.
 • ಅದಕ್ಕೆ ಕಾರಣ ಕೀಟಗಳು. ಕೆಳಗೆ ಬಿದ್ದ ಮಿಡಿ ಕಾಯಿಗಳನ್ನು ತೊಟ್ಟು ತೆಗೆದು ಪರೀಕ್ಷಿಸಿರಿ.
 • ತೊಟ್ಟಿನ ಭಾಗದಲ್ಲಿ ಚುಚ್ಚಿದ ಗಾಯಗಳು ಇದ್ದರೆ ಅದಕ್ಕೆ ಕೀಟ ಬಾಧೆ ತಗಲಿದೆ ಎಂದರ್ಥ.
 • ತೊಟ್ಟು ತೆಗೆದು ನೋಡಿದಾಗ ಯಾವುದೇ ಚುಚ್ಚಿದ ಗಾಯಗಳು ಇಲ್ಲದೆ ಇದ್ದರೆ ಆ ಭಾಗ ಕಪ್ಪಗಾಗಿದ್ದರೆ, ಅದು ಶಿಲೀಂದ್ರ ಸೋಂಕು ಇರಬಹುದು.
 • ಕೆಲವೊಮ್ಮೆ ಯಾವ ಚಿನ್ಹೆಯೂ ಇಲ್ಲದ ಮಿಡಿಗಳು ಉದುರುತ್ತವೆ. ಅದು ರೋಗವೂ ಅಲ್ಲ, ಕೀಟವೂ ಆಲ್ಲ.
 • ಸರಿಯಾಗಿ ಒಡೆದು ನೋಡಿದರೆ ಆ ಕಾಯಿಯ ಬೆಳವಣಿಗೆ ಅಪಕ್ವವಾಗಿರುತ್ತದೆ.

ಮಿಡಿ ಉದುರುವಾಗ  ಒಂದು ಎರಡು ಉದುರುದರೆ ಅದನ್ನು ಪರೀಕ್ಷಿಸಿ, ಯಾವುದೇ ಚಿನ್ಹೆ ಇಲ್ಲವಾದರೆ ಅದಕ್ಕೆ ಯಾವ ಸಿಂಪರಣೆಯೂ ಮಾಡಬೇಕಾಗಿಲ್ಲ. ಉದುರುವ ಕಾಯಿಗಳು ಅಧಿಕ ವಾಗಿದ್ದರೆ, ಚಿತ್ರದಲ್ಲಿ ತೋರಿಸಿದ ಚಿನ್ಹೆ ಇದ್ದರೆ ಮಾತ್ರ ಸಿಂಪರಣೆ ಮಾಡಿ.

 • ಬಹಳಷ್ಟು ಬೆಳೆಗಾರರು ಯಾವ ತೊಂದರೆಯೂ ಬಾರದಿರಲಿ ಎಂದು, ಸಿಂಪರಣೆ ಮಾಡುವಾಗ ಕೀಟನಾಶಕ, ಶಿಲೀಂದ್ರ ನಾಶಕ ಮತ್ತು ಕೆಲವು ಸೂಕ್ಷ್ಮ ಪೊಷಕಾಂಶಗಳನ್ನು ಮಿಶ್ರಣ ಮಾಡಿ ಸಿಂಪರಣೆ ಮಾಡುತ್ತಾರೆ.
 • ಕೆಲವು ಶಿಲೀಂದ್ರ ನಾಶಕಗಳ ಜೊತೆಗೆ ಕೀಟನಾಶಕ, ಸೂಕ್ಷ್ಮ ಪೊಷಕಾಂಶಗಳು ಹೊಂದಾಣಿಯಾಗುವುದಿಲ್ಲ.
 • ಅದು ನೀವು ಬಳಕೆ ಮಾಡುವ ಉತ್ಪನ್ನದಲ್ಲಿ ನಮೂದಿಸಿರುತ್ತದೆ. ಒಂದು ವೇಳೆ ಹೊಂದಾಣಿಕೆ ಆಗುವುದಿಲ್ಲ ಎಂದಾದರೆ ಅದು ಕಾಯಿಗಳ ಮೇಲೆ ಸುಟ್ಟ ಪರಿಣಾಮವನ್ನು ಉಂಟು ಮಾಡಬಹುದು.
 • ಮೆದು ಜಾತಿಯ  ಎಲೆಯುಳ್ಳ ಸಸ್ಯಗಳ ( ಪಪ್ಪಾಯಿ ಎಲೆ) ಮೇಲೆ ಇದರ ಹನಿ ಬಿದ್ದಾಗ ಎಲೆ ಬಿಳುಚಿಕೊಳ್ಳುಚಿಕೊಳ್ಳುತ್ತದೆ Phytotoxic symptoms such as injury to leaf tip, yellowing, wilting, necrosis, vein clearing, epinasty and hyponasty of leaves were not observed on rice crop due to application of combination of insecticides and fungicides.
 • ಇದರಿಂದ ಉದುರುವಿಕೆಯ ಪ್ರಮಾಣ ಹೆಚ್ಚಬಹುದು.
 • ಹೆಚ್ಚಿನ ಬೆಳೆಗಾರರು ಸಿಂಪರಣೆಗೆ ಬಳಕೆ ಮಾಡುವ ಮ್ಯಾಂಕೋಜೆಬ್, ಝೈನೆಬ್ ಅಥವಾ ಪ್ರೊಪಿಕೊನೆಜ಼ೊಲ್ ಇವು ಇಮಿಡಾ ಕ್ಲೋಫ್ರಿಡ್, ಮೊನೋಕ್ರೊಟೋಫೋಸ್.ಲಾಂಬ್ಡ್ರಾಸೈಹೋಥ್ರಿನ್ ಗಳಿಗೆ ಇವು ಅಂತಹ ತೊಂದರೆ ಉಂಟುಮಾಡದು.

ಅನವಶ್ಯಕ ಸಿಂಪರಣೆ ಬೇಡ:

 • ಉದುರುವ ಮಿಡಿಗಳಲ್ಲಿ ಅದು ಪರಾಗ ಸ್ಪರ್ಶ ಆಗಿ ಕಾಯಿ ಬಲಿಯುತ್ತಿರುವಾಗ ಉದುರಿದರೆ ಅದರ ತೊಟ್ಟು ತೆಗೆದಾಗ ಚುಚ್ಚಿದ ಗಾಯ ಇದ್ದರೆ ಮಾತ್ರ ಕೀಟ ನಾಶಕ ಸಿಂಪರಣೆ ಮಾಡಿ.
 • ಹೂ ಗೊಂಚಲಿನಲ್ಲಿ ಪರಾಗ ಸ್ಪರ್ಶ ಆಗದ ಕಾಯಿಗಳು ಉದುರುತ್ತವೆ ಎಂದಾದರೆ ಬರೇ ಶಿಲೀಂದ್ರ ನಾಶಕ ಸಿಂಪರಣೆ ಸಾಕು.
 • ಯಾವಾಗಲೂ ಶಿಲೀಂದ್ರ ನಾಶಕವನ್ನು ಹೂ ಗೊಂಚಲು ತನ್ನ ಪೊರೆಯನ್ನು ಬಿಟ್ಟ ಎರಡು ಮೂರು ದಿನಗಳ ಒಳಗೆ ಸಿಂಪರಣೆ ಮಾಡಿದರೆ ಅದರ ಫಲ ಹೆಚ್ಚು.
 • ತಡವಾಗಿ ಸಿಂಪಡಿಸಿದ್ದರೆ, ಆಗಲೇ ಸೋಂಕು ತಗಲಿದ್ದರೆ ಫಲ ಕೊಡಲಾರದು.
 • ಅಗತ್ಯಇಲ್ಲದೆ ಕೀಟನಾಶಕ ಬಳಸಬೇಡಿ.ಕೀಟನಾಶಕಗಳು ದುಬಾರಿ ಮತ್ತು ಅದರಿಂದ ಪರಭಕ್ಷಕಗಳು ನಾಶವಾಗುತ್ತದೆ.
 • ಒಮ್ಮೆ ಕೀಟನಾಶಕ ಬಳಕೆ ಪ್ರಾರಂಭಿಸಿದರೆ ಮತ್ತೆ ಅದು ಅನಿವಾರ್ಯವಾಗಲೂ ಬಹುದು.
 • ಶಿಲೀಂದ್ರ ನಾಶಕದ ಬಳಕೆ ಯಿಂದ ಸಿಂಪಡಿಸುವವರಿಗೆ ಮತ್ತು ವಾತಾವರಣಕ್ಕೆ ಅಂತಹ ಸಮಸ್ಯೆ ಉಂಟಾಗಲಾರದು.
 • ಆದರೆ ಕೀಟನಾಶಕ ಹಾಗಲ್ಲ.

ಪ್ರತೀ ಸಿಂಪರಣೆಗೆ ಕೀಟನಾಶಕ ಬಳಕೆ ಮಾಡುವುದು, ಅಗತ್ಯ ಇಲ್ಲದೆ ಸಿಂಪರಣೆ ಮಾಡುವುದರಿಂದ ಹಣದ ಖರ್ಚು ಜೊತೆಗೆ ವಾತಾವರಣದ ಮೇಲೆ ದುಶ್ಪರಿಣಾಮ ಉಂಟಾಗುತ್ತದೆ.ಕೀಟ ಮತ್ತು ರೋಗಾಣುಗಳಿಗೆ ನಿರೋಧಕ ಶಕ್ಥಿ ಬರುತ್ತದೆ.ಕೆಲವು ಕೀಟನಾಶಕಗಳು ಸಿಂಪಡಿಸುವವರಿಗೆ ಕಣ್ಣು ಉರಿ, ಮೈ ಉರಿ ಉಂಟಾಗಿ ಸಮಸ್ಯೆಗಳಾಗಬಹುದು.

error: Content is protected !!