ತೋಟದ ಬೇಲಿಯಲ್ಲಿ ದಾಸವಾಳ ನೆಟ್ಟರೆ ಭಾರೀ ಅನುಕೂಲ.
ಹಿಂದಿನವರು ತಮ್ಮ ಅಡಿಕೆ ತೋಟದ ಬೌಂಡ್ರಿಯ ಸುತ್ತ ದಾಸವಾಳದ ಗಿಡ ನೆಡುತ್ತಿದ್ದರು. ಇದರ ಹಿಂದೆ ಸಾಕಷ್ಟು ವೈಜ್ಞಾನಿಕತೆ ಅಡಗಿದೆ. ವಿಟ್ಲ, ಪುತ್ತೂರು, ಸುಳ್ಯ , ಕಾಸರಗೋಡು, ಹಾಗೆಯೇ ಶ್ರಿಂಗೇರಿ, ಕೊಪ್ಪ, ಸಾಗರ, ಶಿರಸಿ ಕಡೆಯ ಹಳೆಯ ಅಡಿಕೆ ಕೃಷಿಕರ ತೋಟದ ಸುತ್ತ ಬೇಲಿಗಳಲ್ಲಿ ದಾಸವಾಳದ ಸಸ್ಯ ಇರುತ್ತದೆ. ದಾಸವಾಳ ಸಸಿ ಬೆಳೆಸುವುದು ಸುಲಭ. ಅಂದಕ್ಕೆ ಹೂವೂ ಆಗುತ್ತದೆ. ಬೇಲಿ ಧೀರ್ಘ ಕಾಲದ ತನಕ ಹಾಳಾಗುವುದಿಲ್ಲ. ಇದು ಬೇಲಿ ಮಾಡುವವರಿಗೆ ತಿಳಿದಿರುವ ಸಂಗತಿ. ತಮ್ಮ ಹಿರಿಯರು ಇದನ್ನು ಅನುಸರಿಸುತ್ತಿದ್ದರು….