ನೆಲದಲ್ಲಿ ಹಾವಸೆ ಬೆಳೆದರೆ ತೆಗೆಯಬೇಡಿ- ಇದರಿಂದ ಭಾರೀ ಲಾಭವಿದೆ.
ಕೆಲವು ರೈತರ ತೋಟದ ನೆಲದಲ್ಲಿ ಹಾವಸೆ ಸಸ್ಯ ಬೆಳೆಯುತ್ತದೆ. ಈ ಸಸ್ಯ ಬೆಳೆಯುವುದು ಯಾಕೆ ಮತ್ತು ಇದರ ಅನುಕೂಲ ಏನು? ನಿಮ್ಮ ತೋಟದಲ್ಲಿ, ಮನೆಯ ಕಂಪೌಂಡ್ ಗೊಡೆಯಲ್ಲಿ, ಅಡಿಕೆ, ತೆಂಗಿನ ಮರದ ಕಾಂಡದಲ್ಲಿ ಅಂಟಿಕೊಂಡಿರುವ ಒಂದು ಹಾವಸೆ ಸಸ್ಯ ನಮಗೆಷ್ಟು ಉಪಕಾರಿ ಎಂಬುದನ್ನು ಪ್ರತೀಯೊಬ್ಬರೂ ತಿಳಿದಿರಬೇಕು. ಮಳೆಗಾಲ ಬಂತೆಂದರೆ ಸಾಕು ಹಾವಸೆ ಸಸ್ಯಗಳು ಜೀವತುಂಬಿಕೊಂಡು ಎಲ್ಲೆಡೆ ಆವರಿಸುತ್ತವೆ. ಬೇಸಿಗೆಯಲ್ಲಿ ಸಾಕಷ್ಟು ತೇವಾಂಶ ಲಭ್ಯವಿರುವಲ್ಲಿ ಬೆಳೆಯುತ್ತದೆ. ಒಟ್ಟಿನಲ್ಲಿ ತೇವಾಂಶವನ್ನು ಬಳಸಿ ಬದುಕುವ ಈ ಸಸ್ಯ ವರ್ಗ ಕೃಷಿಕನ ಮಿತ್ರ…